ನಿರಂತರ ಧರ್ಮ ಪ್ರಚಾರದ ಪರಿಣಾಮ ಏನಂತೀರಾ? ದೇಶವಿಡೀ ಆಯಾ ಧರ್ಮದವರು ತಂತಮ್ಮ ಮಂದಿರ, ಮಸೀದಿ, ಇಗರ್ಜಿ ಹುಡುಕುವುದಾಗಿದೆ, ರಿಲೀಜಯರ್ಸ್ ಟೂರಿಸಂ ಮಾತ್ರ ಹೆಚ್ಚುತ್ತಿವೆ. ಚಾರ್ ಧಾಮ್, ಕಾಶಿ ಕಾರಿಡಾರ್, ತಿರುಪತಿ ಮಾತ್ರವಲ್ಲದೆ ಸಣ್ಣಪುಟ್ಟ ದೇವತೆಗಳ ಪೂಜಾಸ್ಥಳಗಳು ಉದ್ಧಾರಗೊಳ್ಳುತ್ತಿವೆ. ಝಾರ್ಖಂಡ್ ನ ದೇವಘರದಲ್ಲಿ ಟ್ರಾಲಿಯ ದುರ್ಘಟನೆ, ಜನ ಕುರಿಮಂದೆಯಾಗಿ ಜಮಾಯಿಸಿದ್ದಕ್ಕೆ ಸಾಕ್ಷಿ. ಇಲ್ಲಿ ರೋಪ್ ವೇ ಟ್ರಾಲಿಯ ಬಳಕೆ ಧಾರಾಳ ಆಯ್ತು, ಆದರೆ ಅಗಣಿತ ಭಕ್ತರು ಪ್ರವೇಶಕ್ಕಾಗಿ ಸತತ ಬರುತ್ತಿದ್ದುದರಿಂದ, ಸಕಾಲಕ್ಕೆ ಅದರ ರಿಪೇರಿ ಆಗದೆ, ಏಪ್ರಿಲ್ ನಲ್ಲಿ ರೋಪ್ ವೇ ಕುಸಿದಿದ್ದರಿಂದ ಬಹುತೇಕರು ಸತ್ತರು.
ಧರ್ಮ ಪ್ರಚಾರದ ಕಾರಣದಿಂದಲೇ ಪ್ರವಾಸ ಅಂದ್ರೆ ತೀರ್ಥಯಾತ್ರೆ ಅಂತ ಆಗಿಹೋಗಿದೆ. ಹಿಂದೂ ಭಕ್ತರ ಪ್ರವಚನ, ಪಂಡಿತರು, ಟಿವಿಯ ಭಕ್ತಿ ಚಾನೆಲ್ ಗಳಿಗೆ ಸೀಮಿತಗೊಳ್ಳದೆ, ನ್ಯೂಸ್ ಚಾನೆಲ್ ಗಳಲ್ಲೂ ಮತ್ತೆ ಮತ್ತೆ ಇಂತಿಂಥ ದೇವಿದೇವತೆಯರ ದರ್ಶನ ಪಡೆದು ಧನ್ಯರಾಗಿ ಎಂದು ಹೇಳಲಾಗುತ್ತದೆ. ಇಂಥ ಕಡೆ ದಾನ ದಕ್ಷಿಣೆ ನೀಡಿ ಸಿದ್ಧಿ ಪಡೆಯಿರಿ, ಉಪವಾಸ ವ್ರತ ಮಾಡಿ ವ್ಯಾಪಾರ ಸುಧಾರಿಸಿ, ಸಾಂಸಾರಿಕ ಸಮಸ್ಯೆ ನಿವಾರಿಸಿಕೊಳ್ಳಿ ಅಂತಿದ್ದಾರೆ.
ಮುಖ್ಯವಾಗಿ ಹೆಂಗಸರನ್ನೇ ಇದಕ್ಕೆ ಟಾರ್ಗೆಟ್ ಮಾಡುತ್ತಾರೆ. ಸುಶಿಕ್ಷಿತ ಹೆಣ್ಣನ್ನೂ ಸಹ ಅಡುಗೆಮನೆಗಷ್ಟೇ ಸೀಮಿತಗೊಳಿಸುತ್ತಾ ವರ್ತಮಾನ ಭವಿಷ್ಯ ಬಂಗಾರವಾಗಿಸಲು ಪೂಜಾಗೃಹಕ್ಕೆ ತಳ್ಳುತ್ತಾರೆ. ಹಿಂದೆಲ್ಲ ತೀರ್ಥಸ್ಥಳಗಳಲ್ಲಿ ಮೌನ ತಾಂಡವವಾಡುತ್ತಿತ್ತು, ಅದೀಗ ಸಾವಿರಾರು ಭಕ್ತರು ನುಗ್ಗುವುದರಿಂದ ಗಿಜಿಗುಟ್ಟುತ್ತಿದೆ. ಏಕೆಂದರೆ ಇದಕ್ಕಾಗಿ ಸರ್ಕಾರಿ ಸರ್ಕಾರೇತರ ಪ್ರಚಾರಗಳು ಮುಗಿಲುಮುಟ್ಟಿವೆ. ಬೇರೆಯವರು ಹೋಗುತ್ತಿದ್ದಾರೆ ನಾವು ಏಕೆ ಹೋಗಬಾರದೆಂದೇ ಎಲ್ಲರೂ ಯೋಚಿಸುವಂತಾಗಿದೆ.
ಕ್ರೈಸ್ತ ಪ್ರಚಾರಕರು ವಿಶ್ವವಿಡೀ ಭಾನುವಾರ ಯಾರೂ ಕೆಲಸ ಮಾಡಬೇಡಿ, ಇಗರ್ಜಿಗಳಲ್ಲಿ ಮಂಡಿಯೂರಿ ಅಂತಾರೆ, ಹೋಗುವಾಗ ಅಗತ್ಯ ಹಣದ ಸಂಗ್ರಹಣೆ ಆಗುತ್ತದೆ. ಅಮೆರಿಕಾ ಕ್ರಮೇಣ ಹಿಂದುಳಿಯುತ್ತಿದೆ ಎಂದರೆ ಅದಕ್ಕೆ ಮೂಲಕಾರಣ ಅಲ್ಲಿನ ಕರಿಯ ಬಿಳಿಯ, ಧನಿಕ ಬಡವ ಎಂಬ ಭೇದಭಾವ ಹೆಚ್ಚುತ್ತಿರುವುದರಿಂದ. ಸಮಯ ಸಾಧಿಸಿ ಚೀನಾ, ಕೊರಿಯಾ ಅಲ್ಲಿನ ಅರ್ಥ ವ್ಯವಸ್ಥೆಯನ್ನು ಆಕ್ರಮಿಸುತ್ತಿದ್ದಾರೆ. ಇದಕ್ಕೆ ಪಾದ್ರಿಗಳ ಪ್ರಚಾರತಂತ್ರ ಕಳೆದ ದಶಕಗಳಲ್ಲಿ ಬಹಳ ಚುರುಕಾಗಿದೆ.
ರಷ್ಯಾದಲ್ಲೂ ಕಮ್ಯುನಿಸಂ ನಂತರ ಧರ್ಮ ಬೆಳೆಯಿತು. ಇಂದಿನ ರಷ್ಯಾ ಯೂಕ್ರೇನ್ ಯುದ್ಧದ ಹಿಂದೆ ಸಾಂಪ್ರದಾಯಿಕ ಚರ್ಚುಗಳ ಕಾರುಬಾರು ಜೋರಾಗಿದೆ. ಇದಕ್ಕೆ ರಷ್ಯಾ ಯೂಕ್ರೇನಿನ ಲಕ್ಷಾಂತರ ಹೆಂಗಸರು ಹಿಂಸೆಗೆ ಬಲಿಯಾಗುತ್ತಿದ್ದಾರೆ. ಗಂಡಮಗನನ್ನು ಕಳೆದುಕೊಂಡ ಹೆಂಗಸರ ಗೋಳು ಹೇಳತೀರದು.
ಆಫ್ಘಾನಿಸ್ತಾನದಲ್ಲಿ ಇಸ್ಲಾಮಿ ಪ್ರಚಾರತಂತ್ರದ ಪರಿಣಾಮವನ್ನು ಹೆಂಗಸರೇ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿನ ಬೌದ್ಧ ಸಿಂಹಳಿ V/S ಹಿಂದೂ ತಮಿಳರ ಕಹಲಕ್ಕೆ ಆದಿ ಅಂತ್ಯವೇ ಇಲ್ಲ. ಗಲಾಟೆ ಮಿತಿ ಮೀರಿ ಇಂದು ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇವೆಲ್ಲ ಧರ್ಮಪ್ರಚಾರದ ಹಾನಿಯೇ ಸರಿ.
ಉತ್ತರದ ಕಡೆ ನವರಾತ್ರಿ ಸಂದರ್ಭದಲ್ಲಿ ಕೇವಲ ಇಂತಿಂಥ ವಿಶಿಷ್ಟ ಅಡುಗೆ ಮಾತ್ರ ಮಾಡಬೇಕೆಂದು ಕಟ್ಟಳೆ ವಿಧಿಸುವುದು ಹೆಂಗಸರಿಗೆ ಶಿಕ್ಷೆಯೇ ಸರಿ. ಪೂಜಾರಿಗಳಂತೂ ಇಂತಿಂಥ ವ್ರತದ ಅಡುಗೆಗಳೇ ಆಗಬೇಕೆಂದು ಆರ್ಡರ್ ನೀಡಿರುವುದರಿಂದ, 9 ದಿನಗಳೂ ಹೆಂಗಸರ ಪಾಡು ಹೇಳತೀರದು. ಧರ್ಮಕ್ಕೆ ಅಡುಗೆ ಮನೆಯಲ್ಲೇನು ಕೆಲಸ? ರಜೆ ಬಂದಾಗ ಯಾತ್ರೆಗೆ ಮೈಲಿಗಟ್ಟಲೆ ನಡೆದು ಹೋಗಿ ಗಂಟೆಗಟ್ಟಲೆ ದರ್ಶನಕ್ಕಾಗಿ ಕಾಯಿರಿ ಎಂಬಂತೆಯೇ!