ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೆಳತಿ ಪವಿತ್ರಾಗೌಡ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆ ಜೈಲು ಸೇರಿ ವಾಪಸ್ ಬಂದಿದ್ದ ಪವಿತ್ರಾಗೌಡ ತುಂಬಾ ಬಿಂದಾಸ್ ಆಗಿದ್ದಾರೆ. ದೇವಸ್ಥಾನಗಳಿಗೆ ಸುತ್ತುತ್ತಿರುವ ದಚ್ಚು ಗೆಳತಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಹೋಗಿ ಗಂಗೆಯಲ್ಲಿ ಮಿಂದೆದ್ದು ಬಂದಿದ್ದಾರೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಫ್ಯಾಶನ್ನ್ನು ಕಾಪಿ ಮಾಡಿದ್ದಾರಾ ಅನ್ನೋದು ಭಾರೀ ವೈರಲ್ ಆಗ್ತಿದೆ.
ಮೊನ್ನೆ ಮೊನ್ನೆ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಜೊತೆ ದರ್ಶನ್ ಬಂದಿದ್ದರು. ಬೆನ್ನು ನೋವಿನ ನಡುವೆಯೂ ನಗುತ್ತಲೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಸಿಲ್ವರ್ ವರ್ಕ್ ಬಾರ್ಡರ್ ಇರುವ ನೀಲಿ ಬಣ್ಣದ ಸೀರೆ ಉಟ್ಟು ವಿಜಯಲಕ್ಷ್ಮಿ ದರ್ಶನ್ ಕಂಗೊಳಿಸಿದ್ದರು. ಆ ಫೋಟೋಗಳನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಕೂಡ ಮಾಡಿದ್ದರು.
ಸೇಮ್ ಟು ಸೇಮ್ ಬ್ಲೂ ಬಣ್ಣದ ಸೀರೆ ಉಟ್ಟಿರುವ ದರ್ಶನ್ ಗೆಳತಿ ಪವಿತ್ರಾಗೌಡ ಕೂಡ ಫೋಟೋಸ್ ಅಪ್ಲೋಡ್ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಅದೇ ಸೀರೆಯಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅರೇ ಸೇಮ್ ಇದೇ ತರಹದ ನೀಲಿ ಬಣ್ಣದ ಸೀರೆಯಲ್ಲಿ ಇತ್ತೀಚೆಗೆ ಪವಿತ್ರಾ ಗೌಡ ಕೂಡ ಮಿಂಚಿದ್ದರು ಅಲ್ವಾ..? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದು ಕಾಕತಾಳೀಯವೋ ಏನೋ 3 ದಿನಗಳ ಅಂತರದಲ್ಲಿ ಇಬ್ಬರು ಒಂದೇ ತರಹದ ಸೀರೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ದರ್ಶನ್ ಜೈಲಿಗೆ ಹೋದಾಗ ಕೆಲ ದಿನಗಳ ಕಾಲ ಇನ್ಸ್ಟಾ ಖಾತೆಯನ್ನು ಪತ್ನಿ ವಿಜಯಲಕ್ಷ್ಮೀ ಡಿಆಕ್ಟೀವೇಟ್ ಮಾಡಿದ್ದರು. ಇದೀಗ ಮತ್ತೆ ಆಕ್ಟಿವೇಟ್ ಮಾಡಿದ್ದು, ಫುಲ್ ಆಕ್ಟೀವ್ ಆಗಿರುವ ವಿಜಯಲಕ್ಷ್ಮೀ ಹೊಸ ಬ್ಲೂ ಕಲರ್ ಸೀರೆಯುಟ್ಟ ಫೋಟೋಗಳನ್ನ ಹಾಕಿದ್ದಾರೆ. ಅದೇ ರೀತಿ ಪವಿತ್ರಾಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ಮತ್ತೊಂದು ರೀತಿಯ ಚರ್ಚೆ ಜೋರಾಗಿದೆ.
ಅಯ್ಯೋ ಇದೇನಿದು.. ಮತ್ತೆ ಇವರಿಬ್ಬರ ಮಧ್ಯೆ ಸೀರೆ ವಾರ್ ನಡೀತಿದ್ಯಲ್ವಾ ಅಂತಾ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ 10 ವರ್ಷಗಳಿಂದ ನಾನು ದರ್ಶನ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದೀನಿ ಅಂತಾ ಪವಿತ್ರಾ ಗೌಡ ಈ ಹಿಂದೆ ಹೇಳಿದ್ದರಿಂದ ಈ ಸೀರೆ ಕದನಕ್ಕೆ ಮತ್ತಷ್ಟು ಮಸಾಲೆ ಮಿಕ್ಸ್ ಆಗ್ತಿದೆ.
ಇದರ ಮಧ್ಯೆ ಬಹುಭಾಷಾ ನಟಿ ರಾಶಿ ಖನ್ನಾ ಮಾತನಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಪವಿತ್ರಾಗೌಡ, ತನ್ನ ಸ್ನೇಹ ಹಾಗೂ ಸ್ನೇಹಿತರ ಬಗ್ಗೆ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿ ಆಗಿಲ್ಲ ಎನ್ನಲಾಗ್ತಿದೆ. ಜನವರಿ 10ರಂದು ರೇಣುಕಾಸ್ವಾಮಿ ಕೇಸ್ನಲ್ಲಿ ಎಲ್ಲಾ ಆರೋಪಿಗಳು ಸಿಸಿಹೆಚ್ 57 ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಅಂದು ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿ ಆಗಿದ್ದರು.