ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಶೋಷಣೆ ಪ್ರಜಾಪ್ರಭುತ್ವ ಬಂದ ಮೇಲೆ ನಿಂತಿತ್ತು. ಆದರೆ ಈಗ ಧರ್ಮದ ಅಂಗಡಿಕಾರರು ಪ್ರಾಚೀನ ಸಂಸ್ಕೃತಿಯ ಹೆಸರಿನಲ್ಲಿ ಪುರಾತನ ವಿಚಾರಗಳನ್ನು ಹೇರುತ್ತಿದ್ದು, ಮಹಿಳೆಯರೇ ಅದಕ್ಕೆ ತುತ್ತಾಗುತ್ತಿದ್ದಾರೆ.
ಆಪ್ಘಾನ್ ನಲ್ಲಿ ತಾಲಿಬಾನಿ ಆಡಳಿತದಲ್ಲಂತೂ ಇದು ಸ್ಪಷ್ಟವಾಗಿ ಕಂಡು ಬರುತ್ತದೆ. ಆದರೆ ಭಾರತದಲ್ಲೂ ನಿರಂತರವಾಗಿ ಯಜ್ಞ, ಹವನ, ಪ್ರವಚನ, ತೀರ್ಥಯಾತ್ರೆ, ಪೂಜೆ, ಆರತಿ, ಧಾರ್ಮಿಕ ಹಬ್ಬಗಳ ಮುಖಾಂತರ ಪ್ರಜಾಪ್ರಭುತ್ವ ಕೊಟ್ಟ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ.
ಅಮೆರಿಕಾದಲ್ಲೂ ಚರ್ಚ್ ಗಳ ಪ್ರಾಬಲ್ಯದಿಂದಾಗಿ ಗರ್ಭಪಾತದ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ಅದು ವಾಸ್ತವದಲ್ಲಿ ಮಹಿಳೆಯ ಸೆಕ್ಸ್ ಸುಖದ ಮೇಲೆ ನಿಯಂತ್ರಣವಾಗಿದೆ. ಅದು ಕೇವಲ ಮಹಿಳೆಯನ್ನು ಮಗುವನ್ನು ಹೆರುವ ಯಂತ್ರವನ್ನಾಗಿಸುತ್ತದೆ ಹೊರತು ಬೇರೇನೂ ಅಲ್ಲ.
ಕಲ್ಚರ್ ರಿವೈಲಿಸಂನ ಹೆಸರಿನಲ್ಲಿ ಭಾರತದಲ್ಲಿ ದೇಶೀ ಪೋಷಾಕುಗಳು, ಹಬ್ಬಗಳು, ಮದುವೆಗಳು, ವಾಸ್ತುಶಾಸ್ತ್ರದ ಕಥೆಗಳನ್ನು ಮಾರಲಾಗುತ್ತದೆ. ಅವು ಧರ್ಮದ ಕಪಿಮುಷ್ಟಿಯಿಂದ ಹೊರಬರುವ ಪ್ರಜಾಪ್ರಭುತ್ವವನ್ನು ಪ್ರತಿದಿನ ದುರ್ಬಲಗೊಳಿಸುತ್ತಿದೆ ಮತ್ತು ಮಂದಿರ ಮಸೀದಿ ಗುರುದ್ವಾರಗಳು ಧರ್ಮವನ್ನು ವಿಶಗೊಳಿಸುತ್ತಿವೆ. ಈ ಎಲ್ಲ ಧರ್ಮದ ಅಂಗಡಿಗಳಲ್ಲಿ ಮಹಿಳೆಯರ ಪಾಲಿನ ಗಳಿಕೆಯನ್ನೇ ಖರ್ಚು ಮಾಡಬೇಕಾಗಿ ಬರುತ್ತಿದೆ.
ಈ ಎಲ್ಲ ಧರ್ಮದ ಅಂಗಡಿಗಳು ಪುರುಷರ ಮುಖಾಂತರ ರೂಪಿಸಲಾದ ನಿಯಮಗಳು ಹಾಗೂ ನೀತಿ ನಿಯಮಗಳನ್ವಯ ನಡೆಯುತ್ತವೆ. ಇದರಲ್ಲಿ ಪೂಜಿಸಲ್ಪಡುವ ವ್ಯಕ್ತಿ ಪುರುಷನೇ ಆಗಿರುತ್ತಾನೆ ಅಥವಾ ಹಿಂದೂ ಧರ್ಮದಲ್ಲಿ ಯಾವುದಾದರೂ ಪುರುಷನ ಸಂತಾನ ಅಥವಾ ಹೆಂಡತಿ ಆಗಿರುವ ಕಾರಣದಿಂದ ಪೂಜಿಸಲಾಗುತ್ತದೆ. ಅಂದರೆ ಅಲ್ಲಿ ಮಹಿಳೆಯ ಅಸ್ತಿತ್ವವೇ ಇರುವುದಿಲ್ಲ ಮತ್ತು ಅದು ಮತಪೆಟ್ಟಿಗೆಯ ತನಕ ಕರೆದೊಯ್ಯುತ್ತದೆ.
ಪ್ರಜಾಪ್ರಭುತ್ವ ಅಂದರೆ ಕೇವಲ ಮತ ಹಾಕುವ ಹಕ್ಕು ಅಷ್ಟೇ ಅಲ್ಲ. ಸರ್ಕಾರ ಹಾಗೂ ಸಮಾಜವನ್ನು ಮುನ್ನಡೆಸುವ ಪುರುಷನಿಗೆ ಸರಿಸಮಾನ ಹಕ್ಕು. ಈ ದೇಶದಲ್ಲಿ ಇಂದಿರಾ ಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿಯಂಥ ಮುಖಂಡರ ಹೊರತಾಗಿ ಪ್ರಜಾಪ್ರಭುತ್ವ ಪುರುಷರ ಗುಲಾಮವಾಗಿದೆ. ಧರ್ಮದ ಆವರಣದಲ್ಲಿ ಅದು ಮತ್ತೆ ಅದೇ ರಸ್ತೆಯಲ್ಲಿ ಸಾಗುತ್ತಿದೆ.
ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಹಿಳೆಯರ ಉಪಸ್ಥಿತಿ ಏನೇನೂ ಇಲ್ಲ ಎಂಬಂತಿದೆ. 2014ರಲ್ಲಿ ಸುಷ್ಮಾ ಸ್ವರಾಜ್ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆಗ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡದೇ ವಿದೇಶಾಂಗ ಸಚಿವೆಯ ಸ್ಥಾನದಲ್ಲಿ ವೀಸಾ ಮಂತ್ರಿಯಾಗಿಸಿ, ಮಹಿಳೆಯರಿಗೆ ಯಾವುದೇ ಉನ್ನತ ಹುದ್ದೆ ಇಲ್ಲ ಎನ್ನುವುದನ್ನು ಬಿಂಬಿಸಲಾಯಿತು.
ನಿರ್ಮಲಾ ಸೀತಾರಾಮನ್ ಪ್ರತಿ ವಾಕ್ಯದಲ್ಲಿ ಜಯ್ ಶ್ರೀರಾಮ್ ಅಲ್ಲ, ಜೈ ನರೇಂದ್ರ ಮೋದಿ ಎನ್ನುತ್ತಾರೆ. ಏಕೆಂದರೆ ಅವರ ಅಧಿಕಾರ ಉಳಿಯಬೇಕಿದೆ. ಇದೆಲ್ಲ ಸುಶಿಕ್ಷಿತ, ಸುಂದರ ಸ್ಮಾರ್ಟ್ ಮತ್ತು ಗಳಿಸುವ ಪತ್ನಿಯ ಹಾಗೆ `ಅವರನ್ನು ಕೇಳಿಕೊಂಡು ಹೇಳ್ತೀನಿ,' ಎಂಬಂತಹ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದ ಅಂತಿಮ ಅರ್ಥ ಮಹಿಳೆ ಆಫೀಸಿನಲ್ಲಿರಲಿ, ರಾಜಕೀಯದಲ್ಲಿರಲಿ, ಶಾಲೆಯಲ್ಲಿರಲಿ ಅಥವಾ ಮನೆಯಲ್ಲಿರಲಿ ತನ್ನ ನಿರ್ಧಾರ ತಾನೇ ತೆಗೆದುಕೊಳ್ಳಬೇಕು.
ಮಹಿಳೆಯರಿಗೆ ಪ್ರಜಾಪ್ರಭುತ್ವದ ಲಾಭ ದೊರಕಲಿ ಎಂದು 18 ಹಾಗೂ 19ನೇ ಶತಮಾನದಲ್ಲಿ ಮಹಿಳಾ ಹಾಗೂ ಪುರುಷ ವಿಚಾರವಾದಿಗಳು ಹೋರಾಟ ನಡೆಸಿದರು. ಆದರೆ 20 ಹಾಗೂ 21ನೇ ಶತಮಾನದಲ್ಲಿ ಈ ಹೋರಾಟ ದುರ್ಬಲವಾಯಿತು. ಈಗ ಅಮೆರಿಕಾದ ಮಹಿಳೆಯರು ಗರ್ಭಪಾತ ಕೇಂದ್ರಗಳ ಮುಂದೆ ಧರಣಿ ನಡೆಸುತ್ತಿದ್ದಾರೆ ಮತ್ತು ಭಾರತದ ಕರ್ಮದಲ್ಲಿ ವಿಶ್ವಾಸವಿರಿಸುವ, ಸ್ವತಂತ್ರ ಗುಜರಾತಿ ಮಹಿಳೆಯರು ತಮ್ಮ ಸರ್ವಸ್ವವನ್ನು ಪುರುಷ ಗುರುಗಳಿಗೆ ಸಮರ್ಪಿಸುತ್ತಿದ್ದಾರೆ.