ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಶೋಷಣೆ ಪ್ರಜಾಪ್ರಭುತ್ವ ಬಂದ ಮೇಲೆ ನಿಂತಿತ್ತು. ಆದರೆ ಈಗ ಧರ್ಮದ ಅಂಗಡಿಕಾರರು ಪ್ರಾಚೀನ ಸಂಸ್ಕೃತಿಯ ಹೆಸರಿನಲ್ಲಿ ಪುರಾತನ ವಿಚಾರಗಳನ್ನು ಹೇರುತ್ತಿದ್ದು, ಮಹಿಳೆಯರೇ ಅದಕ್ಕೆ ತುತ್ತಾಗುತ್ತಿದ್ದಾರೆ.

ಆಪ್ಘಾನ್‌ ನಲ್ಲಿ ತಾಲಿಬಾನಿ ಆಡಳಿತದಲ್ಲಂತೂ ಇದು ಸ್ಪಷ್ಟವಾಗಿ ಕಂಡು ಬರುತ್ತದೆ. ಆದರೆ ಭಾರತದಲ್ಲೂ ನಿರಂತರವಾಗಿ ಯಜ್ಞ, ಹವನ, ಪ್ರವಚನ, ತೀರ್ಥಯಾತ್ರೆ, ಪೂಜೆ, ಆರತಿ, ಧಾರ್ಮಿಕ ಹಬ್ಬಗಳ ಮುಖಾಂತರ ಪ್ರಜಾಪ್ರಭುತ್ವ ಕೊಟ್ಟ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ.

ಅಮೆರಿಕಾದಲ್ಲೂ ಚರ್ಚ್‌ ಗಳ ಪ್ರಾಬಲ್ಯದಿಂದಾಗಿ ಗರ್ಭಪಾತದ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ಅದು ವಾಸ್ತವದಲ್ಲಿ ಮಹಿಳೆಯ ಸೆಕ್ಸ್ ಸುಖದ ಮೇಲೆ ನಿಯಂತ್ರಣವಾಗಿದೆ. ಅದು ಕೇವಲ ಮಹಿಳೆಯನ್ನು ಮಗುವನ್ನು ಹೆರುವ ಯಂತ್ರವನ್ನಾಗಿಸುತ್ತದೆ ಹೊರತು ಬೇರೇನೂ ಅಲ್ಲ.

ಕಲ್ಚರ್‌ ರಿವೈಲಿಸಂನ ಹೆಸರಿನಲ್ಲಿ ಭಾರತದಲ್ಲಿ ದೇಶೀ ಪೋಷಾಕುಗಳು, ಹಬ್ಬಗಳು, ಮದುವೆಗಳು, ವಾಸ್ತುಶಾಸ್ತ್ರದ ಕಥೆಗಳನ್ನು ಮಾರಲಾಗುತ್ತದೆ. ಅವು ಧರ್ಮದ ಕಪಿಮುಷ್ಟಿಯಿಂದ ಹೊರಬರುವ ಪ್ರಜಾಪ್ರಭುತ್ವವನ್ನು ಪ್ರತಿದಿನ ದುರ್ಬಲಗೊಳಿಸುತ್ತಿದೆ ಮತ್ತು ಮಂದಿರ ಮಸೀದಿ ಗುರುದ್ವಾರಗಳು ಧರ್ಮವನ್ನು ವಿಶಗೊಳಿಸುತ್ತಿವೆ. ಈ ಎಲ್ಲ ಧರ್ಮದ ಅಂಗಡಿಗಳಲ್ಲಿ ಮಹಿಳೆಯರ ಪಾಲಿನ ಗಳಿಕೆಯನ್ನೇ ಖರ್ಚು ಮಾಡಬೇಕಾಗಿ ಬರುತ್ತಿದೆ.

ಈ ಎಲ್ಲ ಧರ್ಮದ ಅಂಗಡಿಗಳು ಪುರುಷರ ಮುಖಾಂತರ ರೂಪಿಸಲಾದ ನಿಯಮಗಳು ಹಾಗೂ ನೀತಿ ನಿಯಮಗಳನ್ವಯ ನಡೆಯುತ್ತವೆ. ಇದರಲ್ಲಿ ಪೂಜಿಸಲ್ಪಡುವ ವ್ಯಕ್ತಿ ಪುರುಷನೇ ಆಗಿರುತ್ತಾನೆ ಅಥವಾ ಹಿಂದೂ ಧರ್ಮದಲ್ಲಿ ಯಾವುದಾದರೂ ಪುರುಷನ ಸಂತಾನ ಅಥವಾ ಹೆಂಡತಿ ಆಗಿರುವ ಕಾರಣದಿಂದ ಪೂಜಿಸಲಾಗುತ್ತದೆ. ಅಂದರೆ ಅಲ್ಲಿ ಮಹಿಳೆಯ ಅಸ್ತಿತ್ವವೇ ಇರುವುದಿಲ್ಲ ಮತ್ತು ಅದು ಮತಪೆಟ್ಟಿಗೆಯ ತನಕ ಕರೆದೊಯ್ಯುತ್ತದೆ.

ಪ್ರಜಾಪ್ರಭುತ್ವ ಅಂದರೆ ಕೇವಲ ಮತ ಹಾಕುವ ಹಕ್ಕು ಅಷ್ಟೇ ಅಲ್ಲ. ಸರ್ಕಾರ ಹಾಗೂ ಸಮಾಜವನ್ನು ಮುನ್ನಡೆಸುವ ಪುರುಷನಿಗೆ ಸರಿಸಮಾನ ಹಕ್ಕು. ಈ ದೇಶದಲ್ಲಿ ಇಂದಿರಾ ಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿಯಂಥ ಮುಖಂಡರ ಹೊರತಾಗಿ ಪ್ರಜಾಪ್ರಭುತ್ವ ಪುರುಷರ ಗುಲಾಮವಾಗಿದೆ. ಧರ್ಮದ ಆವರಣದಲ್ಲಿ ಅದು ಮತ್ತೆ ಅದೇ ರಸ್ತೆಯಲ್ಲಿ ಸಾಗುತ್ತಿದೆ.

ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಹಿಳೆಯರ ಉಪಸ್ಥಿತಿ ಏನೇನೂ ಇಲ್ಲ ಎಂಬಂತಿದೆ. 2014ರಲ್ಲಿ ಸುಷ್ಮಾ ಸ್ವರಾಜ್ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆಗ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡದೇ ವಿದೇಶಾಂಗ ಸಚಿವೆಯ ಸ್ಥಾನದಲ್ಲಿ ವೀಸಾ ಮಂತ್ರಿಯಾಗಿಸಿ, ಮಹಿಳೆಯರಿಗೆ ಯಾವುದೇ ಉನ್ನತ ಹುದ್ದೆ ಇಲ್ಲ ಎನ್ನುವುದನ್ನು ಬಿಂಬಿಸಲಾಯಿತು.

ನಿರ್ಮಲಾ ಸೀತಾರಾಮನ್‌ ಪ್ರತಿ ವಾಕ್ಯದಲ್ಲಿ ಜಯ್‌ ಶ್ರೀರಾಮ್ ಅಲ್ಲ, ಜೈ ನರೇಂದ್ರ ಮೋದಿ ಎನ್ನುತ್ತಾರೆ. ಏಕೆಂದರೆ ಅವರ ಅಧಿಕಾರ ಉಳಿಯಬೇಕಿದೆ. ಇದೆಲ್ಲ ಸುಶಿಕ್ಷಿತ, ಸುಂದರ ಸ್ಮಾರ್ಟ್‌ ಮತ್ತು ಗಳಿಸುವ ಪತ್ನಿಯ ಹಾಗೆ `ಅವರನ್ನು ಕೇಳಿಕೊಂಡು ಹೇಳ್ತೀನಿ,’ ಎಂಬಂತಹ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದ ಅಂತಿಮ ಅರ್ಥ ಮಹಿಳೆ ಆಫೀಸಿನಲ್ಲಿರಲಿ, ರಾಜಕೀಯದಲ್ಲಿರಲಿ, ಶಾಲೆಯಲ್ಲಿರಲಿ ಅಥವಾ ಮನೆಯಲ್ಲಿರಲಿ ತನ್ನ ನಿರ್ಧಾರ ತಾನೇ ತೆಗೆದುಕೊಳ್ಳಬೇಕು.

ಮಹಿಳೆಯರಿಗೆ ಪ್ರಜಾಪ್ರಭುತ್ವದ ಲಾಭ ದೊರಕಲಿ ಎಂದು 18 ಹಾಗೂ 19ನೇ ಶತಮಾನದಲ್ಲಿ ಮಹಿಳಾ ಹಾಗೂ ಪುರುಷ ವಿಚಾರವಾದಿಗಳು ಹೋರಾಟ ನಡೆಸಿದರು. ಆದರೆ 20 ಹಾಗೂ 21ನೇ ಶತಮಾನದಲ್ಲಿ ಈ ಹೋರಾಟ ದುರ್ಬಲವಾಯಿತು. ಈಗ ಅಮೆರಿಕಾದ ಮಹಿಳೆಯರು ಗರ್ಭಪಾತ ಕೇಂದ್ರಗಳ ಮುಂದೆ ಧರಣಿ ನಡೆಸುತ್ತಿದ್ದಾರೆ ಮತ್ತು ಭಾರತದ ಕರ್ಮದಲ್ಲಿ ವಿಶ್ವಾಸವಿರಿಸುವ, ಸ್ವತಂತ್ರ ಗುಜರಾತಿ ಮಹಿಳೆಯರು ತಮ್ಮ ಸರ್ವಸ್ವವನ್ನು ಪುರುಷ ಗುರುಗಳಿಗೆ ಸಮರ್ಪಿಸುತ್ತಿದ್ದಾರೆ.

ಪ್ರಜಾಪ್ರಭುತ್ವದ ಅರ್ಥ ಆರ್ಥಿಕ ಸ್ವಾತಂತ್ರ್ಯ ಕೂಡ ಆಗಿದ್ದು, ಅದು ಶೂನ್ಯ ಆಗುತ್ತ ಹೊರಟಿದೆ. ಯಾವ ಮಹಿಳೆಯರನ್ನು ಮುಕ್ತ ಕಂಠದಿಂದ ಹೊಗಳಾಗುತ್ತದೋ, ಅವರು ಹೇಳುವುದೇನೆಂದರೆ ತನಗೆ ಇದೆಲ್ಲ ಸಿಕ್ಕಿದ್ದು ತನ್ನ ತಂದೆ ಅಥವಾ ಅಮ್ಮನಿಂದ ಎಂದು. ಯಾವ ಮಹಿಳಾ ಅಧಿಕಾರಿಗಳ ವಿರುದ್ಧ ಈಚೆಗೆ ಆರ್ಥಿಕ ಅಪರಾಧಗಳ ಪ್ರಕರಣಗಳು ನಡೆಯುತ್ತಿವೆಯೋ, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ, ನಿಜವಾದ ಸೂತ್ರ ಅವರ ಪತಿಯಂದಿರ ಕೈಯಲ್ಲಿಯೇ ಇತ್ತು ಎನ್ನುವುದು ತಿಳಿದುಬರುತ್ತದೆ.

ಪ್ರಜಾಪ್ರಭುತ್ವವನ್ನು ಹತ್ತಿಕ್ಕುವಲ್ಲಿ ಧರ್ಮದ ಪಾತ್ರ ಬಲು ದೊಡ್ಡದು. ಏಕೆಂದರೆ ಬಂಡವಾಳಶಾಹಿ ಮಹಿಳೆಯರನ್ನೇ ತಮ್ಮ ದೊಡ್ಡ ಗ್ರಾಹಕ ಎಂದು ಪರಿಗಣಿಸುತ್ತದೆ. ಹಾಗೆಂದೇ ಅವರಿಗೆ ಗೌರವ ಕೊಡುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತದೆ. ಧರ್ಮಕ್ಕೆ ಮೂರ್ಖ ಮಹಿಳೆಯರು ಬೇಕು ಅವರನ್ನು ಏಜೆಂಟರಾಗಿಸಿಕೊಂಡು ಮನೆ ಮನೆಗೆ ಕಳಿಸುತ್ತದೆ. ಆದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ಏಜೆಂಟರಿಲ್ಲ. ಪ್ರಜಾಪ್ರಭುತ್ವವನ್ನು ಛಿದ್ರ ಛಿದ್ರಗೊಳಿಸಲು ಧಾರ್ಮಿಕ ಸೈನಿಕರ ಬಹುದೊಡ್ಡ ದಂಡೇ ಇದೆ. ಎಲ್ಲಿಯವರೆಗೆ ಉಳಿದೀತು? ಪ್ರಜಾಪ್ರಭುತ್ವ ಹಾಗೂ ಎಲ್ಲಿಯವರೆಗೆ ಸ್ವತಂತ್ರರಿರುತ್ತಾರೆ? ಮಹಿಳೆಯರು ಎನ್ನುವುದನ್ನು ಕಾಯ್ದು ನೋಡಬೇಕಿದೆ. ಈಗಂತೂ ಕ್ಷಿತಿಜದಲ್ಲಿ ಕತ್ತಲೆಯ ಮೋಡಗಳು ಕವಿದಿವೆ.

ಹೆಸರು ದೊಡ್ಡದು ಖ್ಯಾತಿ ಚಿಕ್ಕದು

ದೇಶದಲ್ಲಿ ಎರಡು ಸಮಾಜಗಳನ್ನು ಹುಟ್ಟುಹಾಕುವ ಸಂಪೂರ್ಣ ಸಿದ್ಧತೆ ನಡೆದಿದೆ, ಮೊದಲನೆಯದು ಹಣವುಳ್ಳರದ್ದು, ಎರಡನೆಯದು ಹಣ ಇಲ್ಲದವರದ್ದು. ಸಮಾಜವನ್ನು ಹೇಗೆ ಹುಟ್ಟು ಹಾಕಲಾಗುತ್ತಿದೆಯೆಂದರೆ ಇಬ್ಬರೂ ಪರಸ್ಪರರ ಮುಖ ನೋಡಲು ಆಗಲೇ ಬಾರದು ಎಂಬಂತೆ. ಹಣವುಳ್ಳವರು ಕೇವಲ ಹಣವುಳ್ಳರ ಜೊತೆ ಮಾತ್ರ ಇರಬೇಕು, ಬಡವರು ಪರಿಶ್ರಮಿಗಳು ಬೇರೆ ಕಡೆ. ಇವೆರಡು ವರ್ಗಗಳಲ್ಲಿ ಮತ್ತೆ ವರ್ಗಗಳಿರಬಹುದು, ಭಾರಿ ಶ್ರೀಮಂತ, ಮಧ್ಯಮ ಶ್ರೀಮಂತ, ಕಡಿಮೆ ಶ್ರೀಮಂತ, ಹಣ ಇಲ್ಲದೇ ಇರುವವರಲ್ಲಿ ಮಧ್ಯಮ ವರ್ಗ ಹಾಗೂ ಕಡು ಬಡವ ಎಂಬ ವರ್ಗಗಳು ಇರಬಲ್ಲವು. ಇವರು ದುಡಿದು ಹಾಕುತ್ತಾರೆ ಹಾಗೂ ಅವರ ಉಳಿತಾಯ ಶ್ರೀಮಂತರ ಬಳಿ ಹೋಗುತ್ತದೆ.

ಪ್ರಧಾನಿ ಮೋದಿ ದೆಹಲಿಯಿಂದ 75 ಕಿಮೀ. ದೂರದಲ್ಲಿ ದೆಹಲಿ ಆಗ್ರಾ ಮಧ್ಯದಲ್ಲಿ ನಿರ್ಮಾಣವಾಗಲಿರುವ ಜೇರ್‌ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅದು ಈ ವಿಭಜನೆಯ ಮೊದಲ ಇಟ್ಟಿಗೆಯಾಗಿದೆ. 3000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ 30,000 ಕೋಟಿ ರೂ. ಖರ್ಚಾಗಲಿದೆ. ಅದನ್ನು ಜನತೆಯ ಮೇಲೆ ಕರ ವಿಧಿಸಿ ವಸೂಲಿ ಮಾಡಲಾಗುತ್ತದೆ. ಅಲ್ಲಿಗೆ ತಲುಪಲು 75 ಕಿ.ಮೀ. ವೇಗದಲ್ಲಿ ಸಾಗುತ್ತಾರೆ. ಉಳಿದ ಕಡೆ ಜನರಿಗೆ ಹೋಗಲು ಬಸ್ ಗಳಂತೂ ಇದ್ದೇ ಇರುತ್ತವೆ. ಅವು ಕುರಿಗಳಂತೆ ಜನರನ್ನು ತುಂಬಿ ಸಾಗಿಸುತ್ತವೆ. ಮುಂಬೈ, ಕೋಲ್ಕತ್ತಾದ ಲೋಕಲ್ ಟ್ರೇನ್‌ ಗಳು ಅದಕ್ಕೆ ಜೀವಂತ ಉದಾಹರಣೆ.

ಈಗ ರಸ್ತೆಗಳು ಹೇಗೆ ನಿರ್ಮಾಣವಾಗಲಿವೆಯೆಂದರೆ, ಎರಡೂ ಬಗೆಯ ಜನರನ್ನು ಪರಸ್ಪರ ನೋಡುವ ಅವಶ್ಯಕತೆಯೇ ಉಂಟಾಗುವುದಿಲ್ಲ. ಶ್ರೀಮಂತರು ಇರುವ ಕಡೆಯೇ ಮನೆ ಮಾಡುತ್ತಾರೆ, ಬಡವರ ಮನೆಗಳು ನಿರ್ಮಾಣ ಆಗಬಹುದು, ಬೇಡ ಎಂದರೆ ಕೆಡವಿ ಹಾಕಬಹುದು. ನಿರ್ಮಾಣ ಆಗುವುದಾದರೂ ಎಂತಹ ಕಡೆ ಎಂದರೆ, ಚರಂಡಿ ಇಲ್ಲದ ಕಡೆ, ಇದ್ದರೂ ಗಬ್ಬು ನಾರುವ ಕಡೆ.

ಜೇರ್‌ ವಿಮಾನ ನಿಲ್ದಾಣ ಜಗತ್ತಿನ 4ನೇ ಅತಿ ದೊಡ್ಡ ವಿಮಾನ ನಿಲ್ದಾಣ ಆಗಲಿದೆ. ಆದರೆ ಭಾರತದ ಪ್ರತಿ ಪ್ರಜೆಯ ಆದಾಯ ಜಗತ್ತಿನ ನಾಲ್ಕನೇ ಸ್ಥಾನದಲ್ಲಿ ನಿಂತಿರುವ ದೇಶದ ಸರಾಸರಿ ಆದಾಯಕ್ಕೆ ಸರಿಸಮಾನ ಆಗಿರುತ್ತದೆಯೇ? ಇದು ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣ ಆಗಲಿದೆ, ಆದರೆ ನಮ್ಮ ಜನತೆ ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಬಿಡಿ, ಥೈಲ್ಯಾಂಡ್‌, ವಿಯೆಟ್ನಾಂಗೆ ಸರಿಸಮಾನ ಆಗಿರುತ್ತಾ?

ಜೇರ್‌ ವಿಮಾನ ನಿಲ್ದಾಣ ಅತ್ಯಂತ ಹೊಳಪುಳ್ಳದ್ದಾಗಿರುತ್ತೆ. ಗ್ರಾನೈಟ್‌ ನ ನೆಲಹಾಸು, ದುಬಾರಿ ಆಹಾರ ಬಡಿಸುವ ರೆಸ್ಟೊರೆಂಟ್ ಗಳಿರಬಹುದು. ಅಲ್ಲಿ ಒಂದು ಕಪ್‌ ಚಹಾ ಬೆಲೆ ರೂ.250 ಆಗಿರುತ್ತದೆ. ಮನೆಯಲ್ಲಿ ಒಂದೇ ರೀತಿಯ 3 ಕಪ್‌ ಹೊಂದಿಸಲು ಆಗದ ಮಹಿಳೆಯರು ಇಂಥದ್ದನ್ನು ನೋಡಲು ಸಾಧ್ಯವೇ?

ಜೇರ್‌ ವಿಮಾನ ನಿಲ್ದಾಣ ಪ್ರಗತಿಯ ಪ್ರತೀಕವಾಗಿದೆ. ಆದರೆ ಈ ಪ್ರಗತಿ ಯಾವಾಗ ಚೆನ್ನಾಗಿ ಅನಿಸುತ್ತೆ ಅಂದರೆ, ಸಾಮಾನ್ಯ ಜನತೆಯ ಜೀವನ ಮಟ್ಟ ಸುಧಾರಣೆ ಆದಾಗ. ಆದರೆ ಸಾಮಾನ್ಯ ಜನರು ಹಾಗೂ ಕಡುಬಡವರು ಮಹಲುಗಳಲ್ಲಿ ಹೋಗಲು ವಿವಶರಾಗುತ್ತಿದ್ದರೆ, `ಜೇರ್‌’ ಧರಿಸಿ ಮೋದಿ, ಯೋಗಿ ಎಂದು ಅನುಕರಿಸುತ್ತಾ ಹೋಗುವುದು ಸರಿಯೇ?

ಆಡಳಿತ ಮತ್ತು ಕುಟುಂಬ ವಾದ

ಮನೆಯ ಕೆಲಸ ಪೀಳಿಗೆಯ ತನಕ ಮುಂದುವರಿಯಬೇಕು ಎನ್ನುವುದು ಹಿಂದೂ ಧರ್ಮ ಹಾಗೂ ಹಿಂದೂ ಕಾನೂನಿನ ದೇಣಿಗೆ. ಪ್ರಧಾನಿ ಮೋದಿ `ಸಂವಿಧಾನ ದಿನ’ದಂದು, ಕಾಂಗ್ರೆಸ್‌ ನ್ನು ಟೀಕಿಸುತ್ತಾ, ಕುಟುಂಬ ರಾಜಕಾರಣ ಮಾಡುತ್ತಾ ನಡೆಯುವ ರಾಜಕೀಯ ಪಕ್ಷಗಳು ಸಂವಿಧಾನದ ವಿರುದ್ಧ ಮಾಡಿದ್ದಾರೆ. ಆದರೆ ಅದೇ ಮೋದಿಯವರು ಹಿಂದೂ ಭಾರತೀಯ ಸಂಸ್ಕೃತಿಯನ್ನು ಗುಣಗಾನ ಮಾಡುತ್ತಿರುತ್ತಾರೆ, ಅದರಲ್ಲಿ ಕುಟುಂಬಗಳ ವ್ಯಾಖ್ಯಾನವಿರುತ್ತದೆ.

ಸಗರ ರಾಜನ ಕಥೆಯನ್ನೇ ತೆಗೆದುಕೊಳ್ಳಿ. ಅದನ್ನು ವಿಶ್ವಾಮಿತ್ರ ಹೇಳಿದ್ದಾರೆ. ಸಗರ ಅಯೋಧ್ಯೆಯ ರಾಜನಾಗಿದ್ದ. ಅವನಿಗೆ ಇಬ್ಬರು ಪತ್ನಿಯರಿದ್ದರು. ಸುಮಾರು 100 ವರ್ಷ ತಪಸ್ಸು ಮಾಡಿದಾಗ ಅವನಿಗೆ ಒಂದು ವರದಾನ ಸಿಕ್ಕಿತು. ಮೊದಲನೆಯವಳಿಗೆ ಅಸಮಂಜಸ, ಎರಡನೆಯವಳು ಸೋರೆಕಾಯಿಯಂಥ ಪಿಂಡವೊಂದಕ್ಕೆ ಜನ್ಮ ನೀಡುತ್ತಾಳೆ. ಅದನ್ನು ಒಡೆದಾಗ 60 ಸಾವಿರ ಪುತ್ರರು ಹೊರಬಂದರು. ಸಗರ ರಾಜನ ದೊಡ್ಡ ಮಗ ಅಸಮಂಜಸ ದುಷ್ಟ ಪ್ರವೃತ್ತಿಯವ. ಅವನು ಜನರಿಗೆ ತೊಂದರೆ ಕೊಡುತ್ತಿದ್ದು, ತನ್ನ ತಮ್ಮಂದಿರನ್ನೂ ನೀರಿಗೆಸೆದು ವಿಕೃತ ಸಂತೋಷ ಅನುಭವಿಸುತ್ತಿದ್ದ. ಆದರೆ ಅವನಿಗೆ ಹುಟ್ಟಿದ ಮಗ ಅಂಶುಮಂತ ಸಜ್ಜನ ಪ್ರವೃತ್ತಿಯವ. ಸಗರ ಒಮ್ಮೆ ಯಜ್ಞ ಮಾಡಲು ನಿರ್ಧರಿಸಿದ. ಆಗ ಇಂದ್ರ ಅವನ ಪವಿತ್ರ ಅಶ್ವವನ್ನು ಕದ್ದ. ಅದನ್ನು ಹುಡುಕಬೇಕೆಂದು 60,000 ಪುತ್ರರು ಹೊರಟರು.

ನಮ್ಮ ಮುಖಂಡರು ಧರ್ಮಗ್ರಂಥಗಳ ಮೇಲೆ ನಂಬಿಕೆ ಇಟ್ಟು, ಅದರ ಬಗ್ಗೆ ಹೇಳುತ್ತಿರುತ್ತಾರೆ ಹಾಗೂ ಅವರ ಚಮತ್ಕಾರಗಳನ್ನು ವೈಜ್ಞಾನಿಕ ಶೋಧ ಎಂದು ಹೇಳುತ್ತಾರಾದರೆ, ಆಡಳಿತ ನಡೆಸುವ ಕುಟುಂಬಗಳ ಬಗ್ಗೆ ಹೇಗೆ ಆರೋಪ ಹೊರಿಸುತ್ತಾರೆ? ಆದರೆ ಮಹಾಭಾರತದ ಯುದ್ಧ ಜನತೆಯ ಹಿತಕ್ಕಾಗಿ ಅಲ್ಲ, ರಾಜರ ಪುತ್ರರ ಹಿತಕ್ಕಾಗಿ ನಡೆಯಿತು ಎಂದಾದರೆ, ರಾಜಕಾರಣದಲ್ಲಿ ಕುಟುಂಬದ ಟೀಕೆಯನ್ನು ಹೇಗೆ ತಾನೇ ಮಾಡಲು ಸಾಧ್ಯ?

ಪ್ರಧಾನಿಗೆ ವಿರೋಧಿ ಪಕ್ಷದವರ ಬಗ್ಗೆ ಮಾತನಾಡುವ ಹಕ್ಕು ಇದೆ. ಆದರೆ ನೈತಿಕತೆ ಹೇಳುವುದೇನೆಂದರೆ, ಇವತ್ತು ಏನು ಮಾತಾಡುತ್ತೀರೋ ಅದಕ್ಕೆ ಬದ್ಧರಾಗಿರಬೇಕು. ಪ್ರಧಾನಿ ಮಾತನಾಡುವಾಗ ಬೆಲೆಯೇರಿಕೆಯ ಬಗ್ಗೆ ಚಕಾರ ಎತ್ತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಗ್ಗೆ ಟೀಕೆ ಮಾಡುತ್ತಾರೆ. ತಾವು ಬೆಲೆಯೇರಿಕೆ ನಿಯಂತ್ರಿಸದೆ, ಕಾಂಗ್ರೆಸ್‌ ನ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲಾಗದು. ಅವರದ್ದೇ ಪಾರ್ಟಿಯಲ್ಲಿ ಮೇನಕಾ ಗಾಂಧಿ ಹಾಗೂ ವರುಣ್‌ ಗಾಂಧಿ ಕೂಡ ಸಂಸದರಾಗಿದ್ದಾರೆ.

ಅವರು ಗಾಂಧಿ ಕುಟುಂಬದ ಮಹತ್ವ ತಿಳಿಯುತ್ತಾರೆಂದಾದರೆ, ಕಾಂಗ್ರೆಸ್‌ ಅಥವಾ ಸಮಾಜವಾದಿ ಹಾಗೂ ಇತರೆ ಪಕ್ಷಗಳಿಗೆ ಹೇಗೆ ತಾನೇ ದೋಷ ಹೊರಿಸುತ್ತಾರೆ? ಶಿವಸೇನಾ ಭಾಜಪಾದ ಅಂಗಪಕ್ಷವಾಗಿತ್ತು. ಬಾಳಠಾಕ್ರೆ ಬಳಿಕ ಅದೀಗ ಉದ್ಭವ ಠಾಕ್ರೆ ಕೈಯಲ್ಲಿದೆ. ಕುಟುಂಬದ ಹೊರತಾಗಿ ಪಕ್ಷಗಳು ನಡೆಯಬಹುದು ಎನ್ನುವುದನ್ನು ಪಾಶ್ಚಿಮಾತ್ಯದ ಪ್ರಜಾಪ್ರಭುತ್ವ ಸ್ಪಷ್ಟಪಡಿಸುತ್ತಿದೆ. ಆದರೆ ಭಾರತ ತನ್ನ ಹಳೆಯ ಪರಂಪರೆಯನ್ನು ಮುಂದುವರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಕುಟುಂಬಗಳಿಗೆ ಹೇಗೆ ದೋಷ ಹೊರಿಸಲಾಗುತ್ತದೆ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ