ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಪುಟ್ಟ ದೇಶ ಯೂಕ್ರೇನ್ ಮೇಲೆ ದಾಳಿ ನಡೆಸಿ, ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಈವರೆಗೆ 25 ಲಕ್ಷದಷ್ಟು ಜನರು ಯೂಕ್ರೇನ್ ತೊರೆದು ಬೇರೆ ದೇಶ ತಲುಪಿದ್ದಾರೆ. ರಷ್ಯಾ ಹೇಳಿದ್ದಕ್ಕೆ ಒಪ್ಪದೇ ಇರುವುದರ ಪರಿಣಾಮ ಸಾವಿರಾರು ಮನೆಗಳು ಬಾಂಬ್ ಗಾಳಿಯನ್ನು ಎದುರಿಸಬೇಕಾಗಿ ಬಂದಿದೆ. ಇಡೀ ವಿಶ್ವ ಅದನ್ನು ಕಂಡು ಸ್ತಬ್ಧವಾಗಿದ್ದು, ತಾವೇನು ಮಾಡಬೇಕೆಂದು ತೋಚದ ಸ್ಥಿತಿ ಉಂಟಾಗಿದೆ.
ಅಮೆರಿಕಾ ಹಾಗೂ ಯೂರೋಪ್ ವತಿಯಿಂದ ತಮಗೇನೂ ಮಾಡಬೇಕೊ ಅದನ್ನು ಮಾಡಿದ್ದಾರೆ. ಆದರೆ ಆಟಂಬಾಂಬ್ ಗಳನ್ನು ಹೊಂದಿರುವ ರಷ್ಯಾದ ಮೇಲೆ ದಾಳಿ ನಡೆಸುವುದು ಭಾರಿ ಅಪಾಯಕಾರಿಯಾಗಿದೆ.
ಯೂಕ್ರೇನ್ ಸಂಕಷ್ಟಕ್ಕೆ ಕಾರಣವೇನೆಂದರೆ ಅವರು ಇನ್ನೊಬ್ಬರ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ. ಸಾವಿರಾರು ವರ್ಷಗಳಿಂದ ಇದೇ ಅಲ್ಲಿ ನಡೆದುಕೊಂಡು ಬರುತ್ತಿದೆ. ತಮ್ಮ ಮಕ್ಕಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ತಮ್ಮ ಪ್ರಾಣ ಕೂಡ ಕೊಡುತ್ತಾರೆ. ಆದರೆ ಈ ಬಲಿದಾನದಿಂದ ಯಾವುದೇ ಲಾಭವಾಗುವುದಿಲ್ಲ. ಏಕೆಂದರೆ ದುರ್ಬಲರನ್ನೇ ಗುಲಾಮರನ್ನಾಗಿಸಲಾಗುತ್ತದೆ. ಅದು ಸತ್ತು ಹೋಗುವವರಿಗಿಂತ ಕಠಿಣ ಸ್ಥಿತಿಯಾಗಿರುತ್ತದೆ.
ಯೂಕ್ರೇನ್ ನ ಅಂತ್ಯ ಹೇಗೇ ಆಗಬಹುದು, ಯೂಕ್ರೇನಿ ಹೋರಾಟಗಾರರು ಸತ್ತು ಹೋಗಬಹುದು. ಆದರೆ ಯೂಕ್ರೇನಿ ಮಹಿಳೆಯರ ತ್ಯಾಗ, ತಮ್ಮ ಮಕ್ಕಳು ಹಾಗೂ ಪತಿಯಂದಿರನ್ನು ಯುದ್ಧಕ್ಕೆ ಕಳಿಸಿಕೊಡಲು ರಾಜಿಯಾಗುವುದು ಮತ್ತು ತಮ್ಮದೇ ಮನೆಯನ್ನು ತೊರೆದು ವಿದೇಶದಲ್ಲಿ ನೆಲೆ ನಿಲ್ಲುವುದು ಇಡೀ ವಿಶ್ವವನ್ನು ಸಾಲಗಾರರನ್ನಾಗಿಸುತ್ತದೆ. ಈ ಮಹಿಳೆಯರು ವಾಸ್ತವದಲ್ಲಿ ಹೊಸ ಹಕ್ಕುಗಳ ಮೊದಲ ರಕ್ಷಕರಾಗುತ್ತಿದ್ದಾರೆ.
ಒಂದು ವೇಳೆ ಈ ಮಹಿಳೆಯರು ತಮ್ಮ ಮಕ್ಕಳು ಹಾಗೂ ಪತಿಯಂದಿರ ಎದುರು ನಿಂತು ಅವರಿಗೆ ಸರೆಂಡರ್ ಆಗಲು ಹೇಳಿದ್ದಿದ್ದರೆ, ಅವರ ಜೀವ ಉಳಿಯುತ್ತಿತ್ತು. ಆದರೆ ಇಡೀ ವಿಶ್ವದಲ್ಲಿ ರಷ್ಯಾದ ಬಲಿಷ್ಠ ಬಾಹುಗಳು ಚಾಚುತ್ತಿದ್ದವು. ಯೂಕ್ರೇನ್ ನಂತೆಯೇ ಪಕ್ಕದ ಮಾಲ್ಬೋವಾ, ಎಸ್ಬೋನಿಯಾ, ವ್ಯಾಟ್ವಿಯಾ, ಅಥುವೇನಿಯಾದಲ್ಲಿಯೂ ಹಾಗೆಯೇ ಆಗುತ್ತಿದೆ. ರಷ್ಯಾದ ನಿರ್ಧಾರ ಎಲ್ಲಿಯವರೆಗೆ ಸ್ಥಗಿತಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ಅಣುಬಾಂಬ್ ನ ಯುದ್ಧಕ್ಕೆ ಸಿದ್ಧವಾಗುವುದಿಲ್ಲ. ಯೂಕ್ರೇನಿ ಮಹಿಳೆಯರು ತಮ್ಮ ದೃಢತೆಯಿಂದ ಕೊಟ್ಟ ಸಂದೇಶವೆಂದರೆ, ಅನ್ಯಾಯವನ್ನು ಧೈರ್ಯದಿಂದ ಎದುರಿಸಬೇಕೆನ್ನುವುದು.
ಭಾರತದಲ್ಲಿ ಕೆಲವೇ ಕೆಲವು ಜನರು ಬಹುಸಂಖ್ಯಾತ ಶೂದ್ರರು ಹಾಗೂ ದಲಿತರ ಮೇಲೆ ಭಕ್ತಿ, ಹಿಂದಿನ ಜನ್ಮದ ಕರ್ಮಗಳ ಫಲದ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾ ಬಂದಿದ್ದಾರೆ. ಸಂವಿಧಾನದ ಹೊರತಾಗಿಯೂ ಮೀಸಲಾತಿಯ ಹೊರತಾಗಿಯೂ ಉನ್ನತ ವರ್ಗದ ಹಾಗೂ ಕೆಳವರ್ಗದ ಮಹಿಳೆಯರ ನಡುವೆ ಸ್ಪಷ್ಟ ವಿಭಜನೆ ಕಂಡುಬರುತ್ತಿದೆ. ಕೆಳವರ್ಗದ ಮನೆಯ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಲಾಗುತ್ತಿದೆ. ಅವರನ್ನು ದೇವದಾಸಿಯರನ್ನಾಗಿಸಲಾಗುತ್ತಿದೆ. ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಏಕೆಂದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಯೂಕ್ರೇನಿ ಮಹಿಳೆಯರ ಹಾಗೆ ತಮ್ಮ ಭೂಮಿ, ಸರ್ಕಾರ, ಹಕ್ಕುಗಳಿಗಾಗಿ ಹೋರಾಡಲು ಕಳಿಸಿಕೊಡುವುದಿಲ್ಲ.
ಎಲ್ಲಿಯವರೆಗೆ ಯೂಕ್ರೇನ್ ವಿಶಾಲ ಸೋವಿಯತ್ ಒಕ್ಕೂಟದ ಭಾಗವಾಗಿತ್ತೊ, ಮಾಸ್ಕೋ ಯೂಕ್ರೇನ್ ನಲ್ಲಿ ಆಟಂಬಾಂಬ್ ಗಳನ್ನು ಸಂಗ್ರಹಿಸಿಡುವುದು, ಏನಾದರೂ ಅನಾಹುತ ಸಂಭವಿಸಿದರೆ ಯೂಕ್ರೇನಿಯನ್ನರೇ ಸತ್ತು ಹೋಗಬೇಕು. ರಷ್ಯನ್ನರಿಗೆ ಏನೂ ಆಗಬಾರದು ಎಂಬ ತರ್ಕ ಇದ್ದಿರಬೇಕು. ಈಗ ಯೂಕ್ರೇನಿ ಜನತೆ ಈ ಬೇಕಾಬಿಟ್ಟಿ ನೀತಿಯನ್ನು ಮತ್ತೊಮ್ಮೆ ಅನುಸರಿಸಲು ಕೊಡುವ ಮನಸ್ಥಿತಿಯಲ್ಲಿಲ್ಲ. ಮಾಸ್ಕೋದ ಸೂತ್ರದ ಬೊಂಬೆಯಾಗಲು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಏನು ಬೇಕಾದರೂ ಬೆಲೆ ತೆರಬೇಕಾಗಿ ಬಂದರೂ ಬರಬಹುದು.
ಯೂಕ್ರೇನ್ ಮಹಿಳೆಯರ ಈಗಿನ ತ್ಯಾಗ ಬಲಿದಾನದಲ್ಲಿ ಅವರು ತಮ್ಮವರನ್ನು ಕಳೆದುಕೊಂಡಿರುವುದು ಸೇರಿದೆ, ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ರಷ್ಯಾ ದಾಳಿಯಲ್ಲಿ ಕಳೆದುಕೊಳ್ಳುವುದೂ ಸೇರಿದೆ. ಇದರ ಲಾಭ ಮುಂಬರುವ ಪೀಳಿಗೆಗೆ ದೊರಕಲಿದೆ. ಯೂಕ್ರೇನಿ ಮಹಿಳೆಯರ ಗೌರವ ವಿಶ್ವಾದ್ಯಂತ ಹೆಚ್ಚಲಿದೆ. ಅವರಿಗೆ ಕಷ್ಟ ಅನುಭವಿಸುವ ಅಭ್ಯಾಸ ಆಗಿಬಿಟ್ಟಿದೆ. ಅವರು ಇನ್ನಷ್ಟು ಕಷ್ಟಜೀವಿಗಳಾಗುತ್ತಾರೆ.
ಎಲ್ಲಿ ಮಹಿಳೆಯರು ಈ ರೀತಿಯ ಬಲಿದಾನ ಕೊಟ್ಟಿಲ್ಲವೋ ಅಲ್ಲಿ ಅವರು ಶತಶತಮಾನಗಳಿಂದ ಗುಲಾಮಗಿರಿ ಅನುಭವಿಸಬೇಕಾಗಿ ಬರುತ್ತಿದೆ. ಮುಸ್ಲಿಮರೇ ಹೆಚ್ಚಿಗೆ ಇರುವ ದೇಶಗಳಲ್ಲಿ ಮಹಿಳೆಯರಿಗೆ ಈಗಲೂ ಸ್ವಾತಂತ್ರ್ಯವಿಲ್ಲ. ಏಕೆಂದರೆ ಅವರು ಅದೇ ಸಮಾಜದ ಸುರಕ್ಷತೆಯಲ್ಲಿ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಕ್ಕುಗಳಿಗಾಗಿ ತ್ಯಾಗ ಮಾಡುತ್ತಿಲ್ಲ.
ಆಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಮಕ್ಕಳು ಹಾಗೂ ಗಂಡಂದಿರನ್ನು ಹೋರಾಡಲು ಕಳಿಸಿಕೊಟ್ಟರು. ಆದರೆ ಅದು ತಪ್ಪು ಹಕ್ಕುಗಳಿಗಾಗಿ, ತಮ್ಮ ಕುಟುಂಬದ ಸುರಕ್ಷತೆಗಲ್ಲ. ಅಲ್ಲಿ ತಾಲಿಬಾನಿ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಎಲ್ಲಕ್ಕೂ ಮೊದಲು ಬಲಿಪಶುಗಳಾದದ್ದು ಮಹಿಳೆಯರೇ. ಯೂಕ್ರೇನಿ ಮಹಿಳೆಯರ ಗುರಿ ವಿದೇಶಿ ಸರ್ಕಾರವಲ್ಲ, ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹಾಗೊಮ್ಮೆ ಯೂಕ್ರೇನ್ ರಷ್ಯಾದ ವಶಕ್ಕೆ ಬಂದರೂ ಅದು ಯಾವಾಗಲೂ ರಷ್ಯಾಕ್ಕೆ ತಲೆನೋವಂತೂ ಆಗಿಯೇ ಆಗುತ್ತದೆ.
ಘೋಷಣೆಗಳಿಂದ ಕಾರ್ಯ ಸಾಧನೆ ಆಗದು
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ `ಲಡಕೀ ಹೂಂ ಲಡ್ ಭೀ ಸಕತೀ ಹೂಂ’ ಮತ್ತು ಶೇ.40 ರಷ್ಟು ಸೀಟುಗಳಲ್ಲಿ ಮಹಿಳೆಯರನ್ನೇ ನಿಲ್ಲಿಸಿದ್ದ ಅವರಿಗೆ ಅಧಿಕಾರ ನೀಡಬೇಕೆಂದಿದ್ದ ಕಾಂಗ್ರೆಸ್ ಪ್ರಯೋಗ ಬಹಳ ಕೆಟ್ಟ ರೀತಿಯಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಗೆ ಅಲ್ಲಿ ಶೇ.2.3ರಷ್ಟು ವೋಟು ದೊರೆತಿವೆ. ಅಂದಹಾಗೆ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ನೀಡಿದರೂ ಇದರ ಫಲಿತಾಂಶವೆಂದರೆ, ಕೇವಲ ಘೋಷಣೆಗಳಿಂದ ಕೆಲಸ ಆಗುವುದಿಲ್ಲ. ಏನಾದರೂ ಮಾಡಿದರೆ ಮಾತ್ರ ಕೆಲಸ ಆಗುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಮುಖಂಡರಿಗೆ ಅಂತಹ ಯಾವುದೇ ಅಭ್ಯಾಸವಿಲ್ಲ.
ಮಹಿಳೆಯರಿಗೆ ಭಾಜಪಾ ಸರ್ಕಾರದ ಬಗ್ಗೆ ಪ್ರೀತಿಯಾಗಲಿ, ದೂರಾಗಲಿ ಇಲ್ಲ. ಕಾಂಗ್ರೆಸ್ ಪಕ್ಷ ಮಹಿಳೆಯರಿಗಾಗಿ ಏನಾದರೂ ಮಾಡುತ್ತದೆ ಎಂಬ ನಂಬಿಕೆಯೇ ಇಲ್ಲ. ಮ್ಯಾರಾಥಾನ್ ಮಾಡುವುದರಿಂದ ಏನೂ ಆಗುವುದಿಲ್ಲ. ಅದು ಒಂದು ಆಟ ಅಷ್ಟೇ. ಮಹಿಳೆಯರಿಗೆ ಬೇಕಿರುವುದು ತಮ್ಮ ಬಗ್ಗೆ ಗಮನ ಕೊಡುವವರು, ತಮ್ಮ ಕಿರಿದಾದ, ಗಲೀಜು ಗಲ್ಲಿಗಳಲ್ಲಿ ಸುತ್ತಾಡಿ ತಮ್ಮ ನೋವನ್ನು ಆಲಿಸುವರು.
ಯಾವ ಪಕ್ಷ ಗೆದ್ದಿತೊ ಅದರ ವಿಶೇಷತೆಯೆಂದರೆ, ಘೋಷಣೆಗಳ ಜೊತೆ ಜೊತೆಗೆ ಅವರು ತಮ್ಮ ಮಾತನ್ನು ಮೂಲೆ ಮೂಲೆ ತನಕ ತಲುಪಿಸುತ್ತಾರೆ. ಅವರ ಕಾರ್ಯಕರ್ತರು ಕಷ್ಟಜೀವಿಗಳು, ಪರಂಪರಾಗತವಾಗಿ ಮನೆಯಲ್ಲಿ ಕುಳಿತು ತಿನ್ನುವ ಅಭ್ಯಾಸ ಮಾಡಿಕೊಂಡವರಲ್ಲ. ಹುಡುಗಿಯರ ಕಷ್ಟಗಳು ಈಗಲೂ ಸಾವಿರಾರು. ಅವರಿಗೆ ಓದಲು ಸಾಕಷ್ಟು ಅವಕಾಶಗಳೇನೋ ಸಿಗುತ್ತಿವೆ. ಆದರೆ ವಾಸ್ತವದಲ್ಲಿ ಅದು ಅಪೂರ್ಣವಾಗಿದೆ. ಶ್ರೀಮಂತ ಕುಟುಂಬದವರನ್ನು ಹೊರತುಪಡಿಸಿದರೆ, ಉಳಿದವರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ ಕೊಂಡುಕೊಳ್ಳಲು ಕೂಡ ಹಣ ಇಲ್ಲದ ಸ್ಥಿತಿ.
ಕಾಂಗ್ರೆಸ್ `ಲಡಕೀ ಹೂಂ ಲಡ್ ಭೀ ಸಕತಿ ಹೂಂ’ ಘೋಷಣೆ ವಿಧಾನಸಭೆ ಚುನಾವಣೆಯಲ್ಲಲ್ಲ. ಮನೆ ಮನೆಗಳಲ್ಲಿ ಸಮಾನತೆ, ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಯಶಸ್ವಿಯಾಗುತ್ತದೆ.
ಕಾಂಗ್ರೆಸ್ ನ ಬಳಿ ತಮ್ಮ ಸಂದೇಶ ಸಾಗಿಸುವವರ ಗುಂಪು ಇಲ್ಲ. ಈಗ ಭಾಜಪಾ ಕಾರ್ಯಕರ್ತರು ಪ್ರತಿ ದೇಗುಲದ ಎದುರು ಕುಳಿತಿದ್ದಾರೆ. ಭಾಜಪಾದ ಬಳಿ ಒಬ್ಬರಲ್ಲ 10 ಕಾರ್ಯಕರ್ತರಿದ್ದಾರೆ. ಸಮಾಜಾದಿ ಪಾರ್ಟಿಯವರು ತಮ್ಮ ಜಮೀನು ಬಳಿ ಲಾಠಿ ಹಿಡಿದು ನಿಂತಿದ್ದಾರೆ. ಕಾಂಗ್ರೆಸ್ ಮಹಿಳೆಯರ ಹೆಸರು ಹೇಳಿ ಹೋರಾಡಿತು. ಆದರೆ ಅವರನ್ನು ಸೋಲಿಸಿ ಆ ವಿಷಯವನ್ನೇ ಮುಕ್ತಾಯಗೊಳಿಸಿದರು.
ಮಹಿಳೆಯರಿಗಾಗಿ ಯಾರಾದರೂ ಏನಾದರೂ ಮಾಡಬೇಕು. ಭಾಜಪಾಗೆ ಆ ಸಿದ್ಧಾಂತ ಪೌರಾಣಿಕ ಗ್ರಂಥಗಳಿಂದ ಬರುತ್ತದೆ. ಸಮಾಜವಾದಿಗಳಿಗೆ ಗ್ರಾಮದ ರೀತಿ ರಿವಾಜುಗಳಿಂದ ಬರುತ್ತದೆ. ಎರಡರಲ್ಲೂ ಹುಡುಗಿಯರಿಗೆ ಯಾವುದೇ ಜಾಗ ಇಲ್ಲ. ಇನ್ನುಳಿದದ್ದು ಕಾಂಗ್ರೆಸ್ ಈ ವಿಷಯ ಪ್ರಸ್ತಾಪಿಸಿ ವಿಫಲಗೊಂಡು ಮಲಗಿಬಿಟ್ಟಿತು.
ತಪ್ಪು ಯಾರದ್ದು?
ಯೂಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ 20 ಸಾವಿರ ಭಾರತೀಯ ವಿದ್ಯಾರ್ಥಿಗಳು ಚೀನಾದ ಪ್ರಕರಣವನ್ನು ಪುನರಾವರ್ತಿಸಿದ್ದಾರೆ. ಅಲ್ಲೂ ಕೂಡ 20,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೋವಿಡ್ ನ ಕಾರಣದಿಂದ ಅವರನ್ನು ಅಲ್ಲಿಂದ ಕರೆತರಬೇಕಾಯಿತು. ಯೂಕ್ರೇನ್ ನಲ್ಲೂ ಭಾರತೀಯ ವಿದ್ಯಾರ್ಥಿಗಳು ಕೂದಲೆಳೆಯ ಅಂತರದಲ್ಲಿ ಪಾರಾದರು. ಏಕೆಂದರೆ ರಷ್ಯಾದ ದಾಳಿಯಲ್ಲಿ ಯಾವಾಗ, ಯಾರ ಜೀವ ಹೋಗುತ್ತೋ ಹೇಳಲಾಗದು.
ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಉತ್ಸುಕತೆ ಅದೆಷ್ಟು ಇದೆಯೆಂದರೆ, ಭಾರತದಲ್ಲಿ ಲಭ್ಯವಾಗುವ 80,000 ಸೀಟುಗಳ ಬಳಿಕ ಎಲ್ಲಿ ಸೀಟು ಸಿಗುತ್ತದೋ ಅಲ್ಲಿಗೆ ಹೊರಟುಬಿಡುತ್ತಾರೆ. ದುರುಳರು ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕೊಡಿಸುವ ನೆಪದಲ್ಲಿ ಮೋಸ ಮಾಡುವ ದಂಧೆ ಹೂಡಿಕೊಂಡಿದ್ದಾರೆ.
ನೊಯ್ಡಾ ಪೊಲೀಸರು ಇತ್ತೀಚೆಗೆ ದುರುಳರ ಒಂದು ಗ್ಯಾಂಗ್ ನ್ನು ಬಂಧಿಸಿದರು. ಅವರು ನಕಲಿ ಕೌನ್ಸೆಲಿಂಗ್ ಮಾಡಿ, ನಕಲಿ ಅಡ್ಮಿಶನ್ ನೀಡಿ, 30-30 ಲಕ್ಷ ತನಕ ವಸೂಲಿ ಮಾಡಿದ್ದರು. ಗ್ರೇಟರ್ ನೊಯ್ಡಾದ ಶಾರರಾ ವಿಶ್ವವಿದ್ಯಾಲಯ ಹಾಗೂ ಆಗ್ರಾದ ಸರೋಜಿನಿ ನಗರ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಫೇಕ್ ಡಾಕ್ಯುಮೆಂಟ್ಸ್ ಕೊಟ್ಟು ಲೂಟಿ ಮಾಡಲಾಯಿತು.
ಇದರಲ್ಲಿ ದೊಡ್ಡ ತಪ್ಪು ವಿದ್ಯಾರ್ಥಿಗಳು ಹಾಗೂ ಅವರ ತಾಯಿ ತಂದೆಯರದ್ದೇ. ಅವರು ಪ್ರತಿಸಲ ಯೋಚಿಸುವುದೇನೆಂದರೆ, ಮಧ್ಯವರ್ತಿಗಳು ತಮ್ಮ ಕೆಲಸ ಮಾಡಿಕೊಡುತ್ತಾರೆ. ನಮ್ಮ ದೇಶದಲ್ಲಿ ಅಪ್ರಾಮಾಣಿಕ ಜನರ ಮೇಲೆ ಅದೆಷ್ಟು ವಿಶ್ವಾಸವಿದೆಯೆಂದರೆ, ಹಣ ಕೊಟ್ಟು ಯಾವ ಕೆಲಸ ಕೂಡ ಮಾಡಿಕೊಳ್ಳಬಹುದೆಂಬುದು ಅವರ ಯೋಚನೆ. ಒಬ್ಬರ ಕೆಲಸ ಸಲೀಸಾಗಿ ಆಗಿಬಿಟ್ಟರೆ, ತಮ್ಮದೂ ಕೂಡ ಆಗುತ್ತದೆ ಎಂಬುದು ಅವರ ನಂಬಿಕೆ. ಒಬ್ಬರು ಮೆರಿಟ್ ಮೂಲಕ ಸೀಟು ಪಡೆದುಕೊಂಡಿದ್ದರೆ, ಅದನ್ನು ಮಧ್ಯವರ್ತಿಗಳಿಗೆ ಹಣ ಕೊಟ್ಟು ಸೀಟು ಗಿಟ್ಟಿಸಿಕೊಳ್ಳಲಾಗಿದೆ ಎಂದು ನಂಬುವವರು ಸಾಕಷ್ಟು ಜನರಿದ್ದಾರೆ.
ಸುಳ್ಳನ್ನು ನಂಬುವ ಜನತೆ ಧರ್ಮದ ಹೆಸರಿನಲ್ಲಿ ಲೂಟಿಗೊಳಗಾದಾಗ, ಅವರು ಎಷ್ಟೊಂದು ಲೂಟಿಗೆ ಸಿದ್ಧರಾಗಿ ನಿಲ್ಲುತ್ತಾರೆಂದರೆ, ಮೆಡಿಕಸ್ ಸೀಟುಗಳಿಗಾಗಿ ಏನನ್ನಾದರೂ ಕೊಡಲು ಸಿದ್ಧರಾಗುತ್ತಾರೆ.
ಯಾವ ಪೆಟ್ಟನ್ನು ಯೂಕ್ರೇನ್ ಅಥವಾ ಹಾನ್ ಕೊಟ್ಟಿತೋ ಅಂತಹ ಪೆಟ್ಟನ್ನು ಭಾರತದಲ್ಲಿ ಈಗ ಎಲ್ಲೆಲ್ಲೂ ಕೊಡಲಾಗುತ್ತಿದೆ. ಜನರು ಅಂಥವರಿಂದ ಮೋಸಕ್ಕೊಳಗಾಗಿಯೂ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಾರೆ. ಏಕೆಂದರೆ ಪೊಲೀಸರು ಕೇಳುವ ಮೊದಲ ಪ್ರಶ್ನೆಯೆಂದರೆ, ಲೂಟಿಕೋರರಿಗೆ ಕೊಡಲು ಅಷ್ಟು ಹಣ ನಿಮಗೆ ಬಂದಿದ್ದಾದರೂ ಎಲ್ಲಿಂದ? ಅಂತಹ ಪ್ರಶ್ನೆಗಳಿಗೆ ಜನರ ಬಳಿ ಉತ್ತರ ಇರುವುದಿಲ್ಲ. ಹೀಗಾಗಿ ಅವರು ಮೌನದಿಂದಿರುತ್ತಾರೆ.
ಕೋಚಿಂಗ್ ದಂಧೆಯ ಜೊತೆಗೆ ನಕಲಿ ಅಡ್ಮಿಷನ್ ನ ದಂಧೆ ಕೂಡ ಬಹಳ ಜೋರಾಗಿ, ಅದೂ ಕೂಡ ಅದ್ಧೂರಿ ಆಫೀಸ್ ಗಳ ಮೂಲಕ ನಡೆಯುತ್ತಿದೆ.