ಈ ಹಬ್ಬಗಳ ಸಮಯದಲ್ಲಿ ಮ್ಯಾಕ್ಸ್ ನ ಸಂಗೀತದಿಂದ ಪ್ರೇರಿತ ಹೊಚ್ಚ ಹೊಸ ವಿಂಟರ್ ಕಲೆಕ್ಷನ್ಸ್ ಮುಖ್ಯ ವೇದಿಕೆಗೆ ಬಂದಿದೆ. ಅದು ಬಾಲಿವುಡ್ ನ ಪ್ರಖರ ಬಣ್ಣಗಳು ಹಾಗೂ ಫ್ಯಾಷನ್ ಟ್ರೆಂಡ್ ಗಳಿರಲಿ. ಪಂಕ್ ರಾಕ್ ನ ಸ್ಟಡ್ಸ್ ಹಾಗೂ ಲೆದರ್ ಡಿಟೈಲಿಂಗ್ ಇರಲಿ ಅಥವಾ 60ರ ದಶಕದ ಹೂವಿನ ಪವರ್ ಮತ್ತು ಮೋನೊಕ್ರೋಮ್ ಪ್ರಿಂಟುಗಳಿರಲಿ, ನೀವು ಅವುಗಳನ್ನು ನಮ್ಮ ವಸ್ತ್ರಗಳು, ಪಾದರಕ್ಷೆಗಳು ಮತ್ತು ಸಾಧನ ವಸ್ತುಗಳ ಶ್ರೇಣಿಯಲ್ಲಿ ಕಾಣುವಿರಿ. ಹೀಗೆ ಮ್ಯಾಕ್ಸ್ ನೊಂದಿಗೆ ಟ್ಯೂನ್ ಇನ್ ಆಗಿರಿ ಹಾಗೂ ಪ್ರತಿದಿನವನ್ನೂ ಫ್ಯಾಷನ್ ಮಯವಾಗಿಸಿ.
- ವಿಂಟರ್ ಹಾಗೂ ಫೆಸ್ಟಿವವ್ ಸೀಸನ್ನಿನ ಲೇಟೆಸ್ಟ್ ಔಟ್ ಫಿಟ್ ಟ್ರೆಂಡ್ ಏನು?
ಕಳೆದ ವರ್ಷಕ್ಕೆ ಹೋಲಿಸಿದರೆ ವಿಂಟರ್ ಹಾಗೂ ಫೆಸ್ಟಿವ್ ಸೀಸನ್ನಿನ ಟ್ರೆಂಡ್ ಸಾಕಷ್ಟು ಬದಲಾಗಿದೆ ಎನ್ನಬಹುದು. ಜನ ಈಗ ರಿಚ್ ಗ್ರ್ಯಾಂಡ್ ಅಲಂಕಾರಕ್ಕೆ ಹೆಚ್ಚಿನ ಮಹತ್ವ ನೀಡದೆ, ಅದರ ಒಂದೊಂದೇ ಬಿಡಿಭಾಗದ ಕಡೆ ಗಮನ ಕೊಡುತ್ತಿದ್ದಾರೆ. ಇಂದಿನ ಗ್ರಾಹಕರಿಗೆ ಸಿಂಪಲ್ ಲುಕ್ಸ್ ಬೇಕು, ಆದರದು ಸೊಫೆಸ್ಟಿಕೇಟೆಡ್ ಹಾಗೂ ಡ್ರಮಾಟಿಕ್ ಆಗಿರಬೇಕು.
- ವಿದೇಶಗಳಲ್ಲಿ ವೆಸ್ಟರ್ನ್ ಡ್ರೆಸೆಸ್ ಔಟ್ ಡೇಟೆಡ್ ಆದಾಗ, ನಂತರವೇ ಅದು ಭಾರತಕ್ಕೆ ಬರುತ್ತದೆ. ಹೀಗೇಕೆ?
ಹ್ಞೂಂ, ನೀವು ಹೇಳುವುದು ಸರಿ. ಆದರೆ ಇದು ಹಿಂದೆ ಆಗುತ್ತಿತ್ತು, ಈಗಲ್ಲ! ಹಿಂದೆಲ್ಲ ಭಾರತೀಯ ಮಾರುಕಟ್ಟೆ ಈಗಿನಷ್ಟು ಹೈಫೈ ಎನಿಸಿರಲಿಲ್ಲ. ಅದು ಅತ್ತ ಅಂತಾರಾಷ್ಟ್ರೀಯ ಡಿಸೈನರ್ ಗಳಿಗೆ ಗಮನಹರಿಸಲು ಅನುವಾಗಿರಲಿಲ್ಲ, ಇತ್ತ ಭಾರಿ ಬಂಡವಾಳ ಹೂಡುವವರಿಗೂ. ಆದರೆ ಈಗ ಹಾಗಿಲ್ಲ. ಈ ಕಾರಣದಿಂದ ಹಿಂದೆಲ್ಲ ಔಟ್ ಡೇಟೆಡ್ ಹಾಗೂ ಮಾರಾಟವಾಗದೆ ಉಳಿದ ಡ್ರೆಸೆಸ್ ಮಾತ್ರ ಭಾರತಕ್ಕೆ ಬರುತ್ತಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
- ಸಾಮಾನ್ಯವಾಗಿ ಫ್ಯಾಷನ್ ಎಂಬುದು ಸಮುದ್ರದ ಅಲೆಯಂತೆ ಎಲ್ಲಿಂದಲೋ ಬರುತ್ತದೆ, ಕೆಲವು ದಿನಗಳಿಗೇ ಮಾಯವಾಗುತ್ತದೆ. ಹೀಗೇಕೆ?
ಫ್ಯಾಷನ್ ನಿಜಕ್ಕೂ ಒಂದು ಅಮೋಘ ಕಲೆ, ವಸ್ತ್ರವಿನ್ಯಾಸಗಳ ಅದ್ಭುತ ಅಭಿವ್ಯಕ್ತಿ! ನಮ್ಮ ಸುತ್ತಮುತ್ತಲೂ ನಡೆಯುವ ಪ್ರಕ್ರಿಯೆಗಳೆಲ್ಲ ಇದರ ವ್ಯಾಖ್ಯಾನದಡಿ ಬರುತ್ತದೆ. ಅದು ರಾಜಕೀಯ, ಸಾಮಾಜಿಕ, ಆರ್ಥಿಕ ಅಥವಾ ಸಾಂಸ್ಕೃತಿ ಕಲೆ ಇರಬಹುದು. ಹಿಂದಿನ ತರಹ ಈಗ ಕಮ್ಯುನಿಕೇಶನ್ ಗ್ಯಾಪ್ ಇಲ್ಲ, ಇದು ಆಧುನಿಕ ಟೆಕ್ನಾಲಜಿಯಿಂದ ಸಾಧ್ಯವಾಗಿದೆ. ನಾವು ಈ ಬದಲಾವಣೆಗಳ ಕುರಿತು ಬೇಗ ತಿಳಿದುಕೊಳ್ಳಬಲ್ಲೆವು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಇದನ್ನು ವೇಗವಾಗಿ ಎದುರಿಸಬಲ್ಲೆ. 4. ದಿನೇದಿನೇ ಬದಲಾಗುತ್ತಿರುವ ಫ್ಯಾಷನ್ ಟ್ರೆಂಡ್ ನಲ್ಲೂ ಇಂದಿಗೂ ಬದಲಾಗದೆ ಉಳಿದಿರುವ ಡ್ರೆಸ್ ಯಾವುದು?
ಭಾರತೀಯ ಉಡುಗೆಗಳನ್ನು ಗಮನಿಸಿದಾಗ, ಎಷ್ಟೋ ವರ್ಷಗಳೇ ಕಳೆದರೂ ಸೀರೆ ಮಾತ್ರ ಬದಲಾಗದೇ ಹಾಗೇ ಉಳಿದಿದೆ. ಪಾಶ್ಚಾತ್ಯ ಉಡುಗೆಗಳಲ್ಲಿ ಶಿಫ್ಟ್ ಡ್ರೆಸ್.
- ನಾವು ಲೈಟ್ ಫ್ಯಾಬ್ರಿಕ್ ನ ಡ್ರೆಸ್ ಧರಿಸಿದರೆ, ಅದರ ಮೇಲೆ ಯಾವ ಬಗೆಯ ಬೆಲ್ಟ್ ಚೆನ್ನಾಗಿ ಒಪ್ಪುತ್ತದೆ?
ಇದಕ್ಕೆ ಸದಾ ಕಾಂಟ್ರಾಸ್ಟ್ ಕಲರ್ ನ ಅಲಂಕೃತ ಫ್ಯಾಬ್ರಿಕ್ ಬೆಲ್ಟ್ ಚೆನ್ನಾಗಿ ಹೊಂದುತ್ತದೆ.
ಈಗ ಫ್ಯಾಷನ್ ಕುರಿತಾದ ನಿಮ್ಮ ಎಲ್ಲಾ ಸಮಸ್ಯೆ, ಸಂದೇಹಗಳಿಗೂ ಬಲು ಸಹಜವಾಗಿ ಪರಿಹಾರ ಪಡೆಯಬಹುದು. ಬಟ್ಟೆಗಳ ಸಂರಕ್ಷಣೆ, ಬಾಳಿಕೆಯಿಂದ ಹಿಡಿದು ಅವುಗಳ ಫ್ಯಾಬ್ರಿಕ್, ಕಲರ್, ಲೇಟೆಸ್ಟ್ ಸ್ಟೈಲ್ ಮತ್ತು ಫ್ಯಾಷನ್ ಕುರಿತಾದ ಯಾವುದೇ ಪ್ರಶ್ನೆಗಳನ್ನು ನಮಗೆ ಇಮೇಲ್ ಮೂಲಕ ಕಳುಹಿಸಿಕೊಡಿ. ನಿಮ್ಮ ಈ ಪ್ರಶ್ನೆಗಳಿಗೆ ನಮ್ಮ ಫ್ಯಾಷನ್ ಎಕ್ಸ್ ಪರ್ಟ್ಸ್ ಹಾಗೂ ಡಿಸೈನರ್ಸ್ ಪರಿಹಾರ ಒದಗಿಸುತ್ತಾರೆ.