ಪರಿಶ್ರಮ ತರುವ ಯಶಸ್ಸು :
ಫ್ಯಾಷನ್ ಅಲ್ಲ ಟ್ರೆಶನ್ ಅನ್ನಿ..... ಏಕೆಂದರೆ ಇಲ್ಲಿ ಫ್ಯಾಷನ್ ಆಗಿರುವುದೇ ಕಸ ಎಂದು ಬಿಸಾಡಲ್ಪಟ್ಟ ವಸ್ತಗಳನ್ನು ಜೋಡಿಸಿರುವುದರಿಂದ! ಇದನ್ನು ಹೆಮ್ಮೆಯಿಂದ ವೇದಿಕೆ ಮೇಲೆ ಪ್ರದರ್ಶಿಸಲಾಗುತ್ತಿದೆ. ಯಾವಾಗಿನಿಂದ ಒಂದು ವಸ್ತುವಿಗೆ ಸಾವಿರ ಪರ್ಯಾಯಗಳು ಸಿಗತೊಡಗಿದವೋ, ಅಂದಿನಿಂದ ಬಳಕೆಯ ವಸ್ತು ತುಸು ಸವೆದರೂ ಅದನ್ನು ಬಿಸಾಡುತ್ತೇವೆ. ನಗರಗಳಲ್ಲಿ ಹಳೆಯ ಬಟ್ಟೆ, ಪಾತ್ರೆ, ಆಟಿಕೆಗಳನ್ನು ಇರಿಸಿಕೊಳ್ಳುವ ಕೇಂದ್ರಗಳನ್ನೇ ತೆರೆಯಬಹುದು, ಜನ ಅಲ್ಲಿಗೆ ತಮ್ಮ ರಾಶಿ ರಾಶಿ ಹಳೆ ಸಾಮಗ್ರಿ ತಂದು ತುಂಬಿಸಬಲ್ಲರು. ಅಮೆರಿಕಾದ ಬ್ಲೂಮಿಂಗ್ಟನ್ ನಲ್ಲಿ ಇಂಥ ಟ್ರೆಶನ್ನಿನ ಶೋ ಪ್ರತಿ ವರ್ಷ ನಡೆಯುತ್ತದೆ. ಅಲ್ಲಿ ಕಲಾವಿದರು ಹಾಗೂ ಡಿಸೈನರ್ ಗಳ ಪರಿಶ್ರಮದ ಯಶಸ್ಸು ಹೀಗೆ ತೆರೆದುಕೊಳ್ಳುತ್ತದೆ.
ಆಟದಲ್ಲಿ ರೋಮಾಂಚನ ಬೇಕು :
ಪೋಲೋ ಶ್ರೀಮಂತರ ದುಬಾರಿ ಆಟ. ಆದರೂ ಬಹಳಷ್ಟು ದೇಶಗಳಲ್ಲಿ ಇದಕ್ಕೆ ಅಪಾರ ಮನ್ನಣೆ ಇದೆ. ಇದರಲ್ಲಿ ಕುದುರೆ ಏರಿದ ಸವಾರರು, ಬಾಲ್ ನ್ನು ಹಾಕಿ ತರಹ ಗೋಲ್ ವರೆಗೂ ಕೊಂಡೊಯ್ಯುವುದು ಸುಲಭವಲ್ಲ, ಅದೂ ಎದುರಾಳಿ ತಂಡದ ಕುದುರೆ ಸವಾರರು ಬಾಲ್ ನ್ನು ನಿಮ್ಮಿಂದ ಕಸಿಯಲು ಯತ್ನಿಸುತ್ತಲೇ ಇರುತ್ತಾರೆ. ಪೋಲೋ ಅಸೋಸಿಯೇಶನ್ ಕಾಲೇಜ್ ನಲ್ಲಿ ಇಂಥ ಸ್ಪರ್ಧೆ ಏರ್ಪಡಿಸಿದಾಗ, 30 ತಂಡಗಳು ಅಲ್ಲಿ ಸೇರಿದ್ದವು. ಅದರಲ್ಲಿ ಹುಡುಗಿಯರ ತಂಡದ್ದೇ ಮೇಲುಗೈ!
ಸಾಕು ಮಾಡಿ ಈ ಹಿಂಸೆ :
ಯೂಕ್ರೇನ್ ರಷ್ಯಾದ ಈ ಯುದ್ಧದಿಂದ ಹೆಚ್ಚು ಹಿಂಸೆಗೊಳಗಾಗುತ್ತಿರುವವರು ಹೆಂಗಸರು. ಏಕೆಂದರೆ ಅವರು ರಷ್ಯಾದ ಸೈನಿಕರಿಗೆ ಸಿಕ್ಕಿಬಿದ್ದರೆ, ಪ್ರಾಣಕ್ಕಿಂತ ಮೊದಲು ಶೀಲ ಕಳೆದುಕೊಳ್ಳುತ್ತಾರೆ. ನೆರೆ ದೇಶಗಳಾದ ಪೋಲೆಂಡ್ ರೊಮಾನಿಯಾ ಮಾತ್ರವಲ್ಲದೆ, ಇಡೀ ಯೂರೋಪ್ ಖಂಡವೇ ಈ ಹೆಂಗಸರಿಗೆ ಆಸರೆ ಒದಗಿಸಲು ಮುಂದಾಗಿದೆ. ಆದರೆ ಯಾರ ತಂದೆ, ಗಂಡ, ಮಗ, ಸೋದರರು ಸತ್ತು ಹೋಗಿದ್ದಾರೋ, ಅಂಥವರು ಹೇಗೋ ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲಿ ದೇಹದ ದಂಧೆ ಕಬಂಧ ಬಾಹು ಚಾಚುತ್ತದೆ. ಬಾರ್ಡರ್ ನಲ್ಲಿ ಜಮೆಗೊಂಡ ಸಹಾಯದ ಸಾಮಗ್ರಿ ಅಖಂಡವಾಗಿದ್ದರೂ, ಎಲ್ಲರಿಗೂ ಎಲ್ಲಾ ವಸ್ತುಗಳೂ ಸಿಗುವುದಿಲ್ಲ....?
ಪ್ರೇಮ ಮಾಯವಾಗಲು ಬಿಡಬೇಡಿ :
ಇಲ್ಲಿ ಕಂಡುಬರುತ್ತಿರುವ ಪ್ರೇಮಮಯ ದೃಶ್ಯ ಸಿನಿಮಾ ಪರದೆಯಲ್ಲಿ ಮಾತ್ರ ಕಾಣುತ್ತದೆ, ಕಾಣಲು ಸಾಧ್ಯ. ಇಸ್ರೇಲ್ ನ ಸೀರಿಯಲ್ `ಒನ್ ಆಫ್ ದೋಸ್ ಡೇಸ್' ಒಂದು ಜೋಡಿಯ ದಿನವಿಡೀ ದುಡಿತದ ಪರಿಶ್ರಮವನ್ನು ಬಲು ರೋಚಕ ರೀತಿಯಲ್ಲಿ ಟಿವಿ ಸೀರೀಸ್ ನಲ್ಲಿ ಪ್ರೆಸೆಂಟ್ ಮಾಡುತ್ತಿದೆ ಹಾಗೂ ಇದು ಬಲು ಜನಪ್ರಿಯ ಎನಿಸಿದೆ, ಹಲವು ಭಾಷೆಗಳಿಗೆ ಡಬ್ ಸಹ ಆಗಿದೆ. ಅಂದ್ರೆ, ಮೊದಲು ನಮ್ಮ ಜೀವನದಿಂದ ಪ್ರೇಮ ಮಾಯವಾಗಿದ್ದರೆ, ಜನ ಲೈಲಾ ಮಜ್ನು, ರೋಮಿಯೋ ಜೂಲಿಯೆಟ್, ಹೀರ್ ರಾಂರವರ ಕಥೆಗಳನ್ನು ಕೇಳಿ, ಓದಿ, ವೇದಿಕೆ ಪರದೆಗಳಲ್ಲಿ ನೋಡಿ ಸಮಾಧಾನಪಡುತ್ತಿದ್ದರು. ಹಾಗೆಯೇ ಎಲ್ಲಾ ಜೋಡಿಗಳೂ ತಮ್ಮ ಹಳೆಯ ಲವ್ ಸ್ಟೋರಿಯನ್ನು ಈ ಧಾರಾವಾಹಿ ನೋಡಿ ನೆನಪಿಸಿಕೊಳ್ಳಬಹುದಾಗಿದೆ.