ಲೇಡಿ ಸೂಪರ್​ಸ್ಟಾರ್ ನಯನತಾರಾ ಸಿನಿಮಾದಲ್ಲಿದ್ದರೆ ಸಾಕು ಆ ಸಿನಿಮಾಗೆ ಒಂದು ಗತ್ತು ಗೈರತ್ತು ಬರುತ್ತೆ. ನಯನತಾರಾ ಮಾಡೋ ಮೂವಿಗಳಲ್ಲಿ ನಾಯಕನಿಗಿಂತ ಹೆಚ್ಚು ನಾಯಕಿಯನ್ನೇ ಸಿನಿರಸಿಕರು ಮೆಚ್ಚಿಕೊಳ್ತಾರೆ.

Nayanatara (14)

ಅಷ್ಟರಮಟ್ಟಿಗೆ ಬಹುಬೇಡಿಕೆಯ ನಟಿಯಾಗಿರೋ ಮೋಸ್ಟ್​ ಗಾರ್ಜಿಯಸ್ ನಟಿ ನಯನತಾರಾ ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿದ್ದಾರೆ. ಅದೆಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ತಮಿಳು ಭಾಷೆಯ ಖ್ಯಾತ ನಟ ಸೂರ್ಯ ನಟನೆಯ ‘ಗಜಿನಿ’ ಸಿನಿಮಾ ಮೂಲಕ ಲೈಮ್​ಲೈಟ್​​ಗೆ ಬಂದ ನಯನತಾರಾ ಹಿಂತಿರುಗಿ ನೋಡಿದ್ದೇ ಇಲ್ಲ.

Nayanatara (16)

ಇದೀಗ ನಯನತಾರಾ ಕುರಿತ ಹೊಸ ಸುದ್ದಿ ಏನಪ್ಪಾ ಅಂದ್ರೆ, ತಮಗಿಂತ 33 ವರ್ಷ ದೊಡ್ಡವರಾದ ದೊಡ್ಡ ನಾಯಕ ನಟನ ಜೊತೆ ಸಿನಿಮಾ ಮಾಡುತ್ತಿರೋದು. ಹೌದು.. 40 ವರ್ಷ ವಯಸ್ಸಿನ ನಯನತಾರಾ 73 ವರ್ಷ ವಯಸ್ಸಿನ ಹೀರೋಗೆ ಹೀರೋಯಿನ್ ಆಗೋಕೆ ಹೊರಟಿದ್ದಾರೆ.

Nayanatara (12)

ಕಳೆದ ವರ್ಷ ಬಾಲಿವುಡ್​​​ ಬಾದ್​ಶಾ ಶಾರೂಖ್​​ಖಾನ್ ಜೊತೆಗಿನ ‘ಜವಾನ್’ ಚಿತ್ರದ ಸಕ್ಸಸ್​ ಬಳಿಕ ‘ನಯನ’ ಅನ್ನೋ ಸಿನಿಮಾದಲ್ಲಿ ನಯನತಾರಾ ಲೀಡಿಂಗ್ ರೋಲ್ ಮಾಡಿ ಹೊಸ ಅಲೆ ಕ್ರಿಯೇಟ್ ಮಾಡಿದ್ದರು. ಇದೀಗ ಮತ್ತೆ ಕ್ರಿಯೇಟಿವಿಟಿಗೆ ಆದ್ಯತೆ ಕೊಟ್ಟು ಮಲೆಯಾಳಂ ಚಿತ್ರರಂಗದತ್ತ ದೃಷ್ಟಿ ಹರಿಸಿದ್ದಾರೆ.

Nayanatara (10)

ಬರೋಬ್ಬರಿ 3 ವರ್ಷಗಳ ಬಳಿಕ ಮಾಲಿವುಡ್​​ಗೆ ಎಂಟ್ರಿ ಕೊಡ್ತಿರೋ ನಟಿ ನಯನತಾರಾ ದೊಡ್ಡ ಸ್ಟಾರ್​​​​ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗ್ತಿದೆ. ಮಹೇಶ್​ ನಾರಾಯಣನ್​ ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಮಲೆಯಾಳಂನ ಸೂಪರ್​ಸ್ಟಾರ್​​ಗಳಾದ 64 ವರ್ಷದ ಮೋಹನ್​​ಲಾಲ್ ಮತ್ತು 73 ವರ್ಷದ ಮುಮ್ಮುಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಫಿಲ್ಮ್​ಗೆ ಸದ್ಯಕ್ಕೆ ‘MMMN’ ಅಂತಾ ಹೆಸರಿಟ್ಟಿದ್ದು, ಇದರಲ್ಲಿ ನಯನತಾರಾ ಕೂಡ ಜೊತೆಯಾಗಿದ್ದಾರಂತೆ.

Nayanatara (11)

ಮತ್ತೊಂದು ವಿಶೇಷ ಅಂದ್ರೆ, ಬರೋಬ್ಬರಿ 16 ವರ್ಷಗಳ ಬಳಿಕ ಮೋಹನ್​​ಲಾಲ್ ಮತ್ತು ಮುಮ್ಮುಟ್ಟಿ ಜೊತೆಗೆ ನಟಿಸುತ್ತಿರೋದು. 2016ರಲ್ಲಿ ‘ಪುತಿಯ ನಿಯಮ’ ಅನ್ನೋ ಸಿನಿಮಾದಲ್ಲಿ ಮುಮ್ಮುಟ್ಟಿ ಜೊತೆ ನಟಿಸಿದ್ದ ನಯನತಾರಾ ಬರೋಬ್ಬರಿ 9 ವರ್ಷಗಳ ಬಳಿಕ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Nayanatara (9)

ಈ ಮೂವರ ಜೊತೆಗೆ ನಟ ಫಹಾದ್ ಫಾಸಿಲ್ ಕೂಡ ನಟನೆ ಮಾಡಿದ್ದು, ಈಗಾಗಲೇ ಶ್ರೀಲಂಕಾ, ಲಂಡನ್​, ಥೈಲ್ಯಾಂಡ್, ವಿಶಾಖಪಟ್ಟಣಂ, ದೆಹಲಿ, ಹೈದ್ರಾಬಾದ್, ಕೊಚ್ಚಿ ಸೇರಿದಂತೆ ಹಲವರೆಡೆ 150 ದಿನಗಳ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಇದೀಗ ನಯನತಾರಾ ಶೂಟಿಂಗ್​ ಸ್ಪಾಟ್​ಗೆ ಎಂಟ್ರಿ ಕೊಡುವ ದೃಶ್ಯವನ್ನು ಶೂಟ್ ಮಾಡಿದ್ದು, ಅವರ ನಟನೆಯನ್ನೂ ಕನ್ಫರ್ಮ್ ಮಾಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ