ಶಸ್ತ್ರಾಸ್ತ್ರ ಕಂಡು ಹೆದರಬೇಡಿ :

ಇತ್ತೀಚೆಗೆ ಫಿಲಿಪ್ಪೀನ್ಸ್ ನ ಮನಿಲಾದಲ್ಲಿ ಬಂದೂಕುಗಳ ಪ್ರದರ್ಶನಕ್ಕಾಗಿ ರಾಂಪ್ ಶೋ ನಡೆಯಿತು. ಅಂದರೆ ಮಾಡೆಲ್ ಗಳ ಕೈಗಳಲ್ಲಿ ಪಿಸ್ತೂಲು, ಗನ್ನುಗಳಿದ್ದವು. ಹೆದರದಿರಿ, ಇದು ಕೇವಲ ತೋರಿಕೆಗಾಗಿ, ಗುಂಡು ಹಾರಿಸಲಿಲ್ಲ. ಅದಕ್ಕಿಂತಲೂ ಭಯಂಕರವಾದ ತೀಕ್ಷ್ಣ ಕಣ್ಣೋಟದಿಂದ ಎಲ್ಲಿ ಗುಂಡು ಸಿಡಿದುಬಿಡುವುದೋ ಎಂಬಂತೆ ಮಾಡೆಲ್ಸ್ ರಾಂಪ್ ಶೋ ನಡೆಸಿಕೊಟ್ಟರು.
ಸರ್ವಾಧಿಕಾರದಂಥ ಗತ್ತು ಗೈರತ್ತು :

samachar-2

ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್ ಸರ್ವಾಧಿಕಾರದಂಥ ಗತ್ತಿನಲ್ಲಿ ರಾಷ್ಟ್ರದ ಆಡಳಿತ ನಡೆಸಿದ್ದಾರೆ. ಈ ವ್ಯವಸ್ಥೆಯನ್ನು ವಿರೋಧಿಸುವ ಪ್ರತಿಯೊಬ್ಬರನ್ನೂ ಹಿಂದಿನಂತೆಯೇ ಜೇಲಿಗೆ ತಳ್ಳುವ ಅಥವಾ ಸೈಬೀರಿಯಾಗೆ ಓಡಿಸುವ ಎಂದು ಹುನ್ನಾರ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಅಲೆಕ್ಸಿ ನಾಲ್ನಿಯರ ಮೇಲೆ ಕಳ್ಳತನ ಹಾಗೂ ಲಂಚದ ಆರೋಪ ಹೊರಿಸಿ 5 ವರ್ಷಗಳ ಕಠಿಣ ಸೆರೆವಾಸಕ್ಕೆ ಅಟ್ಟಿದ್ದಾರೆ. ನಮ್ಮ ಬಾಲಿವುಡ್ ಹೀರೋಗಳಂತೆ ದಿಢೀರ್ ಎಂದು ಪ್ರಜೆಗಳ ಮಧ್ಯದಿಂದ ಒಬ್ಬ ಎದ್ದು ಬಂದು ವೀರಾವೇಶದಿಂದ ಇದನ್ನು ಪ್ರತಿಭಟಿಸಬಾರದೇ?
ಎತ್ತಣಿಂದೆತ್ತ ಸಂಬಂಧವಯ್ಯ…… : ಇತ್ತೀಚೆಗೆ ಇಂಗ್ಲೆಂಡ್ ನ ಭಾವಿ ರಾಜಕುಮಾರ ವಿಲಿಯಂ ಹಾಗೂ ಕೆಥರೀನಾ ದಂಪತಿಗೆ ಗಂಡು ಮಗುವಾದಾಗ, ಮುಂಬೈ ನಟಿ ಫಿನ್ ಬಾಕ್ಸ್ ಒಯ್ಯು ಡಬ್ಬಾ ವಾಲಾಗಳು ಪರಸ್ಪರ ಸಿಹಿ ಹಂಚಿಕೊಂಡರಂತೆ! ಹಿಂದೆ ಈ ದಂಪತಿಯ ಮದುವೆ ಸಲುವಾಗಿ ಇವರಲ್ಲಿ ಇಬ್ಬರನ್ನು ಅಲ್ಲಿಗೆ ಕರೆಸಿಕೊಂಡಿದ್ದರಂತೆ, ಇದು ಅದೇ ಖುಷಿಯ ಸವಿನೆನಪಿನ ಸಂಭ್ರಮಾಚರಣೆ ಇರಬಹುದೇ?
ಒಂದೇ ಬಾರಿಗೆ ಹಲವು ಮಜಾ :

samachar-3

ನಮ್ಮಲ್ಲಿ ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡುವುದು ಅಥವಾ ಕಂಬಳದ ಕೆಸರಿನ ಗದ್ದೆಯಲ್ಲಿ ರಾಡಿ ಆಟ ಇರುವಂತೆ ಕೊರಿಯಾದಲ್ಲಿ ಗಂಡಸರಿಗೆಂದೇ ಕೆಸರಿನ ಮಧ್ಯೆ ಸಂಗಾತಿಯನ್ನು ಹೊತ್ತು ಓಡುವ ವಿಶೇಷ ಸ್ಪರ್ಧೆಯುಂಟು. ಹೆಚ್ಚಿನ ಮೋಜು ಮಜಾ ಜೊತೆ ಆ ಕೆಸರು ತ್ವಚೆಯ ರೋಗ ನಿವಾರಣೆಯನ್ನೂ ಮಾಡುತ್ತದೆಂಬುದು ಅಲ್ಲಿನವರ ನಂಬಿಕೆ. ಒಟ್ಟಾರೆ ನೀವು ಕೊರಿಯಾದ ಈ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಒಂದೇ ಬಾರಿಗೆ ಎಷ್ಟೆಲ್ಲ ಲಾಭ ಗಳಿಸಬಹುದೆಂದು ಲೆಕ್ಕಹಾಕಿ ನೋಡಿ!

ಕಿವಿ ಮೇಲೆ ಹೂವಿಡಲು ಹೊಸ ತಂತ್ರ :

samachar-4

ಸೌಂದರ್ಯ ಪ್ರಾಪ್ತಿಗಾಗಿ ಏನು ಮಾಡಲಿಕ್ಕೂ ರೆಡಿ ಎನ್ನುವವರು ಇನ್ನು ಮುಂದೆ ಕ್ರಿಮಿಕೀಟಗಳನ್ನು ಮುಖದ ಮೇಲೆ ಓಡಾಡಿಸಿಕೊಳ್ಳಬೇಕಾಗುತ್ತದೆ. ಟೋಕಿಯೋದ ಒಂದು ಸೆಲೂನ್ ಹೀಗೊಂದು ಹೊಸ ಸ್ಟಂಟ್ ಶುರುಹಚ್ಚಿಕೊಂಡಿದೆ. ಬಸವನಹುಳು ಮುಖದ ಮೇಲೆ ಓಡಾಡಿದರೆ ಚರ್ಮ ಸಹಜವಾಗಿ ಆರ್ದ್ರತೆ ಪಡೆದು, ಸೂರ್ಯರಶ್ಮಿ ಅದರ ಮೇಲೆ ಬಿದ್ದರೆ, ಚರ್ಮ ಹೆಚ್ಚಿನ ಕಾಂತಿ ಗಳಿಸುತ್ತದೆ ಎಂಬುದು ಸೆಲೂನ್ ಹೇಳಿಕೆ. ಇದನ್ನು ನಂಬಿ ಹಣ ತೆರುವ ಮೂರ್ಖರಿಗೇನೂ ಕಡಿಮೆ ಇಲ್ಲ.
ಖುಲ್ಲಂಖುಲ್ಲ ಪೋಪ್ ರ ಖಂಡನೆ :

samachar-5

ಪೋಪ್ ಆದರೇನಂತೆ, ಅವರೂ ವಿರೋಧ ಎದುರಿಸಬೇಕಾಗುತ್ತದೆ. ಹೊಸ ಪೋಪ್ ಫ್ರಾನ್ಸಿಸ್, ಇತ್ತೀಚೆಗೆ ಬ್ರೆಝಿಲ್ ತಲುಪಿದಾಗ, ಅಲ್ಲಿದ್ದ ಅವರ ಲಕ್ಷಾಂತರ ಅನುಯಾಯಿಗಳು ಜೈಕಾರ ಹಾಕುತ್ತಿದ್ದರೆ, ಅವರ ನಡುವಿನಿಂದ ಹಲವಾರು ಧೀರ ದಿಟ್ಟ ಮಹಿಳೆಯರು, ಹಲವು ಸಂದರ್ಭಗಳಲ್ಲಿ ಪೋಪ್ ಹೆಂಗಸರ ಹಕ್ಕುಗಳಿಗೆ ಚ್ಯುತಿ ಒಡ್ಡಿದ್ದಾರೆಂದು ಖುಲ್ಲಂಖುಲ್ಲ ಖಂಡಿಸಿ ವಿರೋಧಿಸಿದರು, ಅದೂ ಈ ಪರಿಯಲ್ಲಿ!
ತಪ್ಪು ಮಾಡಿದ್ದಲ್ಲದೆ ಸಮರ್ಥನೆ ಬೇರೆ! : ಇಟಲಿಯ ಮಿಲಾನ್ ನಲ್ಲಿನ ಡಿಸೈನರ್ ಕಂಪನಿಯೊಂದು ತೆರಿಗೆ ವಂಚನೆಯ ಆರೋಪದ ಮೇರೆಗೆ ಸೆರೆ ಸಿಕ್ಕಿಬಿದ್ದಾಗ, 3 ದಿನಗಳ ಕಾಲ ಪ್ರೊಟೆಸ್ಟ್ ಹೆಸರಿನಲ್ಲಿ ತನ್ನ ಬುಟಿಕ್ ಗೆ ಬೀಗ ಜಡಿದಿತ್ತು. ಅಲ್ಲಿಗೆ ಬಂದ ಪ್ರವಾಸಿಗರಿಗೆ ಸಹ ಈ ನೋಟಿಸ್ ಒಂದು ವಿಧದ ಆಕರ್ಷಣೆಯ ಕೇಂದ್ರವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ