ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್‌ ಹರ್‌’ ಇವೆಂಟ್‌ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್‌ ಪಾರ್ಟ್ ನರ್ಸ್ L.G. ಇಂಗು, ಬ್ಯೂಟಿ ಪಾರ್ಟ್‌ನರ್‌ ಗ್ರೀನ್‌ ಲೀಫ್‌, ಸ್ಕಿನ್‌ ಕೇರ್‌ ಪಾರ್ಟ್‌ನರ್‌ ಲಾ ಶೀಲ್ಡ್ ಹಾಗೂ ಹೆಯೆರ್‌ ಪ್ರಾಡಕ್ಟ್ಸ್.

ಕಳೆದ ತಿಂಗಳು ಫೆಬ್ರವರಿ 8 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜಾಜಿನಗರದ ಇಸ್ಕಾನ್‌ ಸಮೀಪದ ನಂ.19. R.G.  ರಾಯಲ್ ಹೋಟೆಲ್ ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಇಡೀ ಫೋಕಸ್‌ ಮಹಿಳಾ ಸಬಲೀಕರಣ (ವಿಮನ್‌ಎಂಪವರ್‌ ಮೆಂಟ್‌)ದ

ಕುರಿತಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಸ್ಕಿನ್‌ ಕೇರ್‌, ಆರೋಗ್ಯ, ಪೌಷ್ಟಿಕ ಆಹಾರ, ಹಣಕಾಸು ವಿಚಾರಗಳ ಮಾಹಿತಿ,  ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

ಸ್ಕಿನ್ಕೇರ್ಸೆಷನ್

ಡಾ. ಅಮೃತಾ ಎ. ಹೊಂಗಲ್, BMCRIನಲ್ಲಿ ಪ್ರಸ್ತುತ ಅಸೋಸಿಯೇಟ್‌ ಪ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡರ್ಮಾಟಾಲಜಿ, ಲೆನೆರೆಯಾಲಜಿ, ಲೆಪ್ರಸಿಗಳಲ್ಲಿ ನುರಿತ ಪ್ರವೀಣೆ. ದೇಶ ವಿದೇಶಗಳ ಹಲವು ವೈದ್ಯಕೀಯ ಕೇಂದ್ರಗಳಲ್ಲಿ ಹಿರಿಯ ಚರ್ಮತಜ್ಞೆಯಾಗಿ ಪಳಗಿರುವರು. ಹೆಂಗಸರಿಗೆ ಸ್ಕಿನ್‌ ಕೇರ್‌ ಬಗ್ಗೆ ಅಪಾರವಾಗಿ ಅತ್ಯುತ್ತಮ ವೈಜ್ಞಾನಿಕ ಮಾಹಿತಿ ತಿಳಿಸಿಕೊಟ್ಟರು. ಚರ್ಮದ ಆರೈಕೆಗೆ ಹೆಣ್ಣುಮಕ್ಕಳು ಹೇಗೆ ಪ್ರಾಮುಖ್ಯತೆ ಕೊಡಬೇಕು, ಯಾವ ರೀತಿ ಮುತುವರ್ಜಿ ವಹಿಸಬೇಕು, ಚರ್ಮದ ಆರೋಗ್ಯ/ಸೌಂದರ್ಯ ಕೆಡದಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಸಿಕೊಟ್ಟರು.

ಚರ್ಮದಲ್ಲಿನ 3 ಬಗೆಗಳಾದ  ಡ್ರೈ ಸ್ಕಿನ್‌, ಆಯ್ಲಿ ಸ್ಕಿನ್‌, ನಾರ್ಮಲ್ ಸ್ಕಿನ್‌ ಇವುಗಳನ್ನು ಪತ್ತೆ ಹಚ್ಚಿ ತಮ್ಮ ಪ್ರಕಾರ ಯಾವುದೆಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ಕೆಮಿಕಲ್ಸ್ ರಹಿತ ಸೋಪ್‌, ಫೇಸ್‌ ವಾಶ್‌, ಸ್ಕ್ರಬ್‌ ಇತ್ಯಾದಿ ಬಳಸಬೇಕೆಂದು ಸಲಹೆ ನೀಡಿದರು. ದಿನ ಬೆಳಗಾಗುವಷ್ಟರಲ್ಲಿ ಯಾವು ಯಾವುದೋ ಕ್ರಿಂ ಹಚ್ಚಿಕೊಂಡು ಶ್ಯಾಮಲ ವರ್ಣದವರು ಗೌರವರ್ಣ ಪಡೆಯಲಿಕ್ಕಾಗದು. ಇಂಥ ಜಾಹೀರಾತುಗಳಿಗೆ ಮರುಳಾಗಬಾರದು ಎಂದು ಸೂಕ್ಷ್ಮವಾಗಿ ತಿಳಿಸಿಕೊಟ್ಟರು.

ಅಂದಿನ ಕಾಲದ ಅಜ್ಜಿಯರ ಆರೈಕೆಯಲ್ಲಿ ಆಯಿಲ್ ‌ಮಸಾಜ್‌ ಗಿದ್ದ ಮಹತ್ವ, ಚರ್ಮದ ಪದರಗಳಾದ ಹೊರಗಿನ ಅಪ್ಪರ್ ಎಪಿಡರ್ಮಿಸ್‌, ಅದರ ಒಳಪದರ ಕೆಳಗಿನ ಎಂಡೋಡರ್ಮಿಸ್‌ ಅದರ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು. ಇದರ ರಕ್ಷಣೆ, ಪೋಷಣೆ, ವಿಟಮಿನ್‌ ವಿಶ್ಲೇಷಣೆ, ಉಷ್ಣ ನಿಯಂತ್ರಣ, ಸಂವೇದನಾಶೀಲತೆ, ಸೌಂದರ್ಯ ಸಂವರ್ಧನೆ ಇತ್ಯಾದಿಗಳ ಪ್ರಾಮುಖ್ಯತೆ ಗುರುತಿಸಿಕೊಟ್ಟರು.

ಚರ್ಮದ ಹೈಡ್ರೇಶನ್‌, ಬ್ಯೂಟಿ ಎನ್‌ ಹ್ಯಾನ್ಸ್, ಕ್ಲೆನ್ಸರ್‌, ಮಾಯಿಶ್ಚರೈಸರ್‌, ಟೋನರ್‌ ಗಳ ಬಳಕೆ, ಅದರ ಲಾಭಾಂಶಗಳ ಬಗ್ಗೆ ಹೇಳಿದರು. ಶಿಶು, ಮಕ್ಕಳು, ಟೀನೇಜರ್ಸ್‌, ಯುವಜನತೆ, ಮಧ್ಯಮಯಸ್ಕರು, ಪ್ರೌಢರ ಚರ್ಮದ ಕುರಿತು ಅನೇಕ ವಿವರಣೆ, ಸಮಸ್ಯೆಗಳ ನಿವಾರಣೆ ಬಗ್ಗೆ ಹೇಳಿದರು. ಸನ್‌ ಸ್ಕ್ರೀನ್‌ ಲೋಶನ್‌, ಹ್ಯಾಲುರೋನಿಕ್‌ ಆ್ಯಸಿಡ್‌ ನ ಪ್ರಾಮುಖ್ಯತೆ, 30+SPF ಹಾಗೂ 50+ SPF ಇತ್ಯಾದಿಗಳ ವೈಜ್ಞಾನಿಕ ಮಹತ್ವದ ಬಗ್ಗೆ ತಿಳಿಸಿದರು. ಆ್ಯಂಟಿ ಏಜಿಂಗ್‌ ಬೆನಿಫಿಟ್ಸ್, ನಮ್ಮ ಆಧುನಿಕ ಜೀವನಶೈಲಿ, ವ್ಯಾಯಾಮ, ನಿದ್ದೆ, ವಿಶ್ರಾಂತಿಗಳ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಅತಿಯಾದ ಕೆಫೀನ್‌, ಆಲ್ಕೋಹಾಲ್ ಬಳಕೆ ಯಾರಿಗೂ ಹಿತಕರವಲ್ಲ ಎಂದು ಸಲಹೆ ನೀಡಿದರು. ಇವೆಂಟ್‌ ಗೆ ಬಂದಿದ್ದ ಹೆಂಗಸರು ಇವರ ಬಳಿ ತಮ್ಮ ಸಮಸ್ಯೆಗಳಿಗೆ ಪರಿಹಾರ, ಸಂದೇಹಗಳಿಗೆ ನಿವಾರಣೆ ಪಡೆದರು.

ನ್ಯೂಟ್ರಿಷನಿಸ್ಟ್ ಸೆಷನ್

ಬಿ.ಕೆ. ಚಿತ್ರಾ ನುರಿತ ಕ್ಲಿನಿಕ್‌ ಡಯೆಟಿಶಿಯನ್‌ ಹಾಗೂ ನ್ಯೂಟ್ರಿಶಿಯನ್‌ ಎಕ್ಸ್ ಪರ್ಟ್‌ ಆಗಿದ್ದು ಡಯೆಟ್‌ ಅಪ್ರೋಚ್‌, ವೆಯ್ಟ್ ರಿಡಕ್ಷನ್‌ಮ್ಯಾನೇಜ್‌ ಮೆಂಟ್‌, ಕ್ರಿಟಿಕಲ್ ಕೇರ್‌ ನ್ಯೂಟ್ರಿಶನ್‌, ಪ್ರೋಟೀನ್‌ ಸಪ್ಲಿಮೆಂಟ್‌ ಮ್ಯಾನೇಜ್‌ ಮೆಂಟ್‌ ಇತ್ಯಾದಿ ಕ್ಷೇತ್ರಗಳಲ್ಲಿ 14+ ವರ್ಷಗಳ ನುರಿತ ಅನುಭವ ಹೊಂದಿದ್ದಾರೆ.

ಹೆಣ್ಣುಮಕ್ಕಳು, 40+ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಯಾವ ರೀತಿ ಪೌಷ್ಟಿಕಾಂಶಗಳನ್ನು ಬೆರೆಸಿಕೊಂಡು ದಿನವಿಡೀ ಸೇವಿಸಬೇಕು, ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಬ್ಬಿಣದ ಕಡಲೆಯಾದ ನ್ಯೂಟ್ರೀಶನ್‌ ವೈದ್ಯಕೀಯದ ಬಗ್ಗೆ ಸರಳ ಮಾತುಗಳಲ್ಲಿ ಸಂಪೂರ್ಣ ವಿವರಣೆ ನೀಡಿದರು. ನಮ್ಮ ಆಹಾರದಲ್ಲಿ ಮ್ಯಾಕ್ರೋ/ಮೈಕ್ರೋ ನ್ಯೂಟ್ರಿಯೆಂಟ್ಸ್, ಪ್ರೋಟೀನ್‌, ಕಾರ್ಬೋಹೈಡ್ರೇಟ್ಸ್, ಫ್ಯಾಟ್‌, ವಿಟಮಿನ್‌, ಮಿನರಲ್ಸ್, ಫೈಬರ್‌ ಇತ್ಯಾದಿ ಎಲ್ಲ ಆಯಾ ವಯಸ್ಸಿನವರಿಗೆ ತಕ್ಕಂತೆ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ತಿಳಿಸಿಕೊಟ್ಟರು.

ಪ್ರತಿ ಆಹಾರದ ಕ್ಯಾಲೋರಿ ಕೌಂಟ್‌ ಖಚಿತಪಡಿಸಿಕೊಂಡು ಸೇವಿಸಬೇಕು ಎಂದು ಸಲಹೆ ನೀಡಿದರು. ಹಾಲು, ಹಣ್ಣು, ತಾಜಾ ಹಸಿರು ತರಕಾರಿ, ಮೀನು, ಮೊಟ್ಟೆ, ವೈಟ್‌ ಮೀಟ್‌ (ಫಿಶ್‌ ಬೇಕು, ರೆಡ್‌ ಮೀಟ್‌ ಬೇಡ) ಇತ್ಯಾದಿಗಳ ಪೌಷ್ಟಿಕತೆಯ ಹಿರಿಮೆ ಬಗ್ಗೆ ತಿಳಿಸಿಕೊಟ್ಟರು. ಮಧುಮೇಹಿಗಳು, ಹೈ BP, ಆರ್ಥ್‌ ರೈಟಿಸ್‌ ರೋಗಿಗಳು ಪಾಲಿಸಬೇಕಾದ ಆಹಾರ, ಓಟ್ಸ್, ಬಾರ್ಲಿ ಇತ್ಯಾದಿಗಳ ಕುರಿತು ಸೂಕ್ಷ್ಮವಾಗಿ ವಿವರಿಸಿದರು. ನಂತರ ಪ್ರೇಕ್ಷಕರ ಕಡೆಯಿಂದ ಬಂದಂಥ ನೂರಾರು ಸಂದೇಹಗಳಿಗೆ ಸೂಕ್ತವಾಗಿ ಉತ್ತರಿಸಿ, ಪೌಷ್ಟಿಕ ಆಹಾರದ ಬಗ್ಗೆ ಅವರಿಗಿದ್ದ ಎಲ್ಲಾ ಅನುಮಾನಗಳನ್ನೂ ಪರಿಹರಿಸಿದರು.

ಫೈನಾನ್ಸ್ ಎಕ್ಸ್ ಪರ್ಟ್ಸೆಷನ್

ಅನುಪ್‌ ವಿಠ್ಠಲ್ ನುರಿತ CA ಆಗಿದ್ದು, ಫೈನಾನ್ಸ್ ಟ್ಯಾಕ್ಸ್ ಕನ್ಸಲ್ಟೆಂಟ್‌ ಆಗಿ ಕಳೆದ 8 ವರ್ಷಗಳಿಗೂ ಅಧಿಕವಾಗಿ, EY,KMPG ಗಳಲ್ಲಿ ಪಳಗಿದ್ದಾರೆ. ಆಡಿಟಿಂಗ್‌, ಇನ್‌ ವೆಸ್ಟ್ ಮೆಂಟ್‌ ಪ್ಲಾನಿಂಗ್‌, ಕಾಂಟ್ಯಾಕ್ಟ್ ರಿವ್ಯೂಗಳಿಗೆ ಉನ್ನತ ಸಲಹೆ ನೀಡುತ್ತಾರೆ. `ಮಾಸ್ಟರ್‌ಪ್ಯೂಪಿಲ್, ಎಜುಕೇಶನ್‌ ಕ್ವಾಲಿಟಿ ಇಂಪ್ರೂವ್ ‌ಮೆಂಟ್‌ ಪ್ರೋಗ್ರಾಂ’ ಕೃತಿಗಳ ರಚನೆಕಾರರೂ ಹೌದು. ಯೋಗ, ಶಾಸ್ತ್ರೀಯ ಸಂಗೀತ, ಕವಿ ಹೃದಯ ಹೊಂದಿರುವ ಅಖಂಡ ಪ್ರತಿಭಾಶಾಲಿ!

ಮಧ್ಯಮ ವರ್ಗದ ಹೆಂಗಸರೂ ಸಹ ಯಾವ ರೀತಿ ಉಳಿತಾಯ ಮಾಡಬೇಕು, ಆ ಉಳಿತಾಯ ಅವರನ್ನು ಹೇಗೆ ಸ್ವಾವಲಂಬಿ ಆಗಿಸುತ್ತದೆ, ಯಾವ ಯಾವ ರೀತಿ ಬ್ಯಾಂಕಿನಲ್ಲಿ ಖಾತೆ ತೆರೆದು ಉಳಿತಾಯ ಮಾಡಬಹುದು, ಇಂದಿನ ದುಬಾರಿ ಬೆಲೆಗಳ ಕಾಲಕ್ಕೆ ಅದೆಷ್ಟು ಅವಶ್ಯಕ ಎಂದು ವಿವರಿಸಿದರು. SB, RD, FD ಇತ್ಯಾದಿ ಖಾತೆ ತೆರೆದು ನಮ್ಮ ಸಂಪಾದನೆಯ ಶೇ.20ರಷ್ಟನ್ನಾದರೂ ಉಳಿತಾಯ ಮಾಡಿದಾಗ ಮಾತ್ರ ಅದು ನಮ್ಮ ಮುಂದಿನ ಪೀಳಿಗೆಯ ಉನ್ನತ ವ್ಯಾಸಂಗ, ಮದುವೆ, ಮನೆ ಕೊಳ್ಳಲು ಆಧಾರ ಇತ್ಯಾದಿಗಳಿಗೆ ನೆರವಾಗುತ್ತದೆಂದು ತಿಳಿಸಿಕೊಟ್ಟರು. ಸ್ಟಾಕ್‌, ಷೇರು ಮಾರುಕಟ್ಟೆ, SIP, ಮ್ಯೂಚುಯೆಲ್ ‌ಫಂಡ್‌ ಇತ್ಯಾದಿಗಳ  ಕುರಿತ ಪ್ರಾಮುಖ್ಯತೆ, ಜೀವವಿಮೆ, ಮೆಡಿಕಲ್ ಇನ್‌ ಶೂರೆನ್ಸ್, ಸರ್ಕಾರಿ ಸ್ಕೀಮ್ಸ್, ಪೋಸ್ಟ್ ಆಫೀಸ್‌, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್‌ ಇತ್ಯಾದಿ ಎಲ್ಲದರ ವಿವರಣೆ ನೀಡಿದರು.

ಇವೆಂಟ್‌ ಗೆ ಬಂದಿದ್ದ ಹೆಂಗಸರು ಇವರ ಬಳಿ ಬ್ಯಾಂಕಿಂಗ್‌ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಅನೇಕ ಪ್ರಶ್ನೆ ಕೇಳಿ ಪರಿಹಾರ ಪಡೆದರು. ಮುಖ್ಯವಾಗಿ ಖಾಸಗಿ ಚೀಟಿ ವ್ಯವಹಾರ, ಚಿಟ್‌ ಫಂಡ್ಸ್ ನಿಂದ ನಮ್ಮ ಹೆಣ್ಣುಮಕ್ಕಳು ಏಮಾರಿ ಹಣ ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದರು.

ನೆರೆದಿದ್ದ ಪ್ರೇಕ್ಷಕರ ಒತ್ತಾಯದ ಮೇರೆಗೆ ಇವರು, `ಕೃಷ್ಣ ನೀ ಬೇಗನೆ ಬಾರೋ…’ ಶಾಸ್ತ್ರೀಯ ಗಾಯನ ಹಾಡಿ ಎಲ್ಲರನ್ನೂ ಮಧುರ ಸಂಗೀತ ಲೋಕಕ್ಕೆ ಕರೆದೊಯ್ದರು.

ಗೇಮಿಂಗ್ಸೆಷನ್

ಇಡೀ ಕಾರ್ಯಕ್ರಮದ ನಿರೂಪಣೆ ನೀಡುತ್ತಾ ಆ್ಯಂಕರ್‌ ಭಾನುಪ್ರಿಯಾ, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾಮಣಿಗಳಿಗೆ ಅತ್ಯಂತ ರೋಚಕ ಮನರಂಜನೆ ಒದಗಿಸಿದರು. ಬಗೆಬಗೆಯ ಹಾಡು, ನೃತ್ಯಗಳಲ್ಲಿ ಪಾಲ್ಗೊಂಡ ಹೆಂಗಸರು ಉತ್ಸಾಹದಿಂದ ನಕ್ಕು ನಲಿದಾಡಿದರು. ಪ್ರತಿಯೊಂದು ಸೆಷನ್‌ ನಡೆಯುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದಂತೆ ಹಾಗೂ ಮನರಂಜನೆ ಕುರಿತಾದ ಅನೇಕ ರಸಪ್ರಶ್ನೆಗಳನ್ನು ಸಭಿಕರಿಗೆ ಕೇಳಿದರು. ಸೂಕ್ತವಾಗಿ ಬೇಗ ಉತ್ತರಿಸಿದ ಅನೇಕ ಹೆಂಗಸರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೃಹಶೋಭಾ ಸಿಬ್ಬಂದಿ ಆನ್‌ ದಿ ಸ್ಪಾಟ್‌ ವಿತರಿಸಿದರು.

ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟ್‌ ಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್‌ ನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಎಂಪವರ್‌ ಹರ್‌ ಇವೆಂಟ್‌ ಗೆ ಬಂದಿದ್ದ ಹೆಂಗಸರೆಲ್ಲರೂ ಇದನ್ನು ಬಹಳ ಎಂಜಾಯ್‌ ಮಾಡಿದರು. ಇವೆಂಟ್‌ ಬಹಳ ಯಶಸ್ವಿಯಾಗಿ ನೆರವೇರಿತು!

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ