ಮಳೆಗಾಲದಂಥ ಮಜವಾದ ಕಾಲ ಮತ್ತೊಂದಿಲ್ಲ. ಶೀತಲ ವಾತಾವರಣ, ಬಿಸಿ ಬಿಸಿ ಬೋಂಡ, ಪಕೋಡ, ಕಾಫಿ/ಟೀ ಹೀರುತ್ತಾ ಮಜವಾಗಿ ಕಾಲ ಕಳೆಯಬಹುದು. ಆದರೆ ಈ ಋತು ಸ್ಕಿನ್ ಅಲರ್ಜಿ ಕೊಂಡು ತರುತ್ತದೆ. ಈ ಅಲರ್ಜಿ ದೂರಗೊಳಿಸದಿದ್ದರೆ ಇದು ಚರ್ಮದ ಸೌಂದರ್ಯ ಹಾಳು ಮಾಡುತ್ತದೆ.
ಬಗೆಬಗೆಯ ಸ್ಕಿನ್ ಅಲರ್ಜಿ
ಈ ಸೀಸನ್ ನಲ್ಲಿ ಸ್ಕಿನ್ ಅಲರ್ಜಿ ಮಾಮೂಲಿ ಸಮಸ್ಯೆ. ಬನ್ನಿ, ಈ ವಿವಿಧ ಸಮಸ್ಯೆಗಳ ಬಗ್ಗೆ ವಿವರವಾಗಿ ಅರಿಯೋಣ. ಇದರಿಂದ ಪಾರಾಗುವ ದಾರಿ ತಿಳಿಯೋಣ.
ಎಗ್ಸಿಮಾ
ಈ ಸಮಸ್ಯೆಯಿಂದ ಚರ್ಮದಲ್ಲಿ ಹೆಚ್ಚಿನ ಬೆವರು, ಹೆಚ್ಚು ಉಷ್ಣತೆ, ಚರ್ಮದ ರಕ್ಷಣಾಪದರ ಹಾಳಾಗುವಿಕೆ, ಆರ್ದ್ರತೆಯ ತಗ್ಗುವಿಕೆ ಇತ್ಯಾದಿ ಹೆಚ್ಚುತ್ತವೆ. ಇದರಿಂದ ಚರ್ಮದಲ್ಲಿ ರೆಡ್ ನೆಸ್, ಉರಿ, ನವೆ, ಕಡಿತ, ಊತ, ಪದರ ಏಳುವಿಕೆ ಇತ್ಯಾದಿ ಹಿಂಸೆ ಕಾಡುತ್ತದೆ. ರಕ್ತ ಸಹ ತೊಟ್ಟಿಕ್ಕಬಹುದು.
ಇಂಥ ಸ್ಥಿತಿಯಲ್ಲಿ ಮನೆಮದ್ದು, ಸೆಲೂನ್ ಚಿಕಿತ್ಸೆ ಬದಲಾಗಿ ಚರ್ಮ ತಜ್ಞರ ಸಲಹೆ ಪಡೆಯಬೇಕು. ಇದರ ಅಸಹನೀಯ ನೋವು ನಿಮ್ಮ ಚರ್ಮದ ಸೌಂದರ್ಯ ಹಾಳುಗೆಡಹುತ್ತದೆ. ಈ ಮಳೆಗಾಲದಲ್ಲಿ ಸಾಮಾನ್ಯವಾಗಿ ಡೈಶಿದ್ರೋಟಿಕ್ ಎಗ್ಸಿಮಾ ಹೆಚ್ಚಾಗಿ ಕಾಡುತ್ತದೆ, ಇದರಿಂದ ಚರ್ಮದಲ್ಲಿ ಹೊಪ್ಪಳೆ, ಬಿರುಕು ಕಾಣಿಸಬಹುದು.
ಎಂಥ ಟೆಸ್ಟ್ ಮಾಡಿಸಬೇಕು? : ಎಗ್ಸಿಮಾ ಕುರಿತು ಪರೀಕ್ಷೆ ಮಾಡಿಸಲು ಪ್ಯಾಚ್ ಟೆಸ್ಟ್, ಅಲರ್ಜಿ ಟೆಸ್ಟ್, ಎಂಥ ಪಥ್ಯದ ಆಹಾರ ಇತ್ಯಾದಿ ಗಮನಿಸಬೇಕು. ಆಗ ಮಾತ್ರ ಅಲರ್ಜಿಯ ಕಾರಣವನ್ನು ಸರಿಯಾಗಿ ಗುರುತಿಸಲು ಸಾಧ್ಯ.
ಸೂಕ್ತ ಚಿಕಿತ್ಸೆ : ಚರ್ಮವನ್ನು ಸದಾ ಮಾಯಿಶ್ಚರೈಸ್ಡ್ ಆಗಿಟ್ಟುಕೊಳ್ಳಿ. ಸದಾ ಕೆಮಿಕಲ್ಸ್ ರಹಿತ ಮೈಲ್ಡ್ ಸೋಪ್, ಹರ್ಬಲ್ ಕ್ರೀಂ ಆರಿಸಿ. ಇದರಲ್ಲಿ ಡ್ರೈನೆಸ್ ಘಟಕ ಪರ್ಫ್ಯೂಮ್ ಇರಬಾರದು. ಅದು ಚರ್ಮದ ತಜ್ಞರಿಂದ ಪಾಸ್ ಆಗಿರಬೇಕು. ಸ್ಥಿತಿ ಗಂಭೀರವಾದರೆ ವೈದ್ಯರು ಆ್ಯಂಟಿಬಯೋಟಿಕ್ಸ್ ಸಹ ನೀಡಬಹುದು.
ಇವುಗಳಿಂದ ದೂರವಿರಿ : ಈ ಸ್ಥಿತಿಯಲ್ಲಿ ಕುದಿವ ನೀರಿನಿಂದ ಸ್ನಾನ ಬೇಡ. ಜೊತೆಗೆ ಗಾಢ ಕೆಮಿಕಲ್ಸ್ ನಿಂದ ಕೂಡಿದ ಸೋಪ್, ಕ್ರೀಂ, ಮಾಯಿಶ್ಚರೈಸರ್ಸ್ ಬೇಡ. ಏಕೆಂದರೆ ಇದು ಚರ್ಮದ ಆರ್ದ್ರತೆಯನ್ನು ನಾಶಪಡಿಸಿ, ಚರ್ಮವನ್ನು ಮತ್ತಷ್ಟು ಡ್ರೈಗೊಳಿಸುತ್ತದೆ.
ಹೀಗಾಗಿ ಚರ್ಮವನ್ನು ಸದಾ ಕ್ಲೀನ್‌ಮಾಯಿಶ್ಚರೈಸ್ಡ್ ಆಗಿಟ್ಟುಕೊಳ್ಳಿ, ಅದರ ಮೇಲೆ ಬೆವರು ಜಮೆಗಟ್ಟದಂತೆ ಮಾಡಿ. ನೈಲಾನ್ ಉಡುಗೆ ಬದಲು ಸಡಿಲವಾದ ಕಾಟನ್ ಡ್ರೆಸ್ ಧರಿಸಿರಿ. ಸೋಂಕು ತಗುಲಿದ ಭಾಗವನ್ನು ಗೀರಿ ಚಿವುಟಿ ಮಾಡಬೇಡಿ.
ರಿಂಗ್ ವರ್ಮ್
ಈ ಮಳೆಗಾಲದಲ್ಲಿ ಚರ್ಮದ ಮೇಲೆ ರಿಂಗ್ ವರ್ಮ್ ಆಕ್ರಮಿಸುವುದು ಮಾಮೂಲಿ. ಅದರಲ್ಲೂ ಸೆನ್ಸಿಟಿವ್‌ಸ್ಕಿನ್ ಇದಕ್ಕೆ ಬೇಗ ಈಡಾಗುತ್ತದೆ. ಏಕೆಂದರೆ ಮಳೆಯಿಂದಾಗಿ ವಾತಾವರಣದಲ್ಲಿ ಹೆಚ್ಚು ಹ್ಯುಮಿಡಿಟಿ, ಅಂಟಂಟು ಫಂಗಸ್‌ಹೆಚ್ಚಾಗುವಂತೆ ಮಾಡುತ್ತವೆ. ಇದರಲ್ಲಿ ಮೊದಲಿನಿಂದಲೇ ಚರ್ಮದಲ್ಲಿ ಸಣ್ಣ ಸಣ್ಣ ಕೆಂಪು ಗಂಧೆ, ಗುಳ್ಳೆ ಕಾಣಿಸಿಕೊಳ್ಳುತ್ತದೆ. ಉಡುಪಿನ ಘರ್ಷಣೆಯಿಂದ ಇದರ ಸೋಂಕು ಹರಡುತ್ತದೆ.
ಸೂಕ್ತ ಚಿಕಿತ್ಸೆ : ಲೂಸ್ ಕಾಟನ್ ಡ್ರೆಸ್ ಮಾತ್ರ ಧರಿಸಿ. ಮಳೆಯಲ್ಲಿ ನೆಂದು ಬಂದಾಗ ಅಗತ್ಯ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ಇದರಿಂದ ಚರ್ಮದ ಮೇಲಿನ ಬೆವರು, ಕೊಳಕು ತಾನಾಗಿ ದೂರವಾಗುತ್ತದೆ. ಚರ್ಮ ಸದಾ ಮಾಯಿಶ್ಚರೈಸ್ಡ್ ಆಗಿರಬೇಕು.
ಕಂಕುಳದ ಭಾಗಕ್ಕೆ ಅಗತ್ಯ ಆ್ಯಂಟಿ ಫಂಗಲ್ ಪೌಡರ್ ಉದುರಿಸಿ. ಸೆಲ್ಫ್ ಟ್ರೀಟ್ ಮೆಂಟ್ ಯಾ ಕೆಮಿಸ್ಟ್ ಕೊಟ್ಟ ಔಷಧಿಗೆ ಮಾರು ಹೋಗದಿರಿ. ಅದರಲ್ಲಿ ಸ್ಟೆರಾಯ್ಡ್ಸ್ ಇದ್ದರೆ ನಿಮ್ಮ ಸಮಸ್ಯೆ ಉಲ್ಪಣಗೊಂಡೀತು.
ಇವುಗಳಿಂದ ದೂರವಿರಿ : ಯಾವ ಭಾಗದಲ್ಲಿ ಸೋಂಕು ತಗುಲಿದೆಯೋ, ಅಲ್ಲಿ ನವೆ, ಕಡಿತ ಕಾಡಿದರೂ ಗೀರಲು, ಕೆರೆಯಲು ಹೋಗದಿರಿ. ಅದನ್ನು ಮತ್ತೆ ಮತ್ತೆ ಮುಟ್ಟಿ ನೋಡುವುದೂ ಬೇಡ, ಇದರಿಂದ ಸೋಂಕು ಹರಡುವುದೇ ಹೆಚ್ಚು. ಬೆವರು ಹೆಚ್ಚಿದಾಗೆಲ್ಲ ದೇಹವನ್ನು ಶುಚಿಯಾಗಿ, ಶುಭ್ರವಾಗಿಡಿ. ಬೆವರು ಸೋಂಕನ್ನು ಹೆಚ್ಚಿಸುತ್ತದೆ.
ಹೈಪರ್ ಪಿಗ್ಮಿಂಟೇಶನ್
ಹೆಚ್ಚಿನ ಹ್ಯುಮಿಡಿಟಿಯಿಂದಾಗಿ ಮಳೆಗಾಲದಲ್ಲಿ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಕಾಡಬಹುದು. ಇದರಿಂದಾಗಿ ಮುಖದ ಚರ್ಮ ಡಲ್ ಆಗಿ, ಅದರಲ್ಲಿ ಪ್ಯಾಚೆಸ್ ಸಹ ಆಗಬಹುದು. ಸೂರ್ಯನ ನೇರ ಸಂಪರ್ಕಕ್ಕೆ ಚರ್ಮದ ಮೆಯೋನಸೈಟ್ಸ್ ಬಂದಾಗ ಈ ಸಮಸ್ಯೆ ಹೆಚ್ಚಬಹುದು.
ಮಳೆಗಾಲದಲ್ಲಿ ಸೂರ್ಯಕಿರಣ ಅತಿ ತೀಕ್ಷ್ಣವಲ್ಲದಿದ್ದರೂ, ಮೆಲನಿನ್ ಉತ್ಪಾದನೆ ಹೆಚ್ಚುತ್ತದೆ. ಹೀಗಾಗಿ ಈ ಹೈಪರ್ ಪಿಗ್ಮಿಂಟೇಶನ್ ಸಮಸ್ಯೆ ಹೆಚ್ಚುತ್ತದೆ ಯಾರಿಗೆ ಚರ್ಮದಲ್ಲಿ ಆ್ಯಕ್ನೆ ಪ್ರೋನ್, ಸೆನ್ಸಿಟಿವ್ ನೆಸ್ ಇರುತ್ತದೋ ಅಂಥವರು ಮಳೆಗಾಲದಲ್ಲಿ ಈ ಸಮಸ್ಯೆಗೆ ಬೇಗ ತುತ್ತಾಗುತ್ತಾರೆ.
ಸೂಕ್ತ ಚಿಕಿತ್ಸೆ : ಸಾಮಾನ್ಯವಾಗಿ ಎಲ್ಲರೂ ಏಜಿಂಗ್ ತಡೆಯಲು ವಿಟಮಿನ್‌ಬಳಸುತ್ತಾರೆ. ಇದನ್ನು ವಾರಕ್ಕೆ 3 ಸಲ ಮುಖದ ಮೇಲೆ ಹಚ್ಚುವುದರಿಂದ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆಯನ್ನು ಜಡದಿಂದ ನಿವಾರಿಸುತ್ತದೆ. ಆಧುನಿಕ ಸಂಶೋಧನೆಗಳ ಪ್ರಕಾರ, ಇದೀಗ ಹೈಡ್ರೋಕ್ವಿನೋನ್ ಹೈಪರ್ ಪಿಗ್ಮೆಂಟೇಶನ್ ಗೂ ಚಿಕಿತ್ಸೆ ಇದೆ.
ಅದೇ ತರಹ ವಿಟಮಿನ್ ಇ ಯುಕ್ತ ಕ್ರೀಂನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಗುಣಗಳಿದ್ದು, ಇದು ಕೊಲೋಜೆನ್ ಉತ್ಪಾದನೆ ಹೆಚ್ಚಿಸಿ, ಕಲೆಗುರುತು ದೂರಗೊಳಿಸಿ, ಪಿಗ್ಮೆಂಟೇಶನ್ ನಿವಾರಿಸುವಲ್ಲಿ ಸಹಕರಿಸುತ್ತದೆ. ಈ ಮಳೆಗಾಲದಲ್ಲಿ ಲೈಟ್ ವೇಟ್, ಜೆಲ್‌ವಾಟರ್ ಬೇಸ್ಡ್, ನಾನ್ ಆಯ್ಲಿ ನಾನ್ ಕಮೆಡೋಜೆನಿಕ್ ಸನ್ ಸ್ಕ್ರೀನ್ ಬಳಸಿರಿ, ಇದು ಪೋರ್ಸ್ ನ್ನು ಬ್ಲಾಕ್ ಮಾಡುವುದಿಲ್ಲ.
ಇವುಗಳಿಂದ ದೂರಿವಿರಿ : ಆದಷ್ಟೂ ನೇರವಾಗಿ ಸೂರ್ಯನ ಸಂಪರ್ಕಕ್ಕೆ ಬರಬೇಡಿ ಹೊರಗೆ ಹೋಗಲೇಬೇಕಿದ್ದರೆ ಅಗತ್ಯ ಸನ್ ಸ್ಕ್ರೀನ್ ಹಚ್ಚಿಕೊಂಡು, ಆದಷ್ಟೂ ಕವರ್ ಮಾಡಿಕೊಂಡೇ ಹೊರಡಿ. ಆದಷ್ಟು ಸೋಂಕಿನ ಭಾಗವನ್ನು ಮತ್ತೆ ಮತ್ತೆ ಮುಟ್ಟದಿರಿ.
ಸ್ಕೇಬೀಸ್
ಇದು ಸಹ ಸೋಂಕಿನ ರೋಗ. ಅಂದಹಾಗೆ ಯಾರು ಬೇಕಾದರೂ ಇದಕ್ಕೆ ತುತ್ತಾಗಬಹುದು, ಮಕ್ಕಳೇ ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರೆ. ಈ ಸಾಂಕ್ರಾಮಿಕ ರೋಗ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅತಿ ಸಣ್ಣ ಕೀಟದಿಂದ ಇದು ಉಂಟಾಗುತ್ತದೆ. ಇದರಿಂದ ಚರ್ಮದಲ್ಲಿ ಉರಿ, ನವೆ, ಕಡಿತ, ಕೆಂಪು ದದ್ದುಗಳಾಗಬಹುದು. ಈ ಕೀಟ ಸೋಫಾ, ಫರ್ನೀಚರ್ ಗಳ ಸಂದಿನಲ್ಲಿ ವಾಸಿಸುತ್ತದೆ. ಯಾರು ಇದನ್ನು ತಗುಲಿಸಿಕೊಳ್ಳುತ್ತಾರೋ ತಕ್ಷಣ ಈ ರೋಗಕ್ಕೆ ತುತ್ತಾಗುತ್ತಾರೆ. ರಾತ್ರಿ ಹೊತ್ತು ನವೆ ಕಡಿತ ಬಹಳ ಕಾಡುತ್ತದೆ. ಅಲ್ಲಿ ಕೆರೆಯುವುದರಿಂದ ಹುಣ್ಣಾಗಿ, ಅದು ವ್ರಣವಾಗುತ್ತದೆ. ಈ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ಧಾವಿಸಿ.
ಸೂಕ್ತ ಚಿಕಿತ್ಸೆ : ಚರ್ಮ ತಜ್ಞರು ಇದಕ್ಕೆ ಮೊದಲು ಪರ್ಮೇಥ್ರಿನ್ ಕ್ರೀಂ ಹಚ್ಚಲು ಹೇಳುತ್ತಾರೆ, ಅದು ಈ ಕೀಟ ಮೊಟ್ಟೆ ನಷ್ಟಗೊಳಿಸಲು ನೆರವಾಗುತ್ತದೆ. ಜೊತೆಗೆ 1% SPF ಕ್ರೀಂ ಸಹ ಬಳಸಬೇಕಾಗುತ್ತದೆ.
ಆದರೆ ನೀವೇ ಇದರ ಸ್ವಚಿಕಿತ್ಸೆಗೆ ಧಾವಿಸದಿರಿ. ವೈದ್ಯರು ಸಲಹೆ ಇತ್ತಾಗ ಮಾತ್ರ ಮುಂದುವರಿಯಿರಿ. ಸೂಕ್ತ ಚಿಕಿತ್ಸೆ ನಿಮ್ಮನ್ನು 15-20 ದಿನಗಳಲ್ಲೇ ವಾಸಿ ಮಾಡುತ್ತದೆ. ಆದರೆ ನೀವೇ ಸ್ವಚಿಕಿತ್ಸೆಗೆ ತೊಡಗಿದರೆ ಅದು ತಿಂಗಳುಗಟ್ಟಲೇ ಮುಂದುವರಿಯಬಹುದು.
ಇವುಗಳಿಂದ ದೂರವಿರಿ : ಸೋಂಕಿನ ಭಾಗವನ್ನು ಎಂದೂ ಗೀಚಿ, ಪರಚಿ ಮಾಡಬೇಡಿ. ಅಕಸ್ಮಾತಾಗಿ ಕೈ ತಗುಲಿದರೆ ತಕ್ಷಣ ಡೆಟಾಲ್ ಬಳಸಿ ಕೈ ತೊಳೆಯಿರಿ. ಇಲ್ಲದಿದ್ದರೆ ದೇಹದ ಬೇರೆ ಕಡೆಯೂ ಸಂಕು ಹರಡೀತು. ನೀವು ಬಳಸುವ ಎಲ್ಲಾ ಹರ್ಬಲ್ ಸೋಪು, ಫೇಸ್ ವಾಶ್, ಕ್ರೀಂ, ಆಯಿಲ್ ಗಳಲ್ಲಿ ಬೇವಿನ ಅಂಶ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಇದು ಆ ಕೀಟವನ್ನು ಬೇಗ ನಾಶಪಡಿಸುತ್ತದೆ. ಜೊತೆಗೆ ನೀವು ಎಸೆನ್ಶಿಯಲ್ ಆಯಿಲ್ ಗಳಾದ ಕ್ಲೋವ್, ವ್ಯಾವೆಂಡರ್, ಜ್ಯಾಸ್ಮಿನ್ ಆಯಿಲ್ ಗಳನ್ನು ಸೋಂಕಿನ ಭಾಗಕ್ಕೆ ಸವರಬೇಕು. ಇದು ಕೀಟ ನಾಶಗೊಳಿಸಿ, ಆ ಭಾಗಕ್ಕೆ ತಂಪು ಒದಗಿಸುತ್ತದೆ. ಆ್ಯಲೋವೇರಾ ಜೆಲ್ ಚರ್ಮದ ನವೆ, ಕಡಿತ, ಉರಿ ಇತ್ಯಾದಿ ದೂರ ಮಾಡುತ್ತದೆ.
ಹೀಟ್ ರಾಶೆಸ್
ವಾತಾವರಣದಲ್ಲಿ ತೇವಾಂಶ, ಬೆವರು, ಅಶುಚಿತ್ವದ ಕಾರಣ ಚರ್ಮದ ಓಪನ್ ಪೋರ್ಸ್ ಕ್ಲೋಸ್ ಆಗಿ, ಚರ್ಮದಲ್ಲಿ ಅಲ್ಲಲ್ಲಿ ಬಿರುಕು, ಪದರ ಮೂಡಬಹುದು. ಇದರಲ್ಲಿ ತೀವ್ರ ಕಡಿತ, ಉರಿ, ನವೆ ತಪ್ಪದು. ಅಸಲಿಗೆ ಹ್ಯುಮಿಡಿಟಿ ಕಾರಣ ಹೆಚ್ಚು ಬೆವರಿನಿಂದಾಗಿ ಆ ಭಾಗದ ಚರ್ಮದಲ್ಲಿ ಈ ಹೀಟ್ ರಾಶೆಸ್ ಕಾಣಿಸುತ್ತದೆ. ಇದಕ್ಕೆ ಸಕಾಲಿಕ ಚಿಕಿತ್ಸೆಯಿಂದ ಪರಿಹಾರವಿದೆ.
ಸೂಕ್ತ ಚಿಕಿತ್ಸೆ : ಮನೆಗೆ ಬಂದ ತಕ್ಷಣ ನಿಮ್ಮ ಬಟ್ಟೆ ಬದಲಿಸಿ ಬೇರೆ ಧರಿಸಿ. ದೇಹದ ಉಷ್ಣತೆ ತಗ್ಗಿದ ನಂತರ ತಣ್ಣೀರ ಸ್ನಾನ ಮಾಡಿ. ಸೆಲಮೈನ್ ಗೆ ತುಸು ಆ್ಯಲೋವೇರಾ ಜೆಲ್ ಬೆರೆಸಿದ ನಂತರ ದೇಹವಿಡೀ ಹಚ್ಚಬೇಕು. ಇದು ಸ್ಕಿನ್ ಇರಿಟೇಶನ್ ದೂರಗೊಳಿಸಿ, ರಾಶೆಸ್ ನಿಂದ ಮುಕ್ತಿ ಕೊಡಿಸುತ್ತದೆ. ಸದಾ ಸ್ವಚ್ಛ ಶುಭ್ರ ಕಾಟನ್ ಉಡುಗೆಗಳನ್ನೇ ಧರಿಸಿರಿ.
ಇವುಗಳಿಂದ ದೂರವಿರಿ : ಹೊರಗೆ ರಣ ಬಿಸಿಲಿರುವಾಗ ಖಂಡಿತಾ ತಿರುಗಾಡಲು ಹೋಗಬೇಡಿ. ದೇಹದ ಉಷ್ಣತೆ ಅತಿ ಮಾಡುವ ವ್ಯಾಯಾಮಗಳಿಂದ ದೂರವಿರಿ. ಸಡಿಲ, ಅನುಕೂಲಕರ ಕಾಟನ್ ಡ್ರೆಸೆಸ್ ಮಾತ್ರ ಧರಿಸಿರಿ. ಜೊತೆಗೆ ಧಾರಾಳ ನೀರು ಕುಡಿಯುತ್ತಾ ದೇಹವನ್ನು ತಂಪಾಗಿಡಿ.
ಟಿನಿಯಾ ಕ್ಯಾಪಿಟಿಸ್
ಇದೊಂದು ಫಂಗಲ್ ಇನ್ ಫೆಕ್ಷನ್ ರೋಗವಾಗಿದ್ದು ನೆತ್ತಿ, ತೋಳು, ಕಂಗಳ ರೆಪ್ಪೆಗಳ ಬಳಿ ಕಾಡುತ್ತದೆ. ಇದು ಹೇರ್ ಶ್ಯಾಫ್ಟ್, ಫಾಲಿಕ್ಸ್ ನ್ನು ನೇರ ಆಕ್ರಮಿಸುತ್ತದೆ. ಇದು ತೇವಾಂಶ ಇರುವ ಜಾಗದಲ್ಲಿ ಬೇಗ ಹರಡುತ್ತದೆ. ಹೀಗಾಗಿ ಹೆಚ್ಚು ಬೆವರುವವರು ಇದಕ್ಕೆ ಬೇಗ ಗುರಿಯಾಗುತ್ತಾರೆ.
ಇದರಿಂದಾಗಿ ಕೂದಲು ಉದುರುವಿಕೆ, ತಲೆ ಬೋಳಾಗುವಿಕೆ ಮಾಮೂಲು. ಕೀವು ತುಂಬಿದ ಗಾಯ, ಊತ, ರೆಡ್ ನೆಸ್, ಉರಿ, ಪ್ಯಾಚಿ ಸ್ಕಿನ್ ಇತ್ಯಾದಿ ಆಗಬಹುದು. ಸಕಾಲಿಕವಾಗಿ ಚಿಕಿತ್ಸೆ ಪಡೆಯದಿದ್ದರೆ, ಶಾಶ್ವತವಾಗಿ ಚರ್ಮದ ಮೇಲೆ ಕಲೆ ಉಳಿದುಬಿಡುತ್ತದೆ, ಬಾಲ್ಡ್ ನೆಸ್ ಜೀವನವಿಡೀ ಕಾಡುತ್ತದೆ. ಹೀಗಾಗಿ ಈ ಲಕ್ಷಣ ಗುರುತಿಸಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಸೂಕ್ತ ಚಿಕಿತ್ಸೆ : ಲೈಟ್ ವೇಟ್ ಆಯಿಲ್, ಮಾಯಿಶ್ಚರೈಸರ್ ಯುಕ್ತ ಶ್ಯಾಂಪೂ, ಕಂಡೀಶನರ್ ಬಳಸಲು ಹೇಳುತ್ತಾರೆ. ನಿಮ್ಮ ಚರ್ಮದ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಇದು ಸಾಂಕ್ರಾಮಿಕ ರೋಗವಾಗಿದ್ದು, ಬೇಗ ಬೇರೆಯವರಿಗೂ ಹರಡುತ್ತದೆ. ಸೋಂಕಿನ ವ್ಯಕ್ತಿಯ ಯಾವುದೇ ಪರ್ಸನಲ್ ವಸ್ತುಗಳನ್ನು ಮುಟ್ಟದಿರಿ.
– ಪಾರ್ವತಿ ಭಟ್