ನನ್ನ ಮಗು ತಿನ್ನುವುದೇ ಇಲ್ಲ. ಪ್ರತಿಯೊಂದು ತಿಂಡಿಯನ್ನು ನೋಡಿ ಮುಖ ತಿರುಗಿಸುತ್ತದೆ. ರೊಟ್ಟಿ ಪಲ್ಯಗಳಂತೂ ಅದರ ಗಂಟಲಿಗೆ ಇಳಿಯುವುದೇ ಇಲ್ಲ. ನಾನು ಎಷ್ಟೇ ಹೆಲ್ದೀ ಡಿಶ್ ಸಿದ್ಧಪಡಿಸಿದರೂ ಅದು ರುಚಿ ಕೂಡ ನೋಡುವುದಿಲ್ಲ. ಅದರ ಹಿಂದೆಮುಂದೆ ಅಲೆದಾಡಿದರೂ ಅದು ಬಾಯಿಗೆ ಹಾಕಿಕೊಳ್ಳುವುದಿಲ್ಲ. ಯಾವಾಗಲಾದರೊಮ್ಮೆ ಯಾವುದಾದರೂ ತಿಂಡಿಯನ್ನು ತಿಂದರೆ, ಮುಂದಿನ ಸಲ ಅದನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಒಮ್ಮೆ ತರಕಾರಿಯ ರುಚಿ ಅದಕ್ಕೆ ಇಷ್ಟವಾಗುವುದಿಲ್ಲ, ಕೆಲವೊಮ್ಮೆ ಅದರ ಬಣ್ಣ ಹಿಡಿಸುವುದಿಲ್ಲ. ಪ್ರತಿದಿನ ತಿನ್ನುವ ಬಗ್ಗೆ ಅದರ ಲೈಕಿಂಗ್ ಡಿಸ್ ಲೈಕಿಂಗ್ ಬದಲಾಗುತ್ತಾ ಇರುತ್ತದೆ.
ಮಗುವಿನ ಒಂದು ವಿಚಿತ್ರ ಸ್ವಭಾವ ನೋಡಿ. ಫಾಸ್ಟ್ ಫುಡ್, ಮ್ಯಾಗಿ, ಪಾಸ್ತಾ, ಪಿಜ್ಜಾ, ಬರ್ಗರ್ ನಂತಹ ಪದಾರ್ಥಗಳನ್ನು ಯಾವಾಗ ತಿನ್ನಿಸಿದರೂ ಎಷ್ಟು ಬೇಕಾದರೂ ಇಷ್ಟಪಟ್ಟು ತಿನ್ನುತ್ತದೆ.
ಇಂತಹದರಲ್ಲಿ ನಿಮ್ಮ ಫ್ಯಾಮಿಲಿ ಡಾಕ್ಟರ್ ಅದಕ್ಕಾಗಿ ಯಾವುದಾದರೂ ಟಾನಿಕ್ ಬರೆದುಕೊಟ್ಟರೂ, ಆ ಟಾನಿಕ್ ಅದರ ಪೌಷ್ಟಿಕ ಅಗತ್ಯಗಳನ್ನು ಪೂರ್ತಿಗೊಳಿಸುತ್ತದೆ. ಹೀಗೆ ಮಕ್ಕಳ ಕುರಿತಂತೆ ಅಮ್ಮಂದಿರ ಸಮಸ್ಯೆಗಳು ನೂರಾರು. ಇದೇ ಚಿಂತೆಯಲ್ಲಿ ಅವರ ಇಡೀ ದಿನ ಕಳೆದು ಹೋಗುತ್ತದೆ. ನನ್ನ ಮಗು ಎಲ್ಲಿ ನಿಶ್ಶಕ್ತಿಯಿಂದ ಬಳಲುತ್ತದೋ ಎಂಬ ಚಿಂತೆ ಅವರನ್ನು ಕಾಡುತ್ತಿರುತ್ತದೆ. ಒಂದು ಸಂಗತಿ ನಿಮಗೆ ನೆನಪಿರಲಿ, ಮಕ್ಕಳ ಈ ಸಮಸ್ಯೆ ನಾರ್ಮಲ್. ಮಕ್ಕಳಿಗೆ ಊಟ, ತಿಂಡಿ ತಿನ್ನಿಸಲು ಈ ಉಪಾಯಗಳನ್ನು ಅನುಸರಿಸಿದರೆ, ಆರೋಗ್ಯಕರ ಪದಾರ್ಥಗಳನ್ನು ಸುಲಭವಾಗಿ ತಿನ್ನಿಸಬಹುದು.
ಆಹಾರದಲ್ಲಿರುವ ಆಕರ್ಷಣೆ
ಮಕ್ಕಳಿಗೆ ಸಾಧಾರಣ ಹಾಗೂ ಅಷ್ಟೇನೂ ಆಕರ್ಷಣೆಯಿಲ್ಲದ ತಿಂಡಿಗಳು ಇಷ್ಟವಾಗುವುದಿಲ್ಲ. ಯಾವ ತಿಂಡಿಗಳು ವೈವಿಧ್ಯಮಯ ಬಣ್ಣ ಹೊಂದಿರುತ್ತವೆ, ವಿಭಿನ್ನ ಶೇಪ್ಸ್ ಹಾಗೂ ಡಿಸೈನ್ಸ ನಲ್ಲಿರುತ್ತವೆ ಅವು ಮಕ್ಕಳನ್ನು ಆಕರ್ಷಿಸುತ್ತವೆ. ನೀವು ಯಾವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಿಸಲು ಬಯಸುತ್ತೀರೋ, ಅವನ್ನು ಸುಂದರ ರೀತಿಯಲ್ಲಿ ಸರ್ವ್ ಮಾಡಿ. ಒಂದು ವೇಳೆ ನಿಮ್ಮ ಮಗು ಹಣ್ಣು ಹಾಗೂ ಸಲಾಡ್ ನ್ನು ತಿನ್ನಲು ತಕರಾರು ಮಾಡುತ್ತಿದ್ದರೆ, ನೀವು ಅವನ್ನು ಕುಕಿ ಕಟರ್ ನಿಂದ ಕತ್ತರಿಸಿ, ಅವರಿಗೆ ಇಷ್ಟವಾಗುವಂತಹ ಆಕಾರ ಕೊಡಿ.
ನೀವು ಮಕ್ಕಳಿಗೆ ಇಷ್ಟವಾಗುವ ಕುಕಿ ಕಟರ್ಸ್ ಖರೀದಿಸಿ ಅವರಿಗೆ ಆಟ ಆಡ್ತಾ ಆರೋಗ್ಯಕರ ಪದಾರ್ಥಗಳನ್ನು ತಿನ್ನಿಸಬಹುದಾಗಿದೆ. ಆ ಬಳಿಕ ಅವರಿಗೆ ಇಷ್ಟವಾಗುವ ಸಾಸ್ ಹಾಗೂ ಡಿಷ್ ನ ಜೊತೆಗೆ ಸರ್ವ್ ಮಾಡಿ, ನಿಮ್ಮ ಈ ಉಪಾಯ ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥ ತಿನ್ನಿಸಲು ಖಂಡಿತವಾಗಿಯೂ ನೆರವಾಗುತ್ತದೆ.
ಆಫರ್ ಗುಡ್ ಸ್ನ್ಯಾಕ್ಸ್ ಮಕ್ಕಳಿಗೆ ಆಗಾಗ ಹಸಿವೆ ಆಗ್ತಾ ಇರುತ್ತೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆ ಕಾರಣದಿಂದ ಮಕ್ಕಳ ಪೋಷಕರು ಅವರಿಗೆ ಒಮ್ಮೆ ಸ್ನ್ಯಾಕ್ಸ್ ರೂಪದಲ್ಲಿ ಮ್ಯಾಗಿ ಸರ್ವ್ ಮಾಡಿದರೆ, ಮತ್ತೊಮ್ಮೆ ಕುಕೀಸ್, ಇನ್ನೊಮ್ಮೆ ಉಪ್ಪು ಮಿಶ್ರಿತ ಪದಾರ್ಥವನ್ನು ಕೊಡುತ್ತಾರೆ. ಇದರಿಂದಾಗಿ ಮಕ್ಕಳು ಕ್ರಮೇಣ ಆರೋಗ್ಯಕರ ಪದಾರ್ಥಗಳನ್ನು ಬಿಟ್ಟುಬಿಡುತ್ತಾರೆ. ಒಂದು ಸತ್ಯ ಸಂಗತಿ ನಿಮಗೆ ಗೊತ್ತೆ? ಮೇಲ್ಕಂಡ ಪದಾರ್ಥಗಳು ಮಕ್ಕಳಿಗೆ ಪೋಷಕಾಂಶಗಳನ್ನಂತೂ ಕೊಡುವುದಿಲ್ಲ. ಅಂತಹ ತಿಂಡಿಗಳು ಮಕ್ಕಳನ್ನು ಬೊಜ್ಜಿಗೀಡು ಮಾಡುತ್ತವೆ. ಜೊತೆಗೆ ಮಧುಮೇಹ, ಅಲರ್ಜಿಯಂತಹ ರೋಗಗಳಿಗೂ ತುತ್ತಾಗಿಸುತ್ತವೆ. ಏಕೆಂದರೆ ಅಂತಹ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು, ತೈಲದ ಪ್ರಮಾಣ ಅಧಿಕವಾಗಿರುತ್ತದೆ.
ಇಂತಹದರಲ್ಲಿ ನಿಮ್ಮ ಮಗುವಿಗೆ ಹಸಿವಾದರೆ ಕುಕೀಸ್ ನ ಜಾಗದಲ್ಲಿ ಕಲರ್ ಫುಲ್ ವೆಜಿಟೆಬಲ್ ಸ್ಯಾಂಡ್ ವಿಚ್, ಚಿಪ್ಸ್ ನ ಬದಲು ಓಟ್ಸ್ ಅಥವಾ ಸಿರಿಧಾನ್ಯಗಳ ಆಹಾರ ಪದಾರ್ಥಗಳನ್ನು ಸರ್ವ್ ಮಾಡಬಹುದು. ಇದರಿಂದ ಆರೋಗ್ಯಕರ ಆಹಾರ ನೀಡಿದ ತೃಪ್ತಿ ನಿಮಗಿರುತ್ತದಾದರೆ, ಅವರಿಗೆ ಹೊಟ್ಟೆ ತುಂಬಿ ಮೇಲಿಂದ ಮೇಲೆ ತಿನ್ನುವ ಅಪೇಕ್ಷೆ ಉಂಟಾಗುವುದಿಲ್ಲ.
ರೋಗ ನಿರೋಧಕ ಶಕ್ತಿಗೆ ಹಣ್ಣುಗಳ ರಸ : ಮಕ್ಕಳು ಹಣ್ಣುಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ನೀವು ಅವರ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಹೋಮ್ ಮೇಡ್ ಫ್ರೂಟ್ ಜೂಸ್ ಸಿದ್ಧಪಡಿಸಿ ಕೊಡಬಹುದು. ಒಮ್ಮೆ ಕಿತ್ತಳೆ ರಸ, ಪೈನಾಪಲ್ ರಸ ಮತ್ತೊಮ್ಮೆ ಮಿಕ್ಸ್ಡ್ ಫ್ರೂಟ್ ಜೂಸ್ ಮಾಡಿಕೊಡಬಹುದು. ಕೆಲವೊಮ್ಮೆ ಅವರಿಗೆ ತರಕಾರಿಗಳ ರಸ ತಯಾರಿಸಿ ಸಹ ಕೊಡಬಹುದು. ಸಾಮಾನ್ಯವಾಗಿ ಮಕ್ಕಳು ಕ್ಯಾರೆಟ್, ಬೀಟ್ ರೂಟ್, ಟೊಮೇಟೊ ತಿನ್ನಲು ಹಿಂದೇಟು ಹಾಕುತ್ತಾರೆ. ಅಂತಹ ಸಂದರ್ಭದಲ್ಲಿ ತರಕಾರಿಗಳ ರಸವನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಸಿದ್ಧಪಡಿಸಿ ಕೊಡಿ.
ಕೇವಲ ಜೂಸ್ಕೊಟ್ಟರೆ ಸಾಲದು, ಅದನ್ನು ನೀವು ಹೇಗೆ ಪ್ರೆಸೆಂಟ್ ಮಾಡಬೇಕೆಂದರೆ, ಅದನ್ನು ನೋಡುತ್ತಲೇ ಅದನ್ನು ಕುಡಿಯಲು ಮಕ್ಕಳು ತಯಾರಾಗಬೇಕು. ಪಾರದರ್ಶಕ ಗ್ಲಾಸ್ ನಲ್ಲಿ ಆಕರ್ಷಕ ಸ್ಟ್ರಾ ಹಾಕಿ ಕೊಡಿ. ಮಗು ಆಟ ಆಡ್ತಾ ಸ್ಟ್ರಾನಿಂದ ಜೂಸ್ ಹೀರುತ್ತದೆ. ಅದು ಮಗುವನ್ನು ಹೈಡ್ರೇಟ್ ಆಗಿಡುವುದರ ಜೊತೆ ಜೊತೆಗೆ ಅದರ ಪೌಷ್ಟಿಕ ಅಗತ್ಯಗಳನ್ನು ನೀಗಿಸುವ ಕೆಲಸ ಕೂಡ ಮಾಡುತ್ತದೆ.
ಮಿಲ್ಕ್ ವಿತ್ ಕ್ರಿಯೇಟಿವಿಟಿ
ತಾಯಂದಿರು ತಮ್ಮ ಮಕ್ಕಳ ಬೆಳವಣಿಗೆ ಉತ್ತಮವಾಗಲು ಹಾಲು ಕುಡಿಸಲು ಅವರ ಹಿಂದೆ ಮುಂದೆ ಓಡಾಡುತ್ತಿರಬೇಕಾಗುತ್ತದೆ. ಒಂದಿಷ್ಟು ಕ್ರಿಯೇಟಿವಿಟಿ ಮೂಲಕ ಮಕ್ಕಳಿಗೆ ಹಾಲನ್ನು ಸುಲಭವಾಗಿ ಕುಡಿಸಬಹುದು. ಮಕ್ಕಳು ಸಾಧಾರಣ ಹಾಲು ಕುಡಿಯಲು ಇಷ್ಟಪಡದಿದ್ದರೆ, ಅವರಿಗೆ ಸುವಾಸಿತ ಹಾಲು ಕುಡಿಸುವುದರ ಮೂಲಕ ಹಾಲನ್ನು ಅವರ ಇಷ್ಟದ ಲಿಸ್ಟ್ ನಲ್ಲಿ ಸೇರಿಸಬಹುದು. ನೀವು ಚಾಕಲೇಟ್, ಬನಾನಾ ಸ್ಮೂದಿ, ಮ್ಯಾಂಗೋ ಶೇಕ್, ಪೀನಟ್ ಬಟರ್ ಶೇಕ್, ವೆನಿಲಾ ಶೇಕ್, ಚೆರ್ರಿ ಶೇಕ್ ಮಾಡಿಕೊಂಡು ಮೇಲ್ಭಾಗದಲ್ಲಿ ಚಾಕ್ಲೇಟ್ ಪೌಡರ್, ಚಾಕ್ಲೆಟ್ ಸಿರಪ್ ನಿಂದ ಅಲಂಕರಿಸಿ ಸರ್ವ್ ಮಾಡಿ. ನಿಮ್ಮ ಈ ವಿಧಾನ ಮಕ್ಕಳಿಗೆ ಹಾಲು ಕುಡಿಯಲು ಅನಿವಾರ್ಯವಾಗಿಸುತ್ತದೆ. ಇದು ಮಕ್ಕಳ ಪ್ರೋಟೀನ್, ಕ್ಯಾಲ್ಶಿಯಂಗೆ ಸಂಬಂಧಪಟ್ಟ ಅವಶ್ಯಕತೆಗಳನ್ನು ಈಡೇರಿಸಿ ನಿಮ್ಮನ್ನು ನಿಶ್ಚಿಂತರಾಗಿಸುತ್ತದೆ.
ಫೋಕಸ್ ಓನ್ಲಿ ಫುಡ್
ಸಾಮಾನ್ಯವಾಗಿ ಅಮ್ಮಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಅವರಿಗೆ ಟಿವಿ ನೋಡಲು ಅವಕಾಶ ಕೊಡುತ್ತಾರೆ. ಅದರಿಂದಾಗಿ ಮಕ್ಕಳು ತಿನ್ನುವುದಕ್ಕಿಂತ ಹೆಚ್ಚಾಗಿ ಕಾರ್ಟೂನ್ನೋಡಲು ಗಮನ ಕೇಂದ್ರೀಕರಿಸುತ್ತಾರೆ. 1-1 ಬೈಟ್ ನ್ನು ಸಾಕಷ್ಟು ಹೊತ್ತು ಬಾಯಿಯಲ್ಲಿ ಒತ್ತಿ ಹಿಡಿದುಕೊಂಡಿರುತ್ತಾರೆ. ಅದರಿಂದಾಗಿ ಅವರು ತಿನ್ನುವುದರಲ್ಲಿ ಆಸಕ್ತಿ ತೋರಿಸುವುದಿಲ್ಲ ಹಾಲೂ ಅವರಿಗೆ ಆಹಾರದ ರುಚಿ ಕೂಡ ಬರುವುದಿಲ್ಲ. ಇದರ ಜೊತೆಗೆ ಟಿ.ವಿಯಲ್ಲಿ ಬರುವ ಕಡಿಮೆ ಪೌಷ್ಟಿಕಾಂಶ ಇರುವ ಆಹಾರಗಳತ್ತ ಅವರು ಹೆಚ್ಚು ಆಕರ್ಷಿತರಾಗುತ್ತಾರೆ. ಹೀಗಾಗಿ ಅವರ ತಿಂಡಿ ಸಮಯ ಹಾಗೂ ಊಟದ ಸಮಯದಲ್ಲಿ ಅವರಿಗೆ ತಿನ್ನುವ ಕಡೆಯೇ ಹೆಚ್ಚು ಗಮನ ಕೊಡುವಂತೆ ಮಾಡಿ. ಅವರು ಎಷ್ಟು ತಿನ್ನುತ್ತಾರೊ, ಅದರ ರುಚಿ ಅರಿಯುವುದರ ಜೊತೆ ಜೊತೆಗೆ ತಮ್ಮ ಹಸಿವನ್ನು ತಿಳಿದುಕೊಳ್ಳಬೇಕು.
ಹೊಸದನ್ನು ಮಾಡಲು ಕಲಿಸಿ
ಮಕ್ಕಳು ಬೆಳವಣಿಗೆಯ ಹಂತದಲ್ಲಿರುವಾಗ ಅವರಿಗೆ ಏನನ್ನಾದರೂ ಹೊಸದನ್ನು ಮಾಡುವ ಅಪೇಕ್ಷೆ ಇರುತ್ತದೆ. ಅವರ ಈ ಹೊಸತನದ ಅಪೇಕ್ಷೆ ನಿಮಗೆ ಬಹಳ ಉಪಯೋಗಕ್ಕೆ ಬರುತ್ತದೆ. ನೀವು ನಿಮ್ಮ ಮಗುವನ್ನು ಪುಟ್ಟ ಶೆಫ್ ಆಗಿಸಿ. ನಿಮ್ಮದೇ ಉಸ್ತುವಾರಿಯಲ್ಲಿ ಅದಕ್ಕೆ ಚಿಕ್ಕಪುಟ್ಟ ವಸ್ತುಗಳನ್ನು ತರಲು ಹೇಳಿ. ಉದಾಹರಣೆಗೆ ಬ್ಯಾಸ್ಕೆಟ್ ನಿಂದ ಆಲೂಗಡ್ಡೆ ತರಲು ಹೇಳಿ. ಮಗುವಿಗೆ ಬಣ್ಣ ಬಣ್ಣದ ಬೇಳೆಗಳನ್ನು ಬೌಲ್ ನಲ್ಲಿ ಹಾಕಿ ತೋರಿಸಿ. ಬಳಿಕ ಅದರ ಕೈಗಳಲ್ಲಿ ಅವರ ಮೆಚ್ಚಿನ ಸ್ಪೂನ್ ಕೊಟ್ಟು ಚೆನ್ನಾಗಿ ಮಿಕ್ಸ್ ಮಾಡಲು ಹೇಳಿ.
ಬೇಳೆಗಳ ಬಣ್ಣಗಳು ಅದಕ್ಕೆ ತಿನ್ನಲು ಆಕರ್ಷಣೆಯನ್ನುಂಟು ಮಾಡುತ್ತವೆ. ಅದೇ ರೀತಿ ನೀವು ವರ್ಣರಂಜಿತ ತರಕಾರಿ ವ್ಯಂಜನಗಳನ್ನು ತಯಾರಿಸಿ ಅವುಗಳ ಮೇಲೆ ಅವರಿಗಿಷ್ಟವಾಗುವ ಸಾಸ್ ಹಾಕಿ ಸರ್ವ್ ಮಾಡಿ. ಈ ಮಿಕ್ಸ್ ಮರ್ಜ್ ಟೆಸ್ಟ್ ಅವರಿಗೆ ಬಹಳ ಇಷ್ಟವಾಗುತ್ತದೆ ಹಾಗೂ ಕ್ರಮೇಣ ಆಹಾರದ ಬಗೆಗಿನ ಹಿಂದೇಟು ಹಾಕು ಪ್ರವೃತ್ತಿ ಕಡಿಮೆಯಾಗುತ್ತದೆ.
ದಿನ ಹೊಸದನ್ನು ಪ್ರಯತ್ನಿಸಿ : ನಾವು ದಿನ ನೋಡಿದ್ದನ್ನೇ ನೋಡಿ, ತಿಂದದ್ದನ್ನೇ ತಿಂದು ಹೇಗೆ ಬೇಸತ್ತು ಹೋಗುತ್ತೇವೋ, ಅದೇ ರೀತಿ ಮಕ್ಕಳು ಏನನ್ನಾದರೂ ಹೊಸದನ್ನು ವಿಭಿನ್ನವಾದುದನ್ನು ಟ್ರೈ ಮಾಡಲು ಇಚ್ಛಿಸುತ್ತಾರೆ. ಹೀಗಾಗಿ ಅವರ ರುಚಿಯನ್ನು ಬದಲಿಸಲು ಆಗಾಗ ಮ್ಯಾಕ್ರೋನಿ, ಪಾಸ್ತಾ ಮುಂತಾದವುಗಳನ್ನು ಟ್ರೈ ಮಾಡಬಹುದು. ಆದರೆ ಅದಕ್ಕಾಗಿ ನೀವು ವಿಭಿನ್ನವಾಗಿ ಮಾಡಬೇಕಾಗುತ್ತದೆ. ಒಂದು ಸಂಗತಿ ನೆನಪಲ್ಲಿರಲಿ. ನೀವು ಯಾವಾಗಲಾದರೂ ಉಪಯೋಗಿಸುವುದಿದ್ದರೆ ಆಟಾ ಮ್ಯಾಕ್ರೋನಿ, ಪಾಸ್ತಾವನ್ನೇ ಮಾಡಿ. ನೀವು ಇದನ್ನು ಹೆಚ್ಚೆಚ್ಚು ಕಲರ್ ಫುಲ್ ವೆಜಿಟೆಬಲ್ ಗಳ ಜೊತೆ ಮಾಡಿ. ಇದರಿಂದ ಮಗುವಿಗೆ ತನ್ನ ಇಷ್ಟದ ಡಿಶ್ ದೊರಕಿದೆ ಅನಿಸುತ್ತೆ. ಮಗುವಿಗೆ ವಿಟಮಿನ್ಸ್, ಮಿನರಲ್ಸ್ ಕೊಟ್ಟ ತೃಪ್ತಿ ನಿಮಗೆ ಇರುತ್ತೆ. ಅದೇ ರೀತಿ ನೀವು ಪ್ರೋಟೀನ್ ಗಾಗಿ ಮಾರ್ಕೆಟ್ ನಲ್ಲಿ ದೊರೆಯುವ ಕಾರ್ಟೂನ್ ಶೇಪ್ ಎಗ್ ಪ್ಯಾನ್ ನ್ನು ಬಳಸಬಹುದು. ಇದಕ್ಕಾಗಿ ನೀವು ಸ್ವಲ್ಪ ಕ್ರಿಯೇಟಿವಿಟಿ ತೋರಿಸಬೇಕಾದ ಅಗತ್ಯವಿದೆ.
ಸ್ಟಫಿಂಗ್ ನಿಂದ ಭರ್ತಿಯಾಗುವ ಹೊಟ್ಟೆ
ನಿಮ್ಮ ಮಗು ರೊಟ್ಟಿ ತಿನ್ನಲು ಇಷ್ಟಪಡದಿದ್ದರೆ, ನೀವು ಸ್ಟಫಿಂಗ್ ನಿಂದ ಅದಕ್ಕೆ ರೊಟ್ಟಿ ತಿನ್ನುವುದರ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಿ. ಇದಕ್ಕಾಗಿ ನೀವು ಒಮ್ಮೆ ಆಲೂ ಸ್ಟಫ್ಡ್ ಪರೋಟಾ ತಯಾರಿಸಿ, ಮತ್ತೆ ಕೆಲವೊಮ್ಮೆ ಪನೀರ್ ಸ್ಟಫ್ಡ್. ನೀವು ಉಳಿದ ಬೇಳೆ ಸಾಂಬಾರಿನ ಪರೋಟಾ ತಯಾರಿಸಿ. ಅದಕ್ಕೆ ಟೊಮೆಟೊ, ಕೆಚಪ್ ನ ಜೊತೆಗೆ ತಿನ್ನಲು ಕೊಡಬಹುದು. ಯಾವುದೇ ಮಗು ಚಾಕ್ಲೆಟ್ ಇಷ್ಟಪಡುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ರೊಟ್ಟಿಗೆ ಚಾಕ್ಲೆಟ್ ಸಿರಪ್ ಹಾಕಿ ಕೊಟ್ಟು ಅದಕ್ಕೆ ತಿನ್ನಲು ಪ್ರೇರೇಪಿಸಬಹುದು. ಅದು ಮಗುವಿಗೆ ಪಿಜ್ಜಾ ತಿಂದಂತೆ ಭಾಸವಾಗುತ್ತದೆ. ನೀವು ಪಿಜ್ಜಾದ ರೂಪದಲ್ಲಿ ಪೌಷ್ಟಿಕಾಂಶ ದೊರಕಿಸಿ ಕೊಡುತ್ತಿರುವಿರಿ.
ನೋ ಆಯ್ಲೀ ಫುಡ್
ಭಾರತೀಯ ಪರಂಪರೆಯ ಕುಟುಂಬಗಳಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ತುಪ್ಪದಲ್ಲಿ ಮಾಡಿದ ತಿಂಡಿಗಳನ್ನು ಕೊಡಲಾಗುತ್ತದೆ. ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಆದರೆ ಅದರಿಂದ ಮಗುವಿನ ಹಸಿವು ಕಡಿಮೆಯಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಅದರ ಬದಲು ಮಕ್ಕಳಿಗೆ ಡೇರಿ ಉತ್ಪನ್ನಗಳನ್ನು ಕೊಡುವುದರ ಬಗ್ಗೆ ಆದ್ಯತೆ ಕೊಡಿ.
– ಪಾರ್ವತಿ
ಈ ಸಂಗತಿಗಳ ಬಗ್ಗೆ ಗಮನವಿರಲಿ
ವಯಸ್ಸು ಹೆಚ್ಚುತ್ತಾ ಹೋದಂತೆ ಮಕ್ಕಳ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಇಂದು ಅದಕ್ಕೆ ಇಷ್ಟವಾದದ್ದು, ನಾಳೆ ಅದಕ್ಕೆ ಇಷ್ಟವಾಗುವುದಿಲ್ಲ. ಆದಾಗ್ಯೂ ನೀವು ಸೋಲು ಒಪ್ಪಬಾರದು. ಏಕೆಂದರೆ ರುಚಿ ಬದಲಾಗುತ್ತಿರುತ್ತದೆ.
ಮಗುವಿಗೆ ತಿನ್ನಿಸಬೇಕೆಂದು ನೀವು ಸ್ವೀಟ್ ನ್ನು ಕೊಡಬೇಡಿ. ಏಕೆಂದರೆ ಅದು ಮಗುವಿಗೆ ಸ್ವೀಟ್ ಕ್ರೇವಿಂಗ್ ನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಎಂದಾದರೊಮ್ಮೆ ಅದು ಸರಿ. ಅದರ ಬದಲು ನೀವು ಮಗುವಿಗೆ ಯೋಗರ್ಟ್ ತಿನ್ನಿಸಿ. ಏಕೆಂದರೆ ಅದು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ.
ಆಹಾರದಲ್ಲಿ ಹೆಚ್ಚು ಮಸಾಲೆಗಳನ್ನು ಬಳಸಬೇಡಿ. ಏಕೆಂದರೆ ಮಕ್ಕಳು ಮಸಾಲೆ ಹಾಗೂ ಆಹಾರಗಳಿಂದ ಬರುವ ತೀವ್ರ ವಾಸನೆಯ ಕಾರಣದಿಂದ ಆಹಾರ ಇಷ್ಟಪಡುವುದಿಲ್ಲ.
ಮಗುವಿಗೆ ತೀವ್ರ ಹಸಿವಾದಾಗ ಅದಕ್ಕೆ ಎಲ್ಲ ಪದಾರ್ಥಗಳನ್ನು ತಿನ್ನಿಸಲು ಪ್ರಯತ್ನಿಸಿ. ಏಕೆಂದರೆ ಹಸಿವೆಯಿಂದಾಗಿ ಮಗು ಹಿಂದೆ ಬೇಡ ಎಂದಿದ್ದನ್ನು ಕೂಡ ತಿನ್ನುತ್ತದೆ. ತೀವ್ರ ಹಸಿವಿನ ಸಂದರ್ಭದಲ್ಲಿ ಅದು ಆ ಬಗ್ಗೆ ಯೋಚಿಸಲು ಹೋಗುವುದಿಲ್ಲ.
ಮಗುವಿಗೆ ಯಾವಾಗಲೂ ಚಿಕ್ಕ ಚಿಕ್ಕ ತುತ್ತುಗಳನ್ನಾಗಿ ತಿನ್ನಿಸಿ.