ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್ ಹರ್' ಇವೆಂಟ್ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್ ಪಾರ್ಟ್ ನರ್ಸ್ L.G. ಇಂಗು, ಬ್ಯೂಟಿ ಪಾರ್ಟ್‌ನರ್ ಗ್ರೀನ್ ಲೀಫ್, ಸ್ಕಿನ್ ಕೇರ್ ಪಾರ್ಟ್‌ನರ್ ಲಾ ಶೀಲ್ಡ್ ಹಾಗೂ ಹೆಯೆರ್ ಪ್ರಾಡಕ್ಟ್ಸ್.
ಕಳೆದ ತಿಂಗಳು ಫೆಬ್ರವರಿ 8 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ಸಮೀಪದ ನಂ.19. R.G. ರಾಯಲ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಇಡೀ ಫೋಕಸ್ ಮಹಿಳಾ ಸಬಲೀಕರಣ (ವಿಮನ್‌ಎಂಪವರ್ ಮೆಂಟ್)ದ
ಕುರಿತಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಸ್ಕಿನ್ ಕೇರ್, ಆರೋಗ್ಯ, ಪೌಷ್ಟಿಕ ಆಹಾರ, ಹಣಕಾಸು ವಿಚಾರಗಳ ಮಾಹಿತಿ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.
ಸ್ಕಿನ್ ಕೇರ್ ಸೆಷನ್
ಡಾ. ಅಮೃತಾ ಎ. ಹೊಂಗಲ್, BMCRIನಲ್ಲಿ ಪ್ರಸ್ತುತ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡರ್ಮಾಟಾಲಜಿ, ಲೆನೆರೆಯಾಲಜಿ, ಲೆಪ್ರಸಿಗಳಲ್ಲಿ ನುರಿತ ಪ್ರವೀಣೆ. ದೇಶ ವಿದೇಶಗಳ ಹಲವು ವೈದ್ಯಕೀಯ ಕೇಂದ್ರಗಳಲ್ಲಿ ಹಿರಿಯ ಚರ್ಮತಜ್ಞೆಯಾಗಿ ಪಳಗಿರುವರು. ಹೆಂಗಸರಿಗೆ ಸ್ಕಿನ್ ಕೇರ್ ಬಗ್ಗೆ ಅಪಾರವಾಗಿ ಅತ್ಯುತ್ತಮ ವೈಜ್ಞಾನಿಕ ಮಾಹಿತಿ ತಿಳಿಸಿಕೊಟ್ಟರು. ಚರ್ಮದ ಆರೈಕೆಗೆ ಹೆಣ್ಣುಮಕ್ಕಳು ಹೇಗೆ ಪ್ರಾಮುಖ್ಯತೆ ಕೊಡಬೇಕು, ಯಾವ ರೀತಿ ಮುತುವರ್ಜಿ ವಹಿಸಬೇಕು, ಚರ್ಮದ ಆರೋಗ್ಯ/ಸೌಂದರ್ಯ ಕೆಡದಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಸಿಕೊಟ್ಟರು.
ಚರ್ಮದಲ್ಲಿನ 3 ಬಗೆಗಳಾದ ಡ್ರೈ ಸ್ಕಿನ್, ಆಯ್ಲಿ ಸ್ಕಿನ್, ನಾರ್ಮಲ್ ಸ್ಕಿನ್ ಇವುಗಳನ್ನು ಪತ್ತೆ ಹಚ್ಚಿ ತಮ್ಮ ಪ್ರಕಾರ ಯಾವುದೆಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ಕೆಮಿಕಲ್ಸ್ ರಹಿತ ಸೋಪ್, ಫೇಸ್ ವಾಶ್, ಸ್ಕ್ರಬ್ ಇತ್ಯಾದಿ ಬಳಸಬೇಕೆಂದು ಸಲಹೆ ನೀಡಿದರು. ದಿನ ಬೆಳಗಾಗುವಷ್ಟರಲ್ಲಿ ಯಾವು ಯಾವುದೋ ಕ್ರಿಂ ಹಚ್ಚಿಕೊಂಡು ಶ್ಯಾಮಲ ವರ್ಣದವರು ಗೌರವರ್ಣ ಪಡೆಯಲಿಕ್ಕಾಗದು. ಇಂಥ ಜಾಹೀರಾತುಗಳಿಗೆ ಮರುಳಾಗಬಾರದು ಎಂದು ಸೂಕ್ಷ್ಮವಾಗಿ ತಿಳಿಸಿಕೊಟ್ಟರು.
ಅಂದಿನ ಕಾಲದ ಅಜ್ಜಿಯರ ಆರೈಕೆಯಲ್ಲಿ ಆಯಿಲ್ ಮಸಾಜ್ ಗಿದ್ದ ಮಹತ್ವ, ಚರ್ಮದ ಪದರಗಳಾದ ಹೊರಗಿನ ಅಪ್ಪರ್ ಎಪಿಡರ್ಮಿಸ್, ಅದರ ಒಳಪದರ ಕೆಳಗಿನ ಎಂಡೋಡರ್ಮಿಸ್ ಅದರ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು. ಇದರ ರಕ್ಷಣೆ, ಪೋಷಣೆ, ವಿಟಮಿನ್ ವಿಶ್ಲೇಷಣೆ, ಉಷ್ಣ ನಿಯಂತ್ರಣ, ಸಂವೇದನಾಶೀಲತೆ, ಸೌಂದರ್ಯ ಸಂವರ್ಧನೆ ಇತ್ಯಾದಿಗಳ ಪ್ರಾಮುಖ್ಯತೆ ಗುರುತಿಸಿಕೊಟ್ಟರು.
ಚರ್ಮದ ಹೈಡ್ರೇಶನ್, ಬ್ಯೂಟಿ ಎನ್ ಹ್ಯಾನ್ಸ್, ಕ್ಲೆನ್ಸರ್, ಮಾಯಿಶ್ಚರೈಸರ್, ಟೋನರ್ ಗಳ ಬಳಕೆ, ಅದರ ಲಾಭಾಂಶಗಳ ಬಗ್ಗೆ ಹೇಳಿದರು. ಶಿಶು, ಮಕ್ಕಳು, ಟೀನೇಜರ್ಸ್, ಯುವಜನತೆ, ಮಧ್ಯಮಯಸ್ಕರು, ಪ್ರೌಢರ ಚರ್ಮದ ಕುರಿತು ಅನೇಕ ವಿವರಣೆ, ಸಮಸ್ಯೆಗಳ ನಿವಾರಣೆ ಬಗ್ಗೆ ಹೇಳಿದರು. ಸನ್ ಸ್ಕ್ರೀನ್ ಲೋಶನ್, ಹ್ಯಾಲುರೋನಿಕ್ ಆ್ಯಸಿಡ್ ನ ಪ್ರಾಮುಖ್ಯತೆ, 30+SPF ಹಾಗೂ 50+ SPF ಇತ್ಯಾದಿಗಳ ವೈಜ್ಞಾನಿಕ ಮಹತ್ವದ ಬಗ್ಗೆ ತಿಳಿಸಿದರು. ಆ್ಯಂಟಿ ಏಜಿಂಗ್ ಬೆನಿಫಿಟ್ಸ್, ನಮ್ಮ ಆಧುನಿಕ ಜೀವನಶೈಲಿ, ವ್ಯಾಯಾಮ, ನಿದ್ದೆ, ವಿಶ್ರಾಂತಿಗಳ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಅತಿಯಾದ ಕೆಫೀನ್, ಆಲ್ಕೋಹಾಲ್ ಬಳಕೆ ಯಾರಿಗೂ ಹಿತಕರವಲ್ಲ ಎಂದು ಸಲಹೆ ನೀಡಿದರು. ಇವೆಂಟ್ ಗೆ ಬಂದಿದ್ದ ಹೆಂಗಸರು ಇವರ ಬಳಿ ತಮ್ಮ ಸಮಸ್ಯೆಗಳಿಗೆ ಪರಿಹಾರ, ಸಂದೇಹಗಳಿಗೆ ನಿವಾರಣೆ ಪಡೆದರು.