ಕೆಮಾರ್ಲಸ್‌ ಫ್ಯಾಷನ್‌ ವೈವಿಧ್ಯಮಯ ಕಲರ್‌ ಫುಲ್ ಬೀಡ್ಸ್, ಮುತ್ತುಗಳು ಹಾಗೂ ಸೀಕ್ವೆನ್ಸ್ ವರ್ಕ್‌ ನಿಂದ ಸಿಂಗರಿಸಲ್ಪಟ್ಟ ಈ ಹೆವಿ ಎಂಬ್ರಾಯಿಡರಿಯುಳ್ಳ ಪೀಚ್‌ ಬಣ್ಣದ ಲೆಹಂಗಾ ಚೋಲಿ ಹಾಗೂ ಅತ್ಯಾಕರ್ಷಕ ಬಾರ್ಡರ್‌ ವುಳ್ಳ ಬ್ಯೂಟಿಫುಲ್ ದುಪಟ್ಟಾ, ಇವಳಿಗೆ ರಾಜಕುಮಾರಿಯ ಕಳೆ ತಂದುಕೊಟ್ಟಿದೆ. ಮೋಹಕ ಮಂದಹಾಸದಿಂದ ಈಕೆ ಓದುಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾಳೆ!

fashion-2

ಕುತ್ತಿಗೆ ಹಾಗೂ ಬಾಹುಗಳ ಬಳಿ ಆಕರ್ಷಕ ಡಿಸೈನ್‌ ಹಾಗೂ ಜರ್ದೋಜಿಯ ಹೆವಿ ವರ್ಕ್‌ ನಿಂದ ಸುಸಜ್ಜಿತಗೊಳಿಸಲಾದ ಲೈಟ್‌ ಪರ್ಪಲ್ ಹಾಗೂ ಗೋಲ್ಡನ್‌ ಕಾಂಬಿನೇಷನ್ನಿನ ಬ್ಯೂಟಿಫುಲ್ ಲೆಹಂಗಾ ಚೋಲಿ ಮತ್ತು ದುಪಟ್ಟಾ ಹಬ್ಬದ ವಾತಾವರಣಕ್ಕೆ ಹಿತಕರವಾಗಿದೆ.

ಸೀಕ್ವೆನ್ಸ್, ಬೀಡ್ಸ್ ಮತ್ತು ಕುಂದಣದ ಹೆವಿ ಕಸೂತಿಯಿಂದ ಸುಸಜ್ಜಿತಗೊಂಡಿದೆ ಈ ಕಡುಗೆಂಪು ಲೆಹಂಗಾ. ಅದರಲ್ಲಿ ಬಿಡಿಸಲಾದ ಗೋಲ್ಡನ್‌ ಮುತ್ತಗಳ ಅಪೂರ್ವ ಕಸೂತಿ ಹಾಗೂ ಅಗಲ ಬಾರ್ಡರ್‌, ಅತ್ಯಾಕರ್ಷಕ ಎನಿಸಿದೆ. ಜೊತೆಗೆ ಡಿಸೈನರ್‌ ಬ್ಲೌಸ್‌ ಮತ್ತು ಕಾಂಟ್ರಾಸ್ಟ್ ಕಲರ್‌ ನ ಹೆವಿ ದುಪಟ್ಟಾ ದೀಪಾವಳಿಯ ಸಂಜೆಗೆ ಪರ್ಫೆಕ್ಟ್ ಚಾಯ್ಸ್ ಆಗಿದೆ.

ಅಂಚಿನಲ್ಲಿ ಆಕರ್ಷಕ ಕಸೂತಿ ಕೆಲಸವುಳ್ಳ, ಒಡಲು ಪೂರ್ತಿ ಸಾದಾ ವಿನ್ಯಾಸದ ಈ ಅಚ್ಚ ಮೆಜೆಂತಾ ಬಣ್ಣದ ಸೀರೆ, ತನ್ನ ಆಧುನಿಕ ಗೋಲ್ಡನ್‌ ಡಿಸೈನರ್‌ ಸ್ಲೀವ್ ಲೆಸ್ ಬ್ಲೌಸ್‌ ನಿಂದಾಗಿ ಕಣ್ಣು ಕೋರೈಸುವಂತಿದೆ.

ಕಲರ್‌ ಫುಲ್ ಬೀಡ್ಸ್, ಮುತ್ತುಗಳು, ಸ್ಟೋನ್‌ ಮತ್ತು ಕುಂದಣದ ಹೆವಿ ಕಸೂತಿಯಿಂದಾಗಿ ಸಿಂಗರಿಸಲ್ಪಟ್ಟಿದೆ ಈ ರಿಚ್‌ ಗ್ರ್ಯಾಂಡ್ ಲೆಹಂಗಾ ಚೋಲಿ. ಅನುಪಮ ಹೂಗಳ ವಿನ್ಯಾಸದಿಂದಾಗಿ ಈ ನೆಟೆಡ್‌ ದುಪಟ್ಟಾ, ಉಡುಗೆಗೆ ಮತ್ತಷ್ಟು ರಂಗೇರಿಸಿದೆ.

ಅಗಲವಾದ ಗೋಲ್ಡನ್‌ ಲೇಸ್‌, ಸೀಕ್ವೆನ್ಸ್ ವರ್ಕ್‌ ಮತ್ತು ಪ್ಯಾಚ್‌ ವರ್ಕ್‌ ನಿಂದಾಗಿ ಸುಸಜ್ಜಿತಗೊಂಡಿದೆ ಈ ಮಸ್ಟರ್ಡ್‌ ಕಲರ್‌ ಸೀರೆ. ಹೇರ್‌ ಸ್ಟೈಲ್ ‌ಮತ್ತು ಆ್ಯಕ್ಸೆಸರೀಸ್‌ ಇವಳಿಗೆ ಅಪೂರ್ವ ಸೊಬಗು ತಂದುಕೊಟ್ಟಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ