ಸಾಮಾನ್ಯವಾಗಿ ಜನರು ಹಬ್ಬದ ಸಮಯದಲ್ಲಿಯೇ ಹೊಸ ಖರೀದಿ ಅಥವಾ ಯಾವುದಾದರೊಂದು ಹೊಸ ಕೆಲಸದ ಆರಂಭಕ್ಕೆ ಆದ್ಯತೆ ಕೊಡುತ್ತಾರೆ.

ಆದರೆ ಎಷ್ಟೋ ಸಲ ಆರ್ಥಿಕ ಸಂಕಷ್ಟದ ಕಾರಣದಿಂದ ಅವರ ಕನಸು ನನಸಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಬ್ಯಾಂಕ್‌ ಗಳು ನಿಮ್ಮ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು, ಎಂತಹ ಕೆಲವು ಆಫರ್ಸ್‌ ಗಳನ್ನು ಕೊಡುತ್ತವೆಂದರೆ, ನೀವು ಚಿಕ್ಕಪುಟ್ಟ ಹಾಗೂ ದೊಡ್ಡ ಸಾಮಾನುಗಳನ್ನು ಸುಲಭವಾಗಿ ಖರೀದಿಸಬಹುದು ಮತ್ತು ಅಗ್ಗದ ಇಎಂಐನ ಲಾಭ ಪಡೆದುಕೊಳ್ಳಬಹುದು.

ನಾವಿಲ್ಲಿ ಎಂತಹ ಕೆಲವು ಮಾಹಿತಿ ಕೊಡುತ್ತಿದ್ದೇವೆಂದರೆ, ಅವು ಹೂಡಿಕೆಯಲ್ಲಿ ನಿಮಗೆ ನೆರವಾಗಬಹುದು.

10% ಕ್ಯಾಶ್‌ ಬ್ಯಾಕ್‌ ಹಬ್ಬದ ಸಂದರ್ಭದಲ್ಲಿ ಹಲವು ಬ್ಯಾಂಕುಗಳು ಶಾಪಿಂಗ್‌ ಗಾಗಿ 10% ಕ್ಯಾಶ್‌ ಬ್ಯಾಕ್‌ ನ ಆಫರ್‌ ಗಳನ್ನು ಕೊಡುತ್ತವೆ. ಮತ್ತೆ ಕೆಲವು ಬ್ಯಾಂಕುಗಳು ಆನ್‌ ಲೈನ್‌ ಶಾಪಿಂಗ್‌ ವೆಬ್‌ ಸೈಟ್‌ ಗಳ ಜೊತೆ ಟೈಅಪ್‌ ಆಗಿರುತ್ತವೆ. ಈ ಕ್ಯಾಶ್ ಬ್ಯಾಕ್‌ ಸೌಲಭ್ಯ ಸೀಮಿತ ಉತ್ಪನ್ನಗಳ ಮೇಲೆ ಹಾಗೂ ನಿರ್ದಿಷ್ಟ ಮೊತ್ತದ ಮೇಲೆ ಇರುತ್ತದೆ. ಹೀಗಾಗಿ ಶಾಪಿಂಗ್‌ ಮಾಡುವಾಗ ಮಿಟ್‌ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಆಗಲೇ ನೀವು ಆಫರ್‌ ನ ಸರಿಯಾದ ಲಾಭ ಪಡೆಯಲು ಸಾಧ್ಯ.

ಹಣ ಇಲ್ಲದೆಯೇ ಶಾಪಿಂಗ್‌!

ಕೆಲವು ಬ್ಯಾಂಕುಗಳು ಗ್ರಾಹಕರಿಗೆ ಹಬ್ಬದ ಉಡುಗೊರೆ ನೀಡುತ್ತಾ, ಹಣ ಇಲ್ಲದೆಯೇ ಖರೀದಿ ಮಾಡುವ ಅವಕಾಶ ನೀಡುತ್ತವೆ. ಈ ಆಫರ್‌ ನ ಪ್ರಕಾರ, ಗ್ರಾಹಕ ಶಾಪಿಂಗ್‌ ಮಾಡುವಾಗ ಯಾವುದೇ ಹಣ ಕೊಡಬೇಕಾದ ಅಗತ್ಯವಿಲ್ಲ. ಮುಂದಿನ ತಿಂಗಳಿನಿಂದ ಡೆಬಿಟ್‌ ಕಾರ್ಡ್‌ ನಿಂದ ಅದರ ಇಎಂಐ ಶುರುವಾಗುತ್ತದೆ. ಅದನ್ನು ಗ್ರಾಹಕ 6 ರಿಂದ 18 ತಿಂಗಳುಗಳಲ್ಲಿ ತುಂಬಬಹುದಾಗಿದೆ. ಹಣ ಹೇಗೆ ಸಂದಾಯವಾಯಿತು ಎಂಬುದು ನಿಮಗೆ ಗೊತ್ತಾಗುವುದೇ ಇಲ್ಲ.

ಮುಂದಿನ ವರ್ಷ ಪಾವತಿ

ಹಲವು ಬ್ಯಾಂಕುಗಳು ಕಾರು ಖರೀದಿಗೆ ಒಳ್ಳೆಯ ಅವಕಾಶ ಕಲ್ಪಿಸುತ್ತವೆ. ಕಾರಿಗಾಗಿ ಈ ವರ್ಷ ಸಾಲ ತೆಗೆದುಕೊಳ್ಳಿ ಹಾಗೂ ಅದರ ಇಎಂಐಗಳನ್ನು ಮುಂದಿನ ವರ್ಷದಿಂದ ಚುಕ್ತಾ ಮಾಡಬಹುದು. ಮಹಿಳೆಯರಿಗೆ 0.250.50% ಹೆಚ್ಚುವರಿ ರಿಯಾಯ್ತಿ ಕೂಡ ದೊರಕುತ್ತದೆ.

ತಕ್ಷಣವೇ ಸಾಲ

ನೀವು ಬೈಕ್‌ ತೆಗೆದುಕೊಳ್ಳಬೇಕೆಂದು ಕನಸು ಕಾಣುತ್ತಿದ್ದರೆ, ಆ ಕನಸು ಇನ್ನೂ ಈಡೇರದಿದ್ದರೆ ಇಂತಹ ಕೆಲವು ಸ್ಕೀಮುಗಳು ನಿಮಗೆ ಲಾಭಕರವಾಗಿ ಪರಿಣಮಿಸಬಹುದು. ಅದಕ್ಕಾಗಿ ನಿಮಗೆ ಯಾವುದೇ ಡೌನ್‌ ಪೇಮೆಂಟ್‌ ಮಾಡಬೇಕಾಗಿಲ್ಲ ಹಾಗೂ ಯಾವುದೇ ಪ್ರೊಸೆಸಿಂಗ್‌ ಫೀ ಕಟ್ಟಬೇಕಿಲ್ಲ. ಸಾಲ ಮಂಜೂರಾಗುತ್ತಿದ್ದಂತೆ ನಿಮ್ಮ ಖಾತೆಗೆ ಹಣ ಬರುತ್ತದೆ. ಅದಕ್ಕಾಗಿ ಬೈಕ್‌, ಸ್ಕೂಟರ್‌ ಕಂಪನಿಗಳು 2000 ರೂ. ತನಕ ರಿಯಾಯ್ತಿ ಕೂಡ ಕೊಡುತ್ತವೆ.

ಕ್ರೆಡಿಟ್ಕಾರ್ಡ್ ಲಾಭ

ಕೆಲವು ಬ್ಯಾಂಕುಗಳು ಎಂತಹ ಕೆಲವು ಕ್ರೆಡಿಟ್‌ ಕಾರ್ಡ್‌ ಗಳನ್ನು ಲಾಂಚ್‌ ಮಾಡುತ್ತವೆಯೆಂದರೆ, ಅವುಗಳ ಇಎಂಐ ಬಡ್ಡಿದರ ಸಾಕಷ್ಟು ಕಡಿಮೆ ಇರುತ್ತದೆ. ಅಷ್ಟೇ ಅಲ್ಲ, ನಿಮಗೆ 4.50 ಕೋಟಿ ರೂ. ತನಕ ಏರ್‌ ಆ್ಯಕ್ಸಿಡೆಂಟ್‌ ಕವರ್‌ ಕೂಡ ಸಿಗುತ್ತದೆ. ಜೊತೆಗೆ ಶಾಪಿಂಗ್‌ ಮೇಲೆ ಭಾರಿ ರಿಯಾಯ್ತಿ ಕೂಡ.

ಇದರ ಹೊರತಾಗಿ ಕೆಲವು ವಿಶೇಷ ಕ್ರೆಡಿಟ್‌ ಕಾರ್ಡ್‌ ಹೊಂದಿದವರಿಗೆ ಒಂದು ವಿಶೇಷ ಕಾರ್ಡ್‌ ನ್ನು ಕೂಡ ಹೊರತರುತ್ತವೆ. ಅದರನ್ವಯ ಶಾಪಿಂಗ್‌ ಹಾಗೂ ಬಿಲ್ ‌ಮೇಲೆ ಶೇ.30ರ ತನಕ ರಿಯಾಯ್ತಿ ಕೂಡ ದೊರಕುತ್ತದೆ. ಅದಕ್ಕಾಗಿ ವಾರ್ಷಿಕ ಶುಲ್ಕ ಕೊಡಬೇಕಾಗುತ್ತದೆ. ಅದರಲ್ಲಿ ಶೇ.50 ರಷ್ಟು ವಾಪಸ್‌ ದೊರಕುತ್ತದೆ. ಜೊತೆಗೆ ಬ್ಯಾಂಕುಗಳಿಂದ ಬ್ರ್ಯಾಂಡೆಡ್‌ ಗಿಫ್ಟ್ ಕೂಡ ಸಿಗುತ್ತವೆ.

ಸಾಲದ ಬಡ್ಡಿ ದರದಲ್ಲಿ ಕಡಿತ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬ್ಯಾಂಕುಗಳು ರೆಪೊ ರೇಟ್‌ ನೊಂದಿಗೆ ಲಿಂಕ್ಡ್ ಆಗಿರುವ ರೀಟೇಲ್ ಲೋನ್‌ ನ ಬಡ್ಡಿ ದರವನ್ನು ಶೇ.0.25 ರಿಂದ ಹಿಡಿದು 0.10 ತನಕ ಕಡಿಮೆ ಮಾಡುತ್ತವೆ. ಆ ಕಾರಣದಿಂದ ಹೋಮ್ ಲೋನ್, ಆಟೋ ಲೋನ್‌ ಸೇರಿದಂತೆ ಎಲ್ಲ ರಿಟೇಲ್ ಲೋನ್‌ ಗಳು ಅಗ್ಗವಾಗುತ್ತವೆ. ಇಂತಹ ಅವಕಾಶಗಳನ್ನು ಪಡೆದುಕೊಳ್ಳಬಹುದು.

ಹೂಡಿಕೆ ಹೀಗೆ ಮಾಡಿ

ಹೆಚ್ಚಿನ ಜನರು ಹಬ್ಬಕ್ಕಾಗಿ ದುಂದುವೆಚ್ಚ ಮಾಡುತ್ತಾರೆ. ದೀಪಾವಳಿ ಎಂದರೆ ಯಥೇಚ್ಛವಾಗಿ ಖರ್ಚು ಮಾಡುವುದು ಎಂದೇ ಅವರು ಭಾವಿಸಿರುತ್ತಾರೆ. ಅದರಲ್ಲಿ ಅವರು ಬಟ್ಟೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಲೇಟೆಸ್ಟ್ ಗ್ಯಾಜೆಟ್ಸ್ ಮತ್ತು ಚಿನ್ನದ ಖರೀದಿಗೆ ಆದ್ಯತೆ ಕೊಡುತ್ತಾರೆ. ಇಂತಹ ಸ್ಥಿತಿಯಲ್ಲಿ ನೀವು ಹಣವನ್ನು ವ್ಯವಸ್ಥಿತವಾಗಿ ಹೂಡಿಕೆ ಮಾಡಬೇಕು. ಅದರಿಂದ ಮುಂದೆ ನಿಮಗೆ ಸಾಕಷ್ಟು ಲಾಭ ದೊರೆಯಬೇಕು. ನಾವು ನಿಮಗೆ ಅಂತಹ ಕೆಲವು ಹೂಡಿಕೆಗಳ ಬಗ್ಗೆ ತಿಳಿಸುತ್ತೇವೆ.

ಲೋನ್‌ ರೀ ಪೇ ಮಾಡಿ ನಿಮ್ಮ ಕಂಪನಿ ನಿಮಗೆ ಸಾಕಷ್ಟು ಬೋನಸ್‌ ಕೊಟ್ಟಿದ್ದರೆ, ಆ ಮೊತ್ತದಿಂದ ನೀವು ಹಳೆಯ ಸಾಲವನ್ನು ತೀರಿಸಬಹುದು. ಅದರಿಂದ ಹಣ ತೀರಿಸುವ ಒತ್ತಡ ಕಡಿಮೆಯಾಗುತ್ತದೆ ಹಾಗೂ ಟೆನ್ಶನ್‌ ಫ್ರೀಯಾಗಿ ದೀಪಾವಳಿ ಆಚರಿಸಿ. ಇದನ್ನು ತಿಳಿವಳಿಕೆಯುಳ್ಳ ಹೂಡಿಕೆ ಎಂದು ಹೇಳುತ್ತಾರೆ.

ದೀರ್ಘಾವಧಿಯ ಹೂಡಿಕೆ

ನೀವು ಬಹಳ ದಿನಗಳಿಂದ ದೀರ್ಘಾವಧಿಗಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ಪೂರ್ತಿಗೊಳಿಸಿಕೊಳ್ಳಲು ಇದು ಉತ್ತಮ ಸಮಯ. ಇಂತಹ ಹೂಡಿಕೆಯಿಂದ ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು.

ಎಮೆರ್ಜೆನ್ಸಿ ಫಂಡ್‌ : ಇಂದಿನ ಕಾಲಘಟ್ಟದಲ್ಲಿ ನಾವು ಯಾವಾಗ ದುಸ್ಥಿತಿಗೆ ತಲುಪುತ್ತೇವೋ ಹೇಳಲು ಆಗದು. ಹೀಗಾಗಿ ಅಂತಹ ಸ್ಥಿತಿಯನ್ನು ಎದುರಿಸಲು ನಾವು ಮೊದಲಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಹಬ್ಬದ ಸಂದರ್ಭದಲ್ಲಿಯೇ ನೀವು ತುರ್ತುನಿಧಿಯಲ್ಲಿ ಹೂಡಿಕೆ ಮಾಡಿ ಹಾಗೂ ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ನೀಡಿ.

ಗೋಲ್ಡ್ ಇಟಿಎಫ್ನಲ್ಲಿ ಹೂಡಿಕೆ : ಇಟಿಎಫ್‌ ಖರೀದಿಸಿ ಅತ್ಯುತ್ತಮ ಹೂಡಿಕೆ ಮಾಡಬಹುದು. ಇತ್ತೀಚೆಗೆ ಬಹಳಷ್ಟು ಜನರು ಅಂಗಡಿಗೆ ಹೋಗಿ ಚಿನ್ನ ಖರೀದಿಸುವುದರ ಬದಲು ಬೇರೆ ವಿಧಾನಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ. ಹೀಗೆ ಮಾಡುವುದರ ಮೂಲಕ ನೀವು ಪರಂಪರೆಯನ್ನು ನಿಭಾಯಿಸಬಹುದು ಹಾಗೂ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಬಹುದು.

ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ