ಸೌಂದರ್ಯ ಸಂರಕ್ಷಣೆಯ ಸಮಯದಲ್ಲಿ ಚರ್ಮದ ಆರೋಗ್ಯದತ್ತಲೂ ನಾವು 100% ಗಮನಹರಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಪ್ರಾಡಕ್ಟ್ಸ್, ತ್ವಚೆಯ ರಕ್ಷಣೆ ಬಗ್ಗೆ ಹೇಳುತ್ತವೆ. ಆದರೆ ಅಸಲಿಗೆ ಬ್ಯೂಟಿಫುಲ್ ಸ್ಕಿನ್‌ ಗಾಗಿ ಎಲ್ಲಕ್ಕೂ ಮುಖ್ಯವೆಂದರೆ, ನಿಮ್ಮ ಲೈಫ್‌ ಸ್ಟೈಲ್‌ಹೈಜೀನ್‌ ನಲ್ಲಿ ಬದಲಾವಣೆ ಎಂದಿನ ನಿಮ್ಮ ದಿನಚರಿಯಲ್ಲಿ ಆರೋಗ್ಯದ ಕಡೆಯೂ ಅಷ್ಟೇ ಗಮನಕೊಟ್ಟರೆ, ಸೌಂದರ್ಯ ತಂತಾನೇ ವೃದ್ಧಿಸುತ್ತದೆ.

ನಮ್ಮ ಚರ್ಮವನ್ನು ಸದಾ ಸ್ವಚ, ಶುಭ್ರ, ಮೃದುವಾಗಿರಿಸಿಕೊಳ್ಳಲು, ಎಲ್ಲಕ್ಕೂ ಅತಿ ಅಗತ್ಯವಾದುದು ಎಂದರೆ ಸ್ಕಿನ್‌ ಕೇರ್ ರೊಟೀನ್‌. ಸ್ವಚ್ಛ, ಮೃದು ಚರ್ಮಕ್ಕಾಗಿ ಈ ಕಡೆ ಗಮನಹರಿಸಿ!

ಒಂದು ದಿನ ತಪ್ಪಿಸದೆ ಈ ಬಗ್ಗೆ ಗಮನಹರಿಸಲು ಹೆಂಗಸರು ಬಲು ಸೋಮಾರಿಗಳೆಂದೇ ಹೇಳಬೇಕು. ಹಾಗಾಗಿ ಅವರ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಇಂಥ ಸ್ಟ್ರಿಕ್ಟ್ ರೊಟೀನ್‌ ಇಲ್ಲದಿದ್ದರೆ, ಸೌಂದರ್ಯ ಸಂವರ್ಧನೆಯ ಎಲ್ಲಾ ಪ್ರಯತ್ನಗಳೂ ವೇಸ್ಟ್. ಈ ಕೆಳಗಿನ ಸಲಹೆಗಳನ್ನು ಅನುಸರಿಸಿ, ಆ ನಿಟ್ಟಿನಲ್ಲಿ ವಿಜಯಿಗಳಾಗಿ.

ದಿನದಾರಂಭ ಡ್ರೈ ಬ್ರಶ್ಶಿಂಗ್

ಡ್ರೈ ಬ್ರಶ್ಶಿಂಗ್‌ ಮೂಲಕ ನಿಮ್ಮ ದಿನ ಆರಂಭಿಸಿ. ಇದು ಡೆಡ್‌ ಸ್ಕಿನ್‌ ನ ಜೀವಕೋಶಗಳನ್ನು ತೊಲಗಿಸುವ ಪ್ರಾಚೀನ ಟೆಕ್ನಿಕ್‌. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಪ್ರತಿದಿನ ಡ್ರೈ ಬ್ರಶ್ಶಿಂಗ್‌ ಮಾಡುವುದರಿಂದ ಚರ್ಮ ಹೊಳೆಯತೊಡಗುತ್ತದೆ.

ನ್ಯಾಚುರಲ್ ಫೈಬರ್‌ ತುಂಬಿರುವಂಥ ಡ್ರೈ ಬ್ರಶ್ಶನ್ನೇ ಆರಿಸಿ, ಪ್ಲಾಸ್ಟಿಕ್‌ ನದು ಬೇಡ. ನ್ಯಾಚುರಲ್ ಫೈಬರ್‌ ಬ್ರಶ್ಶಿನಿಂದ ಚರ್ಮಕ್ಕೆ ಎಂದೂ ನವೆ, ಕಡಿತ ಉಂಟಾಗದು.

ಹೊರಗಿನಿಂದ ಒಳಭಾಗದತ್ತ, ನಿಮ್ಮ ಕಾಲಿನಿಂದ ಶುರು ಮಾಡಿ, ಮೇಲ್ಭಾಗಕ್ಕೆ ಸರಿಯುತ್ತಾ, ಆರಾಮವಾಗಿ ಬ್ರಶ್ಶನ್ನು ದೇಹದ ಎಲ್ಲಾ ಭಾಗಕ್ಕೂ ಚಲಾಯಿಸಿ. ಮುಖಕ್ಕಾಗಿ ಸಣ್ಣ, ಮೃದು ಬ್ರಶ್‌ ಬಳಸಲು ಮರೆಯದಿರಿ.

ಡ್ರೈ ಬ್ರಶ್ಶಿಂಗ್‌ ಶುರು ಮಾಡುವಾಗ, ಸದಾ ಬ್ರಶ್‌ ಮತ್ತು ಚರ್ಮ ಒಣಗಿರಬೇಕು ಎಂಬುದನ್ನು ಗಮನಿಸಿ. ಒದ್ದೆ ಚರ್ಮವನ್ನು ಬ್ರಶ್ ಮಾಡುವುದರಿಂದ ಉತ್ತಮ ಪರಿಣಾಮ ಸಿಗದು.

ಮುಖಕ್ಕೆ ಮಾಯಿಶ್ಚರೈಸರ್ಬಳಸಿರಿ

ಮುಖ ತೊಳೆದ ನಂತರ ಬ್ರೇಕ್‌ ಔಟ್‌ ಮತ್ತು ಉರಿ ತಡೆಯಲು ಮಾಯಿಶ್ಚರೈಸರ್‌ ಹಚ್ಚಲು ಮರೆಯದಿರಿ. ಮುಖ ತೊಳೆದು, ಒರೆಸಿದ ನಂತರ ತುಸು ಶುಷ್ಕ ನಿರ್ಜೀವ ಎನಿಸುತ್ತದೆ, ಒಮ್ಮೊಮ್ಮೆ ಲೈಟಾಗಿ ಉರಿಯುತ್ತದೆ ಕೂಡ. ಮುಖ್ಯವಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಮಾಯಿಶ್ಚರೈರ್ಸ್‌ ಲಭ್ಯ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವನ್ನು ಬಳಸಿಕೊಳ್ಳಿ.

ಮುಖಕ್ಕೆ ಟೂಥ್ಪೇಸ್ಟ್ ನಿಂಬೆ ಬೇಡ

Sunscreen-Lagaen

ನಾವು ಆ್ಯಕ್ನೆ, ಮೊಡವೆಗಳಿಂದ ಮುಕ್ತಿ ಹೊಂದಲು ಏನೇನೋ ಪ್ರಯೋಗ ಮಾಡುತ್ತಿರುತ್ತೇವೆ. ಇಂಥ ಮನೆಮದ್ದಿನಲ್ಲಿ ಎಲ್ಲಾದರೂ ಮುಖಕ್ಕೆ ನಿಂಬೆ ರಸ ಅಥವಾ ಟೂಥ್‌ ಪೇಸ್ಟ್ ಹಚ್ಚಬೇಕು ಎಂದಿದ್ದರೆ, ಅಂಥ ಪ್ರಯೋಗ ಖಂಡಿತಾ ಬೇಡ! ನಿಂಬೆಯಲ್ಲಿನ ಅಸಿಟಿಕ್ ಆ್ಯಸಿಡ್‌ ಮುಖಕ್ಕೆ ರೆಡ್‌ ನೆಸ್‌ ಮತ್ತು ಉರಿ ಹೆಚ್ಚಿಸಬಲ್ಲದು.

ಟೂಥ್‌ ಪೇಸ್ಟ್ ನ್ನು ಅಷ್ಟು ಬೆಳ್ಳಗಿಡುವ ಕೆಮಿಕಲ್ಸ್ ನಮ್ಮ ಚರ್ಮಕ್ಕೆ ಖಂಡಿತಾ ಹಾನಿ ಮಾಡುತ್ತದೆ. ಇದರ ಬದಲಾಗಿ ಮೊಡವೆಯಿಂದ ಮುಕ್ತಿ ಪಡೆಯಲು ಆ್ಯಂಟಿ ಸ್ಪಾಟ್‌ ಟ್ರೀಟ್‌ ಮೆಂಟ್‌ ಯಾ ಎಸೆನ್ಶಿಯ್‌ ಆಯಿಲ್ ‌ನ್ನು ಪರ್ಯಾಯವಾಗಿ ಬಳಸಿರಿ.

ಮೇಕಪ್ಬ್ರಶ್ಅಗತ್ಯ ತೊಳೆಯಿರಿ

ಸಾಮಾನ್ಯವಾಗಿ ಬಹುತೇಕ ಹೆಂಗಸರು ಇದನ್ನು ಮಾಡುವುದೇ ಇಲ್ಲ, ಆದರೆ ಸ್ವಚ್ಛತೆ, ಸೌಂದರ್ಯದ ವಿಷಯ ಬಂದಾಗ ಇದು ತಪ್ಪು ಹೆಜ್ಜೆ ಆದೀತು. ನಿಮ್ಮ ಮೇಕಪ್‌ ಬ್ರಶ್‌ ನ ಬಿಲ್ಡ್ ಅಪ್‌ ನಿಮ್ಮ ಚರ್ಮಕ್ಕೆ ಹಾನಿ ಮಾಡುವುದೇ ಅಲ್ಲದೆ, ಬದಲಿಗೆ ಬ್ರಶ್ಶಿನಲ್ಲಿ ಉಳಿದ ಮೇಕಪ್‌ ಅಂಶ, ನಿಮ್ಮ ಮುಂದಿನ ಮೇಕಪ್‌ ಗೆ ಅಡ್ಡಿ ಮಾಡುತ್ತದೆ. ಬಳಸಿದ ಮೇಕಪ್‌ ಬ್ರಶ್ಶನ್ನು ತೊಳೆಯಲು, ಬೇಬಿ ವಾಶ್‌ ಯಾ ಬೇಬಿ ಶ್ಯಾಂಪೂ ಮತ್ತು ಬಿಸಿ ನೀರಿನ ಬಳಕೆ ಮಾಡಿ. ಇದರಿಂದ ನಿಮ್ಮ  ಚರ್ಮ ಹೆಚ್ಚು ಸ್ವಚ್ಛ, ಶುಭ್ರ ಆಗುತ್ತದೆ.

ಎಕ್ಸ್ ಫಾಲಿಯೇಟಿಂಗ್‌ ಕ್ಲೆನ್ಸರ್‌ ಅಗತ್ಯ ಇದನ್ನು ಆಗಾಗ ಬಳಸಿಕೊಳ್ಳಿ. ಇದನ್ನು ನೀವು ಸುಲಭವಾಗಿ ಮೆಡಿಕಲ್ ಸ್ಟೋರ್‌ ನಿಂದ ಪಡೆಯಬಹುದು. ಇಂಥ ಕ್ಲೆನ್ಸರ್‌ ನಲ್ಲಿನ ಸಣ್ಣ ಸಣ್ಣ ಗ್ರಾನ್ಯುಯೆಲ್ಸ್ ನಿಮ್ಮ ಚರ್ಮ ಸ್ವಚ್ಛಗೊಳಿಸುವಲ್ಲಿ ಸಹಾಯಕ. ಎಲ್ಲಾ ಬಗೆಯ ಚರ್ಮಗಳಿಗೂ (ಡ್ರೈ, ಆಯ್ಲಿ, ನಾರ್ಮಲ್) ಇದು ಪೂರಕ.

ಸನ್ಸ್ಕ್ರೀನ್ಬಳಕೆ

ಇದನ್ನು ರಜಾ ದಿನಗಳಲ್ಲಿ ಬೀಚ್‌ ಬಳಿ ಬಳಸಿದರೆ ಸಾಕು ಎಂದು ಭಾವಿಸಿದಿರಿ. ಬದಲಿಗೆ ಇದನ್ನು ವರ್ಷವಿಡೀ ಪ್ರತಿದಿನ ಬಳಸುತ್ತಿರಬೇಕು. ಮನೆಯಲ್ಲಿರಿ, ಹೊರಗೆ ಕೆಲಸಕ್ಕೆ ಹೊರಡಿ, ಇದು ಅತ್ಯಗತ್ಯ ಬೇಕು. ಇದು ನಿಮ್ಮನ್ನು ಸೂರ್ಯನ UV ಕಿರಣಗಳಿಂದ ರಕ್ಷಿಸಲು ಹಾಗೂ ಚರ್ಮದ ಆರಂಭಿಕ ಸುಕ್ಕನ್ನು ನಿವಾರಿಸಲು ಪೂರಕ. ಹೀಗಾಗಿ ಉತ್ತಮ ಕಂಪನಿಯ 30-40 SPF ಇರುವಂಥ ಸನ್‌ ಸ್ಕ್ರೀನ್‌ ನ್ನೇ ಬಳಸಿರಿ, ಇದಕ್ಕಿಂತ ಕಡಿಮೆಯದ್ದು ಬೇಡ.

ನೀವು ಮಾಯಿಶ್ಚರೈಸರ್‌ ಕೊಳ್ಳುವಾಗ ಸಹ ಅಗತ್ಯ ನೆನಪಿಡತಕ್ಕ ವಿಷಯ ಎಂದರೆ, ಹೊರಗೆ ಪ್ಯಾಕ್‌ ಮೇಲೆ SPF ಖಂಡಿತಾ ನಮೂದಿಸಲಾಗಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇದರಿಂದ ನಿಮ್ಮ ಮುಖಚರ್ಯೆ ಕವರ್‌ ಆಗುವುದು ಮಾತ್ರವಲ್ಲದೆ, ನಿಮ್ಮ ಇಡೀ ದೇಹವನ್ನು ಧೂಳಿನಿಂದಲೂ ಕಾಪಾಡಿಕೊಳ್ಳಬಹುದು.

ಮೇಕಪ್‌/ಟೂಥ್ಬ್ರಶ್ಗಮನಿಸಿಕೊಳ್ಳಿ

Main-image

ನೀವು ಪ್ರತಿ ಸಲ ಶೌಚಾಲಯಕ್ಕೆ ಹೋಗಿ ಅದನ್ನು ಫ್ಲಶ್‌ ಮಾಡಿದಾಗಲೂ, ಅದರ ನೀರು 6 ಅಡಿ ಮೇಲೆ ಚಿಮ್ಮುವ ಸಾಧ್ಯತೆಗಳಿವೆ. ಇದರರ್ಥ, ನೀವು ಅಲ್ಲಿಗೆ ನಿಮ್ಮ ಯಾವ ಬ್ರಶ್‌ ಕೊಂಡೊಯ್ದಿದ್ದರೂ, ಅದರ ಅಂಶ ಬ್ರಶ್ಶನ್ನು ಮುತ್ತುತ್ತವೆ! ಈ ರೀತಿ ಕೀಟಾಣುಗಳು ಅಲ್ಲಿ ಮನೆ ಮಾಡುತ್ತವೆ. ಹೀಗೆ ನಿಮ್ಮ ಆರೋಗ್ಯ ಹದಗೆಡುವ ಅವಕಾಶ ಹೆಚ್ಚುತ್ತದೆ. ಈ ಅಸಹಜ ಅಪಾಯದಿಂದ ತಪ್ಪಿಸಿಕೊಳ್ಳಲು, ನಿಮ್ಮ ಬ್ರಶ್ಶುಗಳನ್ನು ಸದಾ ಕ್ಲೋಸ್ಡ್ ಕ್ಯಾಬಿನೆಟ್‌ ನಲ್ಲಿಡಿ ಅಥವಾ ಶೌಚಾಲಯಕ್ಕೆ ಅವನ್ನು ಕೊಂಡೊಯ್ಯಲೇಬೇಡಿ. ಟೂಥ್‌ ಬ್ರಶ್‌ ಗೆ ಕ್ಯಾಪ್‌ ಸಿಗಿಸಲು ಎಂದೂ ಮರೆಯಬೇಡಿ.

ಧಾರಾಳ ನೀರು ಕುಡಿಯಿರಿ

ವರ್ಷವಿಡೀ (ಯಾವ ಕಾಲವೇ ಇರಲಿ) ಧಾರಾಳ ನೀರು ಕುಡಿಯುತ್ತಿರಿ. ನೀರು ಚರ್ಮವನ್ನು ಹೈಡ್ರೇಟೆಡ್‌ ಆಗಿ ಇರಿಸುತ್ತದೆ. ಹೀಗೆ ಚರ್ಮ ಹೈಡ್ರೇಟೆಡ್‌ ಆಗಿದ್ದಾಗ ಮಾತ್ರ ಅದರ ಆರೋಗ್ಯ, ಸೌಂದರ್ಯ ಸಂರಕ್ಷಣೆ ಸಾಧ್ಯ. ಚರ್ಮದ ಉತ್ತಮ ಆರೋಗ್ಯಕ್ಕಾಗಿ ಅದನ್ನು ಸದಾ ಮಾಯಿಶ್ಚರೈಸ್‌ ಗೊಳಿಸುತ್ತಿರಿ. ಜೊತೆಗೆ ಸಿಹಿ ಪೇಯಗಳಿಂದ ದೂರವಿರಿ. ಇದು ಆರೋಗ್ಯ ಹಾಳು ಮಾಡಿ, ಚರ್ಮದಲ್ಲಿ ಆ್ಯಕ್ನೆ, ಮೊಡವೆಗಳನ್ನೂ ಹೆಚ್ಚಿಸುತ್ತದೆ.

ಟ್ಯಾನಿಂಗ್ನಿಂದ ದೂರವಿರಿ

ಪದೇ ಪದೇ ನಿಮ್ಮ ತೆರೆದ ಅಂಗಗಳ ಚರ್ಮವನ್ನು ಸೂರ್ಯನಿಗೆ ಒಡ್ಡಬೇಡಿ, ಹಾನಿ ತಪ್ಪಿದ್ದಲ್ಲ. ಸನ್‌ ಬರ್ನ್‌ ನಿಂದ ಬಚಾವಾಗಲು, ನೀವು ಹೆಚ್ಚೆಚ್ಚು ಪ್ರಾಕೃತಿಕ ಸನ್‌ ಸ್ಕ್ರೀನ್‌ ಬಳಸುವ ಪ್ರಯಾಸಪಡಬೇಕು. ಇದು ಚರ್ಮದ ಪ್ರಾಕೃತಿಕ ಹೊಳಪನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಟ್ಯಾನಿಂಗ್‌ ನಿಂದಲೂ ರಕ್ಷಿಸುತ್ತದೆ.

ಮೊಡವೆಗಳ ಹಿಸುಕದಿರಿ

ನಿಮ್ಮ ಮುಖದಲ್ಲಿ ಮೊಡವೆ ಮೂಡುತ್ತಿದ್ದಂತೆ, ಬಲವೆಲ್ಲ ಪ್ರಯೋಗಿಸಿ ಅದನ್ನು ಹಿಸುಕಲು ಹೋಗದಿರಿ. ಇದನ್ನು ರಿಪೀಟ್ ಮಾಡುವುದರಿಂದ ಮುಖದಲ್ಲಿ ಅಲ್ಲಲ್ಲಿ ಕಲೆಗಳು ಉಳಿಯುತ್ತವೆ, ಉರಿ, ರೆಡ್‌ ನೆಸ್‌ ಹೆಚ್ಚುತ್ತದೆ. ಮೊಡವೆಗಳಿಗೆ ಆ್ಯಂಟಿ ಪಿಂಪಲ್ ಫೇಸ್‌ ಮಾಸ್ಕ್ ಯಾ ಆ್ಯಂಟಿ ಸ್ಪಾಟ್‌ ಟ್ರೀಟ್‌ ಮೆಂಟ್‌ ಪಡೆಯಿರಿ. ಅರಿಶಿನ ಚಂದನ ಬೆರೆತ ಮನೆಮದ್ದು ಸಹ ಉತ್ತಮ.

ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ