– ರಾಘವೇಂದ್ರ ಅಡಿಗ ಎಚ್ಚೆನ್.
ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಟೆಕಿಯಾನ್ ಬೆಂಗಳೂರಿನಲ್ಲಿ “ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ” ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್ನೊಂದಿಗೆ ಕೈಜೋಡಿಸಿದೆ. ಈ ಸಾಮಾಜಿಕ ಜವಾಬ್ದಾರಿಯು ಟೆಕಿಯಾನ್ ಸಂಸ್ಥೆಯ ಮುಂದುವರೆಸುತ್ತಿರುವ ಬದ್ಧತೆಯ ಭಾಗವಾಗಿದೆ.
ಕನಕಪುರ ರಸ್ತೆಯಲ್ಲಿರುವ ಈ ಕೇಂದ್ರವು ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ದಿಕ್ಕು ದೆಸೆಯಿಲ್ಲದ ಬೆಕ್ಕುಗಳಿಗೆ ಸಮಗ್ರ ಆರೈಕೆ ನೀಡುತ್ತದೆ. ಈ ಸೇವೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಆಶ್ರಯ ಮತ್ತು ದತ್ತು ಪಡೆಯುವ ಕ್ರಿಯೆಗಳು ಸೇರಿವೆ.
ಕೇಂದ್ರದ ಸೇವಾ ಸೌಲಭ್ಯಗಳ ಕುರಿತು ಟೆಕಿಯಾನ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್ ಮಾತನಾಡುತ್ತಾ “ಬೆಂಗಳೂರಿನ ದುರ್ಬಲ ಬೆಕ್ಕುಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಪ್ರಾಣಾ ಅನಿಮಲ್ ಫೌಂಡೇಶನ್ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆ ಪಡುತ್ತೇವೆ. ಈ ಕೇಂದ್ರವು ಅಗತ್ಯ ಆರೈಕೆ ಮಾತ್ರವಲ್ಲದೆ ಪ್ರಾಣಿ ಕಲ್ಯಾಣ ಮತ್ತು ಸಾಕುಪ್ರಾಣಿಗಳ ಜವಾಬ್ದಾರಿಯುತ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ” ಎಂದರು.
2024ರಲ್ಲಿ ತುರ್ತು ಸಂದರ್ಭಗಳಲ್ಲಿ 24/7 ಪ್ರಾಣಿಗಳ ಆಂಬ್ಯುಲೆನ್ಸ್ ಸೇವೆಯ ಯಶಸ್ವಿ ಪ್ರಾರಂಭದೊಂದಿಗೆ ಈ ಸಹಯೋಗವು ಕಳೆದ ವರ್ಷದಲ್ಲಿ ಟೆಕಿಯಾನ್ & ಪ್ರಾಣಾ ನಡುವಿನ 3ನೇ ಜಂಟಿ ಕಾರ್ಯಕ್ರಮವಾಗಿದೆ.
ನಟಿ ಹಾಗೂ ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥಾಪಕಿ ಸಂಯುಕ್ತಾ ಹೊರನಾಡು ಮಾತನಾಡಿ, “ಈ ಕೇಂದ್ರ ತೆರೆಯುವ ಮೂಲಕ ನನ್ನ ಕನಸು ನನಸಾಗಿದೆ. ಭಾರತದಲ್ಲಿ ಬೆಕ್ಕುಗಳಿಗೆ ಇದು ಮೊದಲ ಆರೈಕೆ ಕೇಂದ್ರ. ಪ್ರಾಣಿಗಳಿಗೆ ಸಹಾಯ ಮಾಡುವ ನಮ್ಮ ಧ್ಯೇಯ ಬೆಂಬಲಿಸುವ ಟೆಕಿಯಾನ್ ಜೊತೆ ಮುಂದಿನ ಅನೇಕ ಸಹಯೋಗಗಳಿಗಾಗಿ ಉತ್ಸುಕರಾಗಿದ್ದೇವೆ” ಎಂದರು.
ಕೇಂದ್ರದಲ್ಲಿ ಗಾಯಗೊಂಡ ಬೆಕ್ಕುಗಳಿಗೆ ಆರೈಕೆ ಸೌಲಭ್ಯಗಳಿವೆ, ಬೆಕ್ಕುಗಳ ಶಾಶ್ವತ ಜೀವನಕ್ಕಾಗಿ ನಿಯಮಿತ ದತ್ತು ಸ್ವೀಕಾರ ಕ್ರಿಯೆ ನಡೆಸಲಾಗುತ್ತದೆ. ಪ್ರಾಣಿಗಳ ಬಗ್ಗೆ ಸಹಾನುಭೂತಿ ಮತ್ತು ಗೌರವ ಉತ್ತೇಜಿಸಲು ಪ್ರಾಣಾ ಫೌಂಡೇಶನ್ ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಕೂಡ ಆಯೋಜಿಸುತ್ತದೆ.