ಜೈಲರ್ ಸಿನಿಮಾದಲ್ಲಿ ಕಾವಲಯ್ಯಾ ಡ್ಯಾನ್ಸ್ ಮೂಲಕ ಕಿಕ್ಕೇರಿಸಿದ್ದ ಬಾಲಿವುಡ್ನ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಹೊಸ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಲವ್ವಲ್ಲಿ ಬಿದ್ದಿರೋ ತಮನ್ನಾ ತಮ್ಮ ಪ್ರೀತಿಯ ವಿಷಯವನ್ನು ಬೇರೆಯವರ ರೀತಿ ಮುಚ್ಚಿಡಲಿಲ್ಲ. ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿರೋದಾಗಿ ಹೇಳಿ, ಅವರ ಜೊತೆಗೇ ಮದುವೆ ಆಗೋದಾಗಿಯೂ ಕನ್ಫರ್ಮ್ ಮಾಡಿದ್ದರು. ಇದೀಗ ತಮನ್ನಾ ಮತ್ತದೇ ನಟ ವಿಜಯ್ ವರ್ಮಾರ ಪ್ರೀತಿಯ ವಿಚಾರದಲ್ಲಿ ಸುದ್ದಿ ಆಗಿದ್ದಾರೆ.
ಅದ್ಯಾಕೋ ನಟಿ ತಮನ್ನಾ ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ಹಾಕಿಕೊಂಡ ಒಂದು ಪೋಸ್ಟ್ನಿಂದ ತಮ್ಮ ಗೆಳೆಯ ಜೊತೆ ಏನೋ ಜಗಳವಾಡಿಕೊಂಡ್ರಾ ಅನ್ನೋ ಊಹಾಪೋಹ ಎದ್ದಿದೆ. ಆ ಪೋಸ್ಟ್ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪುಂಖಾನುಪುಂಖವಾಗಿ ಮಾತನಾಡಿಕೊಳ್ತಿದ್ದಾರೆ. ಅಷ್ಟೇ ಅಲ್ಲ, ತಮನ್ನಾ ಫ್ಯಾನ್ಸ್ ಕೂಡ ಅಯ್ಯೋ.. ಇಬ್ಬರೂ ಚೆನ್ನಾಗಿದ್ರಲ್ವಾ.. ಏನಾಯ್ತು..? ಬ್ರೇಕಪ್ ಏನಾದ್ರೂ ಆಯ್ತಾ..? ಜಗಳವಾಡಿಕೊಂಡ್ರಾ..? ಅಂತೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ತಮನ್ನಾ ಪೋಸ್ಟ್‌ನಲ್ಲಿ ಏನಿದೆ ಅಂದ್ರೆ ‘ಪ್ರೀತಿಯನ್ನು ಸೀಕ್ರೆಟ್ ಆಗಿ ಇಡಬೇಕಾಗಿಲ್ಲ, ಮತ್ತೊಬ್ಬರಿಗೆ ಸೀಕ್ರೆಟ್ ಆಗಿ ಇಂಟ್ರೆಸ್ಟ್ ತೋರಿಸಬೇಕಾಗಿಲ್ಲ. ಒಬ್ಬರು ನಿಮ್ಮನ್ನು ಚೆನ್ನಾಗಿ ನೋಡಬೇಕಾದರೆ, ಮೊದಲು ನಿಮ್ಮ ಸುತ್ತ ಇರೋರನ್ನ ಚೆನ್ನಾಗಿ ನೋಡೋದು ಕಲಿಬೇಕು’ ಅಂತ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಹಾಲಿನಂತಹ ಮೈಬಣ್ಣ ಹೊಂದಿರೋ.. ಮಾದಕ ನಟಿ ತಮನ್ನಾ ಹಾಕಿರೋ ಈ ಒಂದು ಪೋಸ್ಟ್ ಎಲ್ಲರಿಗೂ ಶಾಕ್ ಕೊಟ್ಟಿದೆ. ಲವ್ ಬ್ರೇಕಪ್ ಸೂಚಿಸುವಂತೆ ಪೋಸ್ಟ್ ಹಾಕಿದ್ದಾರೆ ಅಂತ ಅರ್ಥ ಎಲ್ರೂ ಮಾಡ್ಕೊಳ್ತಿದ್ದಾರೆ.
ಅಸಲಿಗೆ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾಗೆ ಆರಂಭದಲ್ಲಿ ಸ್ನೇಹ ಬೆಳೆದಿತ್ತು. ಲಸ್ಟ್ ಸ್ಟೋರೀಸ್ 2 ಚಿತ್ರೀಕರಣದ ಸಮಯದಲ್ಲಿ ಇಬ್ಬರಿಗೂ ಪರಿಚಯ ಆಗಿ ಪ್ರೀತಿಯಾಗಿ ತಿರುಗಿತ್ತು. ಲಸ್ಟ್ ಸ್ಟೋರೀಸ್‌ನಲ್ಲಿ ತಮನ್ನಾ ಜೊತೆ ವಿಜಯ್ ವರ್ಮಾ ಮಾಡಿದ್ದ ರೊಮ್ಯಾನ್ಸ್ ಸೀನ್ಸ್ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ಬಳಿಕ ಇಬ್ಬರ ಲವ್ ಅಧಿಕೃತವಾಗಿತ್ತು.
ಸದ್ಯ ನಟ ವಿಜಯ್ ವರ್ಮಾ ನ್ಯಾಚುರಲ್ ಸ್ಟಾರ್ ನಾನಿ ನಟಿಸಿರೋ MCA ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್‌ನಲ್ಲಿ ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ನಟಿ ತಮನ್ನಾ ಕೂಡ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಆದ್ರೆ, ಈ ಪೋಸ್ಟ್ ಮಾತ್ರ ಇಬ್ಬರ ಪ್ರೀತಿಯನ್ನು ಪ್ರಶ್ನೆ ಮಾಡುವಂತಿದೆ.
ಅದೇನೇ ಇರಲಿ.. ಪ್ರೀತಿಮಾಡೋರ ಮುನಿಸು ಮುತ್ತುಕೊಡುವ ತನಕ ಅಂತಾ ದೊಡ್ಡೋರು ಹೇಳ್ತಾರೆ.. ಅದೇ ರೀತಿ ಇವರಿಬ್ಬರ ಮಧ್ಯೆ ಜಗಳವೇನಾದ್ರೂ ಇದ್ದಲ್ಲಿ ಅದು ಹಾಗೆ ಬಗೆಹರಿದು ಬಾಳು ಸುಗಮವಾಗಲಿ ಅನ್ನೋದೇ ನಟಿ ತಮನ್ನಾ ಅಭಿಮಾನಿಗಳ ಆಶಯ.