ರಿಲೇಷನ್ ಶಿಪ್ ನಲ್ಲಿ ಸಮಯ ಕಳೆಯುತ್ತ ಹೋದಂತೆ ಸಂಬಂಧ ಮತ್ತಷ್ಟು ಗಾಢವಾಗುತ್ತಾ ಹೋಗುತ್ತದೆ. ಪ್ರೀತಿಯಲ್ಲಿ ಬಿದ್ದು ಜನರು ಚಿಕ್ಕಪುಟ್ಟ ತುಂಟಾಟ ಮಾಡುತ್ತಾರೆ. ಅದರಿಂದ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿಯುತ್ತದೆ.
ನಿಮ್ಮ ಸಂಬಂಧ ಎಷ್ಟು ಗಾಢವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ, ನೀವು ಈ ವಿಧಾನ ಅನುಸರಿಸಬಹುದು.
ಶಬ್ದಗಳು ಯಾವಾಗ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆಗುವುದಿಲ್ಲವೋ, ಆಗ ಜನರು ಬಗೆ ಬಗೆಯ ವಿಧಾನಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರೀತಿಭರಿತ ಸಂದೇಶವನ್ನು ಸಂಗಾತಿಯ ತನಕ ತಲುಪಿಸಲು ಕಿಸ್ ಗಿಂತ ಮತ್ತಾವ ಒಳ್ಳೆಯ ವಿಧಾನ ಇರಲು ಸಾಧ್ಯ? ಕಿಸ್ಸಿಂಗ್ ಯಾವುದೇ ಸಂಬಂಧದ ಪ್ರಮುಖ ಭಾಗ. ಅಂದಹಾಗೆ ಜಗತ್ತಿನಲ್ಲಿ ಜನರು ಬೇರೆ ಬೇರೆ ರೀತಿಯಲ್ಲಿ ಕಿಸ್ ಮಾಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಿಸ್ ಮಾಡುವ ವಿಚಾರ ನಿಮ್ಮ ಪ್ರರ್ಸನಾಲಿಟಿಯ ಬಗ್ಗೆ ಏನು ಹೇಳುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
ಬಿಟ್ಟು ಬಿಟ್ಟು ಕಿಸ್ ಮಾಡುವುದು : ನೀವು ಕೂಡ ಕಿಸ್ ಮಾಡುವಾಗ ನಡುನಡುವೆ ನಿಲ್ಲುತ್ತೀರಾಗಿ ನಿಮ್ಮ ಉತ್ತರ `ಹೌದು’ ಎಂದಾದಲ್ಲಿ, ನೀವು `ಥಿಂಕರ್’ ಅಂದರೆ ವಿಚಾರವಾದಿ ಎಂದರ್ಥ. ನೀವು ನಿಧಾನವಾಗಿ ಯೋಚಿಸಿ, ಸಕಾರಾತ್ಮಕ ನಕಾರಾತ್ಮಕಗಳ ಬಗ್ಗೆ ಯೋಚಿಸಿದ ಬಳಿಕ ಯಾವುದಾದರೂ ಹೆಜ್ಜೆ ಇಡುತ್ತೀರಿ. ಅಂದಹಾಗೆ, ಇದು ನಿಮ್ಮ ವಿಶೇಷತೆ ಆಗಿದೆ. ಆದರೆ ನಿಮ್ಮ ಸಂಗಾತಿ ಅಗತ್ಯಕ್ಕಿಂತ ಹೆಚ್ಚಾಗಿ ಆ್ಯಕ್ಟಿವ್ ಆಗಿದ್ದಲ್ಲಿ, ನಿಮ್ಮ ವಿಶೇಷತೆ ನಿಮ್ಮ ಅತಿ ದೊಡ್ಡ ಕೊರತೆ ಎಂದು ಸಾಬೀತಾಗಬಹುದು.
ಕಿಸ್ ಮಾಡುವಾಗ ಸಂಗಾತಿಯನ್ನು ಹಿಡಿದುಕೊಳ್ಳುವುದು : ಬಹಳಷ್ಟು ಜನರು ಚುಂಬನ ಪ್ರಕ್ರಿಯೆಯಲ್ಲಿ ತಮ್ಮ ಎರಡು ಕೈಗಳನ್ನು ಅಥವಾ ತಮ್ಮ ಒಂದು ಕೈಯನ್ನು ಸಂಗಾತಿಯ ಕುತ್ತಿಗೆಯ ಹಿಂಭಾಗದಲ್ಲಿ ಅಥವಾ ಬೆನ್ನ ಮೇಲೆ ಇಡಲು ಇಷ್ಟಪಡುತ್ತಾರೆ. ಹೀಗೆ ಮಾಡುವುದರಿಂದ ಅವರು ಸೌಮ್ಯ ರೀತಿಯಲ್ಲಿ ಸಂಗಾತಿಗೆ ಗೈಡ್ ಮಾಡಲು ಪ್ರಯತ್ನಿಸುತ್ತಾರೆ. ಜೊತೆಗೆ ಈ ಒಂದು ಸ್ಪರ್ಶದಿಂದ ತಾವು ಸಂಗಾತಿಯನ್ನು ಹೆಚ್ಚು ಕೇರ್ ಮಾಡುವುದಾಗಿ ಬಿಂಬಿಸುತ್ತಾರೆ.
ಸಾಫ್ಟ್ ಫ್ಯಾಷನೆಬಲ್ ಕಿಸ್ : ಕಿಸ್ ಮಾಡುವುದು ಕೆಲವರಿಗೆ ಹಾಡು ಗುನುಗಿದಂತೆ. ಒಂದು ವೇಳೆ ಕಿಸ್ ಮಾಡುವ ಸಂದರ್ಭದಲ್ಲಿ ನಿಮ್ಮ ಪ್ರತಿಯೊಂದು ಚಲನೆ, ಎಷ್ಟೊಂದು ಸಾಫ್ಟ್ ಆಗಿರಬೇಕೆಂದರೆ, ಅದು ಒಂದು ಮಧುರ ಸಂಗೀತದಂತೆ ಭಾಸವಾಗಬೇಕು. ಇದರರ್ಥ ನೀವು ರೊಮ್ಯಾಂಟಿಕ್ಸ್ ಯಕ್ತಿ ಎಂಬಂತೆ ಕಂಡುಬರುತ್ತೀರಿ. ನೀವು ನಿಮ್ಮ ಪ್ರೀತಿಯನ್ನು ಬಿಂಬಿಸಲು ಪ್ರಯತ್ನಿಸುತ್ತೀರಿ ಎಂದರೆ ಅತ್ಯಂತ ಪ್ರೀತಿಯಿಂದ ಕಿಸ್ ಮಾಡುತ್ತೀರಿ ಮತ್ತು ನೀವು ಡಿಮ್ಯಾಂಡಿಂಗ್ ನೇಚರ್ ನವರಾಗಿದ್ದರೆ ನಿಮ್ಮ ಮೂಡ್ ಅತ್ಯಂತ ಫ್ಯಾಷನೆಬಲ್ ಆಗಿರುತ್ತದೆ. ಕಿಸ್ ಮಾಡುವ ನಿಟ್ಟಿನಲ್ಲಿ ಈ ರೀತಿಯ ಜನರು ಎಲ್ಲಕ್ಕೂ ಬೆಸ್ಟ್ ಆಗಿರುತ್ತಾರೆ.
ತುಂಟಾಟ ತುಂಬಿದ ಕಿಸ್ : ಎಷ್ಟೋ ಸಲ ಕಿಸ್ ನ ಮುಖಾಂತರ ತುಂಟಾಟ ಮಾಡಬಹುದು. ನಿಮಗೆ ಕಿಸ್ ಮಾಡುವುದು ಇಷ್ಟ. ಆದರೆ ನೀವು ಕಿಸ್ ಮಾಡಿ ಹಿಂದೆ ಸರಿಯುತ್ತೀರಿ. ಒಂದು ವೇಳೆ ನೀವು ತುಂಟಾಟದ ಮೂಡ್ ನಲ್ಲಿದ್ದರೆ ನೀವು ಸಂಗಾತಿಯನ್ನು ಕಿಸ್ ಮಾಡಿ ಮತ್ತು ಹಿಂದೆ ಸರಿಯಿರಿ. ನಿಮ್ಮ ಈ ತುಂಟಾಟಭರಿತ ಚಟುವಟಿಕೆಯಿಂದ ನೀವು ನಿಮ್ಮ ಸಂಗಾತಿಯನ್ನು ನಿಮ್ಮತ್ತ ಆಕರ್ಷಿಸುವಿರಿ. ಇದಕ್ಕೆ ಪ್ರತಿಯಾಗಿ ನಿಮ್ಮ ಸಂಗಾತಿ ನಿಮಗೆ ಅಷ್ಟೇ ಪ್ಯಾಷನೇಟ್ ಆಗಿ ಕಿಸ್ ಮಾಡುತ್ತಾನೆ ಮತ್ತು ಲವರ್ ಆಗಿ ಇದು ನಿಮ್ಮ ದೊಡ್ಡ ಗೆಲುವು.
ಕಿಸ್ ಮಾಡುವಾಗ ನಾಲಿಗೆಯ ಬಳಕೆ : ಒಂದು ವೇಳೆ ಸಂಗಾತಿ ಲಿಪ್ ಲಾಕ್ ಮಾಡುತ್ತಲೇ ನಿಮ್ಮ ನಾಲಿಗೆ ಹೆಚ್ಚು ಕ್ರಿಯಾಶೀಲವಾಗುತ್ತದೆ. ಇದರರ್ಥ ನೀವು ಎಕ್ಸ್ ಪ್ಲೋರರ್ ಅಂದರೆ ಸಂಶೋಧಕ ಪ್ರವೃತ್ತಿಯವರು. ಮುಂದೆ ಏನೇನಾಗಬಹುದು ಎಂದು ತಿಳಿದುಕೊಳ್ಳುವುದು ಇಷ್ಟವಾಗುತ್ತದೆ. ಅಂದಹಾಗೆ ಇದು ನಿಮ್ಮ ಸಕಾರಾತ್ಮಕ ವಿಶೇಷತೆ, ಆದರೆ ನೀವು ಅಷ್ಟಿಷ್ಟು ಧೈರ್ಯ ಕಾಪಾಡಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಏಕೆಂದರೆ ಎಲ್ಲರಿಗೂ ತಮ್ಮೊಳಗೆ ನಡೆಯುತ್ತಿರುವ ಶೋಧ ಇಷ್ಟವಾಗುತ್ತದೆಂದು ಹೇಳಲಾಗದು.
ಕಿಸ್ ಮಾಡುವಾಗ ಸೌಮ್ಯ ರೀತಿಯಲ್ಲಿ ಕಚ್ಚುವಿಕೆ : ನೀವು ಕೂಡ ಕಿಸ್ ಮಾಡುವಾಗ ಸಂಗಾತಿಯ ತುಟಿಯನ್ನು ಹಗುರವಾಗಿ ಕಚ್ಚಿತ್ತೀರಾ? ಒಂದು ವೇಳೆ ನಿಮ್ಮ ಉತ್ತರ `ಹೌದು’ ಎಂದಾಗಿದ್ದಲ್ಲಿ, ಇದರಲ್ಲಿ ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ. ಇದೇನೂ ಹೊಸ ಸಂಗತಿ ಅಲ್ಲ, ಇದು ಒಂದು ಸಾಮಾನ್ಯ ಅಭ್ಯಾಸ. ಕಾಮಸೂತ್ರದ ಪ್ರಕಾರ, ಇದು ಕಾಮುಕತೆಯ ಸಂಕೇತ ಹಾಗೂ ಇದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಉತ್ತೇಜಿತನಾಗಲು ಸಹಾಯವಾಗುತ್ತದೆ.
ನೀವ ಹೀಗೆ ಮಾಡುವವರಾಗಿದ್ದರೆ, ನೀವೊಬ್ಬ ತುಂಟಾಟದ ಲವರ್ ಮತ್ತು ನಿಮ್ಮ ಸಂಗಾತಿಯನ್ನು ಹೇಗೆ ಉತ್ಸಾಹಿತರನ್ನಾಗಿ ಮಾಡಬೇಕು ಎಂಬುದು ನಿಮಗೆ ಚೆನ್ನಾಗಿ ಗೊತ್ತಿರುತ್ತದೆ.
ಪ್ರೀತಿಯಷ್ಟೇ ಅಲ್ಲ, ಆರೋಗ್ಯದ ಚೇತರಿಕೆ ಸಂಗಾತಿಯ ಜೊತೆ ಪ್ರೀತಿ ವ್ಯಕ್ತಪಡಿಸುವುದು ಅಥವಾ ಯಾವುದಾದರೊಂದು ಡೇಟ್ ಗೆ ಪರ್ಫೆಕ್ಟ್ ಎಂಡಿಂಗ್ ಕೊಡುವ ವಿಧಾನವೆಂದರೆ ಅದು ಕಿಸ್ಸಿಂಗ್. ಇದರಿಂದ ಆರೋಗ್ಯಕ್ಕೂ ಒಳ್ಳೆಯದು ಎನ್ನುವುದು ನಿಮಗೆ ಗೊತ್ತಿರಲಿ. ಹೌದು ಅಷ್ಟೇ ಅಲ್ಲ, ನೀವು ಕ್ಯಾಲೋರಿ ದಹಿಸಿ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವಿರಾದರೆ, ಆಗಲೂ ನಿಮಗೆ ಈ ಕಿಸ್ ಬಹಳ ಉಪಯೋಗವಾಗುತ್ತದೆ. ಏಕೆಂದರೆ ಕಿಸ್ ಮಾಡುವಾಗ ನಮ್ಮ ಕ್ಯಾಲೋರಿ ಬರ್ನ್ ಆಗುತ್ತದೆ. ನೀವು ನಿಮ್ಮ ಪ್ರೀತಿ ವ್ಯಕ್ತಪಡಿಸುತ್ತಾ ನಿಮ್ಮ ಕ್ಯಾಲೋರಿ ಕೂಡ ಏಕೆ ಬರ್ನ್ ಮಾಡಿಕೊಳ್ಳಬಾರದು?
1 ನಿಮಿಷದ ಕಿಸ್ ನಲ್ಲಿ 6 ಕ್ಯಾಲೋರಿ ಬರ್ನ್ : ಕೆಲವು ವರದಿಗಳು ಹೇಳುವ ಪ್ರಕಾರ, 1 ನಿಮಿಷ ಕಾಲ ಕಿಸ್ ಮಾಡುವುದರಿಂದ ನೀವು 3-6 ಕ್ಯಾಲೋರಿ ಬರ್ನ್ ಮಾಡಿಕೊಳ್ಳಬಹುದು. ಕ್ಯಾಲೋರಿ ಬರ್ನ್ ಮಾಡುವುದರ ಹೊರತಾಗಿಯೂ ಕಿಸ್ಸಿಂಗ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುತ್ತದೆ.
ರೋಗನಿರೋಧಕ ಶಕ್ತಿ ಪ್ರಬಲ : `ಮೆಡಿಕಲ್ ಹೈಪೊಥಿಸಿಸ್’ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ, ಕಿಸ್ ಮಾಡುವುದರಿಂದ ಮಹಿಳೆಯರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಮಹಿಳೆಯರನ್ನು ಸೈಕೊ ಮೆಗಾಲೆಲೊ ವೈರಸ್ ನಿಂದ ರಕ್ಷಿಸಲು ನೆರವಾಗುತ್ತದೆ. ಸೈಟಾ ಮೆಗಾಲೆಲೊ ವೈರಸ್ ಗರ್ಭಾವಸ್ಥೆಯಲ್ಲಿ ಶಿಶುವಿಗೆ ಹುಟ್ಟು ಕುರುಡು ಸಮಸ್ಯೆ ಉಂಟು ಮಾಡಬಹುದು. ಮಹಿಳೆಯರು ಗರ್ಭಾವಸ್ಥೆಯಲ್ಲಿದ್ದಾಗ ಈ ವೈರಸ್ ಹಾನಿಯುಂಟು ಮಾಡುತ್ತದೆಯೇ ಹೊರತು ಇದರಿಂದ ಬೇರೆ ಯಾವುದೇ ಹಾನಿಯಲ್ಲ.
ಹೆಲ್ದೀ ಹಾರ್ಟ್ : ಕಿಸ್ ನ ಮುಖಾಂತರ ನೀವು ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಸ್ಟ್ರೆಸ್ ಒಂದು ಮುಖ್ಯ ಫ್ಯಾಕ್ಟರ್ ಆಗಿದ್ದು, ಅದರಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಉಂಟಾಗುತ್ತವೆ. ಇಂತಹ ಸ್ಥಿತಿಯಲ್ಲಿ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿದ್ದರೆ ನಿಮ್ಮ ಹೃದಯ ಆರೋಗ್ಯದಿಂದಿರುತ್ತದೆ. ಹೀಗಾಗಿ ಪರೋಕ್ಷ ರೀತಿಯಲ್ಲಿ ನೋಡಿದರೆ ಕಿಸ್ಸಿಂಗ್ ಮುಖಾಂತರ ನಿಮ್ಮ ಹೃದಯ ಆರೋಗ್ಯದಿಂದಿರುತ್ತದೆ.
ರಿಲ್ಯಾಕ್ಸ್ ಆಗಲು ನೆರವು : ಲ್ಯಾಫೆಯೆಟ್ ಕಾಲೇಜಿನ ಒಂದು ಸಂಶೋಧನೆಯ ಪ್ರಕಾರ ನೀವು ಯಾರನ್ನಾದರೂ ಕಿಸ್ ಮಾಡುತ್ತೀರಾದರೆ, ನಿಮ್ಮ ದೇಹದಲ್ಲಿ ಗುಡ್ ಹಾರ್ಮೋನ್ಸ್ ರಿಲೀಸ್ ಆಗುತ್ತವೆ. ಅದು ನಿಮ್ಮನ್ನು ಖುಷಿಯಿಂದಿಡಲು ನೆರವಾಗುತ್ತದೆ. ಆಕ್ಸಿಟೋಸಿನ್, ಡೊಪಾಮೈನ್ ಮತ್ತು ಎಂಡೊರ್ಫಿನ್ಸ್ ಹಾರ್ಮೋನ್ ಗಳು ಕಿಸ್ ಮಾಡುವ ಸಂದರ್ಭದಲ್ಲಿ ನಮ್ಮ ದೇಹದಿಂದ ಬಿಡುಗಡೆಗೊಳ್ಳುತ್ತವೆ. ನಮ್ಮನ್ನು ರಿಲ್ಯಾಕ್ಸ್ ಮತ್ತು ಖಿನ್ನತೆ ಮುಕ್ತರಾಗಿರಲು ನೆರವಾಗುತ್ತವೆ. 20 ಸೆಕೆಂಡ್ ಗಳ ಅಲಧಿಯ ಕಿಸ್ಸಿಂಗ್ ನ ಬಳಿಕವೇ ಈ ಹಾರ್ಮೋನ್ ಗಳು ದೇಹದಿಂದ ಬಿಡುಗಡೆಗೊಳ್ಳುತ್ತವೆ.
ಮುಖದ ಸ್ನಾಯುಗಳಿಗೆ ಒಳ್ಳೆಯದು : ಒಂದು ಪ್ಯಾಷನೆಟ್ ಕಿಸ್ ನ ಸಂದರ್ಭದಲ್ಲಿ ನಿಮ್ಮ ಮುಖದ 34 ಸ್ನಾಯುಗಳು ಹಾಗೂ ದೇಹದ ಇತರೆ ಭಾಗದ 112 ಪೋಸರ್ ಮಸಲ್ಸ್ ಇದರಲ್ಲಿ ಭಾಗಿಯಾಗುತ್ತವೆ. ಹೀಗಾಗಿ ಕಿಸ್ ಮಾಡುವುದರಿಂದ ದೇಹದ ಈ ಮಸಲ್ಸ್ ಟೈಟ್ ಮತ್ತು ಟೋನ್ಡ್ ಆಗುತ್ತವೆ. ಅಷ್ಟೇ ಅಲ್ಲ, ಕಿಸ್ ಮಾಡುವ ಸಂದರ್ಭದಲ್ಲಿ ಮುಖದ ರಕ್ತ ಪರಿಚಲನೆ ಕೂಡ ಹೆಚ್ಚುತ್ತದೆ. ಇದರಿಂದ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ ಮತ್ತು ನೀವು ಯಂಗ್ ಆಗಿ ಕಂಡುಬರುವಿರಿ.
ಬಿಳಿ ಹಾಗೂ ಹೊಳಪುಳ್ಳ ಹಲ್ಲುಗಳು : ಮುತ್ತಿನಂತಹ ಹಲ್ಲುಗಳನ್ನು ಬಯಸುವಿರಾದರೆ, ನಿಮಗೆ ಕಿಸ್ ಮಾಡುವುದು ಲಾಭಕರ ಆಗಿ ಪರಿಣಮಿಸುತ್ತದೆ. ಕಿಸ್ ನ ಸಂದರ್ಭದಲ್ಲಿ ಬಾಯಿಯಲ್ಲಿ ತಯಾರಾಗುವ ಜೊಲ್ಲು ಹಲ್ಲುಗಳಿಂದ ಕ್ಯಾವಿಟಿಯನ್ನು ದೂರಗೊಳಿಸಿ ಬ್ಯಾಕ್ಟೀರಿಯಾವನ್ನು ಕೊನೆಗೊಳಿಸುತ್ತದೆ.
– ಕೆ. ಸ್ಮಿತಾ