ಶಭಾಷ್! ಸುಧಾರಣಾ ಕಾರ್ಯ ನಡೆಯುತ್ತಿದೆ :
ಕಳೆದ ಜೂನ್ ನಲ್ಲಿ `ಪರಿಸರ ದಿನ’ದಂದು ಅಮೃತ್ ಸರ್ ನಗರದಲ್ಲಿ `ಕ್ಲೀನ್ ಅಪ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಮ್ಮ ಭಾರತೀಯ ನಗರಗಳಿಗೆ ಇಂಥ ಶುಚಿ ಶುಭ್ರತೆಯ ಕೆಲಸ ಅತ್ಯಗತ್ಯ ಬೇಕು. ಪ್ರತಿಯೊಬ್ಬ ನಾಗರಿಕರು ಇದಕ್ಕಾಗಿ ಕಟಿಬದ್ಧರಾಗಿ ದುಮುಕಿದಾಗ ಮಾತ್ರ ನಗರದ ನೈರ್ಮಲ್ಯದ ಪ್ರಜ್ಞೆ ಜಾಗೃತವಾದೀತು.
ಪುಟಿದೆದ್ದ ಯುವೋತ್ಸಾಹ :
ಬಣ್ಣಬಣ್ಣದ ಪ್ರಪಂಚ ಯಾರಿಗೆ ಇಷ್ಟವಿಲ್ಲ ಹೇಳಿ….? ಹೀಗಾಗಿ ಇತ್ತೀಚೆಗೆ ಜರ್ಮನಿಯಲ್ಲಿ ಅಲ್ಲಿನವರನ್ನೂ ಸೇರಿಸಿಕೊಂಡು ಭಾರತೀಯರು ಹೋಳಿ ನೆಪದಲ್ಲಿ ಬಣ್ಣ ಎರಚಾಡಿದರು. ಬರ್ಲಿನ್ ನಲ್ಲಿ ನಡೆದ ಈ ಕಲರ್ ಫುಲ್ ಫೆಸ್ಟಿವ್, ಭಾರತದ ಹೋಳಿಯನ್ನೂ ಮೀರಿಸುವಂತಿತ್ತು.
ಗ್ಲಾಮರಸ್ ಡ್ಯಾನ್ಸ್ ನ ಭಾವಪರವಶತೆ :
ಇದೇನೂ ಬ್ಯಾಲೆ ಡ್ಯಾನ್ಸ್ ಅಲ್ಲ, ಆಫ್ರಿಕಾದ ಕೇವಲ ಒಂದು ಜಾನಪದ ನೃತ್ಯವಷ್ಟೆ. ಆಫ್ರಿಕಾದ ಈ ನೃತ್ಯ ಹಾಗೂ ಅದರ ಸಂಗೀತ ಬೊಂಬಾಟ್ ಗ್ಲಾಮರಸ್ ಎಂದು ಹೆಸರುವಾಸಿ. ಈ ಡ್ಯಾನ್ಸ್ ನ್ನು `ವರ್ಲ್ಡ್ ರೆಫ್ಯೂಜಿ ಡೇ’ಯಂದು ರಬಾತ್ ನಲ್ಲಿ ಆಫ್ರಿಕನ್ ಫೆಸ್ಟಿವ್ ನಲ್ಲಿ ಪ್ರಸ್ತುತಪಡಿಸಲಾಯಿತು.
ಕಂದಾಚಾರ ವಿರೋಧಿಸಲು ಹೀಗೊಂದು ಹೊಸ ಪರಿ :
ಟ್ಯೂನೀಶಿಯಾ, ಲಿಬಿಯಾ, ಈಜಿಪ್ಟ್ ನ ಉರಿಬೆಂಕಿ ಈಗ ಟರ್ಕಿಯನ್ನೂ ತಲುಪಿದೆ. ಅಲ್ಲಿನ ಇಸ್ತಾಂಬುಲ್ ತಕ್ಜೀಮ್ ಪಾರ್ಕ್ ನಲ್ಲಿ ಸಾವಿರಾರು ಯುವಜನರು ಹಲವಾರು ವಾರಗಳ ಕಾಲ ಸಂಪು ಹೂಡಿ, ಅಲ್ಲಿನ ಪ್ರಧಾನಮಂತ್ರಿ ರೆಸಪ್ ತಯ್ಯಪ್ ಆ್ಯರ್ಡೋಗನ್ ರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಅಲ್ಲಿನ ಪ್ರಧಾನಮಂತ್ರಿ ಹಿಂಬಾಗಿಲ ಮೂಲಕ ಆಡಳಿತದಲ್ಲಿ ಕಂದಾಚಾರ ಹೇರಲು ಯತ್ನಿಸಿದಾಗ, ಎಲ್ಲಾ ಮಡಿವಂತಿಕೆಗಳನ್ನು ಮೀರಿ ಈ ರೀತಿ ವಿರೋಧಿಸಿದರು.
ಸುಂದರಿಯರ ಸಾಂಗತ್ಯದಲ್ಲಿ ಬಾಯೆಲ್ಲಾ ಹಲ್ಲು :
ಅಮೆರಿಕಾದ ಕೋಟ್ಯಧಿಪತಿ ಶ್ರೀಮಂತರಲ್ಲಿ ಡೊನಾಲ್ಡ್ ಟ್ರಂಪ್ ಸಹ ಒಬ್ಬರು. ಜೊತೆಗೆ ಆತ ಮಿಸ್ ಯೂನಿವರ್ಸ್ ಸ್ಪರ್ಧೆಯ ಪ್ರಾಯೋಜಕರೂ ಸಹ. ಈ ದಂಧೆಯಿಂದ ಕೋಟ್ಯಂತರ ಡಾಲರ್ ಗಳ ಲಾಭ ಒಂದೆಡೆಯಾದರೆ, ಬೋನಸ್ ರೂಪದಲ್ಲಿ ಹೀಗೆ ಸುಂದರಿಯರ ಸಾನ್ನಿಧ್ಯ ಲಭ್ಯ! ಹಣವಿದ್ದರೆ ಬಂತೆ…..? ಎಷ್ಟು ಶ್ರೀಮಂತರಿಗುಂಟು ಈ ಭಾಗ್ಯ?
ಇವರು ಪ್ರೇಮಿಗಳಲ್ಲ…..ಇಬ್ಬರು ಮಹಾನ್ ಸೆಲೆಬ್ರಿಟಿಗಳು :
ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಹಾಗೂ ಅಮೆರಿಕಾದ ರಾಷ್ಟ್ರಪತಿ ಬರಾಕ್ ಒಬಾಮ ನಡುವೆ ಇದೆಂಥ ರೊಮ್ಯಾಂಟಿಕ್ ಕೆಮಿಸ್ಟ್ರಿ ಎಂದು ಹುಬ್ಬೇರಿಸಬೇಡಿ, ಫೋಟೋಗ್ರಾಫರ್ ಗೆ ಸಿಕ್ಕಿಬಿದ್ದ ಈ ಜೋಡಿ ಪಾಶ್ಚಿಮಾತ್ಯ ಶೈಲಿಯಲ್ಲಿ ಪರಸ್ಪರ ನಮಸ್ಕಾರ ಹೇಳಿಕೊಳ್ಳುತ್ತಿದ್ದಾರಷ್ಟೆ.
ಕೆಲಸವಿಲ್ಲದಿದ್ದ ಮೇಲೆ ಹಣ ಎಲ್ಲಿಂದ ಬಂದೀತು? :
ಆರ್ಥಿಕ ಹಿಂಜರಿತ (ರಿಸೆಷನ್) ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳನ್ನೂ ಹಿಂಡಿ ಹಿಪ್ಪೆ ಮಾಡಿದೆ. ಜನಬಾಯಿಗೆ ಬಂದಂತೆ ತಂತಮ್ಮ ಸರ್ಕಾರಗಳನ್ನು ಧಿಕ್ಕರಿಸುತ್ತಿದ್ದಾರೆ. ದ. ಅಮೆರಿಕಾದಲ್ಲಿ ಬೊಲಿವಿಯಾದ ಸರ್ಕಾರಿ ಸಿಬ್ಬಂದಿ, ತಮಗೆ ಸಿಗಬೇಕಾದ ಪಿಂಚಣಿ ಹಣ ಸಂಬಳಕ್ಕೆ ಸಮನವಾಗಿರಬೇಕೆಂದು ಅತಿ ದೊಡ್ಡ ಸಂಪು ನಡೆಸಿದರು. ಕೆಲಸ ಮಾಡದವರಿಗೂ ಮಾಡುತ್ತಿರುವವರಷ್ಟೇ ಸಮನಾದ ಹಣ ಸಿಗಬೇಕೆಂದರೆ ಅದು ಹೇಗೆ ಸಾಧ್ಯ? ಇದು ಅರ್ಥವಾಗದ ವಿಷಯವಲ್ಲ, ಆದರೆ ಸಂಪಿಗೆ ರಾಜಕೀಯ ಬಣ್ಣ ಹಚ್ಚಿ ಹೀಗೆ ಹೋರಾಟ ಮುಂದುವರಿಸಲಾಗುತ್ತಿದೆ.
ಚಿತ್ರ ವಿಚಿತ್ರ ಪ್ರಪಂಚ :
ಮೀನು ಮತ್ತು ಇತರ ಜಲಚರಗಳು ಬಟ್ಟೆ ಧರಿಸದಿದ್ದ ಮೇಲೆ ನಾವೇಕೆ ಮೈ ಪೂರ್ತಿ ಅದನ್ನು ಧರಿಸಬೇಕು? ಹೀಗೊಂದು ವಾದ ಮುಂದಿಟ್ಟುಕೊಂಡು, ನ್ಯೂಯಾರ್ಕ್ ನ ಮರ್ಮೇಡ್ (ಮತ್ಸ್ಯ ಮಾನವ) ಪೆರೇಡ್ ನಲ್ಲಿ ಭಾಗವಹಿಸಿದ ಮಂದಿ, ಅಲ್ಲಿನ ಕಾರ್ನಿವಾಲ್ ನ ಮುಖ್ಯ ಆಕರ್ಷಣೆಯಾಗಿದ್ದಾರೆ. ಕನಿಷ್ಠ 6-7 ಲಕ್ಷ ಜನ ಇದನ್ನು ನೋಡಲೆಂದೇ ಜಮಾಯಿಸುತ್ತಾರೆ.