2021ನೇ ವರ್ಷದ ಕೆಲವು ತಿಂಗಳುಗಳನ್ನು ಬಹಳ ಆತಂಕದಿಂದ ಕಳೆದೆವು. ಆಗ ನಮಗೆ ಹೊರಗೆ ಸುತ್ತಾಡಲು ಅವಕಾಶವೇ ಇರಲಿಲ್ಲ. ಹೀಗಾಗಿ ನಮ್ಮ ಜೀವನಶೈಲಿ ಬಹಳಷ್ಟು ಬದಲಾಗಿತ್ತು. ಈಗ ನಾವು 2022ರಲ್ಲಿ ಹತ್ತು ಹಲವು ನಿರೀಕ್ಷೆಗಳೊಂದಿಗೆ ಕಾಲಿರಿಸುತ್ತಿದ್ದೇವೆ. ಅದಕ್ಕಾಗಿ ನಾವು ನಮ್ಮಲ್ಲಿ ಸಕಾರಾತ್ಮಕತೆಯನ್ನು ತಂದುಕೊಳ್ಳುವುದರ ಜೊತೆಗೆ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗೆಗೂ ಸಾಕಷ್ಟು ಗಮನ ಕೊಡಬೇಕಿದೆ. ನಮ್ಮನ್ನು ನಾವು ಫಿಟ್‌ ಆಗಿಟ್ಟುಕೊಳ್ಳುವುದರ ಮೂಲಕ ರೋಗಗಳೊಂದಿಗೆ ಹೋರಾಡುವ ಶಕ್ತಿ ನಮಗೆ ಬರಬೇಕು.

ಆ 7 ಸಂಗತಿಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಅವನ್ನು ನಾವು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಆಹಾರದ ಬಗ್ಗೆ ವಿಶೇಷ ಗಮನ

ನಮ್ಮ ಮೆದುಳು ದಣಿದುಹೋದಾಗ, ಅದು ನಮಗೆ ಅವಶ್ಯವಾಗಿ ಸಂಕೇತ ನೀಡುತ್ತದೆ. ಅದರಿಂದಾಗಿ ನಾವು ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಆಗುವುದಿಲ್ಲ, ಚೆನ್ನಾಗಿ ಯೋಚಿಸಲು ಆಗುವುದಿಲ್ಲ. ಹೀಗಾಗುವುದು ಯಾವಾಗ ಗೊತ್ತೆ? ನಾವು ಚೆನ್ನಾಗಿ ನಿದ್ರಿಸದಿದ್ದಾಗ, ನಿದ್ರೆಯ ಸಮಯದಲ್ಲಿ ಟಿ.ವಿ ನೋಡಲು ಅಥವಾ ಮೊಬೈಲ್ ‌ನೋಡಲು ಆಸಕ್ತಿ ತೋರಿಸುತ್ತೇವೆ. ಹೀಗಾಗಿ ನಿದ್ರೆಗೆ ಅಡ್ಡಿಯುಂಟಾಗುತ್ತದೆ.

ನೀವು ಹೀಗೆ ಮಾಡುವುದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೆ? ಒಂದು ಸಂಶೋಧನೆಯಿಂದ ತಿಳಿದುಬಂದ ಸಂಗತಿಯೇನೆಂದರೆ, ನಿದ್ರೆ ಹಾಗೂ ರೋಗ ನಿರೋಧಕ ಶಕ್ತಿ ಒಂದಕ್ಕೊಂದು ನಂಟು ಹೊಂದಿವೆ. ಏಕೆಂದರೆ ನಾವು ಮಲಗಿದಾಗ, ನಮ್ಮ ರೋಗ ನಿರೋಧಕ ವ್ಯವಸ್ಥೆ ರಸಾಯನಗಳನ್ನು ಬಿಡುಗಡೆ ಮಾಡುತ್ತದೆ. ಅದು ಸೋಂಕು, ಉರಿ ಹಾಗೂ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಆದರೆ ನಾವು ಸಾಕಷ್ಟು ನಿದ್ರಿಸದಿದ್ದಾಗ ಟಾಕ್ಸಿನ್ಸ್ ಹಾಗೂ ಸೋಂಕಿನ ವಿರುದ್ಧ ಹೋರಾಡುವ ಆ್ಯಂಟಿಬಾಡೀಸ್‌ ನಿರ್ಮಾಣ ಪ್ರಕ್ರಿಯೆ ಮಂದಗೊಳ್ಳುತ್ತದೆ.

ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತದೆ. ಹೀಗಾಗಿ ಪ್ರತಿದಿನ 6-7 ಗಂಟೆಯ ನಿದ್ರೆ ಅತ್ಯವಶ್ಯ ಮಾಡಿ. ರಾತ್ರಿಯ ನಿದ್ದೆಯ ಜೊತೆಗೆ ಯಾವುದೇ ಹೊಂದಾಣಿಕೆಬೇಡ.

ಮೆದುಳಿಗೂ ವಿಶ್ರಾಂತಿ ಕೊಡಿ

ಕೊರೋನಾದ ಕಾರಣದಿಂದಾಗಿ ಕೆಲವು ತಿಂಗಳು ನಾವು ಬಲವಂತವಾಗಿ ಮನೆಯಲ್ಲಿಯೇ ಉಳಿಯಬೇಕಾಗಿ ಬಂತು. ಈಗ ನಾವು ಸಹಜ ಸ್ಥಿತಿಗೆ ಬಂದಿದ್ದೇವೆ ಅನ್ನಿಸಿದರೂ ಇನ್ನೂ ಅಷ್ಟಿಷ್ಟು ಅಳುಕು ಇದ್ದೇ ಇದೆ. ಕೊರೋನಾದ ಸಮಯದಲ್ಲಿ ನಾವು ಅತಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೆವು. ಅದೂ ಕೂಡ ಪೌಷ್ಟಿಕ ಅಂಶ ಇಲ್ಲದೇ ಇರುವಂಥ ಪದಾರ್ಥಗಳು ಹೊಟ್ಟೆ ಸೇರುತ್ತಿದ್ದವು. ಅವುಗಳಲ್ಲಿ ಕೊಬ್ಬಿನಂಶ, ಸಕ್ಕರೆ ಹಾಗೂ ಉಪ್ಪಿನಾಂಶ ಹೇರಳವಾಗಿರುತ್ತಿದ್ದವು. ಅವು ದೇಹಕ್ಕೆ ಶಕ್ತಿಯನ್ನಂತೂ ನೀಡುವುದಿಲ್ಲ.

ಆದರೆ ನಮ್ಮನ್ನು ರೋಗದ ಕಪಿಮುಷ್ಟಿಗೆ ಸಿಲುಕಿಸುತ್ತವೆ.

ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಸಸ್ಯಮೂಲ ಆಹಾರಗಳು, ಹಣ್ಣುಗಳು, ತರಕಾರಿಗಳು ಆ್ಯಂಟಿ ಆಕ್ಸಿಡೆಂಟ್‌ ಗಳಿಂದ ಸಮೃದ್ಧವಾಗಿರುವುದರ ಜೊತೆ ಜೊತೆಗೆ ಬೀಟಾಕೆರೋಟಿನ್‌ ವಿಟಮಿನ್‌ ಸಿ, ಡಿ, ಇ ಯಂತಹ ನ್ಯೂಟ್ರಿಯೆಂಟ್ಸ್ ದೊರಕಿಸಿಕೊಡುತ್ತವೆ. ಅದು ಇಮ್ಯುನಿಟಿಯನ್ನು ಬೂಸ್ಟ್ ಮಾಡುವುದರ ಜೊತೆ ಜೊತೆಗೆ ಆಕ್ಸಿಡೇಟಿವ್ ಸ್ಟ್ರೆಸ್‌ ನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಬೀಟಾ ಕೆರೊಟಿನ್‌ ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಕಾರಣದಿಂದ ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಜೀವಕೋಶಗಳನ್ನು ಹೆಚ್ಚಿಸಿ ಉರಿ ಹಾಗೂ ಊತವನ್ನು ಕಡಿಮೆಗೊಳಿಸುವ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ನಿಮ್ಮ ಡಯೆಟ್ ನಲ್ಲಿ ಕ್ಯಾರೆಟ್‌, ಹಸಿರು ಸೊಪ್ಪುಗಳನ್ನು ಅವಶ್ಯವಾಗಿ ಸೇರಿಸಿ.

ವಿಟಮಿನ್‌ ಎ ಹಾಗೂ ಸಿ ದೇಹದಲ್ಲಿ ಫ್ರೀ ರಾಡಿಕಲ್ಸ್ ನ್ನು ಕಡಿಮೆಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಸಮರ್ಪಕವಾಗಿಡುವಲ್ಲಿ ನೆರವಾಗುತ್ತದೆ. ಹೀಗಾಗಿ ನೀವು ನಿಮ್ಮ ಡಯೆಟ್‌ ನಲ್ಲಿ ಕಿತ್ತಳೆ, ಪಾಲಕ್‌, ನಿಂಬೆ, ಸ್ಟ್ರಾಬೆರಿ, ಕಾಯಿಗಳನ್ನು ಸೇರಿಸಿ. ನೀವು ವಿಟಮಿನ್‌ ಡಿ ಗಾಗಿ ಬೆಳಗ್ಗೆ ಸೂರ್ಯ ಕಿರಣಗಳನ್ನು ದೇಹಕ್ಕೆ ತಗುಲುವಂತೆ ಮಾಡಿ. ತೀರಾ ಅವಶ್ಯಕವೆನಿಸಿದರೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ನಿಮ್ಮ ದೇಹ ಸೋಂಕಿನಿಂದ ಹೋರಾಡಲು ಸಮರ್ಥವಾಗುತ್ತದೆ. ನೀವು ರೋಗಗಳಿಂದ ದೂರ ಇರಬೇಕೆಂದರೆ, ನಿಮ್ಮ ಆಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಮದ್ಯಕ್ಕೆ ಹೇಳಿ ಗುಡ್ಬೈ

ಮದ್ಯ ಸೇವನೆಯಿಂದ ಏನೂ ಅಪಾಯವಿಲ್ಲ ಎಂಬ ಭ್ರಮೆಯಿಂದ ಹೊರಬನ್ನಿ. ದೈನಂದಿನ ಮದ್ಯ ಸೇವನೆಯ ಅಭ್ಯಾಸ ನಿಮ್ಮ ರೋಗ ನಿರೋಧಕ ಸಾಮರ್ಥ್ಯಕ್ಕೂ ಪೆಟ್ಟು ಕೊಡುತ್ತದೆ ಎಂಬ ಸಂಗತಿ ನಿಮಗೆ ಗೊತ್ತೆ? ಒಂದು ಅಧ್ಯಯನದಿಂದ ತಿಳಿದುಬಂದ ಪ್ರಕಾರ, ಆಲ್ಕೋಹಾಲ್ ‌ನ ಅತಿಯಾದ ಸೇವನೆಯಿಂದ ಶ್ವಾಸಕೋಶಗಳು ಹಾಗೂ ಮೇಲ್ಭಾಗದ ಉಸಿರಾಟದ ವ್ಯವಸ್ಥೆಯಲ್ಲಿ ಇಮ್ಯೂನ್‌ ಸೆಲ್ಸ್ ಗಳಿಗೆ ಸಾಕಷ್ಟು ಹಾನಿಯುಂಟಾಗುತ್ತದೆ. ಹೀಗಾಗಿ ಹೊಸ ವರ್ಷದಲ್ಲಿ ಮದ್ಯಕ್ಕೆ ಗುಡ್‌ ಬೈ ಹೇಳುವ ನಿರ್ಧಾರ ಕೈಗೊಳ್ಳಿ.

ಈ ಅಭ್ಯಾಸ ಬಿಟ್ಟುಬಿಡಲು ಆರಂಭದಲ್ಲಿ ನಿಮಗೆ ಕಷ್ಟಕರ ಎನಿಸಬಹುದು. ಆದರೆ ನಿಮ್ಮ `ವಿಲ್ ಪವರ್‌’ ಅದನ್ನು ಬಿಟ್ಟುಬಿಡಲು ನಿಮಗೆ ನೆರವಾಗುತ್ತದೆ. ನಿಮಗೆ ಯಾವಾಗಲಾದರೂ ಮದ್ಯ ಸೇವಿಸಬೇಕೆಂದು ನೆನಪಾದಾಗ ನಿಂಬೆ ಪಾನಕ, ಸೂಪ್‌ ಅಥವಾ ಯಾವುದಾದರೂ ಜೂಸ್‌ ಸೇವಿಸಿ. ಏಕೆಂದರೆ ಅವು ದೇಹದಲ್ಲಿನ ಕಶ್ಮಲಗಳನ್ನು ಹೊರಹಾಕಲು ನೆರವಾಗುತ್ತಲ್ಲದೆ, ಆಲ್ಕೋಹಾಲ್ ಅಭ್ಯಾಸದಿಂದ ಹೊರಬರಲು ನಿಮಗೆ ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಬಲಪಡಿಸಿ

ಕೆಲವು ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಆದರೆ ಇತ್ತೀಚಿಗೆ ಜನರ ರೊಟೀನ್‌ ಎಷ್ಟೊಂದು ಬಿಝಿ ಆಗಿಬಿಟ್ಟಿದೆಯೆಂದರೆ, ಅವರು ತಮಗಾಗಿ ಸಮಯ ಮೀಸಲಿಟ್ಟುಕೊಳ್ಳಲೂ ಆಗುವುದಿಲ್ಲ. ನಿಮ್ಮ ಬಳಿ ಮಾಡರೇಟ್‌ ಎಕ್ಸರ್‌ ಸೈಜ್‌ ಮಾಡಲು ಸಮಯ ಇಲ್ಲವೆಂದರೆ, ನೀವು ದಿನಂಪ್ರತಿ 15 ನಿಮಿಷಗಳಷ್ಟು ಕಾಲ ಅವಶ್ಯವಾಗಿ ಎಕ್ಸರ್‌ ಸೈಜ್‌ ಮಾಡಿ. ಇದರಲ್ಲಿ ಬಿರುಸಿನ ನಡಿಗೆ, ಜಾಗಿಂಗ್‌, ಸೈಕ್ಲಿಂಗ್‌ ಸೇರಿಸಿಕೊಳ್ಳಬಹುದು.

ನಿಮಗೆ ಈಜಿನ ಬಗ್ಗೆ ಆಸಕ್ತಿಯಿದ್ದರೆ ಅದು ನಿಮಗೆ ಬಹಳ ಒಳ್ಳೆಯ ಎಕ್ಸರ್‌ ಸೈಜ್‌ ಆಗುತ್ತದೆ. ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ನೀವು ವಾರದಲ್ಲಿ 150 ನಿಮಿಷಗಳ ಕಾಲ ಮಾಡರೇಟ್‌ ಎಕ್ಸರ್‌ ಸೈಜ್‌ ಮಾಡಿದರೆ ಅದು ನಿಮ್ಮ ಇಮ್ಯೂನ್‌ ಸೆಲ್ಸ್ ನ ಪುನರ್ನಿಮಾಣದಲ್ಲಿ ನೆರವಾಗುತ್ತದೆ.

ನೀರಿನ ಬಗ್ಗೆ ಹೆಚ್ಚು ಗಮನಹರಿಸಿ

ವಯಸ್ಕ ವ್ಯಕ್ತಿಯೊಬ್ಬನ ದೇಹದ ಶೇ.60ರಷ್ಟು ಭಾಗ ನೀರಿನಿಂದ ಆವೃತ್ತವಾಗಿರುತ್ತದೆ ಎಂಬ ಸಂಗತಿ ನಿಮಗೆ ಗೊತ್ತೇ ಇರಬೇಕು. ಅದರಲ್ಲೂ ಶ್ವಾಸಕೋಶದಲ್ಲಿ ಶೇ.83ರಷ್ಟು ನೀರು ಹಾಗೂ ಹೃದಯ ಮತ್ತು ಮೆದುಳಿನಲ್ಲಿ ಶೇ.73ರಷ್ಟು ನೀರು ಇರುತ್ತದೆ ಎಂಬುದು ಕೂಡ ನಿಮಗೆ ತಿಳಿದಿರಲಿ. ನಿಮ್ಮ ದೇಹದ ಪ್ರತಿಯೊಂದು ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡಲು ನೀರಿನ ಅವಶ್ಯಕತೆ ಉಂಟಾಗುತ್ತದೆ.

ನಾವು ಆಹಾರ ಸೇವಿಸಿದಾಗ, ಉಸಿರಾಟ ಪ್ರಕ್ರಿಯೆ ನಡೆಸಿದಾಗ, ದೇಹದಿಂದ ಬೆವರು ಹೊರ ಹೋದಾಗ, ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಅದನ್ನು ನಾವು ನೀರು ಅಥವಾ ದ್ರವ ಪದಾರ್ಥಗಳ ಸೇವನೆಯಿಂದ ಮರುಭರ್ತಿ ಮಾಡಬೇಕು.

ಹೀಗಾಗಿ ನಾವು ದಿನಕ್ಕೆ 10-12 ಗ್ಲಾಸ್‌ ನೀರು ಕುಡಿಯುವುದು ಅತ್ಯವಶ್ಯ. ನೀರಿನ ಮುಖಾಂತರ ಆಮ್ಲಜನಕ ಹಾಗೂ ಪೋಷಕಾಂಶಗಳು ಇಡೀ ದೇಹದಲ್ಲಿ ಪ್ರವೇಶಿಸಿ, ವಿಷಕಾರಿ ಘಟಕಗಳನ್ನು ದೇಹದಿಂದ ಹೊರಹಾಕುತ್ತವಂ. ಅದರಿಂದ ನೀವು ರೋಗಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಸಾಧ್ಯವಾದಾಗೆಲ್ಲ ನೀರು, ನಿಂಬೆ ಪಾನಕ, ಬಿಸಿ ನೀರು ಸೇವಿಸಿ. ಏಕೆಂದರೆ ಇವು ದೇಹವನ್ನು ಡೀಟಾಕ್ಸ್ ಮಾಡಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲವರ್ಧಿಸುವ ಕೆಲಸ ಮಾಡುತ್ತವೆ.

ಆರೋಗ್ಯಕರ ತೂಕವಿರಲಿ

ರೋಗ ನಿರೋಧಕ ವ್ಯವಸ್ಥೆ ವಿಭಿನ್ನ ಬಗೆಯ ಜೀವಕೋಶಗಳಿಂದ ನಿರ್ಮಾಣವಾಗುತ್ತದೆ. ಅದು ದೇಹವನ್ನು ಬ್ಯಾಕ್ಟೀರಿಯಾ, ವೈರಸ್‌ ಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಇವೆಲ್ಲವುಗಳ ಸಮತೋಲನವನ್ನು ಕಾಪಾಡಿಕೊಂಡೂ ಹೋಗಬೇಕಾಗುತ್ತದೆ. ಏಕೆಂದರೆ ದೇಹ ಫಿಟ್‌ ಆಗಿರಬೇಕು.

ಆದರೆ ದೇಹದಲ್ಲಿ ಫ್ಯಾಟ್‌ ನ ಪ್ರಮಾಣ ಅಧಿಕವಾದರೆ, ಅದು ದೇಹದಲ್ಲಿ ರೋಗ ನಿರೋಧಕ ಜೀವಕೋಶಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತದೆ. ಆಗ ದೇಹ ರೋಗಗಳೊಂದಿಗೆ ಚೆನ್ನಾಗಿ ಹೋರಾಡಲಾರದು ಮತ್ತು ಹಲವು ರೋಗಗಳಿಗೆ ತುತ್ತಾಗುತ್ತದೆ.

ರೋಗ ನಿರೋಧಕ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡಲು ನಿಮ್ಮ ದೇಹ ತೂಕ ಸರಿಯಾಗಿರುವಂತೆ ನೋಡಿಕೊಳ್ಳಿ.

ಸ್ಟ್ರೆಸ್ನಿಂದ ಅಂತರ ಕಾಯ್ದುಕೊಳ್ಳಿ

ನಮ್ಮ ಜೀವನದಲ್ಲಿ ಯಾವಾಗ, ಎಂತಹ ಸ್ಥಿತಿ ಬರುತ್ತದೆಂದು ಹೇಳಲಾಗದು. ಇಂತಹದರಲ್ಲಿ ನಾವು ಅನಪೇಕ್ಷಿತವಾಗಿ ಸ್ಟ್ರೆಸ್‌ ಅಥವಾ ಒತ್ತಡದ ಕಪಿಮುಷ್ಟಿಗೆ ಸಿಲುಕುತ್ತೇವೆ. ಆದರೆ ಇದರಿಂದ ದೇಹದಲ್ಲಿ ಉರಿ ಹಾಗೂ ಊತದ ಸ್ಥಿತಿ ಉಂಟಾಗುವುದರಿಂದ, ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ ಎಂಬುದು ನಿಮಗೆ ಅರಿವಿದೆಯೇ? ಏಕೆಂದರೆ ನಾವು ಯಾವಾಗ ಒತ್ತಡದಲ್ಲಿ ಇರುತ್ತೇವೋ, ಆಗ ನಮ್ಮ ರೋಗ ನಿರೋಧಕ ಶಕ್ತಿಯ ಪ್ರತಿಕಾಯಗಳಿಂದ ಹೋರಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅದರಿಂದಾಗಿ ಸೋಂಕಿಗೀಡಾಗುವ ಸಾಧ್ಯತೆ ಹೆಚ್ಚಿಸುತ್ತದೆ.

ಹೀಗಾಗಿ ಎಂತಹದೇ ಸಂದರ್ಭ ಬಂದರೂ ಒತ್ತಡಕ್ಕೊಳಗಾಗಬೇಡಿ. ಒತ್ತಡವನ್ನು ಕಡಿಮೆಗೊಳಿಸಲು, ಅದು ಎಂಥದೇ ಸ್ಥಿತಿಯಾಗಿದ್ದರೂ ಸಕಾರಾತ್ಮಕವಾಗಿ ಯೋಚಿಸಿ. ಮೆದುಳಿಗೆ ವಿಶ್ರಾಂತಿ ಕೊಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ಅನುಸರಿಸಿ. ಈ ರೀತಿಯಾಗಿ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಂಡು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ.

ಹ್ಯಾಪಿ ನ್ಯೂ ಇಯರ್‌

ಶಕುಂತಲಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ