ಮದನ್‌ ಹಾಗೂ ಮಂಜುಳಾರ ಮದುವೆಯಾಗಿ 2 ವರ್ಷಗಳೇ ಕಳೆದಿವೆ. ಮದನ್‌ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟು, ಆಫೀಸಿನಿಂದ ಬರುವ ಹೊತ್ತಿಗೆ ಸಂಜೆ 7 ಗಂಟೆ ಆಗುತ್ತಿತ್ತು. ಅವನ ಮೈಮನವೆಲ್ಲ ದಣಿದು ಹೋಗಿರುತ್ತಿತ್ತು.

ಬೆಳಗ್ಗೆಯಿಂದ ಕಾಯುತ್ತಿದ್ದ ಅವನ ಹೆಂಡತಿ ಮಂಜುಳಾ ಮದನ್‌ ಜೊತೆ ಏನಾದರೂ ಮಾತನಾಡಲು ಪ್ರಯತ್ನ ಮಾಡಿದರೆ ಸಾಕು, ಅವನು ಮೂಡ್‌ ಕೆಟ್ಟು ಹೋದಂತೆ ವರ್ತಿಸುತ್ತಿದ್ದ.

ಗಂಡನ ಈ ರೀತಿಯ ವರ್ತನೆಯಲ್ಲಿ ಮಂಜುಳಾ ಅವನ ಜೊತೆಗೆ ಅವಶ್ಯವಿದ್ದಷ್ಟು ಮಾತ್ರ ಮಾತನಾಡುತ್ತಾಳೆ. ಇದರ ಪರಿಣಾಮ ರಾತ್ರಿ ಬೆಡ್‌ ಮೇಲೂ ಗೋಚರಿಸುತ್ತದೆ. ದಣಿವಿನ ಕಾರಣದಿಂದ ಮದನ್‌ ಅರಿವಿಲ್ಲದವನಂತೆ ಮಲಗಿಬಿಡುತ್ತಾನೆ. ಮಂಜುಳಾ ಮಗ್ಗಲು ಬದಲಿಸುತ್ತಾ ವೇದನೆ ಅನುಭವಿಸುತ್ತಾಳೆ.

ಮದುವೆಯ ಬಳಿಕ ವ್ಯಕ್ತಿಯೊಬ್ಬನ ಸೆಕ್ಸ್ ಲೈಫ್‌ ನಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಹಾಗೆ ನೋಡಿದರೆ, ಅವು ಸಾಮಾನ್ಯವಾಗಿರುತ್ತವೆ. ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿದ್ದುಕೊಂಡು ಕೆಲಸ ಕಾರ್ಯಗಳನ್ನು ಮುಗಿಸಿ ಗಂಡನಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಗಂಡ ಮನೆಗೆ ಬಂದಾಗ ಅವನ ಮೂಡ್‌ ಕೆಟ್ಟು ಹೋಗಿರುತ್ತದೆ ಅಥವಾ ಅವನು ಸಿಕ್ಕಾಪಟ್ಟೆ ದಣಿದು ಹೋಗಿರುತ್ತಾನೆ. ಇಂಹತದರಲ್ಲಿ  ನಿಮಗೆ ನಿಮ್ಮ ಬಗ್ಗೆ ಗಂಡನ ಆಕರ್ಷಣೆ ಕಡಿಮೆಯಾಗಿದೆ ಎನಿಸುತ್ತದೆ.

ದಣಿವು ಹಾಗೂ ಆಫೀಸಿನ ಕೆಲಸದ ಒತ್ತಡದಲ್ಲಿ ಅವರು ಸೆಕ್ಸ್ ಬಗ್ಗೆ ಅಷ್ಟೊಂದು ಉತ್ಸಾಹ ತೋರಿಸುವುದಿಲ್ಲ. ಆಗ ಅವನು ಯಾರೊಂದಿಗೊ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬುದರತ್ತ ಬೆರಳು ತೋರಿಸುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡ ಹೆಂಡತಿಯ ಮಧ್ಯೆ ಪ್ರೀತಿಯ ಬದಲು ಒತ್ತಡ ಮನೆ ಮಾಡುತ್ತದೆ.

ಗಂಡನ ಕೆಟ್ಟು ಹೋದ ಮೂಡ್‌ ಸರಿಪಡಿಸಲು ಹಾಗೂ ಸೆಕ್ಸ್ ಲೈಫ್‌ ನ್ನು ಖುಷಿದಾಯಕಗೊಳಿಸಲು ಕೆಲವು ಉಪಾಯಗಳನ್ನು ಗಮನಿಸುವುದಾದರೆ, ನಿಮ್ಮ ಸಂಗಾತಿಗೆ ನೀವು ಮೂಡ್‌ ನಲ್ಲಿದ್ದೀರಿ ಎಂಬುದನ್ನು ತಿಳಿಸಬಹುದು. ಇನ್ನೊಂದು ವಿಷಯ ಸೆಕ್ಸ್ ನ ಆರಂಭ ಪುರುಷರಿಂದಲೇ ಆಗಬೇಕು ಎನ್ನುವುದು ಸರಿಯಲ್ಲ.

ಸೆಕ್ಸ್ ನಲ್ಲಿ ನೀವು ಹೆಜ್ಜೆ ಇಡಿ

ಸಾಮಾನ್ಯವಾಗಿ ಸೆಕ್ಸ್ ನಲ್ಲಿ ಮುಂದಡಿ ಇಡಲು ಹೆಂಡತಿಯರು ಹಿಂದೆ ಇರುತ್ತಾರೆ. ಗಂಡಂದಿರೇ ಸೆಕ್ಸ್ ನ ಆರಂಭ ಮಾಡಬೇಕು ಎಂದುಕೊಳ್ಳುತ್ತಾರೆ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ನೀವು ಗಂಡನ ಜೊತೆ ಹಾಸಿಗೆಯಲ್ಲಿದ್ದಾಗ, ಅವನನ್ನು ನಿಮ್ಮತ್ತ ಆಕರ್ಷಿತಗೊಳಿಸಲು, ನೀವು ಸೆಕ್ಸ್ ನ ಆರಂಭಕ್ಕೆ ಸಂಕೋಚ ಮಾಡದಿರಿ. ಅದಕ್ಕಾಗಿ ಅವನೇ ಮುಂದಾಗಲಿ ಎಂದು ಕಾಯಬೇಡಿ.

ನಿಮ್ಮ ಪತಿಯ ಜೊತೆಗೆ ವಿಶಿಷ್ಟ ರೀತಿಯಲ್ಲಿ ಅಂತರಂಗದ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಸೆಕ್ಸ್ ನ್ನು ಯಾರು ಆರಂಭಿಸಬೇಕೆಂಬ ಬಗ್ಗೆ ಪ್ರಸ್ತಾಪವಾದಾಗ, ನಿಮ್ಮ ದೇಹ ಎಲ್ಲಕ್ಕೂ ದೊಡ್ಡ ಅಸ್ತ್ರವಾಗಬೇಕು.

ನೀವು ನಿಮ್ಮ ಪತಿಯನ್ನು ಹಿಂಭಾಗದಿಂದ ತಬ್ಬಿಕೊಳ್ಳಿ. ಅವನ ಕಿವಿಯನ್ನು ಪ್ರೀತಿಯಿಂದ ಕಚ್ಚುವುದರ ಮೂಲಕ ಆರಂಭಿಸಬೇಕು. ಸಂವೇದನಾಶೀಲ ಭಾಗದ ಮೇಲೆ ಕಿಸ್‌ ಮಾಡಿ ಹಾಗೂ ನಿಮ್ಮ ದೇಹವನ್ನು ಅವನ ಮೇಲೆ ಹೇಗೆ ಬಾಗಿಸಬೇಕೆಂದರೆ, ಅವನಿಗೆ ಏನೂ ಮಾತನಾಡದೆಯೇ ಸಮಾಗಮದ ವಾತಾವರಣ ಸೃಷ್ಟಿಯಾಗಿರುವುದು ಅನುಭವಕ್ಕೆ ಬರಬೇಕು. ನಿಮ್ಮ ಮುಖಾಂತರ ಆರಂಭವಾದ ಸೆಕ್ಸ್ ನ ಹೆಜ್ಜೆ ನಿಮ್ಮ ಪತಿಯ ಮೂಡ್‌ ನ್ನು ಕ್ಷಣಾರ್ಧದಲ್ಲಿಯೇ ಬದಲಿಸಿಬಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ