ಹೊಸ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಕೆಲವು ಹೋಟೆಲ್‌ಗಳ ಕೋಣೆಗಳಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಲಾಗಿರುತ್ತದೆ. ಇಂತಹ ಕ್ಯಾಮೆರಾ ಪತ್ತೆ ಮಾಡಿ ಹೋಟೆಲ್ ಮಾಲೀಕರ ವಿರುದ್ಧ ಗ್ರಾಹಕರು ದೂರು ದಾಖಲಿಸಿರುವ ಪ್ರಕರಣಗಳಿವೆ. ಆದ್ದರಿಂದ ಕೆಲ ಪ್ರವಾಸಿಗರು, ಹೋಟೆಲ್ ಕೋಣೆಗೆ ಎಂಟ್ರಿ ಕೊಡುತ್ತಲೇ ಕೆಲವೊಂದು ವಿಧಾನಗಳ ಮೂಲಕ ಸೀಕ್ರೆಟ್ ಕ್ಯಾಮೆರಾ ಇದೆಯಾ ಎಂದು ಚೆಕ್ ಮಾಡುತ್ತಾರೆ. ಈ ಲೇಖನದಲ್ಲಿ ಸೀಕ್ರೆಟ್ ಅಥವಾ ಮರೆಮಾಡಲಾದ ಕ್ಯಾಮೆರಾಗಳನ್ನು ಪತ್ತೆ ಮಾಡೋದು ಹೇಗೆ ಅಂತ ನೋಡೋಣ. ನಿಮ್ಮ ಮೊಬೈಲ್ ಡಿವೈಸ್ ಬಳಸಿಕೊಂಡು ಹೋಟೆಲ್ ಕೊಠಡಿಗಳಲ್ಲಿರುವ ರಹಸ್ಯ ಕ್ಯಾಮೆರಾಗಳನ್ನು ಪತ್ತೆಹಚ್ಚಲು ನಾಲ್ಕು ಸೂಪರ್ ಮಾರ್ಗಗಳಿವೆ. ಹಾಗಾಗಿ ಎಲ್ಲಿಗೆ ಹೋದರು ಮೊದಲು ನಿಮ್ಮ ಸುರಕ್ಷಿತತೆ ಮತ್ತು ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತಿದೆಯಾ ಎಂದು ತಿಳಿದುಕೊಳ್ಳಿ. ಖಾಸಗಿತನಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕವಷ್ಟೇ ಕೋಣೆ ಬಳಸಬೇಕಾಗುತ್ತದೆ.
.ಮೊಬೈಲ್
ಕೋಣೆಯೊಳಗೆ ಬರುತ್ತಿದ್ದಂತೆ ಲೈಟ್ ಆಫ್ ಮಾಡಿ. ಆನಂತರ ಏನಾದ್ರೂ ಹೊಳೆಯುತ್ತಿದೆಯಾ ಎಂದು ಪರಿಶೀಲಿಸಿ. ಅನುಮಾನದ ಸ್ಥಳದಲ್ಲಿ ಮೊಬೈಲ್ ಫ್ಲ್ಯಾಶ್ ಬಳಸಿ ಸೂಕ್ಷ್ಮವಾಗಿ ಗಮನಿಸಿ. ಮೊಬೈಲ್ ಫ್ಲ್ಯಾಶ್‌ಗೆ ಸೀಕ್ರೆಟ್ ಕ್ಯಾಮೆರಾಗಳು ಹೊಳೆಯುತ್ತವೆ. ಉದಾಹರಣೆಗೆ ಕನ್ನಡಿ, ಸ್ಮೋಕ್ ಡಿಟೆಕ್ಟರ್, ಫ್ರೇಮ್, ಗಡಿಯಾರ, ಟಿವಿ ಅಂತಹ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ಸೀಕ್ರೆಟ್ ಕ್ಯಾಮೆರಾಗಳು ಅತಿಗೆಂಪು ಬಣ್ಣವನ್ನು ಹೊರ ಸೂಸುತ್ತವೆ. ಆದ್ರೆ ಈ ಬೆಳಕು ಸಾಮಾನ್ಯವಾಗಿ ಕಾಣಿಸುವುದಿಲ್ಲ. ಇದಕ್ಕಾಗಿ ಕೋಣೆಯ ದೀಪಗಳನ್ನು ಆರಿಸಿ, ಮೊಬೈಲ್ ಕ್ಯಾಮೆರಾ ಆನ್ ಮಾಡಬೇಕು. ಈ ವೇಳೆ ಕ್ಯಾಮೆರಾದಲ್ಲಿ ಕೆಂಪು ಗುಳ್ಳೆಯಂತಹ ವಸ್ತು ಕಾಣಿಸಿದ್ರೆ ಅದು ಸೀಕ್ರೆಟ್ ಕ್ಯಾಮೆರಾ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
.ಮೊಬೈಲ್ ಅಪ್ಲಿಕೇಶನ್
ಇಂದು ಆಂಡ್ರಾಯ್ಡ್, ಐಒಎಸ್ ಡಿವೈಸ್‌ಗಳ ಮೂಲಕ ಸೀಕ್ರೆಟ್ ಕ್ಯಾಮೆರಾ ಪತ್ತೆ ಮಾಡುವ ಅಪ್ಲಿಕೇಷನ್‌ಗಳು ಲಭ್ಯ ಇವೆ. ಈ ರೀತಿಯ ಅಪ್ಲಿಕೇಶನ್‌ಗಳ ಮೂಲಕ ರಹಸ್ಯ ಕ್ಯಾಮೆರಾಗಳನ್ನು ಪತ್ತೆ ಮಾಡಬಹುದಾಗಿದೆ.
ವೈಫೈ-ಬ್ಲೂಟೂಥ್
ಕೋಣೆಯಲ್ಲಿ ಬರುವಂತೆ ನಿಮ್ಮ ಸ್ಮಾರ್ಟ್‌ಫೋನ್ ವೈಫೈ ಮತ್ತು ಬ್ಲೂಟೂಥ್ ಆನ್ ಮಾಡಿ. ನಿಮ್ಮ ಐಪಿ ಅಡ್ರೆಸ್‌ಗೆ ಬೇರೆ ಡಿವೈಸ್ ಕನೆಕ್ಟ್ ಆಗಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಅನಾಮಧೇಯ ಡಿವೈಸ್ ಕನೆಕ್ಟ್ ಆಗಿರೋದು ಕಂಡು ಬಂದ್ರೆ ಕೂಡಲೇ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿ.
4.ಇತರೆ ಸಲಹೆಗಳು
ಕೋಣೆಯಲ್ಲಿರುವ ಕನ್ನಡಿ ಮೇಲೆ ನಿಮ್ಮ ಬೆರಳನ್ನು ಇರಿಸಿ. ನಿಮ್ಮ ಬೆರಳು ಮತ್ತು ಕನ್ನಡಿ ಪ್ರತಿಬಿಂಬದ ಮೇಲೆ ಯಾವುದೇ ಅಂತರವಿಲ್ಲದಿದ್ರೆ ಅಲ್ಲಿ ಯಾವುದೇ ರೀತಿಯ ಸೀಕ್ರೆಟ್ ಕ್ಯಾಮೆರಾ ಇಲ್ಲ ಎಂಬುದು ಖಚಿತವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಕ್ಯಾಮೆರಾ ಡಿಟೆಕ್ಟ್ ಮಾಡುವ ಸಾಧನಗಳು ಸಿಗುತ್ತವೆ. ನೀವು ಹೆಚ್ಚು ಪ್ರವಾಸ ಮಾಡುತ್ತಿದ್ದರೆ ಇಂತಹ ಡಿವೈಸ್‌ಗಳನ್ನು ಖರೀದಿಸೋದು ಉತ್ತಮವಾಗಿದೆ.