ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರಮುಖ ಎನಿಸುವ ಅಸ್ಸಾಂ ಎಲ್ಲೆಲ್ಲೂ ಹಸಿರು ತುಂಬಿಕೊಂಡು ಸುಂದರ ಪರ್ವತ ಶೃಂಖಲೆಗಳಿಂದ ಅನಾಯಾಸವಾಗಿ ಯಾರನ್ನಾದರೂ ಆಕರ್ಷಿಸುತ್ತದೆ. ಅಲ್ಲಿನ ನಡೆನುಡಿ, ಸಂಸ್ಕೃತಿ, ಆಹಾರ ವಿಹಾರ, ಋತು ಎಲ್ಲವೂ ಒಂದಕ್ಕಿಂತ ಒಂದು ಸುಂದರ! ಅಲ್ಲಿನ ಸ್ಥಳೀಯ ಹೆಂಗಸರ ಮುಖ್ಯ ಧಿರಿಸು ಎಂದರೆ ಮೇಖಾ ಚಾದೋರ್‌. ಈ ಸಾಂಪ್ರದಾಯಿಕ ಉಡುಗೆ ಬಹುತೇಕ ಸಿಲ್ಕ್ ಯಾ ಕಾಟನ್‌ ಆಗಿರುತ್ತದೆ. ಅದರ ಮೇಲೆ ಸುರಸುಂದರ ಕಸೂತಿಯ ವಿನ್ಯಾಸಗಳಿರುತ್ತವೆ. ಆದರೆ ಇತ್ತೀಚೆಗೆ ಆಧುನಿಕತೆಯ ಸುಳಿಗಾಳಿಯಿಂದ ಈ ಬಗೆಯ ಉಡುಗೆಗಳ ಕ್ರೇಝ್ ಕಡಿಮೆ ಎಂದೇ ಹೇಳಬಹುದು. ಏಕೆಂದರೆ ಆಧುನಿಕ ಯುವ ಜನತೆ ಈ ಪ್ರಾಚೀನ ಡಿಸೈನ್‌ ಗಳನ್ನು ಅಷ್ಟಾಗಿ ಮೆಚ್ಚಿಕೊಳ್ಳುತ್ತಿಲ್ಲ, ಹೀಗಾಗಿ ಇದರ ನೇಕಾರರು ಆರ್ಥಿಕವಾಗಿ ಕುಗ್ಗಿ ಹೋಗಿರುತ್ತಾರೆ. ಸಹಜವಾಗಿಯೇ ಜನ ನೌಕರಿ ಬೇಟೆಗೆ ಭಾರತವಿಡೀ ಹರಡಿದ್ದಾರೆ.

ಸಂಯುಕ್ತಾರ ಸಾಹಸ

ಅಸ್ಸಾಂ ರಾಜ್ಯದ ರಾಜಧಾನಿ ಗೌಹಾಟಿ ನಿವಾಸಿ ಫ್ಯಾಷನ್‌ ಡಿಸೈನರ್‌ ಸಂಯುಕ್ತಾ ದತ್ತಾ ಇಂಥದೇ ಕರಕುಶಲ ನೇಕಾರರನ್ನು ಒಗ್ಗೂಡಿಸಿ, ಅವರ ಸಂಪಾದನೆಗೊಂದು ದಾರಿ ಮಾಡಿದ್ದಾರೆ. ಈ ರೀತಿ ರೂಪುಗೊಂಡಿರುವ ಅಸ್ಸಾಂ ಸಿಲ್ಕ್ ಮೂಂಗಾ ಸಿಲ್ಕ್ ಸೀರೆಗಳನ್ನು ಮಾರುಕಟ್ಟೆಗೆ ತಲುಪಿಸಿ, ಅವರ ಕರಕುಶಲತೆಯನ್ನು ವಿಶ್ವವಿಡೀ ಹರಡುತ್ತಿದ್ದಾರೆ. ಹೀಗಾಗಿ ಈ ನೇಕಾರರ ಮುಂದಿನ ಪೀಳಿಗೆ ಇದನ್ನು ಕಲಿಯಲು ಇತ್ತೀಚೆಗೆ ಆಸಕ್ತಿ ತೋರಿಸುತ್ತಿದೆ.

ಇಂದು ಮೇಖಾ ಚಾದೋರ್

ವಿಶ್ವವಿಡೀ ತನ್ನ ಸ್ಟೈಲಿಶ್‌ ಡಿಸೈನ್ಸ್ ನಿಂದಾಗಿ ಬಹು ಚರ್ಚಿತ ಉಡುಗೆ ಎನಿಸಿದೆ. ಲ್ಯಾಕ್ಮೆ ಫ್ಯಾಷನ್‌ ವೀಕ್‌ ವಿಂಟರ್‌ ಕಲೆಕ್ಷನ್‌ ನಲ್ಲಿ ಸಂಯುಕ್ತಾರ `ಚಿಕಿಮಿಕಿ' ಕಾನ್ಸೆಪ್ಟ್ ರಾಂಪ್ ಏರಿ, ಆ ರೂಪದರ್ಶಿಗಳು ಧರಿಸಿದ್ದ ಬ್ಲ್ಯಾಕ್‌ ಮೇಖಾ ಚಾದೋರ್‌ ಬೆಲ್ಟೆಡ್‌ ಸೀರೆ ಸ್ಟ್ರಾಪಿಂಗ್‌ ಚೋಲಿ ಜೊತೆ ಎಲ್ಲರ ಗಮನ ಸೆಳೆಯಿತು.

ವಿಲುಪ್ತ ಕಲೆಯ ಸಂರಕ್ಷಣೆ

ಈ ಕಲೆಯ ಬಗ್ಗೆ ಸಂಯುಕ್ತಾ ಹೇಳುತ್ತಾರೆ, ಹ್ಯಾಂಡ್‌ ಲೂಂ ವಸ್ತ್ರಗಳನ್ನು ಜನರವರೆಗೆ ತಲುಪಿಸುವುದು ಬಹಳ ಕಠಿಣ ಕೆಲಸ. ಏಕೆಂದರೆ ಇಂಥ ವಸ್ತ್ರಗಳು ಮಾರುಕಟ್ಟೆಯ ಆಧುನಿಕ ಸೀರೆಗಳ ಜೊತೆ ಹೋಲಿಸಿದಾಗ ಖಂಡಿತಾ ದುಬಾರಿ. ಪವರ್‌ ಲೂಮಿಗೆ ಅಧಿಕ ಬೇಡಿಕೆ ಸಿಗುತ್ತಿರುವ ಮುಖ್ಯ ಕಾರಣವೇ, ಅದರಲ್ಲಿ ನೇಯ್ಗೆ ಬಹು ಬೇಗ ಬೇಗ ಹಾಗೂ ಕೈಮಗ್ಗಕ್ಕೆ ಹೋಲಿಸಿದಾಗ ಅಗ್ಗ ಆಗಿರುತ್ತದೆ. ಆದರೆ ಕೈಮಗ್ಗದ ನೇಯ್ಗೆಯ ಸೀರೆಗಳ ಬೆಡಗು ಎಂದೆಂದೂ ಮಾಸುವುದಿಲ್ಲ.

ಪವರ್‌ ಲೂಮಿನಲ್ಲಿ ಅವರು ಈ ಅಸ್ಸಾಂ ಸಿಲ್ಕ್ ಸೀರೆಗಳ ಬೆಡಗನ್ನು ಎಂದೂ ತರಲಾಗದು. ಈ ಕಾರಣಕ್ಕಾಗಿಯೇ ಈ ಕೈಮಗ್ಗದ ನೇಕಾರರ ಕುಶಲಕಲೆ ಜನರ ಅಭಿಮಾನ ಗಳಿಸುತ್ತದೆ. ಹೀಗಾಗಿ ಈ ಕಲೆಯನ್ನು ಮಾಸಿಹೋಗದಂತೆ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಸಂಯುಕ್ತಾ, ಮೇಖಾ ಚಾದೋರ್‌ ಡ್ರೆಸ್‌ ಮುಂದಿನ ಪೀಳಿಗೆಗೂ ಸರಾಗವಾಗಿ ಸಾಗುತ್ತಿರಬೇಕು ಎನ್ನುತ್ತಾರೆ. ಹಿಂದೆಲ್ಲ ತಾನು ಅಸ್ಸಾಮಿನಿಂದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದಾಗ, ಜನ ಇತರ ಎಲ್ಲಾ ಬಗೆಯ ವೆರೈಟಿಗಳ ಬಗ್ಗೆ ಕೇಳುತ್ತಿದ್ದರು, ಆದರೆ ಅಸ್ಸಾಂ ಸಿಲ್ಕ್, ಮೇಖಾ ಚಾದೋರ್‌ ಅವರಿಗೆ ತಿಳಿಯುತ್ತಿರಲಿಲ್ಲ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ