ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ ಮೂರು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈಗ ಬ್ಯುಸಿಯಾಗಿರುವ ನಟಿ, ಯಾರ ಟೀಕೆಗೂ ಕಿವಿಗೊಡದೆ, ನಗುವಿನಿಂದಲೇ ಉತ್ತರ ಕೊಡುವ ಈ ನಟಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಬಹುಬೇಡಿಕೆಯ ನಟಿ
ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಅರ್ಧ ಡಜನ್ ಸಿನಿಮಾಗಳಿವೆ. ಹೀಗಾಗಿ ಅವರಿಗೆ ಭಾರೀ ಡಿಮ್ಯಾಂಡ್ ಇದೆ.
3000 ಕೋಟಿ ಕಲೆಕ್ಷನ್
ನಟನೆಗಾಗಿ ಮದುವೆಯನ್ನೇ ನಿಲ್ಲಿಸುವ ನಿರ್ಧಾರ ಕೈಗೊಂಡ ರಶ್ಮಿಕಾ ನಿರ್ಧಾರ ಅವರ ಸಿನಿಮಾ ಜೀವನದಲ್ಲಿ ದೊಡ್ಡ ತಿರುವು ನೀಡಿತು. ಇಂದು ನಿರ್ದೇಶಕರು ಕ್ಯೂ ನಿಲ್ಲುವಷ್ಟು ಬ್ಯುಸಿಯಾಗಿದ್ದಾರೆ ರಶ್ಮಿಕಾ.
ಮದುವೆ ಮುರಿದ ನಂತರ ನಟಿಸಿದ ಸಿನಿಮಾಗಳೆಲ್ಲ ಹಿಟ್ ಆಗಿ, ಲಕ್ಕಿ ನಟಿ ಅನ್ನಿಸಿಕೊಂಡ ರಶ್ಮಿಕಾ, ಸತತವಾಗಿ 3 ಪ್ಯಾನ್ ಇಂಡಿಯಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಮೂರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ.
ಈ ಮೂರು ಸಿನಿಮಾಗಳಲ್ಲೂ ರಶ್ಮಿಕಾ ಪಾತ್ರ ಕೇವಲ ಶೇ.20ರಷ್ಟು ಮಾತ್ರ. ಆದರೂ ಜನಮನ ಗೆದ್ದಿದ್ದಾರೆ.
ಹಿಟ್ ಸಿನಿಮಾಗಳು
ರಶ್ಮಿಕಾ ನಟಿಸಿದ ಒಂದು ತಮಿಳು, ಒಂದು ಹಿಂದಿ, ಇನ್ನೊಂದು ತೆಲುಗು ಸಿನಿಮಾ ಹಿಟ್ ಆಗಿವೆ. ವಿಜಯ್ ಜೊತೆ ನಟಿಸಿದ ‘ವಾರಿಸು’ 310 ಕೋಟಿ, ರಣಬೀರ್ ಕಪೂರ್ ಜೊತೆ ನಟಿಸಿದ ‘ಅನಿಮಲ್’ 917 ಕೋಟಿ, ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ 2’ 1800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ. ನಟಿಸಿದ ಈ ಮೂರು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ.
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಸ್ಲಿಪ್ ಆಗಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು. ಒಂದೆರಡು ತಿಂಗಳು ಎದ್ದು ಓಡಾಡದಂತೆ, ಕಾಲಿನ ಮೇಲೆ ಭಾರ ಬಿಡದಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದ ರಶ್ಮಿಕಾ, ಅತ್ತ ಸಲ್ಮಾನ್ಖಾನ್ ಜೊತೆ ಅಭಿನಯದ ಸಿಕಂದರ್ ಸಿನಿಮಾ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.
8 ವರ್ಷಗಳಲ್ಲಿ 16 ಸೂಪರ್‌ಹಿಟ್ :
ರಶ್ಮಿಕಾ ಮಂದಣ್ಣ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು 8 ವರ್ಷಗಳ ಹಿಂದೆ. ಕೇವಲ 8 ವರ್ಷಗಳಲ್ಲಿ 16 ಹಿಟ್ ಚಿತ್ರಗಳನ್ನು ನೀಡಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.
ರಶ್ಮಿಕಾ ಮಂದಣ್ಣ ಗಳಿಕೆ :
ಸಿನಿ ಉದ್ಯಮದಲ್ಲಿರುವ ನಟಿ ರಶ್ಮಿಕಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಿಸಿಕೊಂಡಿದ್ದಾರೆ. 42 ಕೋಟಿ ನಿವ್ವಳ ಆಸ್ತಿ ಹೊಂದಿರುವ ಅವರು, ಪುಷ್ಪಾ 2 ಚಿತ್ರಕ್ಕೆ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.