ಮದುವೆಯಂಥ ಅತಿ ಪ್ರಮುಖ ದಿನದಂದು ಅತ್ಯಂತ ರೂಪಸಿಯಾಗಿ ಕಾಣಸಿಕೊಳ್ಳಬೇಕೇ? ಕಲರ್ ಫುಲ್ ಬೀಡ್ಸ್, ಸ್ಟೋನ್ಸ್ ಮತ್ತು ಮುತ್ತುಗಳಿಂದ ಸಿಂಗರಿಸಲ್ಪಟ್ಟ ಹೆವಿ ಎಂಬ್ರಾಯಿಡರಿಯುಳ್ಳ ಈ ಮೆಜೆಂತಾ ಲೆಹಂಗಾ, ತನ್ನ ಬಾರ್ಡರ್ ಹಾಗೂ ಮ್ಯಾಚಿಂಗ್ ಆ್ಯಕ್ಸೆಸರೀಸ್ ನಿಂದಾಗಿ ಈ ನವ ವಧುವಿಗೆ ಅಪೂರ್ವ ಕಳೆ ತಂದುಕೊಟ್ಟಿದೆ.
ಬ್ಲೂ ನೆಟ್ ಮೇಲೆ ಬೀಡ್ಸ್ ಸ್ಟೋನ್ಸ್ ನಿಂದ ಶೃಂಗರಿಸಲಾದ ಅತ್ಯಾಕರ್ಷಕ ಲೆಹಂಗಾ. ಇದನ್ನು ಧರಿಸಿದ ನವ ವಧು ಮ್ಯಾಚಿಂಗ್ ಸ್ಲೀವ್ ಲೆಸ್ ಬ್ಲೌಸ್ ನೊಂದಿಗೆ ಬೀಗುತ್ತಾ, ಮಂದಹಾಸ ಬೀರುತ್ತಿದ್ದಾಳೆ. ಸಂಜೆಯ ಆರತಕ್ಷತೆಗೆ ಪರ್ಫೆಕ್ಟ್ ಚಾಯ್ಸ್!
ಸೀಕ್ವೆನ್ಸ್ ಗೋಲ್ಡನ್ ಥ್ರೆಡ್ ವರ್ಕ್ ನಿಂದ ಸಜ್ಜುಗೊಳಿಸಲಾದ ಈ ಫ್ಲವರ್ಡ್ ಪ್ಯಾಟರ್ನ್ ವುಳ್ಳ ಬ್ಯೂಟಿಫುಲ್ ಪಿಂಕಿಶ್ ಲೆಹಂಗಾ, ಡಿಸೈನರ್ ಚೋಲಿ ಜೊತೆ ಇವಳನ್ನು ಮಿರಿಮಿರಿ ಮಿಂಚುವಂತೆ ಮಾಡಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ