ಫ್ಯಾಷನ್ ಲೋಕದ ಮಾದಕತೆಯೇ ಹಾಗೆ, ಸದಾ ಸ್ಟೈಲಿಶ್ ಫ್ಯಾಷನೆಬಲ್ ಡ್ರೆಸ್ ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಬೇಕೆಂದು ಇಂದಿನ ತರುಣಿಯರು ಹಾತೊರೆಯುತ್ತಿರುತ್ತಾರೆ. ಆದರೆ ಇದರ ಸೂಕ್ತ ಮಾರ್ಗದರ್ಶನವಿಲ್ಲದೆ ಅವರು ಎಷ್ಟೋ ಸಲ ಎಡವಟ್ಟು ಮಾಡಿಕೊಂಡು, ಫ್ಯಾಷನೆಬಲ್ ಆಗುವುದರ ಬದಲು ಮಂಗ ಆಗಿರುತ್ತಾರೆ. ಔಟ್ ಡೇಟೆಡ್ ಆದವರನ್ನು ಯಾರು ತಾನೇ ಆದರಿಸುತ್ತಾರೆ? ಎಷ್ಟೋ ಸಲ ಕಂಡವರ ಮಾತು ಕೇಳಿಕೊಂಡು, ಫ್ಯಾಷನ್ ಹೆಸರಿನಲ್ಲಿ ಏನನ್ನೋ ಹೇರಿಕೊಂಡು ಮೆರೆಯಲು ಹೊರಟು ಮುಖಭಂಗ ಮಾಡಿಸಿಕೊಳ್ಳುತ್ತಾರೆ. ತಾವು ಧರಿಸಿದ ಅತ್ಯಾಧುನಿಕ ಉಡುಗೆಗಳು ಕಂಫರ್ಟ್ ಆಗಿರದ ಕಾರಣ, ಅವನ್ನು ಸಂಭಾಳಿಸುವುದರಲ್ಲಿ ಕಾಲ ಕಳೆದು, ಬಂದ ಪಾರ್ಟಿ ಎಂಜಾಯ್ ಮಾಡಲು ಅವರಿಗೆ ಆಗುವುದೇ ಇಲ್ಲ. ಹೀಗಾಗಿ ಅವರು ಆಕರ್ಷಣೆಗೆ ಬದಲು ಅವಹೇಳನಕ್ಕೆ ಗುರಿಯಾಗುತ್ತಾರೆ. ಹೀಗಾಗಿ ನಿಮ್ಮನ್ನು ನೀವು ಸ್ಟೈಲಿಶ್‌ಗ್ಲಾಮರಸ್ ಆಗಿ ತೋರ್ಪಡಿಸ ಬಯಸಿದಾಗ, ಬೇರ್ ಶೋಲ್ಡರ್/ಆಫ್ ಶೋಲ್ಡರ್ ಡ್ರೆಸ್ ಉತ್ತಮ ಆಯ್ಕೆ. ಇದನ್ನು ಧರಿಸುವಾಗ, ಆರಿಸಿಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆಗಳೇನು? ಆಗ ಮಾತ್ರ ನಿಮ್ಮ ಪರ್ಸನಾಲ್ಟಿ ಇನ್ನಷ್ಟು ಸುಧಾರಿಸುತ್ತದೆ, ನೀವು ಅತ್ಯಾಕರ್ಷಕ ಎನಿಸುವಿರಿ.
ಬೇರ್ ಶೋಲ್ಡರ್ ಡ್ರೆಸ್
ಇದನ್ನೇ ಆಫ್ ಶೋಲ್ಡರ್‌ಡ್ರೆಸ್ ಎಂದೂ ಹೇಳುತ್ತಾರೆ. ಇತ್ತೀಚಿನ ಸೆಲೆಬ್ಸ್ ಇದನ್ನೇ ಹೆಚ್ಚು ಬಯಸಿ ಎಲ್ಲಾ ಸಮಾರಂಭಗಳಿಗೂ ಧರಿಸಿ ಬರುತ್ತಾರೆ. ಹೀಗಾಗಿ ಇಂದಿನ ತರುಣಿಯರು ಈ ಡ್ರೆಸ್ ಆರಿಸಿ ತಮ್ಮ ವಾರ್ಡ್ ರೋಬ್ ನಲ್ಲಿ ಪ್ರಾಥಮಿಕ ಸ್ಥಾನ ನೀಡುತ್ತಾರೆ. ಇದು ಅವರ ಲುಕ್ಸ್ ಗೆ ಹೆಚ್ಚಿನ ಕಳೆ ತರುತ್ತದೆ. ಇದನ್ನು ಫ್ರೆಂಡ್ ಬರ್ತ್ ಡೇ ಪಾರ್ಟಿ ಅಥವಾ ಇನ್ನಾವುದೇ ಈವ್ನಿಂಗ್ ಪಾರ್ಟಿಗೆ ಧರಿಸಿದರೂ ಚೆನ್ನಾಗಿರುತ್ತದೆ. ಇದು ಅವರನ್ನು ಹಾಟ್, ಸೆಕ್ಸಿ, ಗ್ಲಾಮರಸ್ ಆಗಿಸಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ಆದರೆ ಇಲ್ಲಿ ನೆನಪಿಡತಕ್ಕ ಒಂದು ಮುಖ್ಯ ವಿಷಯ ಎಂದರೆ, ನೀವು ಬೇರ್ ಶೋಲ್ಡರ್ ಡ್ರೆಸ್ ಧರಿಸಿ ಅಥವಾ ಯಾವುದೇ ಲೇಟೆಸ್ಟ್ ಡಿಸೈನ್ ಡ್ರೆಸ್, ಅದು ನಿಮ್ಮ ಫಿಸಿಕಲ್, ಕಂಫರ್ಟ್, ಸೈಜ್, ಪ್ರಿಂಟ್ಸ್, ಕಲರ್ ಇತ್ಯಾದಿ ಗಮನಿಸಿ ಆರಿಸದಿದ್ದರೆ, ಅದು ನಿಮ್ಮ ಗ್ರೇಸ್ ಹೆಚ್ಚಿಸುವ ಬದಲು ಇವರು ಅಂದವನ್ನೂ ಕೆಡಿಸುತ್ತದೆ. ಜೊತೆಗೆ ನಿಮಗೆ ಅದನ್ನು ಧರಿಸಿ ಇರಿಸುಮುರಿಸಾಗಬಾರದು. ಹೀಗಾಗಿ ಒಂದಲ್ಲ 4 ಸಲ ಗಮನಿಸಿಯೇ ಖರೀದಿಸಿ! ನಿಮಗೆ ಅದು ಎಷ್ಟು ಸೂಟ್ ಆಗುತ್ತದೆ ಎಂಬುದೇ ಮುಖ್ಯ.
ಪ್ರಿಂಟ್ ಹೇಗಿರಬೇಕು?
ಪ್ರತಿ ಡ್ರೆಸ್ಸಿನಲ್ಲೂ ಥಳಕು ಬಳಕು ತುಂಬಿದ ಪ್ರಿಂಟ್ ಡಿಸೈನ್ ಇರಲೇಬೇಕು ಎಂದೇನಿಲ್ಲ. ಆಫ್ ಶೋಲ್ಡರ್ ಡ್ರೆಸ್ ತನ್ನದೇ ಡಿಸೈನ್ ಹಾಗೂ ರಚನೆಯಿಂದ ಹಾಟ್ ಎನಿಸುತ್ತದೆ, ಜೊತೆಗೆ ಅದು ಸಿಂಗಲ್ ಕಲರ್‌ಪ್ರಿಂಟ್ ನಲ್ಲಿದ್ದರೆ, ಅದಿನ್ನೂ ಹೆಚ್ಚು ಆಕರ್ಷಕ ಎನಿಸುತ್ತದೆ. ಅಂದ್ರೆ ಸರಳತೆಯಲ್ಲೂ ಸೌಂದರ್ಯ! ಇತ್ತೀಚೆಗೆ ಡೆನಿಂ ಆಫ್ ಶೋಲ್ಡರ್ ಡ್ರೆಸ್, ಶಿಮರಿ ಆಫ್ ಶೋಲ್ಡರ್ ಡ್ರೆಸ್, ಲೈಟ್ ನೆಕ್ ಡೌನ್ ಡ್ರೆಸ್, ಒನ್ ಕಲರ್ ಲಾಂಗ್ ಸ್ಲೀವ್ಸ್ ಆಫ್ ಶೋಲ್ಡರ್ ಡ್ರೆಸ್, ಒನ್ ಶೋಲ್ಡರ್ ಡೌನ್ ಡ್ರೆಸ್, ಪೀಚ್ ಪಿಂಕ್ ಆಫ್ ಶೋಲ್ಡರ್ ಡ್ರೆಸ್ ಹೆಚ್ಚು ಜನಪ್ರಿಯತೆ ಗಳಿಸಿವೆ.
ಡೆನಿಂ ಆಫ್ ಶೋಲ್ಡರ್ ಟಾಪ್ ಇರಲಿ ಅಥವಾ ಡ್ರೆಸ್, ಇದರ ಫ್ಯಾಷನ್ ಸದಾ ಇನ್ ಎನಿಸುತ್ತದೆ. ಹೀಗಾಗಿ ನೀವು ಫ್ಯಾಷನ್ನಿನ ಜೊತೆ ಜೊತೆ ಕಂಫರ್ಟ್ ಗಾಗಿ ಡೆನಿಂನ ಆಫ್ ಶೋಲ್ಡರ್ ಡ್ರೆಸ್ ನಲ್ಲಿ ರಫ್ ಸ್ಟೈಲ್ ಸ್ಲೀವ್ಸ್ ಬೆಲ್ಟ್ ನ ಫ್ಯಾಷನ್ ನ್ನು ಕ್ಯಾರಿ ಮಾಡಬಹುದು. ಜೊತೆಗೆ ಇದರೊಂದಿಗೆ ಪೆನ್ಸಿಲ್ ಹೀಲ್ ಮತ್ತು ಕೈಗಳಿಗೆ ಕ್ಲಚ್‌ಸ್ಲಿಂಗ್ ಬ್ಯಾಗ್ ನಿಮ್ಮ ಈ ಲುಕ್ಸ್ ನ್ನು ಮತ್ತಷ್ಟು ಗ್ರೇಸ್ ಫುಲ್ ಮಾಡುತ್ತವೆ.
ನೀವು ಗೆಳತಿಯ ಮದುವೆಗೆ ಹೊರಟಿದ್ದೀರಿ, ವೆಸ್ಟರ್ನ್ ವೇರ್ ಇರಲಿ ಎಂದು ಭಾವಿಸಿದ್ದರೆ, ಬ್ಲ್ಯಾಕ್, ಡಾರ್ಕ್ ಬ್ರೌನ್, ಶಿಮರಿ ಆಫ್‌ಶೋಲ್ಡರ್ ಡ್ರೆಸ್ ಅದರ ಬಾಡಿ ಫಿಟ್ ಸೂಕ್ತ ಫಿಟಿಂಗ್ ನೊಂದಿಗೆ ಲಿಟಲ್ ಲೋ ಹ್ಯಾವೈನ್ಸ್, ಜೊತೆಗೆ ಮೇಲ್ಭಾಗದ ಬ್ರೆಸ್ಟ್ ಲೈನ್ ವರೆಗೂ ಡೀಪ್ ಇದ್ದು, ನಿಮ್ಮ ಡ್ರೆಸ್ ಗೆ ಕಂಫರ್ಟ್ ಜೊತೆ ಹಾಟ್ ಲುಕ್ಸ್ ನೀಡುತ್ತದೆ. ಜೊತೆಗೆ ಮ್ಯಾಚಿಂಗ್ ಗೋಲ್ಡನ್ ಹೈಹೀಲ್ಸ್ ಪರ್ಫೆಕ್ಟ್ ಸ್ಟೈಲ್ ಆಗುತ್ತದೆ.
ಡೀಪ್ ನೆಕ್ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್, ಕಿಲ್ಲಿಂಗ್ ಡ್ರೆಸ್ ನ ಕೆಲಸ ಮಾಡುತ್ತದೆ. ಒಂದು, ಕಲರ್ ಕಾಂಬಿನೇಶನ್ ಹೀಗಿದ್ದು, ಜೊತೆಗೆ ಇದನ್ನು ನೀವು ಡೇ/ನೈಟ್ ಪಾರ್ಟಿ ಯಾವುದಕ್ಕೆ ಧರಿಸಿದರೂ ಒಪ್ಪುತ್ತದೆ. ನೀವು ಇದನ್ನು ಬೆಸ್ಟ್ ಶೇಪ್ ನಲ್ಲಿ ಡಿಸೈನ್ ಮಾಡಿಸಿ, ಅದೇ ದೃಷ್ಟಿಯಿಂದ ಇದರ ಸ್ಲೀವ್ಸ್ ನ್ನೂ ಡಿಸೈನ್ ಮಾಡಿಸಬಹುದು. ನಿಮಗೆ ಇದರ ನೆಕ್ ಹೆಚ್ಚು ಡೌನ್ ಎನಿಸಿದರೆ, ನೀವು ಇದನ್ನು ನಿಮ್ಮ ಕಂಫರ್ಟ್ ಗೆ ತಕ್ಕಂತೆ ತುಸು ಮೇಲ್ಭಾಗಕ್ಕೆ ಹೊಂದುವಂತೆ ಡಿಸೈನ್ ಮಾಡಿಸಬಹುದು. ಇದಕ್ಕೆ ಜೊತೆಯಾಗಿ ಮ್ಯಾಚಿಂಗ್ ಆ್ಯಂಕಲ್ ಸ್ಟಾಕ್ ನ ಕಿಟನ್ ಹೀಲ್ಸ್ ಕ್ಲಚ್ ಧರಿಸಿದರೆ, ನಿಮ್ಮ ಲುಕ್ಸ್ ನ್ನು ಎಲ್ಲರೂ ಮೆಚ್ಚುತ್ತಾರೆ.
ಅದೇ ಸಮಯಕ್ಕೆ ಶಾರ್ಟ್ ಆಫ್ ಶೋಲ್ಡರ್ ಡ್ರೆಸ್ ಧರಿಸಿ ನೀವು ಸಂಗಾತಿ ಜೊತೆಗೆ ಡೇಟಿಂಗ್ ಹೊರಡಿ ಅಥವಾ ಪಾರ್ಟಿ ಅಟೆಂಡ್ ಮಾಡಿ, ಎಲ್ಲೆಡೆ ನಿಮ್ಮದೇ ಆಕರ್ಷಣೆ ರಾರಾಜಿಸುತ್ತದೆ. ನಿಮಗೆ ಕಂಫರ್ಟೆಬಲ್ ಎನಿಸಿದರೆ, ನೆಕ್ ಇನ್ನಷ್ಟು ಡೀಪ್ ಮಾಡಿಸಿ, ಇದರಲ್ಲಿ ಲಾಂಗ್ ಸ್ಲೀವ್ಸ್ ಫ್ಯಾಷನ್ ಫಾಲೋ ಮಾಡಿ ಜೊತೆಗೆ ವೇವ್ ನ ಸ್ಟೈಲಿಶ್ ಲುಕ್ಸ್, ಬೊಂಬಾಟ್ ಎನಿಸುತ್ತದೆ.
ಕೇವಲ ಡ್ರೆಸ್ ಮಾತ್ರವಲ್ಲದೆ, ನೀವು ನಿಮ್ಮ ಕುರ್ತಿಯನ್ನೂ ಸಹ ಆಫ್ ಶೋಲ್ಡರ್ ಮಾಡಿಸಿ ಸೆಕ್ಸೀ ಲುಕ್ಸ್ ಗಳಿಸಬಹುದು. ಇದಕ್ಕಾಗಿ ನೀವು ಪ್ಲೇರ್ ಯಾ ಒನ್ ಕಲರ್ ನ ಕುರ್ತಿಯನ್ನು ತೆಗೆದುಕೊಂಡು ಅದನ್ನು ಲಾಂಗ್ ಸ್ಲಿಟ್ ಜೊತೆ, ಫ್ರಿಲ್ ಕೇಪ್ ಸ್ಟೈಲ್ ನೆಕ್ ಮಾಡಿಸಿ, ಅದು ನಿಮ್ಮ ಎಲ್ಬೋವರೆಗೆ ಇರಲಿ. ಇದು ನಿಮ್ಮನ್ನು ಟ್ರೆಂಡಿ ಆಗಿಸಿ ಕಂಫರ್ಟ್ ನೀಡುತ್ತದೆ. ಇದನ್ನು ನೀವು ಸಿಗರೇಟ್ ಪ್ಯಾಂಟ್ ಯಾ ವೇಲ್ ಜೊತೆ ಧರಿಸಬಹುದು.
ಶಿಮರಿ ಕ್ಲಾತ್ ನಿಂದ ರೂಪುಗೊಂಡು ಆಫ್ ಶೋಲ್ಡರ್ ಶಾರ್ಟ್ ಯಾ ಲಾಂಗ್ ಡ್ರೆಸ್, ಇದು ಡೀಪಾಗಿ ನೆಕ್ ವರೆಗೂ ಸಪೋರ್ಟ್ ನೀಡುತ್ತಾ, ಮ್ಯಾಚಿಂಗ್ ಫ್ಲರ್ಸ್ ನಿಂದ ಡಿಸೈನ್ ಗೊಂಡಿದೆ. ಇದು ಡ್ರೆಸ್ ನ್ನು ಟ್ರೆಂಡಿ ಆಗಿಸುವುದರ ಜೊತೆ, ಫುಲ್ ಕಂಫರ್ಟ್ ಕೊಡುತ್ತದೆ. ಇದನ್ನು ನೀವು ಬರ್ತ್ ಡೇ, ಇತರೆ ಈವೆಂಟ್ ಗೂ ಧರಿಸಬಹುದು. ಜೊತೆಗೆ ಸೂಪರ್ ಹೈಹೀಲ್ ನ ಟಶನ್ ಡ್ರೆಸ್‌ಧರಿಸುವ ಮಜವೇ ಬೇರೆ!
ನೀವು ಡೀಪ್ ಆಫ್ ಶೋಲ್ಡರ್ ಬ್ಲೌಸ್ ನ್ನೂ ಡಿಸೈನ್ ಗೊಳಿಸಬಹುದು, ಇದರ ಡೌನ್ ಲುಕ್ಸ್ ಫ್ಲೇರಿ ಸ್ಲೀನ್ಸ್ ನಿಮ್ಮ ಸೀರೆಯನ್ನು ಇನ್ನಷ್ಟು ಹಾಟ್ ಗೊಳಿಸುತ್ತದೆ. ನೀವು ಫ್ರಿಲ್ ಯುಕ್ತ ಬ್ಲೌಸ್ ನಲ್ಲೂ ಇದನ್ನು ಡಿಸೈನ್ ಮಾಡಿಸಬಹುದು, ಫ್ಯಾಷನ್ ಜೊತೆಗೆ ಇದು ನಿಮಗೆ ಕಂಫರ್ಟೆಬಲ್ ಆಗಬೇಕಾದುದು ಮುಖ್ಯ.
ಆಫ್ ಶೋಲ್ಡರ್ ಫ್ಯಾಬ್ರಿಕ್
ಇಂದಿನ ಆಧುನಿಕ ಫ್ಯಾಷನ್ನಿನಲ್ಲಿ ಎಲ್ಲವೂ ಸಲ್ಲುತ್ತದೆ. ಒಂದಿಷ್ಟೂ ಯೋಚಿಸದೆ ಕಣ್ಣಿಗೆ ಕಂಡದ್ದನ್ನು ಧರಿಸಿ ಹೊರಡುವವರೇ ಎಲ್ಲರೂ! ಅದು ತಮಗೆ ಹೊಂದುತ್ತದೆಯೋ ಇಲ್ಲವೋ ನೋಡುವುದಿಲ್ಲ. ಫ್ಯಾಷನ್ನಿನ ನಾಗಾಲೋಟದಲ್ಲಿ ತಾವು ಹಿಂದುಳಿದಿಲ್ಲ ಎಂಬುದೇ ಅವರಿಗೆ ಸಮಾಧಾನ, ಅಸಲಿಗೆ ನೀವು ಫ್ಯಾಷನ್‌ಜೊತೆ ಡ್ರೆಸ್ ನ ಆಯ್ಕೆಯಲ್ಲಿ ಫ್ಯಾಬ್ರಿಕ್ ಕಡೆಗೂ ಗಮನ ಹರಿಸಿದರೆ, ಇದು ನಿಮ್ಮನ್ನು ಸೆಕ್ಸಿಯಾಗಿ ತೊರ್ಪಡಿಸುವುದಲ್ಲದೆ, ಆಯಾ ಸಂದರ್ಭಕ್ಕೆ ನೀವು ಅತಿ ಆಧುನಿಕಳಾಗಿ ಸೆಕ್ಸಿ ಫಿಗರ್ ಎನಿಸುವಿರಿ. ಹೀಗಾಗಿ ಇಂಥ ಡ್ರೆಸ್ ಗಳಿಗೆ ಲೈಟ್ ವೆಯ್ಟ್ ಫ್ಯಾಬ್ರಿಕ್ ಮಾತ್ರ ಆರಿಸಬೇಕು.
ವೆಲ್ವೆಟ್‌ಫ್ಯಾಬ್ರಿಕ್ ಸೂಪರ್ ಸಾಫ್ಟ್ ಆಗಿರುವುದರ ಜೊತೆ ಜೊತೆಯಲ್ಲೇ ರಾಯಲ್ ಲುಕ್ಸ್ ನೀಡುತ್ತವೆ. ನೀವು ನೈಟ್ ಪಾರ್ಟಿಗೆ ಹೊರಡುವಿರಾದರೆ, ಈ ಫ್ಯಾಬ್ರಿಕ್ ನ ಆಫ್ ಶೋಲ್ಡರ್ ಡ್ರೆಸ್ ನಿಮಗೆ ಸೂಪರ್ ಹಿಟ್ ಎನಿಸುತ್ತದೆ.
ಶಿಫಾನ್ ಫ್ಯಾಬ್ರಿಕ್‌ಸೂಪರ್ ಸಾಫ್ಟ್ ಆಗಿರುವುದರ ಜೊತೆ ಜೊತೆಯಲ್ಲೇ ಬಹುತೇಕ ಎಲ್ಲರಿಗೂ ಸೂಟ್ ಆಗುತ್ತದೆ. ಇದು ಎಲ್ಲಾ ಋತುವಿಗೂ ಕೂಲ್ ಚಾಯ್ಸ್!
ಕಾಟನ್ನಿನ ಆಫ್ ಶೋಲ್ಡರ್ ಡ್ರೆಸ್ ಸಾಕಷ್ಟು ಅಪೇರ್ಡೆಬಲ್ ಆಗಿರುವುದರ ಜೊತೆ ಜೊತೆಯಲ್ಲೇ, ಇದರ ಶೇಡ್ಸ್ ಪ್ರಿಂಟ್ಸ್ ಬಹಳ ಕೂಲ್ ಎನಿಸುತ್ತದೆ. ಕಾಲೇಜು ಕಿಶೋರಿಯರು ಇದನ್ನು ಯಾವಾಗ ಬೇಕಾದರೂ ಧರಿಸಬಹುದು ಅಥವಾ ಔಟಿಂಗ್ ಗೂ ಸಹ, ಇದು ಬಹಳ ಈಝಿ ಟೂ ಯೂಸ್!
ನೆಟ್ ಫ್ಯಾಬ್ರಿಕ್ ನಿಂದ ರೂಪುಗೊಂಡ ಆಫ್ ಶೋಲ್ಡರ್ ಡ್ರೆಸ್ ಪಾರ್ಟಿಗೆ ಹೇಳಿ ಮಾಡಿಸಿದಂತಿರುತ್ತದೆ. ನಿಮಗೆ ಹೆಚ್ಚು ಹೆಚ್ಚು ಪಾರ್ಟಿ ವೇರ್ ಡ್ರೆಸ್ ಬೇಕಾದಾಗ ಇದನ್ನು ಆರಿಸಿ.
ವಾಯಿಲ್ ಫ್ಯಾಬ್ರಿಕ್ ಕಾಟನ್ ಜೊತೆ ಬೆರೆತು ಸೂಪರ್ಬ್ ಎನಿಸುತ್ತದೆ. ಸಾಕಷ್ಟು ಸಾಫ್ಟ್ ಕೂಡ ಆಗಿರುತ್ತದೆ. ನೀವು ಇದನ್ನು ಯಾವ ಋತುವಿನಲ್ಲಾದರೂ ಧರಿಸಿ, ಈ ಫ್ಯಾಬ್ರಿಕ್ ನ ಸ್ಟೈಲಿಶ್‌ಪ್ರಿಂಟೆಡ್ ಆಫ್ ಶೋಲ್ಡರ್ ಡ್ರೆಸ್ ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿರಿ.
ರೆಯಾನ್ ಫ್ಯಾಬ್ರಿಕ್ ಬಹಳ ತೆಳು ಆಗಿರುವ ಕಾರಣ ಇದು ದೇಹಕ್ಕೆ ಬೆವರು ಅಂಟಲು ಬಿಡುವುದಿಲ್ಲ. ಜೊತೆಗೆ ಇದರಲ್ಲಿ ಆಫ್ ಶೋಲ್ಡರ್ ಡ್ರೆಸ್ ಟಾಪ್ಸ್ ಎಷ್ಟು ಬಗೆಯಲ್ಲಿ ಲಭ್ಯ ಎಂದರೆ, ನಿಮಗೆ ಆರಿಸಿಕೊಳ್ಳುವುದೇ ಕಷ್ಟ ಎನಿಸುತ್ತದೆ. ಋತುವಿಗೆ ತಕ್ಕಂತೆ ಪ್ರಿಂಟ್‌ಫ್ಯಾಬ್ರಿಕ್ ನಲ್ಲಿ ಬೆಸ್ಟ್ ಇರುವುದನ್ನೇ ಆರಿಸಿ.
ಕಂಫರ್ಟ್ ನಿರ್ಲಕ್ಷಿಸಬೇಡಿ
ನೀವು ನಿಮ್ಮನ್ನು ಇಂದಿನ ಫ್ಯಾಷನ್ನಿನ ನಾಗಾಲೋಟದಲ್ಲಿ ಹಿಂದುಳಿಯಲು ಬಿಡಬಾರದು ಎಂದು ಬಯಸಿದರೂ, ಮಾಡರ್ನ್ ಡ್ರೆಸ್ ಧರಿಸುವ ಖಯಾಲಿಯಲ್ಲಿ ನಿಮ್ಮನ್ನು ನೀವೇ ಅನ್ ಕಂಫರ್ಟೆಬಲ್ ಮಾಡಿಕೊಳ್ಳದಿರಿ. ಅಂದ್ರೆ, ಡ್ರೆಸ್ ಧರಿಸಿದ್ದಾಯಿತು. ಆದರೆ ಇಡೀ ಪಾರ್ಟಿಯಲ್ಲಿ ನೀವು ಡ್ರೆಸ್ ನ್ನು ಮೇಲೆ ಮೇಲೆ ಎಳೆದುಕೊಳ್ಳುವುದರಲ್ಲಿ ವ್ಯರ್ಥ ಮಾಡಬಾರದು.
ಹೀಗಾಗಿ ನೀವು ಯಾವುದೇ ಆಫ್ ಶೋಲ್ಡರ್ ಡ್ರೆಸ್ ಟಾಪ್ಸ್, ಬ್ಲೌಸ್ ಧರಿಸಿದರೂ ಅದರ ನೆಕ್ ಎಷ್ಟು ಡೀಪ್ ಆಗಿರಬೇಕೆಂದರೆ, ನೀವು ಫ್ಯಾಷನ್ ದೃಷ್ಟಿಯಿಂದಲೂ ಮುಂದಿರಬೇಕು, ಕಂಫರ್ಟ್ ದೃಷ್ಟಿಯಲ್ಲೂ ಹಿಂದುಳಿಯಬಾರದು. ನಿಮಗೆ ಬಹಳ ಡೌನ್ ನೆಕ್ ಧರಿಸುವ ಅಭ್ಯಾಸವಿದ್ದರೆ, ನೀವು ಆಫ್ ಶೋಲ್ಡರ್ ಡ್ರೆಸ್ ನಲ್ಲಿ ಎಷ್ಟೇ ಡೀಪ್, ಬ್ರಾಡ್ ನೆಕ್ ನ ಡ್ರೆಸ್ ಆರಿಸಿದರೂ ನಡೆಯುತ್ತದೆ.
– ಪರಿಮಳಾ
ಡ್ರೆಸ್ ಜೊತೆ ಬ್ರಾ ಆರಿಸುವಾಗಲೂ ಎಚ್ಚರಿಕೆ ಇರಲಿ
ನಿಮ್ಮನ್ನು ನೀವು ಬ್ಯೂಟಿಫುಲ್ ಆಗಿ ತೋರಿಸಿಕೊಳ್ಳಲು ಆಫ್ ಶೋಲ್ಡರ್ ಡ್ರೆಸ್ ಏನೋ ಧರಿಸಿದಿರಿ, ಆದರೆ ಬ್ರಾ ಆರಿಸುವಲ್ಲಿ ಎಡವಟ್ಟು ಮಾಡಿಕೊಂಡರೆ ಕೆಲಸ ಕೆಡುತ್ತದೆ. ನಿಮ್ಮ ಆಧುನಿಕ ಡ್ರೆಸ್ ನ ಆಕರ್ಷಣೆ ಕುಂದುತ್ತದೆ. ಇದಕ್ಕಾಗಿ ಅಗತ್ಯ ಗಮನಿಸಬೇಕಾದುದು ಎಂದರೆ, ಆಫ್ ಶೋಲ್ಡರ್ ಡ್ರೆಸ್ ಆರಿಸುವಾಗೆಲ್ಲ, ಅದಕ್ಕೆ ಹೊಂದುವ ಸೂಕ್ತ ಬ್ರಾ ಆರಿಸಬೇಕು. ಆಗ ಮಾತ್ರ ನಿಮ್ಮ ಸ್ಟೈಲಿಶ್ ಔಟ್ ಫಿಟ್ ಪರ್ಫೆಕ್ಟ್ ಎನಿಸುತ್ತದೆ.
ಟ್ಯೂಬ್ ಬ್ರಾ : ಕಂಫರ್ಟ್ ವಿಷಯದಲ್ಲಿ ಈ ಬ್ರಾ ಸದಾ ಮುಂದು. ಹೀಗಾಗಿ ಇದನ್ನು ನೀವು ನಿಮ್ಮ ಎಲ್ಲಾ ಆಫ್ ಶೋಲ್ಡರ್ ಡ್ರೆಸ್ ಗಳೊಂದಿಗೂ ಮ್ಯಾಚಿಂಗ್ ಆಗಿ ಧರಿಸಬಹುದು. ಆಗ ಸಹಜವಾಗಿ ನಿಮ್ಮ ಫಿಗರ್ ಎದ್ದು ತೋರುತ್ತದೆ.
ಸ್ಟ್ರಾಪ್ ಲೇಯರ್ಡ್ ಬ್ರಾ : ಈ ಬ್ರಾ ನಿಮ್ಮ ಆಫ್ ಶೋಲ್ಡರ್ ಡ್ರೆಸ್ ಗಳಿಗೆ ಅತ್ಯುತ್ತಮವಾಗಿ ಸಪೋರ್ಟ್ ನೀಡುವುದರ ಜೊತೆಗೆ ನಿಮಗೆ ಫುಲ್ ಕಂಫರ್ಟ್ ಸಹ ನೀಡುತ್ತದೆ.
ಕಾರ್ಸೆಟ್ : ಇದು ನಿಮ್ಮನ್ನು ಅನ್ ಕಂಫರ್ಟ್ ಆಗಿಸದೆ, ನಿಮ್ಮ ಫಿಗರ್ ನ್ನು ಅಟ್ರಾಕ್ಟಿವ್ ಆಗಿಸುತ್ತದೆ, ಅಂದ್ರೆ ಕಂಫರ್ಟ್ ನಲ್ಲೂ ಎರಡು ಮಾತಿಲ್ಲ, ಫಿಗರ್ ಮೇಂಟೆನೆನ್ಸ್ ನಲ್ಲೂ!
ಸ್ಟಿಕ್ ಆನ್ ಬ್ರಾಸ್ : ಇವು ಸ್ಕಿನ್ ಕಲರ್ ಪ್ಯಾಡ್ಸ್ ಆಗಿದ್ದು, ನಿಮ್ಮ ಬಸ್ಟ್ ಗೆ ಲೈಟ್ ಫೀಲ್ ನೀಡುವ ಫಿಗರ್ ಸಪೋರ್ಟ್ ಆಗಿದೆ. ಅದು ವಕ್ಷದ ಲೋಪದೋಷ ಮರೆಮಾಚುವುದರಲ್ಲೂ ಸದಾ ಮುಂದು.
ಸೆಲೆಬ್ರಿಟೀಸ್ ನ್ನು ಕಾಪಿ ಮಾಡಬೇಕೇ?
ನೀವು ಯಾರನ್ನಾದರೂ ಕಾಪಿ ಮಾಡಬಹುದು. ಸೋನಾಕ್ಷಿ ಸಿನ್ಹಾ, ಕ್ಯಾಶ್ಯುಯೆಲ್ ಆಫ್ ಶೋಲ್ಡರ್ ಟಾಪ್ ಜೊತೆ ಕಾಟನ್ ಫ್ಯಾಬ್ರಿಕ್ ಪೆನ್ಸಿಲ್ ಸ್ಕರ್ಟ್ ಧರಿಸಿ, ಸ್ಲಿಂಗ್ ಬ್ಯಾಗ್ ಫ್ಯಾಷನ್ ಪ್ರದರ್ಶಿಸಿದ್ದಳು.
ದೀಪಿಕಾ ಪಡುಕೋಣೆ ಒಂದು ಪಾರ್ಟಿಯಲ್ಲಿ ವೈಟ್ ಡೀಪ್ ಆಫ್ ಶೋಲ್ಡರ್ ಡ್ರೆಸ್ ಧರಿಸಿ ಸ್ಟನ್ನಿಂಗ್ ಲುಕ್ಸ್ ನೀಡಿದಳು. ಪಾರ್ಟಿಯಲ್ಲಿ ಅವಳೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆದಳು!
ಸೋನಂ ಕಪೂರ್ ಸೀರೆಯೊಂದಿಗೆ ಆಫ್ ಶೋಲ್ಡರ್‌ಬ್ಲೌಸ್ ನ್ನು ಧರಿಸಿ, ಇದನ್ನು ಕೇವಲ ವೆಸ್ಟರ್ನ್‌ಡ್ರೆಸ್ ಜೊತೆ ಮಾತ್ರ ಧರಿಸಬೇಕೆಂಬ ಸಂಪ್ರದಾಯ ಮುರಿದಳು. ಸೀರೆ ಜೊತೆ ಸಹ ಇದು ಗಾರ್ಜಿಯಸ್ ಆಗಿದ್ದು, ನೀವು ಮೆರೆಯಬಲ್ಲಿರಿ.
ಆಲಿಯಾ ಭಟ್ ಓವರ್ ವ್ಯಾಪಿಂಗ್ ಆಫ್ ಶೋಲ್ಡರ್‌ಟಾಪ್ ಜೊತೆ ಫ್ರೀ ಪ್ಲೇಯಿಂಗ್ ಸ್ಕರ್ಟ್ ನಲ್ಲಿ ಕಂಡುಬಂದಿದ್ದಳು. ಈ ಡ್ರೆಸ್ ನಲ್ಲಿ ಅವಳು ಕಂಫರ್ಟೆಬಲ್ ಮಾತ್ರವಲ್ಲದೆ, ಬಹಳ ಹಾಟ್ ಆಗಿಯೂ ಮಿಂಚುತ್ತಿದ್ದಳು.
ಕೃತಿ ಸೆನಾನ್ ಳ ಒನ್ ಸೈಡ್ ಡೌನ್ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್ ಗಮನಿಸಿ, ಎಲ್ಲರೂ ಅವಳನ್ನೇ ನೋಡುತ್ತಾ ಇದ್ದುಬಿಟ್ಟರು.
ಟ್ರೆಂಡಿ ಮಾತ್ರವಲ್ಲ ಆರಾಮದಾಯಕ ಸಹ
ನಿಮ್ಮ ಡ್ರೆಸ್ ನ ಫಿಟಿಂಗ್ಸ್ ಸದಾ ಪರ್ಫೆಕ್ಟ್ ಆಗಿರಬೇಕು, ಇಲ್ಲದಿದ್ದರೆ ಪ್ರತಿ ಸಲ ಡ್ರೆಸ್ ಎಲ್ಲಿ ಜಾರಿ ಬಿದ್ದೀತೋ ಎಂಬ ಭಯ ಕಾಡುತ್ತಿರುತ್ತದೆ.
ಇಂಥ ಡ್ರೆಸ್ ಜೊತೆ ಸದಾ ಸ್ಟ್ರಾಪ್ ಲೆಸ್ ಬ್ರಾ ಧರಿಸಿರಿ. ನ್ಯೂಡ್ ಶೇಡ್ಸ್ ಇರುವಂಥದ್ದನ್ನೇ ಆರಿಸಿಕೊಳ್ಳಿ. ಅದು ಬೆಸ್ಟ್ ಚಾಯ್ಸ್.
ಆಫ್ ಶೋಲ್ಡರ್ ಟಾಪ್ ಯಾವ ಡ್ರೆಸ್, ಇದರ ಎಲಾಸ್ಟಿಕ್ ಶೋಲ್ಡರ್ ಮೇಲೆ ಫಿಟ್ ಆಗಿರಬೇಕು. ಅಂದ್ರೆ, ನೀವು ಸಲೀಸಾಗಿ ಕೈಗಳನ್ನು ಮೇಲೆತ್ತುವಂತಿರಬೇಕು, ಇದು ಜೊತೆಗೆ ತಾನೇ ಮೇಲೇರಬಾರದು. ಆಗ ಮಾತ್ರ ನೀವು ಇಂಥ ಡ್ರೆಸ್ ನ್ನು ಕಂಫರ್ಟ್ ಆಗಿ ಧರಿಸಬಲ್ಲಿರಿ!