ಸೌಂದರ್ಯ ಎಂಬುದು ಪ್ರತಿಯೊಬ್ಬ ಯುವತಿಯನ್ನು ಇನ್ನೊಬ್ಬರ ದೃಷ್ಟಿಯಲ್ಲಿ ಪ್ರಶಂಸೆಗೆ ಪಾತ್ರರಾಗಿಸಿದರೆ, ಅದು ಅವಳಿಗೆ ಅಷ್ಟೇ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಯುವತಿಯರು ತಮ್ಮ ಸೌಂದರ್ಯ ಸಂರಕ್ಷಣೆಗಾಗಿ ಒಂದೆಡೆ ಮನೆಮದ್ದು ಮಾಡಿಕೊಂಡು ಸಜ್ಜಾದರೆ, ಇನ್ನೊಂದೆಡೆ ಅತ್ಯಾಧುನಿಕ ಪಾರ್ಲರ್‌ ಗಳಿಗೆ ಹೋಗಿ ಹೊಸ ಹೊಸ ಬ್ಯೂಟಿ ಪ್ರಾಡಕ್ಟ್ಸ್ ಗೆ ಶರಣಾಗುತ್ತಾರೆ.

ಆದರೆ ಎಲ್ಲಾ ಯುವತಿಯರೂ ಸೌಂದರ್ಯಪ್ರಜ್ಞೆಯ ಬಗ್ಗೆ ಜಾಗೃತರಾಗಿರುವುದಿಲ್ಲ. ಕೆಲಉರಿಗಷ್ಟೇ ಈ ಕಲೆ ಕರಗತವಾಗಿದ್ದರೆ, ಎಷ್ಟೋ ಮಂದಿ ಇದರ ಕುರಿತಾಗಿ ನಿರ್ಲಕ್ಷ್ಯದಿಂದಿರುತ್ತಾರೆ. ಬನ್ನಿ, ಇಂದಿನ ಕಾಲಕ್ಕೆ ತಕ್ಕಂತೆ ನೀವು ಬ್ಯೂಟಿ ಗ್ಲಾಮರ್‌ ಬಗ್ಗೆ ಎಷ್ಟು ಜಾಗೃತರಾಗಿರುವಿರಿ ಎಂದು ಈ ಪ್ರಶ್ನಾವಳಿ ಗಮನಿಸಿ ತಿಳಿದುಕೊಳ್ಳೋಣ :

  1. ನಿಮ್ಮನ್ನು ನೋಡಿದ ತಕ್ಷಣ ಜನ ಹೇಳುವುದೆಂದರೆ

ಅ. ನಿಮ್ಮ ಸುಂದರ ತ್ವಚೆ ಗಮನಿಸಿದರೆ ನಿಮ್ಮ ವಯಸ್ಸು ಎಷ್ಟೆಂದೇ ಹೇಳಲಾಗುವುದಿಲ್ಲ.

ಆ. ನೀವು ಎಂಥ ಕ್ರೀಂ ಬಳಸುತ್ತೀರಿ?

ಇ. ನೀವು ನಿಮ್ಮ ತ್ವಚೆಯ ಕುರಿತಾಗಿ ಏಕೆ ಏನನ್ನೂ ಮಾಡುತ್ತಿಲ್ಲ?

  1. ಒಮ್ಮೆ ಬೆಳಗ್ಗೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಾಗ ಎಲ್ಲೋ ಒಂದು ಸುಕ್ಕು ಕಾಣಿಸಿದರೆ

ಅ. ಗಾಬರಿಗೊಂಡು ತಕ್ಷಣ ಟ್ರೀಟ್‌ ಮೆಂಟ್‌ ಪಡೆಯಲು ನಿರ್ಧರಿಸುತ್ತೀರಿ.

ಆ. ಸಮಯ ಸಿಕ್ಕಾಗ ಅದಕ್ಕೆ ಮನೆಮದ್ದು ಮಾಡುವಿರಿ.

ಇ. `ಇದು ವಯಸ್ಸಿನ ಪ್ರಭಾವ, ತಂತಾನೇ ಸರಿಹೋಗಬಹುದು,’ ಎಂದು ನಿಶ್ಚಿಂತರಾಗುವಿರಿ.

  1. ಮನೆಯಿಂದ ಹೊರಗೆ ಹೊರಡುವ ಸಂದರ್ಭದಲ್ಲಿ

ಅ. ಸನ್‌ ಸ್ಕ್ರೀನ್‌ಲೋಶನ್‌ ಹಚ್ಚಿಕೊಳ್ಳಲು ಮರೆಯುವುದಿಲ್ಲ.

ಆ. ನೆನಪು ಬಂದಾಗ ಹಚ್ಚಿಕೊಳ್ಳುವಿರಿ.

ಇ. `ಇದರಿಂದ ಏನು ಮಹಾ ವ್ಯತ್ಯಾಸವಾಗುತ್ತದೆ?’ ಎಂದುಕೊಳ್ಳುವಿರಿ.

  1. ಟಿ.ವಿ. ಅಥವಾ ಪತ್ರಿಕೆಗಳಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಕುರಿತು ಜಾಹೀರಾತು ಗಮನಿಸಿದಾಗ

ಅ. ಅದನ್ನು ಕೊಳ್ಳುವ ಮೊದಲು ಬ್ಯೂಟಿ ಎಕ್ಸ್ ಪರ್ಟ್ಸ್ ನ್ನು ಸಲಹೆ ಕೇಳುತ್ತೀರಿ.

ಆ. ಕೊಳ್ಳಲು ನಿರ್ಧರಿಸುತ್ತೀರಿ.

ಇ. `ಇದೆಲ್ಲ ಅನಗತ್ಯ ದುಬಾರಿ ಖರ್ಚು’ ಎಂದುಕೊಳ್ಳುತ್ತಾ ಜಾಹೀರಾತನ್ನು ನಿರ್ಲಕ್ಷಿಸುತ್ತೀರಿ.

  1. ನಿಮ್ಮ ದೃಷ್ಟಿಯಲ್ಲಿ ಬ್ಯೂಟಿ ಗ್ಲಾಮರ್

ಅ. ಟೋಟಲ್ ಫಿಟ್‌ ನೆಸ್‌, ಅತ್ಯಗತ್ಯ.

ಆ. ಬಾಹ್ಯ ಸೌಂದರ್ಯ ಸರಿ ಇದ್ದರಾಯ್ತು.

ಇ. `ಏನೋ ಒಂದು, ಅದರ ಗೊಡವೆ ಏಕೆ?’ ಎಂದುಕೊಳ್ಳುವಿರಿ.

  1. ನೀವು ನಿಮ್ಮ ಗೆಳತಿಯ ಒಂದು ಪಾರ್ಟಿಗೆ ಹೋಗಬೇಕಿದೆ. ಆಗ

ಅ. ಅಚ್ಚುಕಟ್ಟಾಗಿ ಸಿಂಗರಿಸಿಕೊಂಡು, ಟಿಪ್‌ ಟಾಪಾಗಿ ಹೊರಡುವಿರಿ.

ಆ. ಚೆನ್ನಾಗಿ ಸಜ್ಜಾಗಲು ಪ್ರಯತ್ನಿಸುವಿರಿ.

ಇ. ಹೇಗೋ ಒಂದಿಷ್ಟು ರೆಡಿಯಾಗಿ ಪಾರ್ಟಿಗೆ ಹೋಗುವಿರಿ.

  1. ನಿಮ್ಮ ಚರ್ಮಕ್ಕೆ ಅಲರ್ಜಿ ಆದಾಗ ನೀವು

ಅ. ತಕ್ಷಣ ಹೋಗಿ ವೈದ್ಯರನ್ನು ಸಂಪರ್ಕಿಸುವಿರಿ.

ಆ. ತಿಳಿದಿರುವ ಮನೆಮದ್ದು ಮಾಡಿಕೊಳ್ಳುವಿರಿ.

ಇ. `ಈಗ ಟೈಮಿಲ್ಲ…. ಆಮೇಲೆ ನೋಡಿಕೊಂಡರಾಯ್ತು,’ ಎಂದು ನಿರ್ಲಕ್ಷಿಸುವಿರಿ.

  1. ನಿಮಗೆ ಮಾರ್ಕೆಟ್ನಲ್ಲಿರುವ ಲೇಟೆಸ್ಟ್ ಬ್ಯೂಟಿ ಪ್ರಾಡಕ್ಟ್ಸ್ ಬಗ್ಗೆ ಎಷ್ಟು ಮಾಹಿತಿ ಇದೆ?

ಅ. ಎಲ್ಲವೂ ಗೊತ್ತಿದೆ.

ಆ. ಸುಮಾರಾಗಿ ಗೊತ್ತಿದೆ.

ಇ. ಅದರಿಂದ ಏನೂ ಆಗಬೇಕಿಲ್ಲ.

  1. ನಿಮ್ಮ ಸೌಂದರ್ಯ ಸಂವರ್ಧನೆಗಾಗಿ ನೀವು

ಅ. ಹೊಸ ಹೊಸ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯುವಿರಿ.

ಆ. ಜಾಹೀರಾತುಗಳನ್ನು ಅವಲಂಬಿಸುತ್ತೀರಿ.

ಇ. ಹೊಸದಾಗಿ ಅದರ ಬಗ್ಗೆ ಚಿಂತಿಸಬೇಕಿಲ್ಲ.

  1. ಯಾರಾದರೂ ಸುಂದರ ಗ್ಲಾಮರಸ್ನಟಿಯನ್ನು ಗಮನಿಸಿದಾಗ

ಅ. ಅಂತಹ ಆಕರ್ಷಕ ಮೈಕಟ್ಟು, ಕಾಂತಿ ಪಡೆಯಲು ಯತ್ನಿಸುವಿರಿ.

ಆ. ಅವಳನ್ನು ಒಂದಿಷ್ಟು ಹೊಗಳಿ ಮರೆಯುವಿರಿ.

ಇ. `ಅವಳಿಂದ ಯಾರಿಗೆ ಏನಾಗಬೇಕಿದೆ?’ ಎಂದು ಸುಮ್ಮನಾಗುವಿರಿ.

  1. ನಿಮಗೆ ಲೇಟೆಸ್ಟ್ ಫ್ಯಾಷನ್ನಿನ ಕುರಿತು ಮಾಹಿತಿ

ಅ. ಚೆನ್ನಾಗಿ ತಿಳಿದಿದೆ.

ಆ. ಸುಮಾರಾಗಿ ಗೊತ್ತಷ್ಟೆ.

ಇ. `ಮದುವೆ ಆಯ್ತು…. ಮಗು ಆಯ್ತು…. ಫ್ಯಾಷನ್‌ ನಿಂದ ಏನಾಗಬೇಕಿದೆ?’ ಎಂದುಕೊಳ್ಳುವಿರಿ.

ಈಗ ನೀವು ಮೇಲಿನ ಎಲ್ಲಾ ಪ್ರಶ್ನೆಗಳಿಗೂ ನಿಮ್ಮ ಮನಸ್ಸಾಕ್ಷಿಗೆ ತಕ್ಕಂತೆ ಉತ್ತರಿಸಿ. ನಿಮ್ಮ ಉತ್ತರಗಳು `ಅ’ ಎಂಬ ಆಯ್ಕೆಯಾಗಿದ್ದರೆ, ಪ್ರತಿ `ಅ’ಗೂ 10 ಅಂಕ, `ಆ’ ಆಗಿದ್ದರೆ 5 ಅಂಕ ಹಾಗೂ ಎಲ್ಲಾ `ಇ’ ಗೂ 0 ಅಂಕಗಳನ್ನು ಕೊಡಿ.

ನಿಮ್ಮ ಒಟ್ಟಾರೆ ಅಂಕಗಳು 70-80 ಆಗಿದ್ದರೆ, ಬ್ಯೂಟಿ  ಗ್ಲಾಮರ್‌ ಕುರಿತು ನೀವು ಹೆಚ್ಚು ಜಾಗರೂಕರಾಗಿದ್ದೀರಿ ಎಂದರ್ಥ. ನೀವು ಬ್ಯೂಟಿ, ಫ್ಯಾಷನ್‌ ಕುರಿತು ಅಪ್‌ ಡೇಟ್‌ ಆಗಿದ್ದೀರಿ. ನಿಮ್ಮ ಈ ಜಾಗರೂಕ ಗುಣವೇ ನಿಮ್ಮನ್ನು ಬೇರೆಯವರಿಗಿಂತ ವಿಭಿನ್ನರಾಗಿಸಿ, ಹೊಗಳಿಕೆಗೆ ಪಾತ್ರರಾಗಿಸಿದೆ.

ನಿಮ್ಮ ಒಟ್ಟಾರೆ ಅಂಕಗಳು 50-60 ಆಗಿದ್ದರೆ, ನೀವು ಬ್ಯೂಟಿ  ಗ್ಲಾಮರ್‌ ಕುರಿತು ತುಸು ಎಚ್ಚರಿಕೆ ವಹಿಸುವಿರಿ, ಅಂದವಾಗಿ ಕಂಗೊಳಿಸಲು ಯತ್ನಿಸುವಿರಿ, ಸೋಮಾರಿಯಲ್ಲ ಎಂದಾಯ್ತು. ನೀವು ಆ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಪ್ರಯತ್ನ ನಡೆಸಿದಲ್ಲಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು.

ನಿಮ್ಮ ಒಟ್ಟಾರೆ ಅಂಕಗಳು 20-30 ಅಷ್ಟೇ ಎಂದಾದರೆ, ನೀವು ನಿಮ್ಮ ಸೌಂದರ್ಯ ಸಂವರ್ಧನೆಯತ್ತ ನಿರ್ಲಕ್ಷ್ಯರಾಗಿದ್ದೀರಿ, ಬ್ಯೂಟಿ ಗ್ಲಾಮರ್‌ ಕುರಿತು ಜಾಗೃತರಲ್ಲ ಎಂಬುದು ಸುಸ್ಪಷ್ಟ. ಹೀಗಾಗಿ ಇನ್ನೂ ಕಾಲ ಮಿಂಚಿಲ್ಲವಾದ್ದರಿಂದ, ಈ ವಿಷಯಗಳ ಕುರಿತು ಇನ್ನಾದರೂ ಜಾಗೃತರಾಗಿ, ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಿರಿ ಎಂದು ಸಲಹೆ ನೀಡಬಹುದು.

– ಲಲಿತಾ ಗೋಪಾಲ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ