ನೀವು ಹೊಸ ವರ್ಷದಲ್ಲಿ ಯಾವುದೇ ರೀತಿಯಲ್ಲಿ ಹೊಸ ಫ್ಯಾಷನ್ನಿನ ಟ್ರೆಂಡ್ಸ್ ನಿಂದ ವಂಚಿತರಾಗುವುದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ನಾವು ಹೊಸ ವರ್ಷಕ್ಕಾಗಿ ಚಾಲ್ತಿಗೆ ಬರುವ ಡ್ರೆಸ್‌, ಜ್ಯೂವೆಲರಿ, ಬ್ಯಾಗ್ಸ್, ಫುಟ್‌ ವೇರ್‌, ಹೇರ್‌ ಸ್ಟೈಲ್ ‌ಇತ್ಯಾದಿ ಎಲ್ಲಾ ಲೇಟೆಸ್ಟ್ ಮಾಹಿತಿ ನೀಡುತ್ತಿದ್ದೇವೆ. ಇದಕ್ಕಾಗಿ ದೇಶಾದ್ಯಂತ ಹೆಚ್ಚು ಖ್ಯಾತಿಗೊಂಡ ಫ್ಯಾಷನ್‌ ಡಿಸೈನರ್ಸ್‌ ಸಲಹೆಗಳನ್ನು ಇಲ್ಲಿ ಕ್ರೋಢೀಕರಿಸಲಾಗಿದೆ :

ಲೇಯರ್ಡ್ಫ್ಯಾಷನ್‌ : ಈ ತರಹದ ಸ್ಟೈಲ್ ‌ಸ್ಟೇಟ್‌ ಮೆಂಟ್‌ ನಲ್ಲಿ ನೀವು ಎಷ್ಟು ಬಗೆಯ ಡಿಸೈನಿನ ಡ್ರೆಸ್‌ ಗಳನ್ನಾದರೂ ಧರಿಸಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಯಾವ ಬಣ್ಣ, ಡಿಸೈನ್‌ ನ್ನು ನೀವು ಮ್ಯಾಚ್‌ ಮಾಡಿ ಧರಿಸುತ್ತಿದ್ದೀರಿ ಎಂಬುದು. ಲೇಯರ್ಡ್‌ ಫ್ಯಾಷನ್ನಿನಲ್ಲಿ ಬ್ಲ್ಯಾಕ್‌ ಪ್ಯಾಂಟ್‌ ವೈಟ್‌ ಶರ್ಟ್‌ ಜೊತೆ ಡಾರ್ಕ್‌ ಬ್ರೌನ್‌ ಬಣ್ಣದ ಲೂಸ್‌ ಸ್ವೆಟರ್‌ ಶಾರ್ಟ್ ಬೂಟ್‌ ಧರಿಸಿ, ಹೊಸ ಬಗೆಯ ಲೇಯರಿಂಗ್‌ ಮಾಡಬಹುದು. ನಿಮಗೆ ಸ್ಕಾರ್ಫ್‌ ಯಾ ಮಫ್ಲರ್‌ ಧರಿಸುವುದು ಇಷ್ಟವಾದರೆ, ಆಗ ನೀವು ಬಾಯ್‌ ಫ್ರೆಂಡ್‌ ಜೀನ್ಸ್ ಜೊತೆ ಡೀಪ್‌ ನೆಕ್‌ ಸ್ವೆಟರ್‌ ನ ಕಾಂಬಿನೇಶನ್‌ ಮಾಡಿ, ನಿಮ್ಮ ಆಯ್ಕೆಯ ಮಫ್ಲರ್‌ ನಿಂದ ಕವರ್ ಮಾಡಬಹುದು. ಈ ಲುಕ್‌ ಗೆ ನೀವು ಮೆಸ್ಸಿ ಬನ್‌ ಮ್ಯಾಚ್‌ ಮಾಡಿ, ಹೊರಗಿನ ಓಡಾಟಕ್ಕೆ ಹೊರಡಿ.

ಟೀಶರ್ಟ್ಜೊತೆ ಬೆಲ್ ಬಾಟಂ ಪ್ಯಾಂಟ್‌ : ನಿಮಗೆ ಪಾರ್ಟಿಗಳಿಗೆ ಹೋಗುವುದು ಬಹಳ ಇಷ್ಟವಾದರೆ, ಈ ಫ್ಯಾಷನ್‌ ನಿಮ್ಮ ಸ್ಟೈಲ್ ಸ್ಟೇಟ್‌ ಮೆಂಟ್‌ ಆಗಬೇಕು. ನೀವು ಈ ಲುಕ್ಸ್ ಗಾಗಿ ಬ್ಲ್ಯಾಕ್‌ ಸ್ಕಾರ್ಪ್ ಹ್ಯಾಂ ಬೆಲ್ ‌ಬಾಟಂ ಪ್ಯಾಂಟ್‌ ಜೊತೆ ಅನಿಮ್‌ ಪ್ರಿಂಟ್ ಟಾಪ್‌ ಧರಿಸಬಹುದು. ಉಗುರಿಗೆ ಬೋಲ್ಡ್ ಪಾಪ್ಪೀ ನೇಲ್ ಪೇಂಟ್‌ ಹಚ್ಚಿರಿ, ಇದು ನಿಮ್ಮ ಪ್ಯಾಂಟ್‌ ಗೆ ಮ್ಯಾಚ್‌ ಆಗುವಂತಿರಲಿ. ಕಿವಿಗೆ ಗೋಲಾಕಾರದ ಇಯರ್‌ ರಿಂಗ್ಸ್ ಇರಲಿ. ಮೇಕಪ್‌ ಮಾತ್ರ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಇರಲಿ.

ಪೆನ್ಸಿಲ್ ಸ್ಕರ್ಟ್ಜೊತೆ ಓವರ್ಸೈಜ್ಶರ್ಟ್‌ : ಈ ಲುಕ್ಸ್ ಆಫೀಸಿಗೆ ಬಿಲ್ ‌ಕುಲ್ ‌ಒಪ್ಪುತ್ತದೆ. ನೀವು ಧರಿಸುವ ಪೆನ್ಸಿಲ್ ‌ಸ್ಕರ್ಟ್ ಬಾಡಿ ಕೋನ್‌ ಆಗಿರಬೇಕು ಹಾಗೂ ಮುಂಭಾಗದಲ್ಲಿ ಮ್ಯಾಚಿಂಗ್‌ ಬಟನ್‌ ಇರಬೇಕು. ಇದರ ಜೊತೆ ಓವರ್‌ ಸೈಜ್‌ ಚೆಕ್ಸ್ ಶರ್ಟ್ ಧರಿಸಿ. ಕೂದಲನ್ನು ಸಡಿಲ ಪೋನಿಟೇಲ್ ‌ನಲ್ಲಿ ಕಟ್ಟಿಕೊಳ್ಳಿ. ಲೇಸ್‌ ಪೀಪಲ್ ಟೋ ಬೂಟ್‌ ಜೊತೆ ಇದನ್ನು ಕ್ಯಾರಿ ಮಾಡಿ. ಇದು ನಿಮಗೆ ಕ್ಯಾಶುಯೆಲ್ ‌ಲುಕ್ಸ್ ನೀಡುತ್ತದೆ.

ಬ್ಲೇಝರ್ಡ್ರೆಸ್‌ : ಪ್ಲೇರ್‌ ಪ್ರಿಂಟೆಡ್‌ ಡ್ರೆಸೆಸ್‌ ಬೇಕಾದಷ್ಟು ಧರಿಸಿರುತ್ತೀರಿ, ಜೊತೆಗೆ ರಫಿಲ್ ‌ಡ್ರೆಸೆಸ್‌ ಕೂಡ. ಆದರೆ ಈಗ ಜಿಪ್ ಬ್ಲೇಝರ್‌ ಡ್ರೆಸ್‌ ಟ್ರೈ ಮಾಡಿ ನೋಡಿ. ಈ ಡ್ರೆಸ್‌ ನ್ನು ನಿಮ್ಮ 2025ರ ಕಲೆಕ್ಷನ್‌ ನಲ್ಲಿ ಅಗತ್ಯ ಸೇರಿಸಿಕೊಳ್ಳಿ. ಈ ತರಹದ ಡ್ರೆಸ್ ಜೊತೆ ನೀವು ಆ್ಯಂಕ್‌ ಸ್ಟ್ರಾಪ್‌ ಚಂಕಿ ಹೀಲ್ ‌ಧರಿಸಬಹುದು. ಬೇಕೆನಿಸಿದರೆ ಕೂದಲಿಗೆ ಬಣ್ಣ ಹಚ್ಚಿ ಈ ಲುಕ್ಸ್ ನ್ನು ಕಾನ್ಛಿಡೆಂಟಾಗಿ ಕ್ಯಾರಿ ಮಾಡಬಹುದು.

Caratlane_Butterfly-collection-earring-Rs.-29,104

ಫ್ಲಾನ್ಸ್ ಸ್ಲೀವ್ ಟೀ : ಇಂಥ ಆಫೀಸಿಗೆ ತುಸು ಡಿಫರೆಂಟ್‌ ಆದ ಫ್ಯಾಷನ್‌ ಎನಿಸುತ್ತದೆ. ಇದು ಪಾರ್ಟಿ, ಡೇಟ್ಸ್ ಗೆ ಸಹ ಪರ್ಫೆಕ್ಟ್ ಆಯ್ಕೆ ಆಗಿರುತ್ತದೆ. ಈ ಟೀ ಜೊತೆ ನೀವು ಯಾವುದೇ ಲುಕ್ಸ್ ಫಾಲೋ ಮಾಡಬಹುದು. ಇದನ್ನು ಮಿನಿ ಸ್ಕರ್ಟ್‌ ಯಾ ಡೆನಿಂ ಜೀನ್ಸ್ ಜೊತೆ ಧರಿಸಬಹುದು. ಇದನ್ನು ನೀವು ಡೆನಿಂ ಜೀನ್ಸ್ ಜೊತೆ ಧರಿಸುತ್ತಿದ್ದರೆ, ಮೇಕಪ್‌ ಆದಷ್ಟು ಲೈಟ್‌ ಆಗಿರಲಿ, ಜೊತೆಗೆ ಹೈಹೀಲ್ಸ್ ಧರಿಸಿ ಫ್ಲಾಂಟ್‌ ಮಾಡಿ.

ಕ್ರಾಪ್ಟಾಪ್ವಿತ್ಡ್ರೇಪ್ಡ್ ಸ್ಕರ್ಟ್‌ : ಲೈಟ್‌ ಕಲರ್‌ ಸಾಧಾರಣವಾಗಿ ಎಲ್ಲರಿಗೂ ಒಪ್ಪುತ್ತದೆ. ನೀವು ಚೆಕ್ಸ್ ಕ್ರಾಪ್‌ ಟಾಪ್ ಬಯಸುವುರಾದರೆ, ಬ್ಲ್ಯಾಕ್‌ ವೈಟ್‌ ಚೆಕ್ಸ್ ಕ್ರಾಪ್‌ ಟಾಪ್‌ ಕೊಂಡುಕೊಳ್ಳಿ. ಇದರ ಹಿಂದೆ ನೆಟ್‌ ಡಿಸೈನ್‌ ಇದ್ದರೆ ಚೆಂದ. ಇದು ನಿಮಗೆ ತುಸು ಬ್ಯಾಕ್‌ ಲೆಸ್‌ ಫೀಲ್ ‌ನ್ನೂ ಕೊಡುತ್ತದೆ. ಇದರ ಜೊತೆ ನೀವು ಸ್ಕರ್ಟ್‌ ಧರಿಸಬಹುದು. ಇದಂತೂ ಈಗ ಆಧುನಿಕ ತರುಣಿಯರ ಮೆಚ್ಚಿನ ಡ್ರೆಸ್‌ ಆಗಿದೆ. ಈ ಲುಕ್ಸ್ ನ್ನು ಇನ್ನಷ್ಟು ಗ್ಲಾಮರಸ್‌ ಗೊಳಿಸಲು ಹೈಹೀಲ್ ಧರಿಸಿರಿ. ಜೊತೆಗೆ ಬೋಲ್ಡ್ ಕಲರ್‌ ನ ಲಿಪ್‌ ಸ್ಟಿಕ್‌ ತೀಡಿರಿ. ಇದು ನಿಮ್ಮ ಇಡೀ ಔಟ್‌ ಫಿಟ್‌ ನ್ನು ಕ್ಲಾಸಿಕ್‌ ಮಾಡುತ್ತದೆ.

ಪೇಸ್ಟಲ್ ಕಲರ್ಈಸ್ಇನ್‌ : ಈ ಬಣ್ಣ ನೋಡಲಷ್ಟೇ ಕೂಲ್ ಅಲ್ಲ, ಬದಲಿಗೆ ಸೋಬರ್‌ ಸ್ಟೈಲಿಶ್‌ ಲುಕ್ಸ್ ಕೂಡ ಕೊಡುತ್ತದೆ. ಪಾರ್ಟಿ ಡ್ರೆಸ್‌ ಅಥವಾ ಆಫೀಸ್‌ ಬ್ಲೇಝರ್‌, ಯೋಚನೆ ಮಾಡದೆ ಲ್ಯಾವೆಂಡರ್‌ ಆರಿಸಿ. ಈ ಕಲರ್‌ ರಲ್ಲಿ ಪರ್ಫೆಕ್ಟ್ ಇನ್‌.

ವೈಡ್ ಲೆಗ್ಪ್ಯಾಂಟ್ಸ್ ಟ್ರೌಸರ್ಸ್‌ : 90ರ ದಶಕದ ಫ್ಯಾಷನ್‌ ಈಗ ಮರಳಿ ಬಂದಿದೆ. ವೈಡ್‌ ಲೆಗ್‌ ಪ್ಯಾಂಟ್ಸ್ ಟ್ರೌಸರ್ಸ್‌ ನಲ್ಲಿ ನಿಮ್ಮ ಇಷ್ಟದ ಪ್ಯಾಕ್‌ ಆರಿಸಿಕೊಂಡು ಇದನ್ನು ಯಾವುದೇ ಕ್ರಾಸ್‌ ಟಾಪ್‌, ಲಾಂಗ್‌ ಸ್ಲೀವ್ ‌ಶರ್ಟ್‌ ಜೊತೆ ಮ್ಯಾಚ್‌ ಮಾಡಿ, ಮೋಸ್ಟ್ ಗ್ಲಾಮರಸ್‌ ಎನಿಸಿರಿ.

ವೈಲ್ಡ್   ಔಟ್ಗೋಯಿಂಗ್ಪ್ರಿಂಟ್‌ : ಕಲರ್‌ ಬ್ಲಾಕ್ಡ್ ಪ್ರಿಂಟ್‌ ರಲ್ಲಿ ಫ್ಯಾಷನ್‌ ನಲ್ಲಿತ್ತು. ಇದೇ ಬೋಲ್ಡ್ ಬಿಂದಾಸ್‌ ಪ್ರಿಂಟ್ಸ್ ಜೊತೆ ನೀವು 2025ರಲ್ಲೂ ಆಕರ್ಷಕ ಹಾಗೂ ಸುಂದರ ಲುಕ್ಸ್ ಹೊಂದಬಹುದು.

ಫ್ರೆಂಜೆಸ್‌ : ಇದು ಪಾರ್ಟಿವೇರ್‌ ಸಹಿತ ಪ್ರತಿಯೊಂದು ವಿಧದ ಉಡುಗೆಗೂ ಮ್ಯಾಚ್‌ ಆಗುತ್ತದೆ. ಶಿಮರಿ ಫ್ಯಾಬ್ರಿಕ್‌ ನ ಸಣ್ಣ ತುಂಡು ಬಟ್ಟೆ ಇದರ ಬ್ಯೂಟಿಗೆ 4 ಪಟ್ಟು ಸೊಗಸು ಹೆಚ್ಚಿಸುತ್ತದೆ.

ಕೇಪ್ಸ್ ಪೋಂಚೋ : ಸ್ಟೈಲಿಶ್‌ ಎಥ್ನಿಕ್‌ ಪೋಂಚೋ ಮತ್ತು ಬಣ್ಣ ಬಣ್ಣದ ಕೇಪ್ಸ್ 2020ಕ್ಕೆ ಎಲ್ಲಕ್ಕೂ ಆಕರ್ಷಕ ಫ್ಯಾಷನೆಬಲ್ ಟ್ರೆಂಡ್ ಎನಿಸಲಿವೆ. ಎಥ್ನಿಕ್‌ ಮಾತ್ರವಲ್ಲದೆ, ಕ್ಯಾಶ್ಯುಯೆಲ್ ವೆಸ್ಟರ್ನ್‌ ಕೇಪ್ಸ್ ಸಹ ನಿಮ್ಮ ಲುಪ್ಸ್ ನ್ನು ಅಪ್‌ ಗ್ರೇಡ್‌ ಮಾಡಲಿವೆ.

ಪ್ಲಾಜೋಗೆ ಹೇಳಿ ಬೈ ಬೈ : ಈಗ ಪ್ಲಾಜೋ ಜಾಗವನ್ನು ಶರಾರಾ ಪಡೆದಿದೆ. ನಿಮ್ಮ ವಾರ್ಡ್‌ ರೋಬ್‌ ನಲ್ಲಿ ಹೊಸ ಹೊಸ ಡಿಸೈನಿನ ಶರಾರಾಗಳನ್ನು ಅಗತ್ಯ ಇರಿಸಿಕೊಳ್ಳಿ. 2025ರಲ್ಲಿ ನಿಮ್ಮ ಯಾವುದೇ ಕುರ್ತಿ ಜೊತೆ ಶರಾರಾ ಮ್ಯಾಚ್‌ ಮಾಡಿ, ಪಾರ್ಟಿಯಲ್ಲಿ ಮಿಂಚಿರಿ.

ಸಾಂಪ್ರದಾಯಿಕ ಭಾರತೀಯ ಸ್ಕಾರ್ಫ್‌ : ಸ್ಕಾರ್ಫ್‌ ಎಂಬುದು ಭಾರತೀಯ ಪ್ರತಿ ಉಡುಗೆಗೂ ಒಪ್ಪುವಂಥದು. ಬ್ಲಾಕ್‌ ಪ್ರಿಂಟ್‌, ಬಾಟಿಕ್‌ ಮತ್ತು ಕಾಂಥಾಯುಕ್ತ ಸ್ಕಾರ್ಫ್‌ ಗಳು ಇತ್ತೀಚೆಗೆ ಬಹಳ ಚಾಲ್ತಿಯಲ್ಲಿವೆ. ಜನವರಿಯ ಚಳಿಯಲ್ಲಿ ಉದ್ದನೆ ಬೆಚ್ಚಗಿನ ಸ್ಕಾರ್ಫ್‌ ನಿಮ್ಮನ್ನು ಬೆಚ್ಚಗಿಡುವುದರ ಜೊತೆ ಸ್ಟೈಲಿಶ್‌ ಆಗಿಯೂ ತೋರಿಸುತ್ತದೆ. ಇದೇ ತರಹ ಬೇಸಿಗೆ ಕಾಲದಲ್ಲಿ ನಿಮ್ಮನ್ನು ನೀವು ಟ್ಯಾನಿಂಗ್‌ ನಿಂದ ಕಾಪಾಡಿಕೊಳ್ಳಲು ಬ್ಲಾಕ್‌ ಪ್ರಿಂಟ್‌ ನಿಂದ ಸುಸಜ್ಜಿತ ಕಾಟನ್‌ ಸ್ಕಾರ್ಫ್‌ ಕಟ್ಟಿಕೊಳ್ಳಬಹುದು.

ಮೇಕಪ್ಟ್ರೆಂಡ್ಸ್ 2025

Caratlane_Butterfly-Collection_Rs.22,308

ಈ ವರ್ಷ ನ್ಯಾಚುರಲ್ ಮೇಕಪ್‌ ಕ್ರಮೇಣ ಫೇಡ್‌ ಆಗುತ್ತಾ ಹೋಗಲಿದೆ. ಆ ಜಾಗದಲ್ಲಿ ಹೆಂಗಸರು ಬ್ರೈಟ್‌ ಮೇಕಪ್‌ ಟ್ರೆಂಡ್‌, ಅದೇ ಹೇರ್‌ ಸ್ಟೇಲ್ ‌ನಲ್ಲಿ ಈ ವರ್ಷ ರೆಟ್ರೋ ಲುಕ್‌ ಔಟ್‌ ಗೆ ಮಣೆ ಹಾಕಲಿದ್ದಾರೆ. 2-6 ತಿಂಗಳ ಟೆಂಪರರಿ ಬ್ಯೂಟಿ ಪ್ರೋಸೆಸ್‌ ಜಾಗದಲ್ಲಿ ಹೆಚ್ಚಿನ ಕಾಲಾವಕಾಶ ಬೇಡುವ ಬ್ಯೂಟಿ ಟ್ರೀಟ್‌ ಮೆಂಟ್‌ ನ್ನೇ ಬಯಸುತ್ತಾರೆ.

ಕಳೆದ ವರ್ಷಗಳಲ್ಲಿ ನ್ಯೂಡ್‌ ಮೇಕಪ್‌ ಟ್ರೆಂಡ್‌ ಕಾರಣ ಲೈಟ್‌ ಮೇಕಪ್‌ ನ ಡಿಮ್ಯಾಂಡ್‌ ಜಾಸ್ತಿ ಇತ್ತು. ಇದರಲ್ಲಿ ಹೆಂಗಸರು ಮೇಕಪ್‌ ಏನೋ ಮಾಡಿಸುತ್ತಿದ್ದರು, ಆದರೆ ಅದನ್ನು ಆಡಂಬರವಾಗಿ ತೋರಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಹೀಗಾಗಿ ಬ್ಲ್ಯಾಕ್‌ವೈಟ್‌ ಕಲರ್‌ ಹೆಚ್ಚು ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಲೈಟ್‌ ಯಾ ನ್ಯೂಡ್‌ ಮೇಕಪ್‌ ಹೆಚ್ಚಿಗೆ ಕಂಡುಬರುವುದಿಲ್ಲ ಎಂಬುದು ತಜ್ಞರ ಅಭಿಮತ.

ಈ ಹೊಸ ವರ್ಷದಲ್ಲಿ ಮೇಕಪ್‌ ಕಿಟ್‌ ನ ಪಾರ್ಟ್‌ ಆಗಲಿರುವ ಕಲರ್ಸ್‌ ಎಂದರೆ ಪರ್ಪಲ್, ಆರೆಂಜ್‌, ರಸ್ಟ್, ಪ್ಯಾರೆಟ್‌ ಗ್ರೀನ್‌, ಡಾರ್ಕ್‌ ಬ್ಲೂನಂಥ ಬ್ರೈಟ್‌ ಬಣ್ಣಗಳು. ಏಕೆಂದರೆ ಮೇಕಪ್‌ ನ ಎಲ್ಲಾ ಪ್ರಾಡಕ್ಟ್ಸ್ ನೇಚರ್‌ ನಿಂದ ಪ್ರೇರಣೆ ಪಡೆದಂಥ. ಇನ್ನಷ್ಟು ಹೆಚ್ಚು ಕಲರ್‌ ಫುಲ್ ಆಗುವ ಬಯಕೆ ಹೊಂದಿರುವವರಿಗೆ ಪ್ಲೇರ್‌ ಕಲರ್ಸ್‌ ಅಂದ್ರೆ ಪಿಂಕ್‌, ರೋಸ್‌, ಟ್ಯೂಲಿಪ್‌ ಇನ್‌ ಆಗಲಿವೆ. ಐ ಮೇಕಪ್‌ ನಲ್ಲೂ ಲೈನರ್‌ ನಿಂದ ಹಿಡಿದು ಐಶ್ಯಾಡೋವರೆಗೂ ಎಮೆರಾಲ್ಡ್ ಗ್ರೀನ್‌ ಗೆ ಮಹತ್ವ ಸಿಗಲಿದೆ.

3D ಹಾಗೂ ಫ್ಯಾಂಟೆಸಿ ಐ ಮೇಕಪ್‌ ಟ್ರೆಂಡ್‌ ನಲ್ಲಿ ಇರುತ್ತದೆ. ಇದರಲ್ಲಿ ಕಣ್ಣು ರೆಪ್ಪೆಗಳ ಮೇಲೆ ಡಿಫರೆಂಟ್‌ ಸ್ಟೈಲ್ ‌ನ ಪೇಂಟಿಂಗ್ ಮಾಡಿಸುವ ಟ್ರೆಂಡ್‌ ಹೆಚ್ಚಲಿದೆ. ನಿಮ್ಮ ಕಲ್ಪನೆಗೆ ತಕ್ಕಂತೆ ಇದರಲ್ಲಿ ಗಿಡ, ಮರ, ಚಿಟ್ಟೆ, ಹೂ, ಹಕ್ಕಿ….. ಇತ್ಯಾದಿ ಚಿತ್ರಿಸಿ. ಇದಕ್ಕಾಗಿ ಕಲರ್‌, ಕ್ರಿಸ್ಟಲ್, ಸ್ಪಾರ್ಕ್‌ ಹಾಗೂ ಗ್ಲಿಟರ್‌ ನ್ನು ಬಳಸಿಕೊಳ್ಳಬಹುದು. ಬ್ರೈಟ್‌ ಕಲರ್ಸ್‌ ಜೊತೆ ಡ್ರಮಾಟಿಕ್‌ ಐ ಮೇಕಪ್ ಸಹ ಬಳಸಿರಿ.

ಹ್ಞಾಂ, ಕ್ಯಾಟ್‌ ಐ ಮೇಕಪ್‌ ಟ್ರೆಂಡ್‌ ನಲ್ಲಿ ಇರುತ್ತದೆ. ಆದರೆ ಬಗೆಬಗೆಯ ಬಣ್ಣ ಬಣ್ಣದ ಐ ಲೈನರ್‌ ಗಳ ಜೊತೆ ಒರಿಜಿನಲ್ ಕ್ಯಾಟ್ ಐಸ್‌ ಟ್ರೆಂಡ್‌ ನಿಂದ ಹೊರಗೆ ಉಳಿಯುತ್ತದೆ. ಸ್ಮೋಕಿ ಐಸ್‌ ಸಹ ಕಡಿಮೆ ಬಳಸಲ್ಪಡು ಸಾಧ್ಯತೆಗಳಿವೆ.

ಲಿಪ್‌ ಮೇಕಪ್‌ ನಲ್ಲಿ ಆಕ್ಸ್ ಬ್ಲಡ್‌, ಪಂಪ್‌ ಕಿನ್‌ ರೆಡ್‌, ಫ್ಯೂಶಿಯಾ, ಮೆಟಾಲಿಕ್‌ ಶೇಡ್‌ ಇತ್ಯಾದಿ ಟ್ರೆಂಡ್‌ ನಲ್ಲಿರುತ್ತವೆ. ಟೂ ಟೋನ್ ಲಿಪ್‌ ಸ್ಟಿಕ್‌ ಸಹ ಟ್ರೆಂಡ್‌ ನಲ್ಲಿ ಉಳಿಯುತ್ತವೆ. ಇದರಲ್ಲಿ ಮೇಲ್ತುಟಿಗೆ ಒಂದು ಬಣ್ಣ, ಕೆಳತುಟಿಗೆ ಮತ್ತೊಂದು ಬಣ್ಣ ಇರಲಿದೆ. ಪಿಂಕ್ ರೆಡ್‌ ಶೇಡ್‌ ಬಳಸಿ ಬೋಲ್ಡ್ ಡೈಮೆನ್ಶನ್‌ ಲಿಪ್ಸ್ ಎದ್ದು ತೋರುವಂತೆ ಮಾಡಬಹುದು.

ಹೆಚ್ಚಲಿರುವ ಹೇರ್‌ ಸ್ಟೈಲ್ ‌ಡಿಮ್ಯಾಂಡ್‌ ರಲ್ಲಿ `ಈಝಿ ಟು ಕ್ಯಾರಿ’ ಹೇರ್‌ ಸ್ಟೈಲ್ ‌ನ ಡಿಮ್ಯಾಂಡ್‌ ಹೆಚ್ಚಲಿದೆ. ಯಾವ ಕಷ್ಟವಿಲ್ಲದೆ ಸುಲಭವಾಗಿ ಮಾಡಬಹುದಾದ ಹೇರ್‌ ಸ್ಟೈಲ್ ‌ಗೆ ಎಲ್ಲರೂ ಮೊರೆಹೋಗುತ್ತಾರೆ. ಕೂದಲಿನ ಕಲರಿಂಗ್‌ ಗೆ ಹೆಚ್ಚು ಬೇಡಿಕೆ ಬರಲಿದೆ. 2025ರ ಚಳಿಗಾಲಕ್ಕೆ ಹಾಟ್‌ ಬೋಲ್ಡ್ ಹೇರ್‌ ಕಲರ್‌ ಶೇಡ್ಸ್ ತುಂಬಿ ತುಳುಕಲಿವೆ. ಮುಂದೆ ವಸಂತ ಋತು ಬಂದ ಮೇಲೆ ಶೇಡ್ಸ್ ಬದಲಾಗುತ್ತವೆ. ಈ ಟ್ರೆಂಡ್‌ ನಲ್ಲಿ ನೀವು ಜೆಟ್‌ ಬ್ಲಾಕ್‌ ಯಾ ಇಂಕ್‌ ಬ್ಲಾಕ್‌ ಮಾಡಿಸಲು ಬಯಸದಿದ್ದರೆ, ಆ್ಯಶ್‌ ಗ್ರೇ ಹೇರ್‌ ಶೇಡ್‌ ಆರಿಸಿ. ಹೀಗಾಗಿ ನಿಮ್ಮ ಕೂದಲಿಗೆ ಬುಡ ಭಾಗದಲ್ಲಿ ಡಾರ್ಕ್‌ ಕಲರ್‌, ಕ್ರಮೇಣ ಮೇಲೆ ಬರುತ್ತಿದ್ದ ಹಾಗೆ ವೈಟ್‌ ಕಲರ್‌ ಬರುವಂತೆ ಡೈ ಮಾಡಿ. ಈ ಲುಕ್‌ ನಿಮಗೆ ಎಲ್ಲಕ್ಕಿಂತ ವಿಭಿನ್ನ ಎನಿಸಲಿದೆ.

ಚೆಸ್ಟ್ ನಟ್‌ ಬ್ರೌನ್‌ ಶೇಡ್‌ ಮೇಂಟೇನ್‌ ಮಾಡಲು ಸುಲಭ ಎನಿಸುತ್ತದೆ. ಇದು ನಿಮ್ಮ ಲುಕ್ಸ್ ನ್ನು ಎಲ್ಲಕ್ಕಿಂತ ವಿಭಿನ್ನ ಮಾಡಿಸುತ್ತದೆ. ಇದಕ್ಕಾಗಿ ಇದರಲ್ಲಿ ಸ್ಲೀಕ್‌ ಗೋಲ್ಡನ್‌ ಹೈಲೈಟ್‌ ಸಹ ಚೆನ್ನಾಗಿರುತ್ತದೆ. ಇದೂ ಸಹ 2020ರಲ್ಲಿ ಸಾಕಷ್ಟು ಜನಪ್ರಿಯಾಗಲಿದೆ.

ನೀವು ಟ್ರೆಂಡ್‌ ಅನುಸಾರ ಯಾವುದೇ ಕೂಲ್ ‌ಬಣ್ಣದ ಕಲರ್‌ ಶೇಡ್‌ ಟ್ರೈ ಮಾಡಬಯಸಿದರೆ, ಬೇಬಿ ಬೋಲ್ಡ್ ಹೇರ್‌ ಕಲರ್‌ ಸಹ ಕೂದಲಿಗೆ ಹಚ್ಚಬಹುದು. ಇದರಿಂದ ನಿಮಗೆ ಹೊಸ ಲುಕ್ಸ್ ಸಿಗಲಿದೆ. ಹೆಂಗಸರ ಹೈಲೈಟಿಂಗ್‌ ನ ಮೊದಲ ಆಯ್ಕೆ ಚಾಕಲೇಟ್ ರೋಸ್‌ ಗೋಲ್ಡ್ ಆಗಲಿದೆ. ಮುಂದಿನ ವರ್ಷಕ್ಕೂ ಇದು ಮುಂದುವರಿಯುವ ಸಾಧ್ಯತೆ ಇದೆ. ನಿಮ್ಮ ಕೂದಲಿನ ತುದಿಗೆ ಪಿಂಕ್ ಬ್ರೌನ್‌ ಟೋನ್‌ ನ ಟಚ್‌ ಅಪ್‌ ನೀಡಿ ಹಾಗೂ ವರ್ಷವಿಡೀ ಟ್ರೆಂಡಿಯಾಗಿರಿ.

ಕೂದಲಿಗೆ ಆ್ಯಕ್ಸೆಸರೀಸ್‌ ಆಗಿ ಒರಿಜಿನ್‌ ಹೂ, ಆರ್ಕಿಡ್‌, ರೋಸ್‌, ಲಿಲೀ ಬಳಸಿಕೊಳ್ಳಿ. ಬಹುತೇಕ ಹೇರ್‌ ಸ್ಟೈಲ್ ವಿಕ್ಟೋರಿಯನ್ ಲುಕ್ಸ್ ನಿಂದ ಪ್ರೇರಣೆ ಪಡೆದಿರುತ್ತವೆ. ಹ್ಯಾಂಡ್‌ ಗೇರ್‌ ಹೆಚ್ಚು ಬಳಕೆಯಾಗುವ ಕಡೆ, ಅಲ್ಲೆಲ್ಲ ಏಂಜೆಲಿಕ್‌ ಲುಕ್ಸ್ ಪಡೆಯಲು ಪ್ರಯತ್ನಿಸಲಾಗುವುದು.

ಜಿ. ಪದ್ಮಜಾ

ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಸಹ ಬದಲಾಗುತ್ತಿರುತ್ತದೆ. ಈ ಕಾರಣದಿಂದಲೇ ನ್ಯೂಡ್‌ ಮೇಕಪ್‌ ಟ್ರೆಂಡ್‌ ನಿಂದಾಗಿ ಕಳೆದ ವರ್ಷ ಲೈಟ್‌ ಮೇಕಪ್‌ ಹೆಚ್ಚು ಬೇಡಿಕೆಯಲ್ಲಿದ್ದಂತೆ, ಈ ವರ್ಷ ಲೈಟ್‌ ನ್ಯೂಡ್‌ ಮೇಕಪ್‌ ಗೆ ಬದಲಾಗಿ ಬೋಲ್ಡ್ ಬ್ರೈಟ್‌ ಮೇಕಪ್‌ ಟ್ರೆಂಡಿ ಆಗಲಿದೆ….

2025ಕ್ಕೆ ಜ್ಯೂವೆಲರಿ ಟ್ರೆಂಡ್

Caratlane_Butterfly-Collection_Ring_Rs.-24,963

ಈ ವರ್ಷ ಸ್ಟೇಟ್‌ ಮೆಂಟ್‌ ಪೀಸಸ್‌, ಲೇಯರ್ಡ್‌ ನೆಕ್‌ ಲೇಸ್‌ ಹಾಗೂ ನೇಚರ್‌ ಥೀಮ್ ನಿಂದ ಪ್ರೇರಿತ ಜ್ಯೂವೆಲರಿ ಟ್ರೆಂಡ್ ನಲ್ಲಿರುತ್ತದೆ. 2023ರಲ್ಲಿ  ಡೈಮಂಡ್‌, ರೋಸ್‌ ಗೋಲ್ಡ್, ಪ್ಲೇರ್‌ ಡಿಸೈನ್‌, ಚಾಲ್ತಿಯಲ್ಲಿತ್ತು. ಈ ಹೊಸ ವರ್ಷದಲ್ಲಿ ಇವುಗಳಲ್ಲಿ ಹೆಚ್ಚು ಕಡಿಮೆ ಟ್ರೆಂಡಿ ಬದಲಾಣೆಗಳು ಕಾಣಿಸಲಿವೆ, ಆದರೆ ಇವು ಮಾತ್ರ ಟ್ರೆಂಡ್‌ ನಲ್ಲಿ ಇದ್ದೇ ಇರುತ್ತಿ.

ಸರಳತೆಯೇ ಪ್ರಧಾನವಾದ ಭಾರಿ ಡಿಸೈನ್ಸ್ ಅಲ್ಲದ ಜ್ಯೂವೆಲರಿ ಮಾರುಕಟ್ಟೆಯಲ್ಲಿ ಮೆರೆಯಲಿವೆ. ಏಕೆಂದರೆ ಇತ್ತೀಚೆಗೆ ಸ್ಟೇಟ್ ಮೆಂಟ್‌ ಪೀಸಸ್‌ ನ ಟ್ರೆಂಡ್‌ ಸಾಕಷ್ಟು ಹೆಚ್ಚುತ್ತಿದೆ.

ಡೈಮಂಡ್‌ ರಿಂಗ್ಸ್ ಎಂದೂ ಟ್ರೆಂಡ್‌ ನಿಂದ ಹೊರಗಲಾಗದು. ಅದರಲ್ಲೂ ಮುಖ್ಯವಾಗಿ ಸ್ಟೇಕೆಬಲ್ ರಿಂಗ್ಸ್ ಕುರಿತಾಗಿ ಹೇಳಬೇಕೆಂದರೆ, ಅದಕ್ಕಿಂತಲೂ ಮಿಗಿಲಾದುದು ಇಲ್ಲ ಎಂದೇ ಹೇಳಬೇಕಾಗುತ್ತದೆ.

ಲೇಯರ್ಡ್‌ ನೆಕ್‌ ಲೇಸ್‌ ನ ಲೇಯರಿಂಗ್‌ ಮಾಡಿಸುವುದು ಒಂದು ಆಸಕ್ತಿಕರ, ಅತ್ಯುತ್ತಮ ಟ್ರೆಂಡ್‌ ಆಗಿದೆ, ಅದು ಈ ವರ್ಷ ಮುಂದುವರಿಯಲಿದೆ. ಇದರಿಂದಾಗಿ ಇಂಡಿಯನ್‌ ನಿಂದ ವೆಸ್ಟರ್ನ್‌ ವೇರ್‌ ವರೆಗೂ ನಿಮಗೆ ಸರಿಸಾಟಿಯಿಲ್ಲದ ಲುಕ್ಸ್ ಸಿಗಲಿದೆ.

ಬೇರೆ ಬೇರೆ ಉದ್ದನೆಯ ಚೇನ್ಸ್ ಆರಿಸಿ. ಇದಕ್ಕೆ ಜ್ಯಾಮಿತೀಯ ಪೆಂಡೆಂಟ್ಸ್ ಜೊತೆ ಧಾರಾಳ ಬಳಸಿಕೊಳ್ಳಿ.

ಹೆವಿ ಡಿಸೈನ್ಸ್, ಸೂಕ್ಷ್ಮ ವಿನ್ಯಾಸ, ಬಣ್ಣ, ಪ್ರಕೃತಿಯಿಂದ ಪ್ರೇರಿತ ಆ್ಯಕ್ಸೆಸರೀಸ್‌ ಈ ವರ್ಷ ಮೇಲುಗೈ ಸಾಧಿಸಲಿವೆ.

ಬಣ್ಣ ಬಣ್ಣದ ಚಿಟ್ಟೆ, ನವಿಲು, ಗಿಣಿ ಮುಂತಾದ ಪ್ರಕೃತಿ ಪ್ರೇರಿತ ಮೋಟಿಫ್ಸ್ ಮಾತ್ರವಲ್ಲದೆ, ಈ ವರ್ಷ ಡ್ರಾಗನ್‌, ಬಹು ವಿನ್ಯಾಸದ ಬಳ್ಳಿಗಳು ಹಾಗೂ ಹೂಗಳ ವಿನ್ಯಾಸ ಚಾಲ್ತಿಯಲ್ಲಿರುತ್ತದೆ.

ಇತ್ತೀಚೆಗೆ ಸಿಲ್ವರ್‌ ಆ್ಯಕ್ಸೆಸರೀಸ್‌ ಹೆಚ್ಚು ಟ್ರೆಂಡ್‌ ಎನಿಸಿದೆ. ಇದು ಎಥ್ನಿಕ್‌ ಲುಕ್ಸ್ ನ್ನು ಇನ್ನಷ್ಟು ಸುಧಾರಿಸಿ ಟ್ರೆಂಡಿ ಹಾಗೂ ಸರಿಸಾಟಿಯಿಲ್ಲದ ಲುಕ್ಸ್ ಒದಗಿಸಬಲ್ಲದು.

ತೆಳುವಾದ ಚೇನ್‌ ಗೆ ಚೋಕರ್‌, ಡಾಲರ್‌, ಟ್ವಿನ್‌ ರಿಂಗ್ಸ್, ಟೋ ರಿಂಗ್ಸ್, ಪ್ಯಾಟರ್ನ್ಡ್ ನೆಕ್‌ ಪೀಸಸ್‌ ಸಹ 2020ರ ಪ್ರಧಾನ ಆಕರ್ಷಣೆ ಆಗಲಿವೆ.

2025ರಲ್ಲಿ ರನ್‌ ವೇ ಅನುಸಾರ ಡ್ಯಾಂಟಿ ನೆಕ್‌ ಲೇಸ್‌ ಕ್ಲಾಸಿಕ್‌ ಹುಪ್ಸ್ ನಂಥ ಜ್ಯೂವೆಲರಿ ಸಹ ಹೆಚ್ಚು ಶೋಭಿಸಲಿವೆ. ಈ ವರ್ಷ ಹೇರ್‌ ಸ್ಟೈಲ್ ‌ಜೊತೆ ಜ್ಯೂವೆಲರಿ ಟ್ರೆಂಡ್‌ ನಲ್ಲೂ ಸಹ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದು. 2025ರಲ್ಲಿ ಸ್ಟೇಟ್‌ ಮೆಂಟ್‌ ಜ್ಯೂವೆಲರಿಯ ಮೋಡಿ ಫೆಂಟಾಸ್ಟಿಕ್‌ ಎನಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ