ಆರಾಮ್ ಅರವಿಂದ ಸ್ವಾಮಿ ಸಿನಿಮಾ 2024ರಲ್ಲಿ ಸಖತ್ ಸುದ್ದಿ ಮಾಡಿದ ಸಿನಿಮಾಗಳಲ್ಲಿ ಒಂದು. ಕಮರ್ಷಿಯಲ್ ಸಕ್ಸಸ್ ಕೊಟ್ಟ ಬೆನ್ನಲ್ಲೇ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಮತ್ತೊಮ್ಮೆ ನಿರ್ದೇಶನದ ಜೊತೆಗೆ ಹೀರೋ ಆಗಿ ನಟಿಸ್ತಿದ್ದಾರೆ.
ನಿರ್ದೇಶಕ ಅನೀಶ್ ತೇಜೇಶ್ವರ್ ಅವರು ಟ್ರೆಂಡಿಗೆ ತಕ್ಕಂತ ಮಾಸ್ ಕಮರ್ಷಿಯಲ್ ಪ್ರಯೋಗವನ್ನ ಮಾಡೋದಕ್ಕೆ ಮುಂದಾಗಿದ್ದಾರೆ. ರಾಮಾರ್ಜುನ ಚಿತ್ರದ ನಂತ್ರ ಮತ್ತೆ ಆ್ಯಕ್ಷನ್ ಕಟ್ ಹೇಳ್ತೀರೋ ಅನೀಶ್ ಗೆ ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಾಥ್ ಕೊಡ್ತಿದೆ.
ಭಾವಪ್ರೀತ ಪ್ರೊಡಕ್ಷನ್ಸ್ನ ವಿಜಯ್ ಎಂ ರೆಡ್ಡಿ ಅನೀಶ್ ವಿಷನ್ಗೆ ಬಂಡವಾಳ ಹೂಡ್ತಿದ್ದಾರೆ. ಅನೀಶ್ ಚಿತ್ರದೊಂದಿಗೆ ಉದ್ಯಮಕ್ಕೆ ಕಾಲಿಡ್ತಿರೋ ವಿಜಯ್ ಎಂ ರೆಡ್ಡಿ ಉದ್ಯಮದಲ್ಲಿ ದೊಡ್ಡದಾಗಿ ನೆಲೆ ನಿಲ್ಲೋದಕ್ಕೆ ಸಜ್ಜಾಗಿದ್ದಾರೆ.
ಈ ಕುರಿತು ಅನೀಶ್ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ಆರಾಮ್ ಅರವಿಂದಸ್ವಾಮಿ ಅಭೂತಪೂರ್ವ ಯಶಸ್ಸಿನ ನಂತರ, ನನ್ನ ಮುಂದಿನ ಹೆಜ್ಜೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ, ಇದನ್ನು ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ವಿಜಯ್ ಎಂ ರೆಡ್ಡಿ ನಿರ್ಮಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.