- ರಾಘವೇಂದ್ರ ಅಡಿಗ ಎಚ್ಚೆನ್.

L2 ಅಂದರೆ Latitude, Longitude ಎಂದರ್ಥ.ಎಲ್ಟು ಮುತ್ತಾ' ಚಿತ್ರ ಸಹ ದೇಶದ, ಪರಪಂಚದ ಉದ್ಧಗಲಕ್ಕೂ ಹೆಸರು ಮಾಡಲಿ ಎಂದು ಸ್ವರ ಸಾಧಕಿ ಸಂಗೀತಾ ಕಟ್ಟಿ ಹೇಳಿದರು. .. ಸಂಗೀತ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಸಂಗೀತಾ ಕಟ್ಟಿ ಅವರಿಗೆ 'ಎಲ್ಟು ಮುತ್ತಾ' ಚಿತ್ರತಂಡದ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನೆರವೇರಿತು. ಈ ವೇಳೆ ಸನ್ಮಾನ ಸ್ವೀಕರಿಸಿ ಸಂಗೀತಾ ಕಟ್ಟಿ ಮಾತನಾಡಿದರು

ಸಂಗೀತ ನಿರ್ದೇಶಕ ಮಾತ್ರವಲ್ಲ ಇಡೀ ತಂಡಕ್ಕೆ ಶುಭ ಹಾರೈಕೆಗಳನ್ನು ತಿಳಿಸಬೇಕು. ನನಗೆ ಈಗ ತಾನೆ ನನ್ನ ಗುರುಗಳು ಹೇಳಿದ ಸಂಗೀತದ ಸರಿಗಮ ಅರ್ಥ ಆಗುತ್ತಿದೆ ಎಂದರು. ಅಲ್ಲದೆ ನನ್ನ ಶಿಷ್ಯ ಪ್ರಸನ್ನ ಚಿತ್ರದಲ್ಲಿ ಹಾಡಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಸಂಗೀತಾ ಕಟ್ಟಿ ಮಾಧ್ಯಮ ಹಾಗೂ ವಿಶೇಷವಾಗಿ ಡಿ.ವಿ. ಸುಧೀಂದ್ರ ಅವರನ್ನು ಸ್ಮರಿಸಿದರು.

1000587011

ಉಪ್ಪಿನ ಬೆಟಗೇರಿ ಸ್ವಾಮಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ವಿಭಿನ್ನ ಶೀರ್ಷಿಕೆ ಮತ್ತು ವಿಶಿಷ್ಟ ಕಥಾಹಂದರದ ಮೂಲಕವೇ ಪ್ರಾರಂಭದಿಂದಲೇ ಸಿನಿರಸಿಕರ ಕುತೂಹಲ ಕೆರಳಿಸಿದ್ದ ʻಎಲ್ಟು ಮುತ್ತಾʼ ಚಿತ್ರದ ಆಡಿಯೋ ಬಿಡುಗಡೆ ಈ ಸಂದರ್ಭದಲ್ಲಿ ನೆರವೇರಿತು.ಇದರ ಜೊತೆಗೆ, ಸಿನಿಮಾದ ಟ್ರೇಲರ್ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಜುಲೈ 16ರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಟ್ರೇಲರ್‌ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಲು ಸಜ್ಜಾಗಿದೆ. ವಿಭಿನ್ನ ಕಥೆಯೊಂದನ್ನು ಆಧಾರ ಮಾಡಿಕೊಂಡಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಕಾಕ್ರೋಜ್ ಸುಧೀ, ಯಮುನ ಶ್ರೀನಿಧಿ ಸೇರಿದಂತೆ ಅನೇಕ ಹೊಸಬರನ್ನೂ ಪರಿಚಯಿಸಲಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ