ನೀವು ಹೊಸ ವರ್ಷದಲ್ಲಿ ಯಾವುದೇ ರೀತಿಯಲ್ಲಿ ಹೊಸ ಫ್ಯಾಷನ್ನಿನ ಟ್ರೆಂಡ್ಸ್ ನಿಂದ ವಂಚಿತರಾಗುವುದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ನಾವು ಹೊಸ ವರ್ಷಕ್ಕಾಗಿ ಚಾಲ್ತಿಗೆ ಬರುವ ಡ್ರೆಸ್, ಜ್ಯೂವೆಲರಿ, ಬ್ಯಾಗ್ಸ್, ಫುಟ್ ವೇರ್, ಹೇರ್ ಸ್ಟೈಲ್ ಇತ್ಯಾದಿ ಎಲ್ಲಾ ಲೇಟೆಸ್ಟ್ ಮಾಹಿತಿ ನೀಡುತ್ತಿದ್ದೇವೆ. ಇದಕ್ಕಾಗಿ ದೇಶಾದ್ಯಂತ ಹೆಚ್ಚು ಖ್ಯಾತಿಗೊಂಡ ಫ್ಯಾಷನ್ ಡಿಸೈನರ್ಸ್ ಸಲಹೆಗಳನ್ನು ಇಲ್ಲಿ ಕ್ರೋಢೀಕರಿಸಲಾಗಿದೆ :
ಲೇಯರ್ಡ್ ಫ್ಯಾಷನ್ : ಈ ತರಹದ ಸ್ಟೈಲ್ ಸ್ಟೇಟ್ ಮೆಂಟ್ ನಲ್ಲಿ ನೀವು ಎಷ್ಟು ಬಗೆಯ ಡಿಸೈನಿನ ಡ್ರೆಸ್ ಗಳನ್ನಾದರೂ ಧರಿಸಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಯಾವ ಬಣ್ಣ, ಡಿಸೈನ್ ನ್ನು ನೀವು ಮ್ಯಾಚ್ ಮಾಡಿ ಧರಿಸುತ್ತಿದ್ದೀರಿ ಎಂಬುದು. ಲೇಯರ್ಡ್ ಫ್ಯಾಷನ್ನಿನಲ್ಲಿ ಬ್ಲ್ಯಾಕ್ ಪ್ಯಾಂಟ್ ವೈಟ್ ಶರ್ಟ್ ಜೊತೆ ಡಾರ್ಕ್ ಬ್ರೌನ್ ಬಣ್ಣದ ಲೂಸ್ ಸ್ವೆಟರ್ ಶಾರ್ಟ್ ಬೂಟ್ ಧರಿಸಿ, ಹೊಸ ಬಗೆಯ ಲೇಯರಿಂಗ್ ಮಾಡಬಹುದು. ನಿಮಗೆ ಸ್ಕಾರ್ಫ್ ಯಾ ಮಫ್ಲರ್ ಧರಿಸುವುದು ಇಷ್ಟವಾದರೆ, ಆಗ ನೀವು ಬಾಯ್ ಫ್ರೆಂಡ್ ಜೀನ್ಸ್ ಜೊತೆ ಡೀಪ್ ನೆಕ್ ಸ್ವೆಟರ್ ನ ಕಾಂಬಿನೇಶನ್ ಮಾಡಿ, ನಿಮ್ಮ ಆಯ್ಕೆಯ ಮಫ್ಲರ್ ನಿಂದ ಕವರ್ ಮಾಡಬಹುದು. ಈ ಲುಕ್ ಗೆ ನೀವು ಮೆಸ್ಸಿ ಬನ್ ಮ್ಯಾಚ್ ಮಾಡಿ, ಹೊರಗಿನ ಓಡಾಟಕ್ಕೆ ಹೊರಡಿ.
ಟೀಶರ್ಟ್ ಜೊತೆ ಬೆಲ್ ಬಾಟಂ ಪ್ಯಾಂಟ್ : ನಿಮಗೆ ಪಾರ್ಟಿಗಳಿಗೆ ಹೋಗುವುದು ಬಹಳ ಇಷ್ಟವಾದರೆ, ಈ ಫ್ಯಾಷನ್ ನಿಮ್ಮ ಸ್ಟೈಲ್ ಸ್ಟೇಟ್ ಮೆಂಟ್ ಆಗಬೇಕು. ನೀವು ಈ ಲುಕ್ಸ್ ಗಾಗಿ ಬ್ಲ್ಯಾಕ್ ಸ್ಕಾರ್ಪ್ ಹ್ಯಾಂ ಬೆಲ್ ಬಾಟಂ ಪ್ಯಾಂಟ್ ಜೊತೆ ಅನಿಮ್ ಪ್ರಿಂಟ್ ಟಾಪ್ ಧರಿಸಬಹುದು. ಉಗುರಿಗೆ ಬೋಲ್ಡ್ ಪಾಪ್ಪೀ ನೇಲ್ ಪೇಂಟ್ ಹಚ್ಚಿರಿ, ಇದು ನಿಮ್ಮ ಪ್ಯಾಂಟ್ ಗೆ ಮ್ಯಾಚ್ ಆಗುವಂತಿರಲಿ. ಕಿವಿಗೆ ಗೋಲಾಕಾರದ ಇಯರ್ ರಿಂಗ್ಸ್ ಇರಲಿ. ಮೇಕಪ್ ಮಾತ್ರ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಇರಲಿ.
ಪೆನ್ಸಿಲ್ ಸ್ಕರ್ಟ್ ಜೊತೆ ಓವರ್ ಸೈಜ್ ಶರ್ಟ್ : ಈ ಲುಕ್ಸ್ ಆಫೀಸಿಗೆ ಬಿಲ್ ಕುಲ್ ಒಪ್ಪುತ್ತದೆ. ನೀವು ಧರಿಸುವ ಪೆನ್ಸಿಲ್ ಸ್ಕರ್ಟ್ ಬಾಡಿ ಕೋನ್ ಆಗಿರಬೇಕು ಹಾಗೂ ಮುಂಭಾಗದಲ್ಲಿ ಮ್ಯಾಚಿಂಗ್ ಬಟನ್ ಇರಬೇಕು. ಇದರ ಜೊತೆ ಓವರ್ ಸೈಜ್ ಚೆಕ್ಸ್ ಶರ್ಟ್ ಧರಿಸಿ. ಕೂದಲನ್ನು ಸಡಿಲ ಪೋನಿಟೇಲ್ ನಲ್ಲಿ ಕಟ್ಟಿಕೊಳ್ಳಿ. ಲೇಸ್ ಪೀಪಲ್ ಟೋ ಬೂಟ್ ಜೊತೆ ಇದನ್ನು ಕ್ಯಾರಿ ಮಾಡಿ. ಇದು ನಿಮಗೆ ಕ್ಯಾಶುಯೆಲ್ ಲುಕ್ಸ್ ನೀಡುತ್ತದೆ.
ಬ್ಲೇಝರ್ ಡ್ರೆಸ್ : ಪ್ಲೇರ್ ಪ್ರಿಂಟೆಡ್ ಡ್ರೆಸೆಸ್ ಬೇಕಾದಷ್ಟು ಧರಿಸಿರುತ್ತೀರಿ, ಜೊತೆಗೆ ರಫಿಲ್ ಡ್ರೆಸೆಸ್ ಕೂಡ. ಆದರೆ ಈಗ ಜಿಪ್ ಬ್ಲೇಝರ್ ಡ್ರೆಸ್ ಟ್ರೈ ಮಾಡಿ ನೋಡಿ. ಈ ಡ್ರೆಸ್ ನ್ನು ನಿಮ್ಮ 2025ರ ಕಲೆಕ್ಷನ್ ನಲ್ಲಿ ಅಗತ್ಯ ಸೇರಿಸಿಕೊಳ್ಳಿ. ಈ ತರಹದ ಡ್ರೆಸ್ ಜೊತೆ ನೀವು ಆ್ಯಂಕ್ ಸ್ಟ್ರಾಪ್ ಚಂಕಿ ಹೀಲ್ ಧರಿಸಬಹುದು. ಬೇಕೆನಿಸಿದರೆ ಕೂದಲಿಗೆ ಬಣ್ಣ ಹಚ್ಚಿ ಈ ಲುಕ್ಸ್ ನ್ನು ಕಾನ್ಛಿಡೆಂಟಾಗಿ ಕ್ಯಾರಿ ಮಾಡಬಹುದು.