ಬಾಲಿವುಡ್​​ನ ಮಾದಕ ಗೊಂಬೆಯಂತಿರೋ ನಟಿ ನೋರಾ ಫತೇಹಿ ಮೋಸ್ಟ್ ಡಿಮ್ಯಾಂಡ್​ ಇರೋ ಡ್ಯಾನ್ಸರ್​. ಬಹುತೇಕ ಸಿನಿಮಾಗಳಲ್ಲಿರೋ ಐಟಂ ಡ್ಯಾನ್ಸ್​ನಲ್ಲಿ ಮೈ ಬಳುಕಿಸಿದ ನಟಿ ಅಂದ್ರೆ ಈ ನೋರಾ ಫತೇಹಿ ಮಾತ್ರ. ಇಂಥಾ ಮಾದಕ ಮೈಮಾಟ ಹೊಂದಿರುವ.. ಮೋಹಕ ನೋಟ ಬೀರುವ.. ನವಿಲಿನಂತೆ ನರ್ತಿಸುವ.. ಗ್ಲಾಮರ್​ ಕ್ವೀನ್ ಆಗಿರೋ ನೋರಾಗೆ ಈಗ 33ರ ಸಂಭ್ರಮ.

NORA FATHEHI BIRTHDAY (2)

ನಿನ್ನೆಯಷ್ಟೇ ತನ್ನ 33ನೇ ಬರ್ತ್​ಡೇ ಆಚರಿಸಿಕೊಂಡ ನೋರಾ ಆಪ್ತರ ಜೊತೆ ಕೇಕ್ ಕಟ್ ಮಾಡಿ ಖುಷಿಪಟ್ಟರು. ಕೆಲವೇ ಕೆಲವು ಸ್ನೇಹಿತರ ಜೊತೆ ಆಕರ್ಷಕ ಉಡುಗೆ ತೊಟ್ಟಿದ್ದ ನೋರಾ ಅಪ್ಸರೆ ರೀತಿ ಕಾಣುತ್ತಿದ್ದರು. ಅಷ್ಟೂ ಫೋಟೋಸ್​ ಮತ್ತು ವಿಡಿಯೋಗಳನ್ನ ತಮ್ಮ ಇನ್​ಸ್ಟಾದಲ್ಲಿ ಅಪ್​ಲೋಡ್ ಮಾಡಿದ್ದಾರೆ.

NORA FATHEHI BIRTHDAY (7)

1992ರ ಫೆಬ್ರವರಿ 6ರಂದು ಕೆನಡಾದಲ್ಲಿ ಹುಟ್ಟಿದ್ದ ನೋರಾಫತೇನಿ ಮೂಲತಃ ಕೆನಡಾದ ನಟಿ, ಮಾಡಲ್​​​, ಡ್ಯಾನ್ಸರ್​, ಗಾಯಕಿ ಹಾಗೂ ನಿರ್ಮಾಪಕಿ ಕೂಡ ಹೌದು. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ನೋರಾ ಹಿಂದಿಯ ರೋರ್​​​​: ಟೈಗರ್ಸ್ ಆಫ್ ದಿ ಸುಂದರ್​ಬನ್ಸ್​​​ ಮೂಲಕ ಎಂಟ್ರಿ ಕೊಟ್ಟರು.

NORA FATHEHI BIRTHDAY (4)

ಬಳಿಕ ಟೆಂಪರ್​, ಬಾಹುಬಲಿ: ದಿ ಬಿಗಿನಿಂಗ್​, ಕಿಕ್​ 2 ನಂತಹ ಚಿತ್ರಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿ ಟಾಲಿವುಡ್​​ನಲ್ಲಿ ಖ್ಯಾತಿ ಪಡೆದರು. ಮಲೆಯಾಳಂ ಚಿತ್ರಗಳಾದ ಡಬಲ್​ ಬ್ಯಾರೆಲ್​ ಮತ್ತು ಕಾಯಂಕುಲಂ ಕೊಚುನ್ನಿಯಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

NORA FATHEHI BIRTHDAY (8)

ಅಷ್ಟೇ ಅಲ್ಲ, ಬಾಲಿವುಡ್​​ನ ಸತ್ಯಮೇವ ಜಯತೆ ಯಲ್ಲಿ ದಿಲ್ಬರ್ ಹಾಡಿನ ಮರುಸೃಷ್ಟಿಯಲ್ಲಿ ಸೊಂಟ ಬಳುಕಿಸಿದ್ದು ಮಾತ್ರ ಇವತ್ತಿಗೂ ಎವರ್​ಗ್ರೀನ್​. ಅಚ್ಚರಿ ಅಂದ್ರೆ, ಆ ಹಾಡು ರಿಲೀಸ್ ಆದ 24 ಗಂಟೆಗಳಲ್ಲಿ ಯೂಟ್ಯೂಬ್​ನಲ್ಲಿ 20 ಮಿಲಿಯನ್​ ವೀವ್ಸ್ ಪಡೆದಿತ್ತು. ಇದರ ಜೊತೆಗೆ ಬಾತ್ಲಾಹೌಸ್​​ ಸಿನಿಮಾದಲ್ಲಿನ ಓ ಸಾ ಓ ಸಾಕಿ ಸಾಂಗ್ ಕೂಡ ಸೂಪರ್​ಹಿಟ್​ ಆಗಿತ್ತು.

NORA FATHEHI BIRTHDAY (9)

2015ರಲ್ಲಿ ರಿಯಾಲಿಟಿ ಶೋ ಹಿಂದಿಯ ಬಿಗ್​ಬಾಸ್​ ಸೀಸನ್​ 9ರಲ್ಲೂ ಸ್ಪರ್ಧಿಯಾಗಿದ್ದರು. ಬಳಿಕ 84ನೇ ದಿನಕ್ಕೆ ಬಿಗ್​ಬಾಸ್ ಮನೆಯಿಂದ ಹೊರಬಂದಿದ್ದರು. ನಂತರ 2016ರಲ್ಲಿ ರಿಯಾಲಿಟಿ ಶೋ ಡ್ಯಾನ್ಸ್ ಶೋ ಝಲಕ್ ದಿಕ್ಲಾಜಾದಲ್ಲೂ ಭಾಗವಹಿಸಿದ್ದರು.

NORA FATHEHI BIRTHDAY (3)

ಆದ್ರೆ, ಕಳೆದೆರಡು ವರ್ಷಗಳ ಹಿಂದೆ ಬಹುಕೋಟಿ ವಂಚನೆ ಕೇಸ್​​​ನ ಕಿಂಗ್​ಪಿನ್ ಆಗಿ ಜೈಲುಪಾಲಾಗಿರೋ ಸುಖೇಶ್​ ಚಂದ್ರಶೇಖರ್​​​ ಜೊತೆಗಿನ ಸಂಪರ್ಕ ಬ್ಯಾಡ್​ ಇಮೇಜ್ ತಂದುಕೊಟ್ಟಿತ್ತು. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಖೇಶ್ ಜೊತೆಗಿನ ನಂಟಿಗಾಗಿ ದೆಹಲಿ ಪೊಲೀಸರ ಎದುರು ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದರು.

NORA FATHEHI BIRTHDAY (5)

ಸದ್ಯ ಜೈಲಿನಲ್ಲಿರುವ ವಂಚಕ ಸುಖೇಶ್​ ಚಂದ್ರಶೇಖರ್, ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಹಲವು ಜನರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದಾನೆ. ವಂಚಿಸಿದ ಹಣದಲ್ಲಿ ನಟಿಯರಾದ ಜಾಕ್ವೆಲಿನ್​ ಫರ್ನಾಂಡೀಸ್​ ಮತ್ತು ನೋರಾ ಫತೇಹಿ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದ ಆರೋಪವಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ