ಇಂದಿನ ಫ್ಯಾಷನ್ ಯುಗದಲ್ಲಿ ನೇಲ್ ಆರ್ಟ್ ಎಷ್ಟು ವಿಸ್ತೃತ ರೂಪ ಪಡದಿದೆ ಎಂದರೆ, ಇನ್ನು ರೂಪಿಸುವುದು ಏನೇನೂ ಕಷ್ಟವಲ್ಲ. ನೇಲ್ ಆರ್ಟ್ ಗಾಗಿ ಇಂದಿನ ಮಾರುಕಟ್ಟೆಯಲ್ಲಿ `ರೆಡಿ ಟು ಮೇಕ್’ ಹೆಸರಿನಲ್ಲಿ ಎಷ್ಟು ಬಗೆಯ ಪರ್ಯಾಯಗಳು ಲಭ್ಯವಿವೆ ಎಂದರೆ, ಪಾರ್ಟಿಗಳಿಗೆ ಗಡಿಬಿಡಿಯಲ್ಲಿ ರೆಡಿ ಆಗುತ್ತಿದ್ದಾಗ ಸಹ ಇವನ್ನು ತಕ್ಷಣ ಸಿದ್ಧಪಡಿಸಿ ಉಪಯೋಗಿಸಿಕೊಳ್ಳಬಹುದು, ಎಂದು ಇಂದಿನ ಆಧುನಿಕ ಸೌಂದರ್ಯ ತಜ್ಞೆಯರು ನೇಲ್ ಆರ್ಟ್ ಬಗ್ಗೆ ವಿಚಾರಿಸಿದಾಗ ವಿವರವಾಗಿ ಮಾಹಿತಿ ಒದಗಿಸುತ್ತಾರೆ.
ನೇಲ್ ಆರ್ಟ್ ನ ವಿವಿಧ ಪ್ರಕಾರಗಳು
ನೇಲ್ ಆರ್ಟ್ ನಲ್ಲಿ ನೀವು ವಿವಿಧ ಬಗೆಯ ಡಿಸೈನ್ ಗಳನ್ನು ಮಾಡಿ ಅಥವಾ ಮಾಡಿಸಿಕೊಳ್ಳಬಹುದು. ಉದಾ: ಫ್ರೀ ಆರ್ಟ್ ನೇಲ್ ಆರ್ಟ್, ಪೆನ್ ನೇಲ್ ಆರ್ಟ್, ಗ್ಲಿಟರ್ ನೇಲ್ ಆರ್ಟ್, 3ಡೀ ನೇಲ್ ಆರ್ಟ್, ಸ್ಟ್ಯಾಂಪ್ ನೇಲ್ ಆರ್ಟ್, ಡಿಸೈನರ್ ನೇಲ್ ಆರ್ಟ್ ಇತ್ಯಾದಿ. ಪ್ರತಿ ಸ್ಟೈಲ್ ನಲ್ಲೂ ನಿಮಗೆ ವಿಭಿನ್ನ ಡಿಸೈನ್ ಗಳು ಲಭಿಸುತ್ತವೆ.
ಫ್ರೀ ಆರ್ಟ್ ನೇಲ್ ಆರ್ಟ್
ಇದರಲ್ಲಿ ನೇಲ್ ಪೇಂಟ್, ನೇಲ್ ಪಾಲಿಶ್, ಟೂಥ್ ಪಿಕ್, ಸ್ಡಡ್ ಅಥವಾ ಸ್ಟೋನ್ ಗಳ ಮಾಧ್ಯಮದಿಂದ ಹಲವಾರು ಆಕರ್ಷಕ ಡಿಸೈನ್ ಗಳನ್ನು ಮಾಡಬಹುದು. ಇದರಲ್ಲಿ ಡಾಟ್ ನ ಮಾಧ್ಯಮದಿಂದ ಹೂಬಳ್ಳಿಗಳಂಥ ಹಲವಾರು ಡಿಸೈನ್ಸ್ ಬಿಡಿಸಬಹುದು. ಉದಾ: ನೀವು ಉಗುರುಗಳ ಮೇಲೆ ಯಾವುದೇ ವೈಟ್ ಕಲರ್ ನ ಬೇಸ್ ಹಚ್ಚಿ, ಅದರ ಮೇಲೆ 3 ಡಾಟ್ ಗುರುತಿಸಿ.
ನಂತರ ಡಾಟ್ ಗಳ ಮಧ್ಯದಲ್ಲಿ ಟೂಥ್ ಪಿಕ್ ನ ತುದಿ ಇರಿಸಿ, ಅದನ್ನು ಡಿಸೈನಿನಲ್ಲಿ ಎಳೆಯುತ್ತಾ ಹೊರಗೆ ತೆಗೆದುಕೊಳ್ಳಿ. ನೀವು ಲೈಟ್ ಬೇಸ್ ಮೇಲೆ ಡಾಟ್ ಗುರುತಿಸಿ, ಅದರ ಒಳಗೆ ಇನ್ನೊಂದು ಡಾಟ್ ಗುರುತಿಸಿ. ನಂತರ ಟೂಥ್ ಪಿಕ್ ನೆರವಿನಿಂದ ಅದರಿಂದ ಕಲ್ಸ್ ಮಾಡಿ ಅಥವಾ ಕೆಲವು ಡಾಟ್ಸ ನಿಂದ ನೀವು ಝಿಗ್ ಝ್ಯಾಗ್ ಶೇಪ್ ನಲ್ಲಿ ಟೂಥ್ ಪಿಕ್ ನಿಂದ ಎಲ್ಲಾ ಡಾಟ್ಸ್ ಸೇರಿಸಿಕೊಳ್ಳಿ. ಇದರಿಂದ ಹೂವಿನ ಶೇಪ್ ಬರುತ್ತದೆ.
ಪೆನ್ ನೇಲ್ ಆರ್ಟ್
ಪೆನ್ ನೇಲ್ ಆರ್ಟ್ ಸಹ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ನೇಲ್ ಆರ್ಟ್ ನ್ನು ರೂಪಿಸುವಲ್ಲಿ (ಬೇರೆಯವುದಕ್ಕೆ ಹೋಲಿಸಿದಾಗ) ಹೆಚ್ಚಿನ ಸಮಯ ಉಳಿಯುತ್ತದೆ. ಜೊತೆಗೆ ಈ ಡಿಸೈನಿನಲ್ಲಿ ಫಿನಿಶಿಂಗ್ ಕೂಡ ಬಹಳ ಚೆನ್ನಾಗಿರುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕಲರ್ ಫುಲ್ ನೇಲ್ ಆರ್ಟ್ ಪೆನ್ ಲಭ್ಯವಿವೆ, ಇವುಗಳಲ್ಲಿ ನೀವು ಯಾವುದನ್ನಾದರೂ ಸುಲಭವಾಗಿ ಆರಿಸಿಕೊಳ್ಳಬಹುದು. ಇದರಲ್ಲೂ ಸಹ ವೈಟ್ ಶೇಡ್ ನ ನೇಲ್ ಪಾಲಿಶ್ ಗಳಿಂದ ಮೊದಲು ಉಗುರಿನ ಮೇಲೆ ಬೇಸ್ ಕೋಟಿಂಗ್ ಕೊಡಿ. ಬೇಸ್ ಚೆನ್ನಾಗಿ ಒಣಗಿದ ನಂತರ ಅದರ ಮೇಲೆ ಯಾವುದಾದರೂ ಉತ್ತಮ ಡಿಸೈನ್ ಮಾಡಿ. ನೀವು ಫ್ರೀ ಆರ್ಟ್ ಸ್ಟೈಲ್ ನಲ್ಲೂ ನೇಲ್ ಪೇಂಟ್ ಮಾಡಿ, ಬ್ಲ್ಯಾಕ್ ಕಲರ್ ಪೆನ್ ನಿಂದ, ಅದರ ಔಟ್ ಲೈನಿಂಗ್ ಮಾಡಬಹುದು. ನೇಲ್ ಆರ್ಟ್ ನಲ್ಲಿ ಔಟ್ ಲೈನಿಂಗ್ ಗಾಗಿಯೇ ವಿಭಿನ್ನ ಪೆನ್ನುಗಳು ಲಭಿಸುತ್ತವೆ. ನೇಲ್ ಪೇಂಟ್ ಮತ್ತು ಡಿಸೈನ್ ಚೆನ್ನಾಗಿ ಒಣಗಿದ ಮೇಲೆಯೇ ಔಟ್ ಲೈನಿಂಗ್ ಮಾಡಬೇಕೆಂಬುದನ್ನು ಗಮನಿಸಿ.
ನೀವು ಪೆನ್ ಸಹಾಯದಿಂದ ಝೀಬ್ರಾ ಪ್ರಿಂಟ್ ಸಹ ಮಾಡಬಹುದು. ಇದಕ್ಕಾಗಿ ನೀವು ಉಗುರುಗಳ ಮೇಲೆ ವೈಟ್ ಕಲರ್ ಅಥವಾ ಯಾವುದೇ ವೈಟ್ ಕಲರ್ ನ ನೇಲ್ ಪೇಂಟ್ ನಿಂದ ಬೇಸ್ ಮಾಡಿಕೊಳ್ಳಿ. ನಂತರ ಅದರ ಮೇಲೆ ಬ್ಲ್ಯಾಕ್ ಪೆನ್ ನಿಂದ ಪ್ರಿಂಟ್ ಮಾಡಬೇಕು. ಒಂದು ಪಕ್ಷ ನೀವು ಸ್ಟೋನ್ ಅಥವಾ ಸ್ಟಡ್ ಬಳಸುವಿರಾದರೆ, ಡಿಸೈನ್ ಮಧ್ಯೆ ಅಗತ್ಯವಾಗಿ ಸ್ವಲ್ಪ ಸ್ಪೇಸ್ ಬಿಡಿ, ಇದರಿಂದ ಸ್ಟೋನ್ ಅಥವಾ ಸ್ಟಡ್ ಅಳವಡಿಸುವುದರಿಂದ ಡಿಸೈನ್ ಕವರ್ ಆಗುವುದಿಲ್ಲ.
3ಡೀ ನೇಲ್ ಆರ್ಟ್
ಈ 3ಡೀ ನೇಲ್ ಆರ್ಟ್ ನ್ನು ಮನೆಯಲ್ಲೇ ಮಾಡಿಕೊಳ್ಳುವುದೆಂದರೆ ತುಸು ಕಷ್ಟವೇ ಸರಿ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ರೆಡಿಮೇಡ್ 3ಡೀ ಡಿಸೈನ್ಸ್ ಧಾರಾಳವಾಗಿ ಸಿಗುತ್ತವೆ. ಉದಾ : ಹೂ, ಹಣ್ಣು, ಬಳ್ಳಿ, ಸ್ಟಾರ್ ಇತ್ಯಾದಿ. ಇವು ರಬ್ಬರ್ ನಿಂದ ತಯಾರಾಗಿರುತ್ತವೆ, ಆದರೆ ಹಾಕಿಕೊಂಡ ನಂತರ, ಸ್ವಲ್ಪ ಹಾಗನಿಸುವುದಿಲ್ಲ. ಇವನ್ನು ಬಳಸುವುದಕ್ಕಾಗಿ, ನೀವು ಮೊದಲು ನೇಲ್ ಪೇಂಟ್ ನಿಂದ ಬೇಸ್ ರೆಡಿ ಮಾಡಿಕೊಳ್ಳಿ. ನೇಲ್ ಪೇಂಟ್ ಅರ್ಧ ಭಾಗ ಒಣಗಿದಾಗ, ಅದರ ಮೇಲೆ ಯಾವುದೇ 3ಡೀ ಡಿಸೈನನ್ನು ಬಣ್ಣದ ನೇಲ್ ಪೇಂಟ್ ಅಥವಾ ಟ್ರಾನ್ಸ್ ಪರೆಂಟ್ ನೇಲ್ ಪೇಂಟ್ ನಿಂದ ಅಂಟಿಸಬಹುದು.
ಗ್ಲಿಟರ್ ನೇಲ್ ಆರ್ಟ್
ಈ ಗ್ಲಿಟರ್ ನೇಲ್ ಆರ್ಟ್‌ವಿಶೇಷವಾಗಿ ರಾತ್ರಿಯ ಪಾರ್ಟಿಗಳಿಗೆ ಹೆಚ್ಚು ಒಪ್ಪುತ್ತವೆ. ಇವನ್ನು ತಯಾರಿಸಲು, ನೀವು ಉಗುರಿನ ಮೇಲೆ ಯಾವುದೇ ಬಣ್ಣದ ನೇಲ್ ಪಾಲಿಶ್ ಹಚ್ಚಿ ಬೇಸ್ ತಯಾರಿಸಿಕೊಳ್ಳಬಹುದು. ಈ ಬೇಸ್ ಅರ್ಧ ಒಣಗಿದಾಗ, ಅದರ ಮೇಲೆ ಶೈನಿಂಗ್ ಸ್ಟಾರ್ ಅಥವಾ ಫ್ಲವರ್ ನಂಥ ಯಾವುದಾದರೂ ಡಿಸೈನ್ ಅಂಟಿಸಿ. ನೀವು ಕಲರ್ ಫುಲ್ ಗ್ಲಿಟರ್ ನ ಜೆಲ್ ಟ್ಯೂಬ್ ನಿಂದಲೂ ಡಿಸೈನ್ ಮಾಡಬಹುದು. ಇದು ಮಾತ್ರವಲ್ಲದೆ ಫ್ರೀ ಆರ್ಟ್ ಮಾಡಿ, ಅದರ ಮೇಲೆ ಗೋಲ್ಡ್ ಡಸ್ಟ್ ಸಿಂಪಡಿಸಿ, ಡಿಸೈನಿಂಗ್ ಮಾಡಿಕೊಳ್ಳಬಹುದು. ಕಡಿಮೆ ಸಮಯದಲ್ಲಿ ಗ್ಲಿಟರ್ ನೇಲ್ ಆರ್ಟ್ ತಯಾರಿಸುವುದಕ್ಕಾಗಿ, ನೀವು ನೇಲ್ ಪಾಲಿಶ್ ನ ಬೇಸ್ ಹಾಕಿಡಿ ಹಾಗೂ ಉಗುರುಗಳ ತುದಿಯ ಮೇಲೆ ಶಿಮರ್ ಹಾಕಿ, ಅದನ್ನು ಕವರ್ ಮಾಡಿ. ನಂತರ ಮೇಲ್ಭಾಗದಿಂದ 1-2 ಸ್ಟಾರ್ ಅಂಟಿಸಿ.
– ನಿರ್ಮಲಾ ಶೆಣೈ