ಫ್ಯಾಷನ್‌ ಲೋಕದ ಮಾದಕತೆಯೇ ಹಾಗೆ, ಸದಾ ಸ್ಟೈಲಿಶ್‌ ಫ್ಯಾಷನೆಬಲ್ ಡ್ರೆಸ್‌ ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಬೇಕೆಂದು ಇಂದಿನ ತರುಣಿಯರು ಹಾತೊರೆಯುತ್ತಿರುತ್ತಾರೆ. ಆದರೆ ಇದರ ಸೂಕ್ತ ಮಾರ್ಗದರ್ಶನವಿಲ್ಲದೆ ಅವರು ಎಷ್ಟೋ ಸಲ ಎಡವಟ್ಟು ಮಾಡಿಕೊಂಡು, ಫ್ಯಾಷನೆಬಲ್ ಆಗುವುದರ ಬದಲು ಮಂಗ ಆಗಿರುತ್ತಾರೆ. ಔಟ್‌ ಡೇಟೆಡ್‌ ಆದವರನ್ನು ಯಾರು ತಾನೇ ಆದರಿಸುತ್ತಾರೆ? ಎಷ್ಟೋ ಸಲ ಕಂಡವರ ಮಾತು ಕೇಳಿಕೊಂಡು, ಫ್ಯಾಷನ್‌ ಹೆಸರಿನಲ್ಲಿ ಏನನ್ನೋ ಹೇರಿಕೊಂಡು ಮೆರೆಯಲು ಹೊರಟು ಮುಖಭಂಗ ಮಾಡಿಸಿಕೊಳ್ಳುತ್ತಾರೆ. ತಾವು ಧರಿಸಿದ ಅತ್ಯಾಧುನಿಕ ಉಡುಗೆಗಳು ಕಂಫರ್ಟ್‌ ಆಗಿರದ ಕಾರಣ, ಅವನ್ನು ಸಂಭಾಳಿಸುವುದರಲ್ಲಿ ಕಾಲ ಕಳೆದು, ಬಂದ ಪಾರ್ಟಿ ಎಂಜಾಯ್‌ ಮಾಡಲು ಅವರಿಗೆ ಆಗುವುದೇ ಇಲ್ಲ. ಹೀಗಾಗಿ ಅವರು ಆಕರ್ಷಣೆಗೆ ಬದಲು ಅವಹೇಳನಕ್ಕೆ ಗುರಿಯಾಗುತ್ತಾರೆ. ಹೀಗಾಗಿ ನಿಮ್ಮನ್ನು ನೀವು ಸ್ಟೈಲಿಶ್‌ಗ್ಲಾಮರಸ್‌ ಆಗಿ ತೋರ್ಪಡಿಸ ಬಯಸಿದಾಗ, ಬೇರ್‌ ಶೋಲ್ಡರ್‌/ಆಫ್‌ ಶೋಲ್ಡರ್‌ ಡ್ರೆಸ್‌ ಉತ್ತಮ ಆಯ್ಕೆ. ಇದನ್ನು ಧರಿಸುವಾಗ, ಆರಿಸಿಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆಗಳೇನು? ಆಗ ಮಾತ್ರ ನಿಮ್ಮ ಪರ್ಸನಾಲ್ಟಿ ಇನ್ನಷ್ಟು ಸುಧಾರಿಸುತ್ತದೆ, ನೀವು ಅತ್ಯಾಕರ್ಷಕ ಎನಿಸುವಿರಿ.

ಬೇರ್ಶೋಲ್ಡರ್ಡ್ರೆಸ್

ಇದನ್ನೇ ಆಫ್‌ ಶೋಲ್ಡರ್‌ಡ್ರೆಸ್‌ ಎಂದೂ ಹೇಳುತ್ತಾರೆ. ಇತ್ತೀಚಿನ ಸೆಲೆಬ್ಸ್ ಇದನ್ನೇ ಹೆಚ್ಚು ಬಯಸಿ ಎಲ್ಲಾ ಸಮಾರಂಭಗಳಿಗೂ ಧರಿಸಿ ಬರುತ್ತಾರೆ. ಹೀಗಾಗಿ ಇಂದಿನ ತರುಣಿಯರು ಈ ಡ್ರೆಸ್‌ ಆರಿಸಿ ತಮ್ಮ ವಾರ್ಡ್‌ ರೋಬ್‌ ನಲ್ಲಿ ಪ್ರಾಥಮಿಕ ಸ್ಥಾನ ನೀಡುತ್ತಾರೆ. ಇದು ಅವರ ಲುಕ್ಸ್ ಗೆ ಹೆಚ್ಚಿನ ಕಳೆ ತರುತ್ತದೆ. ಇದನ್ನು ಫ್ರೆಂಡ್‌ ಬರ್ತ್‌ ಡೇ ಪಾರ್ಟಿ ಅಥವಾ ಇನ್ನಾವುದೇ ಈವ್ನಿಂಗ್ ಪಾರ್ಟಿಗೆ ಧರಿಸಿದರೂ ಚೆನ್ನಾಗಿರುತ್ತದೆ. ಇದು ಅವರನ್ನು ಹಾಟ್‌, ಸೆಕ್ಸಿ, ಗ್ಲಾಮರಸ್‌ ಆಗಿಸಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ಆದರೆ ಇಲ್ಲಿ ನೆನಪಿಡತಕ್ಕ ಒಂದು ಮುಖ್ಯ ವಿಷಯ ಎಂದರೆ, ನೀವು ಬೇರ್‌ ಶೋಲ್ಡರ್‌ ಡ್ರೆಸ್‌ ಧರಿಸಿ ಅಥವಾ ಯಾವುದೇ ಲೇಟೆಸ್ಟ್ ಡಿಸೈನ್‌ ಡ್ರೆಸ್‌, ಅದು ನಿಮ್ಮ ಫಿಸಿಕಲ್, ಕಂಫರ್ಟ್‌, ಸೈಜ್‌, ಪ್ರಿಂಟ್ಸ್, ಕಲರ್‌ ಇತ್ಯಾದಿ ಗಮನಿಸಿ ಆರಿಸದಿದ್ದರೆ, ಅದು ನಿಮ್ಮ  ಗ್ರೇಸ್‌ ಹೆಚ್ಚಿಸುವ ಬದಲು ಇವರು ಅಂದವನ್ನೂ ಕೆಡಿಸುತ್ತದೆ. ಜೊತೆಗೆ ನಿಮಗೆ ಅದನ್ನು ಧರಿಸಿ ಇರಿಸುಮುರಿಸಾಗಬಾರದು. ಹೀಗಾಗಿ ಒಂದಲ್ಲ 4 ಸಲ ಗಮನಿಸಿಯೇ ಖರೀದಿಸಿ! ನಿಮಗೆ ಅದು ಎಷ್ಟು ಸೂಟ್‌ ಆಗುತ್ತದೆ ಎಂಬುದೇ ಮುಖ್ಯ.

ಪ್ರಿಂಟ್ಹೇಗಿರಬೇಕು?

ಪ್ರತಿ ಡ್ರೆಸ್ಸಿನಲ್ಲೂ ಥಳಕು ಬಳಕು ತುಂಬಿದ ಪ್ರಿಂಟ್‌ ಡಿಸೈನ್‌ ಇರಲೇಬೇಕು ಎಂದೇನಿಲ್ಲ. ಆಫ್‌ ಶೋಲ್ಡರ್‌ ಡ್ರೆಸ್‌ ತನ್ನದೇ ಡಿಸೈನ್ ಹಾಗೂ ರಚನೆಯಿಂದ ಹಾಟ್‌ ಎನಿಸುತ್ತದೆ, ಜೊತೆಗೆ ಅದು ಸಿಂಗಲ್ ಕಲರ್‌ಪ್ರಿಂಟ್‌ ನಲ್ಲಿದ್ದರೆ, ಅದಿನ್ನೂ ಹೆಚ್ಚು ಆಕರ್ಷಕ ಎನಿಸುತ್ತದೆ. ಅಂದ್ರೆ ಸರಳತೆಯಲ್ಲೂ ಸೌಂದರ್ಯ! ಇತ್ತೀಚೆಗೆ ಡೆನಿಂ ಆಫ್‌ ಶೋಲ್ಡರ್‌ ಡ್ರೆಸ್‌, ಶಿಮರಿ ಆಫ್‌ ಶೋಲ್ಡರ್‌ ಡ್ರೆಸ್‌, ಲೈಟ್‌ ನೆಕ್‌ ಡೌನ್‌ ಡ್ರೆಸ್‌, ಒನ್‌ ಕಲರ್‌ ಲಾಂಗ್‌ ಸ್ಲೀವ್ಸ್ ಆಫ್‌ ಶೋಲ್ಡರ್‌ ಡ್ರೆಸ್‌, ಒನ್‌ ಶೋಲ್ಡರ್‌ ಡೌನ್‌ ಡ್ರೆಸ್‌, ಪೀಚ್‌ ಪಿಂಕ್ ಆಫ್‌ ಶೋಲ್ಡರ್‌ ಡ್ರೆಸ್‌ ಹೆಚ್ಚು ಜನಪ್ರಿಯತೆ ಗಳಿಸಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ