ಸೌತ್ ಸಿನಿ ದುನಿಯಾದ ಮೋಸ್ಟ್ ಡಿಮ್ಯಾಂಡ್ ಇರೋ ನಟಿ ಸಮಂತಾ ರುತ್​ಪ್ರಭು ಮತ್ತೆ ಸುದ್ದಿಯಾಗಿದ್ದಾರೆ. ನಟ ನಾಗಚೈತನ್ಯ ಜೊತೆ ನಾಲ್ಕು ವರ್ಷ ಸಂಸಾರ ಮಾಡಿದ ಬಳಿಕ ಡಿವೋರ್ಸ್ ಕೊಟ್ಟು ಹ್ಯಾಪಿ ಆಗಿರೋ ಸಮಂತಾ ಮತ್ತದೇ ಗಾಸಿಪ್​ಗೆ ಸಿಕ್ಕಿಹಾಕಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ಸಮಂತಾ ಸೆಕೆಂಡ್ ಮ್ಯಾರೇಜ್ ಮಾಡಿಕೊಳ್ತಾರೆ.. ಬಾಯ್​ಫ್ರೆಂಡ್ ಇದ್ದಾನೆ.. ಮೇಕಪ್ ಮ್ಯಾನ್ ಅವರನ್ನೇ ಮದುವೆ ಆಗ್ತಾರೆ ಅಂತೆಲ್ಲಾ ಸುಳ್ಳು ಸುದ್ದಿಗಳು ವೈರಲ್ ಆಗಿದ್ವು. ಆಗ ಸಮಂತಾ ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ಎಲ್ಲರ ಬಾಯಿಮುಚ್ಚಿಸಿದ್ದರು.

SAMANTHA (1)

ಬಳಿಕ ತಮ್ಮ ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳ ವಿಶ್ರಾಂತಿ ಪಡೆದಿದ್ದರು. ಜೊತೆಗೆ ಏಕಾಂಗಿಯಾಗಿ ಉತ್ತರಭಾರತದ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಅಲ್ಲಿನ ಆಶ್ರಮದಲ್ಲಿ ಧ್ಯಾನದಲ್ಲಿ ತೊಡಗಿದ್ದರು. ಬಳಿಕ ವಿವಿಧ ಚಾನೆಲ್​ಗಳು ನಡೆಸಿದ ಸಂದರ್ಶನಗಳಲ್ಲಿ ತಮ್ಮ ನೋವನ್ನೂ ಕೂಡ ಹಂಚಿಕೊಂಡಿದ್ದರು. ಮಾಜಿ ಪತಿ ನಾಗಚೈತನ್ಯ ಅವರ ಹೆಸರನ್ನೇಳದೇ ಲೈಫ್ ಹೇಗಿದೆ..? ನಾವು ಹೇಗೆ ಇರಬೇಕು..? ಅನ್ನೋದ್ರ ಕುರಿತು ಸಲಹೆ ನೀಡಿದ್ದರು.

SAMANTHA (6)

ಅಷ್ಟೇ ಅಲ್ಲ, ನಾಗಚೈತನ್ಯ ಎರಡನೇ ಮದ್ವೆ ಆದ್ಮೇಲೂ ಪರೋಕ್ಷವಾಗಿ ಟಾಂಟ್ ಕೊಡೋ ರೀತಿ ಪೋಸ್ಟ್ ಕೂಡ ಹಾಕಿದ್ದರು. ಇದೀಗ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದು ವೈರಲ್ ಆಗಿದೆ. ನಟಿ ಸಮಂತಾ ಅವರಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ ಎಂಬ ವದಂತಿಗಳು ಹರಿದಾಡುತ್ತಿವೆ. ಒಂದು ಸಂದರ್ಶನದಲ್ಲಿ ಸಮಂತಾ ಅವರಿಗೆ ಬಂದ ವಾಟ್ಸಾಪ್ ಸಂದೇಶದಿಂದ ಈ ವದಂತಿ ಹುಟ್ಟಿಕೊಂಡಿದೆ. ಈ ಸಂದೇಶ ಯುವ ನಿರ್ದೇಶಕ ರಾಜ್ ಅವರಿಂದ ಬಂದಿತ್ತು ಎನ್ನಲಾಗಿದೆ.

SAMANTHA (4)

ಸದ್ಯ ಸಿನಿ ಮಸಾಲೆ ಲೋಕದಲ್ಲಿ ಹರಿದಾಡ್ತಿರೋ ವದಂತಿ ಪ್ರಕಾರ ಸಮಂತಾ ಒಂಟಿಯಲ್ಲ… ಸ್ಯಾಮ್​ಗೆ ಗೆಳೆಯ ಸಿಕ್ಕಿಬಿಟ್ಟಿದ್ದಾನೆ. ಸ್ಯಾಮ್ ಬದುಕಲ್ಲಿ ಚೈತು ಮುಗಿದುಹೋದ ಅಧ್ಯಾಯ. ಸೋ ಇನ್ಮುಂದೆ ಸ್ಯಾಮ್ ಕೂಡ ಹೊಸ ಪಾರ್ಟನರ್ ಹುಡುಕಿಕೊಳ್ಳಲಿ ಮೂವ್ ಆನ್ ಆಗಲಿ ಅಂತ ಈಕೆಯ ಫ್ಯಾನ್ಸ್ ಕೇಳಿಕೊಳ್ತಾನೇ ಇದ್ರು. ಖುದ್ದು ಸಮಂತಾ ಕೂಡ ನಾನು ಒಬ್ಬಂಟಿಯಾಗಿರಲಾರೆ.. ನನಗೂ ಒಬ್ಬ ಗೆಳೆಯ ಬೇಕು ಅಂತ ಹೇಳಿಕೊಂಡಿದ್ರು. ಇದೀಗ ಸಮಂತಾಗೆ ಹೊಸ ಗೆಳೆಯ ಸಿಕ್ಕಾಗಿದೆ ಅನ್ನೋ ಸುದ್ದಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ದು ಮಾಡ್ತಿದೆ.

SAMANTHA (5)

ಅಸಲಿಗೆ ಇತ್ತೀಚಿಗೆ ಸಮಂತಾ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ರು. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್ಅಪ್​ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶವಂತೆ. ಆ ಆಡಿಯೋ ಸಂದೇಶವನ್ನ, ಸಂದರ್ಶನದ ನಡುವೆಯೇ ಸಮಂತಾ ಓಪನ್ ಮಾಡಿ ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ.

SAMANTHA (10)

ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು. ಆ ಯುವ ನಿರ್ದೇಶಕ ಬೇರ್ಯಾರು ಅಲ್ಲ ದಿ ಫ್ಯಾಮಿಲಿ ಮ್ಯಾನ್ ಡೈರೆಕ್ಟರ್ ರಾಜ್.

SAMANTHA (2)

ಸದ್ಯ ಈ ಅಂತೆ ಕಂತೆ ಅನ್ನೊ ಸಂತೆಯ ಸುದ್ದಿಯಲ್ಲಿ ಸಮಂತಾ ಇನ್ ಲವ್ ಅನ್ನೋದು ಮತ್ತೆ ಫುಲ್ ವೈರಲ್ ಆಗ್ತಿದೆ. ಆದ್ರೆ, ಏನೇ ಇರಲಿ.. ಬ್ಯೂಟಿಫುಲ್ ನಟಿ.. ಮುಗ್ದ ನಗುವಿನ ಚೆಲುವೆ ಸಮಂತಾ ರುತ್​ಪ್ರಭು ಒಳ್ಳೆಯ ಹುಡುಗನನ್ನೇ ಮದುವೆ ಆಗಲಿ.. ಮತ್ತೆ ಖುಷಿಯಾಗಿರ್ಲಿ ಅನ್ನೋದೇ ಅವರ ಅಭಿಮಾನಿಗಳ ಆಶಯ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ