ಉದ್ಯೋಗಸ್ಥ ತಾಯಂದಿರ ವಿಷಯ ಬಂದಾಗ, ಎಲ್ಲರಿಗೂ ಹೊಳೆಯುವುದೆಂದರೆ ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಸತತ ದುಡಿಯುವ ಒಬ್ಬ ಹೆಣ್ಣಿನ ಚಿತ್ರ ಮುಂದೆ ಬರುತ್ತದೆ. ಬೆಳಗ್ಗೆ ಎದ್ದೊಡನೆ ತನ್ನ ಪ್ರಾತಃವಿಧಿ ಮುಗಿಸಿ, ಮನೆಯವರಿಗಾಗಿ ಕಾಫಿ, ತಿಂಡಿ ರೆಡಿ ಮಾಡುವುದೇ ಅವಳ ಮೊದಲ ಆದ್ಯತೆ ಆಗಿರುತ್ತದೆ. ನಂತರ ಊಟ, ಎಲ್ಲರ ಬಾಕ್ಸ್ ರೆಡಿ ಮಾಡಿ ತಾನು ಕೆಲಸಕ್ಕೆ ಹೊರಡಲು ಬೇಗ ಬೇಗ ಸಿದ್ಧಳಾಗಿ ಆಫೀಸಿಗೆ ದೌಡಾಯಿಸುತ್ತಾಳೆ. ಯಥಾಪ್ರಕಾರ ಸಂಜೆ ಮನೆಗೆ ಬಂದ ತಕ್ಷಣ ಮಕ್ಕಳ ತಿಂಡಿ, ಕಾಫಿ, ಅವರ ಹೋಂವರ್ಕ್‌ ಮುಗಿಸಿ ರಾತ್ರಿ ಅಡುಗೆಯ ಧಾವಂತ ತಪ್ಪಿದ್ದಲ್ಲ. ಊಟ ಮಾಡಿ ಮಲಗುವಷ್ಟರಲ್ಲಿ 11 ಗಂಟೆ. ಮತ್ತೆ ಮರುದಿನ 5 ಗಂಟೆಗೆ ಎದ್ದರೆ ಇದೇ ಪುನರಾರ್ತನೆ!

ಈ ಮಧ್ಯೆ ಅವಳು ಮನೆಯ ಹಿರಿಯರ ಆರೋಗ್ಯ, ಹಾಸ್ಪಿಟಲ್ ವಿಸಿಟ್ಸ್, ಹಬ್ಬ ಹರಿದಿನ, ಮಕ್ಕಳ ಪೇರೆಂಟ್ಸ್ ಮೀಟಿಂಗ್‌, ಅವುಗಳ ರೋಗ ರುಜಿನ.... ಇದೆಲ್ಲದರ ಮಧ್ಯೆ ಎಲ್ಲಿಂದ ಬರಬೇಕು, ಮನೆಯವರಿಗಲ್ಲದೆ ತನಗಾಗಿ ಕ್ವಾಲಿಟಿ ಟೈಂ ಬಾಣಂತನ ಮುಗಿಸಿ ಆಫೀಸಿಗೆ ಹೊರಟ ದಿನದಿಂದಲೇ ವರ್ಕಿಂಗ್‌ ಮದರ್ಸ್‌ ತಮಗೆ ದಿನದ 24 ಗಂಟೆಗಳಲ್ಲಿ ಕೆಲವು ನಿಮಿಷಗಳನ್ನೂ ಪ್ರತ್ಯೇಕ ತನಗಾಗಿ ವಿನಿಯೋಗಿಸಿಕೊಳ್ಳುವಂತಿಲ್ಲ. ಈಗಿನ ಕೋವಿಡ್‌ ಮಹಾಮಾರಿಯಂತೂ ಅವರ ಈ ಕಷ್ಟಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ಈಗ ಮಹತ್ವಾಕಾಂಕ್ಷಿ ಹೆಂಗಸರು ತಮ್ಮ ಕೆರಿಯರ್‌ ನ ಜೊತೆಗೆ ಮನೆಮಂದಿಯ ಆರೋಗ್ಯ ಮಾತ್ರವಲ್ಲದೆ, ಮನೆಯನ್ನು ಆರೋಗ್ಯದ ದೃಷ್ಟಿಯಿಂದ ದುಪ್ಪಟ್ಟು ಶುಚಿಯಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ಉದ್ಯೋಗಸ್ಥ ತಾಯಿ ಹಿಂದೆಲ್ಲ ಶತಪ್ರಯತ್ನ ಪಟ್ಟು ತನಗಾಗಿ ಕೆಲವು ನಿಮಿಷ ಬಿಡುವು ಮಾಡಿಕೊಳ್ಳಬಹುದಿತ್ತೇನೋ.... ಆದರೆ ಕೊರೋನಾ ಬಂದ ಮೇಲೆ ಉಸಿರಾಡಲಿಕ್ಕೂ ಪುರಸತ್ತು ಇಲ್ಲವಾಗಿದೆ. ಅವಳ ಈ ರೊಟೀನ್‌ ಅವಳ ಮನೆಯವರಿಗೆ ಅತ್ಯಗತ್ಯ. ಆದರೆ ಅದೇ ಮುಂದೆ ಅವಳ ಭವಿಷ್ಯಕ್ಕೆ ಮುಳುವಾಗಬಾರದು.

ಹೆಣ್ಣು ಸಂಸಾರದ ಕಣ್ಣು. ಅಂಥ ಕಣ್ಣಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದರೆ ಮುಂದೆ ಅದರ ದೃಷ್ಟಿ ಚೆನ್ನಾಗಿದ್ದೀತೇ? ಆದ್ದರಿಂದ ತಾಯಿ ಆದವಳು ವರ್ಕಿಂಗ್‌ ಇರಲಿ ಬಿಡಲಿ, ಅವಳು ತನಗಾಗಿ ಒಂದಿಷ್ಟು ಸಮಯ ಅಂದ್ರೆ ಕ್ವಾಲಿಟಿ ಟೈಂ ಉಳಿಸಿಕೊಂಡರೆ, ತನಗಾಗಿ ಒಂದಿಷ್ಟು ಕಾಳಜಿ ತೋರಿಸಿಕೊಂಡರೆ, ಅವಳ ಮುಂದಿನ ಬಾಳು ಬೆಳಗೀತು.

ವಿಷಯ ದೈಹಿಕ ಫಿಟ್ನೆಸ್‌ ಅಥವಾ ಮಾನಸಿಕ ಆರೋಗ್ಯದ ಕುರಿತಾಗಿರಲಿ, ಡಾಕ್ಟರ್ಸ್‌ ಸಹ ಹೆಂಗಸರಿಗೆ ಸದಾ ತಮ್ಮ ವೈಯಕ್ತಿಕ ಕಾಳಜಿ ವಹಿಸುವಂತೆ ಸಲಹೆ ನೀಡುತ್ತಾರೆ.

ಹೆಲ್ದಿ ಆಹಾರ ನಿಮಗಿರಲಿ

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಹೆಂಗಸರು ವಯಸ್ಸಾದವರು, ಬೆಳೆಯುತ್ತಿರುವ ಮಕ್ಕಳು ಇತರರ ದೃಷ್ಟಿಯಿಂದ ಹೆಲ್ದಿ ಆಹಾರ ತಯಾರಿಸುತ್ತಾರೆ. ಆದರೆ ತಮ್ಮದೇ ಆಹಾರದ ವಿಷಯ ಬಂದಾಗ, ತಮ್ಮ ದೇಹದ ಕುರಿತಾಗಿ ಅವರು ಕಿಂಚಿತ್ತೂ ಗಮನ ವಹಿಸದೆ, ತಂಗಳೋ ಯಾವುದೋ.... ಉಳಿದಿರುವುದನ್ನು ತಿಂದು ಸುಮ್ಮನಾಗುತ್ತಾರೆ.

ಆದರೆ ವೈದ್ಯರು ಹೇಳುವುದೆಂದರೆ, ಪ್ರತಿ ವಯಸ್ಸಿನ ಹೆಂಗಸರಿಗೂ ಪೌಷ್ಟಿಕ ಆಹಾರ ಅತ್ಯಗತ್ಯ. ಕ್ಯಾಲ್ಶಿಯಂ, ಕಬ್ಬಿಣಾಂಶಗಳ ಅಗತ್ಯ ಪ್ರತಿ ವಯಸ್ಸಿನ ಹೆಂಗಸಿಗೂ ಇದೆ. ಹೀಗಾಗಿ ಇಂತಹ ಪೌಷ್ಟಿಕಾಂಶಗಳಿರು ಆಹಾರ ಅಂದ್ರೆ ಪಾಲಕ್‌ ಸೊಪ್ಪು, ಬ್ರೋಕ್ಲಿ, ಬೀಟ್‌ ರೂಟ್‌, ಸ್ಪ್ರೌಟ್ಸ್, ಹಾಲು, ಪನೀರ್‌, ಟೋಫು ಮುಂತಾದುವನ್ನು ಅಗತ್ಯ ಸೇವಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ