ಸಾಮಾನ್ಯವಾಗಿ ಮಳೆಗಾಲದಲ್ಲಿ 90% ಹೆಂಗಸರಲ್ಲಿ ತಲೆಗೂದಲಿನ ಸಮಸ್ಯೆ 30-40% ಹೆಚ್ಚಾಗುತ್ತದೆ. ಸಾಮಾನ್ಯವಾಗಿ 100 ಕೂದಲು ಉದುರಿದರೆ ಅದು ಮಾಮೂಲಿ, ಮಳೆಗಾಲದಲ್ಲಿ ಇದು ಒಮ್ಮೊಮ್ಮೆ 250 ದಾಟಿಬಿಡುತ್ತದೆ. ಇದಕ್ಕೆ ಮುಖ್ಯ ಕಾರಣ ಮಳೆಗಾಲದ ಹ್ಯುಮಿಡಿಟಿ. ತಲೆಯ ನೆತ್ತಿಯಲ್ಲಿ ಬೆವರು ಒಸರುವಿಕೆ, ಹೊಟ್ಟು, ಆಮ್ಲ ಮಳೆ ಇತ್ಯಾದಿಗಳು ಈ ಕಾಟ ಹೆಚ್ಚಿಸುತ್ತವೆ.

ವಾತಾರಣದಲ್ಲಿ ಎಲ್ಲೆಲ್ಲೂ ಹೆಚ್ವು ಆರ್ದ್ರತೆಯಿಂದಾಗಿ, ಈ ಕಾಲದಲ್ಲಿ ಫಂಗಲ್ ಇನ್‌ ಫೆಕ್ಷನ್‌ ಅಧಿಕಗೊಳ್ಳುತ್ತದೆ. ಇದು ಪ್ರಾಣಘಾತಕ ಅಲ್ಲದಿದ್ದರೂ, ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದ್ದಿದರೆ, ಸಮಸ್ಯೆ ಗಂಭೀರ ಆಗುತ್ತದೆ.

ಈ ಕುರಿತಾಗಿ ಸೌಂದರ್ಯ ತಜ್ಞೆಯರ ಸಲಹೆ ಎಂದರೆ, ಮಳೆಗಾಲದಲ್ಲಿ ತೈಲಗ್ರಂಥಿಗಳು ಹೆಚ್ಚು ಸಕ್ರಿಯಗೊಂಡು, ನೆತ್ತಿಯ ಚರ್ಮಕ್ಕೆ ಸೀಬಮ್ ಹೆಚ್ಚು ಮೆತ್ತಿಕೊಳ್ಳುವುದರಿಂದ ಕೂದಲು ಅಂಟಂಟಾಗುತ್ತದೆ. ಇದರಿಂದ ನವೆ, ಹೊಟ್ಟು, ಕೆರೆತ, ಕಡಿತ ಹೆಚ್ಚುತ್ತದೆ. ಹೀಗಾಗಿ ತಲೆಯ ಶುಭ್ರತೆ, ಶುಚಿತ್ವದ ಕಡೆ ಹೆಚ್ಚಿನ ಗಮನಹರಿಸಿ. ವಾರಕ್ಕೆ 2-3 ಸಲ ಆ್ಯಂಟಿ ಡ್ಯಾಂಡ್ರಫ್‌ ಬಳಸಿಕೊಳ್ಳಿ. ತಲೆಸ್ನಾನಕ್ಕೆ 1 ಗಂಟೆ ಮೊದಲೇ ಎಣ್ಣೆ ಹಚ್ಚಿ ತಲೆಯ ಮಸಾಜ್‌ ಮಾಡಿ. ಇದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ, ಹಾಗಾಗಿ ಅಂಟಿನ ಕಾಟ ಕಡಿಮೆ ಆಗುತ್ತದೆ.

ಮಳೆಗಾಲದಲ್ಲಿ ಟೀ ಮತ್ತು ನಿಂಬೆ ಬಳಸಿದ ಹರ್ಬಲ್ ಹೇರ್‌ ರಿನ್ಸ್ ಬಲು ಲಾಭದಾಯಕ. ಇದಕ್ಕಾಗಿ ಬಳಸಿದ ಟೀ ಚರಟವನ್ನು ನೀರಿನಲ್ಲಿ ಮತ್ತೆ ಮರಳಿಸಿ. ಅದು ಆರಿ ತಣ್ಣಗಾದಾಗ, ಶ್ಯಾಂಪೂ ಹಚ್ಚಿದ ತಲೆ ತೊಳೆಯಲು ಇದನ್ನು ಬಳಸಿರಿ. ನಂತರ 1 ಮಗ್ ನೀರಿಗೆ ನಿಂಬೆ ರಸ ಬೆರೆಸಿ ಕೂದಲು ತೊಳೆಯಿರಿ. ಕೂದಲನ್ನು ಸಶಕ್ತಗೊಳಿಸಲು ವಾರದಲ್ಲಿ 3-4 ಸಲ ಕೂದಲಿಗೆ ಪ್ರೋಟೀನ್ ಟ್ರೀಟ್‌ ಮೆಂಟ್‌ ನೀಡಿರಿ. ಇದಕ್ಕಾಗಿ 1 ಮೊಟ್ಟೆ ಒಡೆದು ಗೊಟಾಯಿಸಿ, ತಲೆಗೂದಲಿಗೆ ಹಚ್ಚಿ ಮಸಾಜ್‌ ಮಾಡಿ. 15 ನಿಮಿಷ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮಳೆಗಾಲದಲ್ಲಿ ಕೂದಲಿನ ಆರೈಕೆ

ಮಳೆಗಾಲದಲ್ಲಿ ಕೂದಲಿನ ಆರೈಕೆಗಾಗಿ ಅಗತ್ಯ ಈ ಸಲಹೆಗಳನ್ನು ಅನುಸರಿಸಿ :

ಆಯಿಲ್ ಮಸಾಜ್‌ : ಕೂದಲಿಗೆ ನಿಯಮಿತವಾಗಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಹೆಚ್ಚಿನ ಪೋಷಣೆ ದೊರಕುತ್ತದೆ. ಕೂದಲಿನ ಬುಡದವರೆಗೂ ಚೆನ್ನಾಗಿ ಮಸಾಜ್‌ ಮಾಡಿ. ಇದರಿಂದ ಕೂದಲಿನ ತುಂಡರಿಸುವಿಕೆ, ಡ್ರೈನೆಸ್‌ ತಗ್ಗುತ್ತದೆ. ವಾರದಲ್ಲಿ 3-4 ಸಲ ಹೀಗೆ ಮಸಾಜ್‌ ಮಾಡಿ. ಎಣ್ಣೆ ಹಚ್ಚಿದ 3-4 ಗಂಟೆಗಳ ನಂತರ ತಲೆಗೆ ಶ್ಯಾಂಪೂ ಹಚ್ಚಿ ತೊಳೆಯಿರಿ. ಮಳೆ ಕಾರಣ ತಲೆಗೂದಲಿಗೆ ಬೇಗ ಕೊಳೆ ತಗುಲುತ್ತದೆ. ಇದನ್ನು ಶುಭ್ರಗೊಳಿಸಲು ವಾರಕ್ಕೆ 2 ಸಲ ಹಾಟ್‌ ಆಯಿಲ್ ‌ಮಸಾಜ್‌ಸಹ ಬಳಸಿಕೊಳ್ಳಿ.

ಕೂದಲನ್ನು ಕಟ್ಟಿಡಿ, ಓಪನ್ಬೇಡ : ಮಳೆಗಾಲದಲ್ಲಿ ಕೂದಲನ್ನು ಸದಾ ಗಂಟು ಹಾಕಿ ಕಟ್ಟಿಡುವುದೇ ಸರಿ. ಆಗ ಅದರ ಆರ್ದ್ರತೆ ಉಳಿಯುತ್ತದೆ. ಜೊತೆಗೆ ಕೂದಲಿಗೆ ಬೇಕಾದ ಪೋಷಣೆಯ ಕೊರತೆಯೂ ನೀಗುತ್ತದೆ. ಆ ಕೊರತೆಯಿಂದಾಗಿ ಕೂದಲು ತುಂಡರಿಸುತ್ತದೆ. ಹೀಗಿರುವ ಕೂದಲಿಗೆ ಯಾವುದೇ ಸ್ಟೈಲಿಂಗ್‌ ಉಪಕರಣ ಬಳಸಬಾರದು, ಆಗ ಕೂದಲು ಮತ್ತಷ್ಟು ದುರ್ಬಲಗೊಳ್ಳುತ್ತದೆ, ಹೆಚ್ಚು ತುಂಡರಿಸುತ್ತದೆ. ಆದ್ದರಿಂದ ಕೂದಲನ್ನು ಸದಾ ಕಟ್ಟಿಡಿ.

ಕಂಡೀಶನರ್ಬಳಕೆ : ಮಳೆಗಾಲದಲ್ಲಿ ಕೂದಲಿನ ಫ್ರಿಝಿನೆಸ್‌ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ವಾತಾವರಣದಲ್ಲಿನ ಆರ್ದ್ರತೆಯ ಮಟ್ಟ ಕೂದಲನ್ನು ಹೆಚ್ಚು ಶುಷ್ಕಗೊಳಿಸುತ್ತದೆ. ಇದರಿಂದ ಸೀಳು ತುದಿಯ ಸಮಸ್ಯೆಯೂ ಹೆಚ್ಚುತ್ತದೆ. ಕೂದಲ ಹಾಳಾಗುವಿಕೆ, ಉದುರುವಿಕೆಯೂ ಹೆಚ್ಚುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೂದಲನ್ನು ತೊಳೆಯುವಾಗೆಲ್ಲ ಅಗತ್ಯ ಕಂಡೀಶನರ್ ಬಳಸಿರಿ. ಇದರಿಂದ ಕೂದಲು ಸ್ಮೂತ್‌, ಹೆಲ್ದಿ, ಫ್ರಿಝಿ ಫ್ರೀ ಆಗುತ್ತದೆ.

ಕೂದಲು ಸದಾ ಒಣಗಿರಲಿ : ಮಳೆಯಲ್ಲಿ ನೆಂದಾಗೆಲ್ಲ ಅದರಲ್ಲಿನ ಅಶುದ್ಧ ಘಟಕ, ಆಮ್ಲೀಯತೆಗಳಿಂದ ಕೂದಲು ಹಾಳಾಗುತ್ತದೆ. ಮಳೆಗಾಲದಲ್ಲಿ ಕೂದಲು ಹೆಚ್ಚು ಹೊತ್ತು ಒದ್ದೆಯಾಗಿದ್ದರೆ, ನೆತ್ತಿಯಲ್ಲಿ ಹಲವು ಸಮಸ್ಯೆಗಳು ಹೆಚ್ಚುತ್ತವೆ. ಆದ್ದರಿಂದ ಕೂದಲನ್ನು ಒದ್ದೆ ಆಗಿಡಲು ಬಿಡದೆ, ತಕ್ಷಣ ಒಣಗಿಸಿ. ಇದಕ್ಕಾಗಿ ಡ್ರೈಯರ್‌ ಬದಲು ಟವೆಲ್ ಬಳಸಿಕೊಳ್ಳಿ.

ಹೊರಗೆ ಹೋಗುವ ಮುನ್ನ ಕೂದಲನ್ನು ಕವರ್ಮಾಡಿಕೊಳ್ಳಿ : ಮಳೆಗಾಲದಲ್ಲಿ ಹೊರಗೆ ಹೋಗುವ ಮೊದಲು, ಅದನ್ನು ನೀಟಾಗಿ ಸ್ಕಾರ್ಫಿನಿಂದ ಕವರ್‌ ಮಾಡಿ. ಜೊತೆಗೆ ಛತ್ರಿ ಮರೆಯದಿರಿ. ಹೀಗೆ ಮಾಡುವುದರಿಂದ, ಕೂದಲಿನ ಜೊತೆ ನೆತ್ತಿಯೂ ಆರೈಕೆಗೊಳ್ಳುತ್ತದೆ.

ಹೆಲ್ದಿ ಡಯೆಟ್‌ : ಈ ಕಾಲದಲ್ಲಿ ಕೂದಲು ಉದುರಬಾರದು ಎಂದರೆ ಹೊರಗಿನ ಕರಿದ ತಿನಿಸು, ಫಾಸ್ಟ್ ಫುಡ್‌, ಜಂಕ್‌ ಫುಡ್ ಸೇವಿಸದಿರಿ. ಇಂಥ ಪದಾರ್ಥ ರಕ್ತದ ಸಂಚಾರವನ್ನು ತಗ್ಗಿಸುತ್ತದೆ. ಹೀಗಾಗಿ ಕೂದಲಿಗೆ ಪೋಷಣೆ ನೀಡುವ ಪೌಷ್ಟಿಕ ಆಹಾರ ಮಾತ್ರ ಸೇವಿಸಿ. ವಿಟಮಿನ್‌, ಪ್ರೋಟೀನ್‌,  ಮಿನರಲ್ಸ್ ಧಾರಾಳ ಇರುವಂಥ ಆಹಾರ ಮಾತ್ರ ಸೇವಿಸಿ.

ಗಿರಿಜಾ ಪ್ರಭು 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ