ನನ್ನ ಮಗು ತಿನ್ನುವುದೇ ಇಲ್ಲ. ಪ್ರತಿಯೊಂದು ತಿಂಡಿಯನ್ನು ನೋಡಿ ಮುಖ ತಿರುಗಿಸುತ್ತದೆ. ರೊಟ್ಟಿ ಪಲ್ಯಗಳಂತೂ ಅದರ ಗಂಟಲಿಗೆ ಇಳಿಯುವುದೇ ಇಲ್ಲ. ನಾನು ಎಷ್ಟೇ ಹೆಲ್ದೀ ಡಿಶ್ ಸಿದ್ಧಪಡಿಸಿದರೂ ಅದು ರುಚಿ ಕೂಡ ನೋಡುವುದಿಲ್ಲ. ಅದರ ಹಿಂದೆಮುಂದೆ ಅಲೆದಾಡಿದರೂ ಅದು ಬಾಯಿಗೆ ಹಾಕಿಕೊಳ್ಳುವುದಿಲ್ಲ. ಯಾವಾಗಲಾದರೊಮ್ಮೆ ಯಾವುದಾದರೂ ತಿಂಡಿಯನ್ನು ತಿಂದರೆ, ಮುಂದಿನ ಸಲ ಅದನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಒಮ್ಮೆ ತರಕಾರಿಯ ರುಚಿ ಅದಕ್ಕೆ ಇಷ್ಟವಾಗುವುದಿಲ್ಲ, ಕೆಲವೊಮ್ಮೆ ಅದರ ಬಣ್ಣ ಹಿಡಿಸುವುದಿಲ್ಲ. ಪ್ರತಿದಿನ ತಿನ್ನುವ ಬಗ್ಗೆ ಅದರ ಲೈಕಿಂಗ್ ಡಿಸ್ ಲೈಕಿಂಗ್ ಬದಲಾಗುತ್ತಾ ಇರುತ್ತದೆ.
ಮಗುವಿನ ಒಂದು ವಿಚಿತ್ರ ಸ್ವಭಾವ ನೋಡಿ. ಫಾಸ್ಟ್ ಫುಡ್, ಮ್ಯಾಗಿ, ಪಾಸ್ತಾ, ಪಿಜ್ಜಾ, ಬರ್ಗರ್ ನಂತಹ ಪದಾರ್ಥಗಳನ್ನು ಯಾವಾಗ ತಿನ್ನಿಸಿದರೂ ಎಷ್ಟು ಬೇಕಾದರೂ ಇಷ್ಟಪಟ್ಟು ತಿನ್ನುತ್ತದೆ.
ಇಂತಹದರಲ್ಲಿ ನಿಮ್ಮ ಫ್ಯಾಮಿಲಿ ಡಾಕ್ಟರ್ ಅದಕ್ಕಾಗಿ ಯಾವುದಾದರೂ ಟಾನಿಕ್ ಬರೆದುಕೊಟ್ಟರೂ, ಆ ಟಾನಿಕ್ ಅದರ ಪೌಷ್ಟಿಕ ಅಗತ್ಯಗಳನ್ನು ಪೂರ್ತಿಗೊಳಿಸುತ್ತದೆ. ಹೀಗೆ ಮಕ್ಕಳ ಕುರಿತಂತೆ ಅಮ್ಮಂದಿರ ಸಮಸ್ಯೆಗಳು ನೂರಾರು. ಇದೇ ಚಿಂತೆಯಲ್ಲಿ ಅವರ ಇಡೀ ದಿನ ಕಳೆದು ಹೋಗುತ್ತದೆ. ನನ್ನ ಮಗು ಎಲ್ಲಿ ನಿಶ್ಶಕ್ತಿಯಿಂದ ಬಳಲುತ್ತದೋ ಎಂಬ ಚಿಂತೆ ಅವರನ್ನು ಕಾಡುತ್ತಿರುತ್ತದೆ. ಒಂದು ಸಂಗತಿ ನಿಮಗೆ ನೆನಪಿರಲಿ, ಮಕ್ಕಳ ಈ ಸಮಸ್ಯೆ ನಾರ್ಮಲ್. ಮಕ್ಕಳಿಗೆ ಊಟ, ತಿಂಡಿ ತಿನ್ನಿಸಲು ಈ ಉಪಾಯಗಳನ್ನು ಅನುಸರಿಸಿದರೆ, ಆರೋಗ್ಯಕರ ಪದಾರ್ಥಗಳನ್ನು ಸುಲಭವಾಗಿ ತಿನ್ನಿಸಬಹುದು.
ಆಹಾರದಲ್ಲಿರುವ ಆಕರ್ಷಣೆ
ಮಕ್ಕಳಿಗೆ ಸಾಧಾರಣ ಹಾಗೂ ಅಷ್ಟೇನೂ ಆಕರ್ಷಣೆಯಿಲ್ಲದ ತಿಂಡಿಗಳು ಇಷ್ಟವಾಗುವುದಿಲ್ಲ. ಯಾವ ತಿಂಡಿಗಳು ವೈವಿಧ್ಯಮಯ ಬಣ್ಣ ಹೊಂದಿರುತ್ತವೆ, ವಿಭಿನ್ನ ಶೇಪ್ಸ್ ಹಾಗೂ ಡಿಸೈನ್ಸ ನಲ್ಲಿರುತ್ತವೆ ಅವು ಮಕ್ಕಳನ್ನು ಆಕರ್ಷಿಸುತ್ತವೆ. ನೀವು ಯಾವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಿಸಲು ಬಯಸುತ್ತೀರೋ, ಅವನ್ನು ಸುಂದರ ರೀತಿಯಲ್ಲಿ ಸರ್ವ್ ಮಾಡಿ. ಒಂದು ವೇಳೆ ನಿಮ್ಮ ಮಗು ಹಣ್ಣು ಹಾಗೂ ಸಲಾಡ್ ನ್ನು ತಿನ್ನಲು ತಕರಾರು ಮಾಡುತ್ತಿದ್ದರೆ, ನೀವು ಅವನ್ನು ಕುಕಿ ಕಟರ್ ನಿಂದ ಕತ್ತರಿಸಿ, ಅವರಿಗೆ ಇಷ್ಟವಾಗುವಂತಹ ಆಕಾರ ಕೊಡಿ.
ನೀವು ಮಕ್ಕಳಿಗೆ ಇಷ್ಟವಾಗುವ ಕುಕಿ ಕಟರ್ಸ್ ಖರೀದಿಸಿ ಅವರಿಗೆ ಆಟ ಆಡ್ತಾ ಆರೋಗ್ಯಕರ ಪದಾರ್ಥಗಳನ್ನು ತಿನ್ನಿಸಬಹುದಾಗಿದೆ. ಆ ಬಳಿಕ ಅವರಿಗೆ ಇಷ್ಟವಾಗುವ ಸಾಸ್ ಹಾಗೂ ಡಿಷ್ ನ ಜೊತೆಗೆ ಸರ್ವ್ ಮಾಡಿ, ನಿಮ್ಮ ಈ ಉಪಾಯ ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥ ತಿನ್ನಿಸಲು ಖಂಡಿತವಾಗಿಯೂ ನೆರವಾಗುತ್ತದೆ.
ಆಫರ್ ಗುಡ್ ಸ್ನ್ಯಾಕ್ಸ್ ಮಕ್ಕಳಿಗೆ ಆಗಾಗ ಹಸಿವೆ ಆಗ್ತಾ ಇರುತ್ತೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆ ಕಾರಣದಿಂದ ಮಕ್ಕಳ ಪೋಷಕರು ಅವರಿಗೆ ಒಮ್ಮೆ ಸ್ನ್ಯಾಕ್ಸ್ ರೂಪದಲ್ಲಿ ಮ್ಯಾಗಿ ಸರ್ವ್ ಮಾಡಿದರೆ, ಮತ್ತೊಮ್ಮೆ ಕುಕೀಸ್, ಇನ್ನೊಮ್ಮೆ ಉಪ್ಪು ಮಿಶ್ರಿತ ಪದಾರ್ಥವನ್ನು ಕೊಡುತ್ತಾರೆ. ಇದರಿಂದಾಗಿ ಮಕ್ಕಳು ಕ್ರಮೇಣ ಆರೋಗ್ಯಕರ ಪದಾರ್ಥಗಳನ್ನು ಬಿಟ್ಟುಬಿಡುತ್ತಾರೆ. ಒಂದು ಸತ್ಯ ಸಂಗತಿ ನಿಮಗೆ ಗೊತ್ತೆ? ಮೇಲ್ಕಂಡ ಪದಾರ್ಥಗಳು ಮಕ್ಕಳಿಗೆ ಪೋಷಕಾಂಶಗಳನ್ನಂತೂ ಕೊಡುವುದಿಲ್ಲ. ಅಂತಹ ತಿಂಡಿಗಳು ಮಕ್ಕಳನ್ನು ಬೊಜ್ಜಿಗೀಡು ಮಾಡುತ್ತವೆ. ಜೊತೆಗೆ ಮಧುಮೇಹ, ಅಲರ್ಜಿಯಂತಹ ರೋಗಗಳಿಗೂ ತುತ್ತಾಗಿಸುತ್ತವೆ. ಏಕೆಂದರೆ ಅಂತಹ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು, ತೈಲದ ಪ್ರಮಾಣ ಅಧಿಕವಾಗಿರುತ್ತದೆ.