ಭಾರತದ ಗುರು, ಸ್ವಾಮಿ, ಧರ್ಮಾಚಾರ್ಯ, ಮಹಂತ, ಪಂಡಿತ, ಪೂಜಾರಿ ಎಲ್ಲರೂ ಒಂದೇ….. ಈ ನಿಟ್ಟಿನಲ್ಲಿ ಅಮೆರಿಕಾದ ವಿವಿಧ ಚರ್ಚುಗಳ ಪಾದ್ರಿ, ಪ್ರೀಸ್ಟ್, ಬಿಷಪ್, ಪಾಸ್ಟರ್ಸ್ ಗಳೇನೂ ಹೊರತಲ್ಲ. ಭಾರತದಲ್ಲಿ ಇಂಥ ಧರ್ಮಗುರುಗಳ ವಿರುದ್ಧ ಸೆಕ್ಶುಯಲ್ ಅಬ್ಯೂಸ್ ನ ಆರೋಪ ಕಡಿಮೆ ಇರಬಹುದು. ಆದರೆ ಅಮೆರಿಕಾದ ದಕ್ಷಿಣ ಭಾಗದಲ್ಲಿ ಹಲವಾರು ಸಾಂಪ್ರದಾಯಿಕ ಸದರ್ನ್ ಬ್ಯಾಪ್ಟಿಸ್ಟ್ ಕನ್ವೆನ್ಶನ್ ಬಳಿ ಕಳೆದ 2000-2019ರವರೆಗೂ ಸುಮಾರು 700ಕ್ಕೂ ಅಧಿಕ ಇಂಥ ಕೇಸುಗಳು ಚರ್ಚುಗಳ ಪಾದ್ರಿಗಳ ವಿರುದ್ಧ ಆರೋಪಿಸಲಾಗಿದೆ. ಹಲವು ವರ್ಷಗಳಿಂದ ಚರ್ಚುಗಳ ಈ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಆಗುತ್ತಲೇ ಇದೆ. ಆದರೆ ಇದು ಪಬ್ಲಿಕ್ ಆಗದಂತೆ ಬಿಗಿ ಸರ್ಪಕಾವಲಿದೆ.
2022ರ ಮೇನಲ್ಲಿ ಈ ವರದಿ ಲೀಕ್ ಆದಾಗ, ಈ ಪಟ್ಟಿಯ ಮುಖಗಳು ಮೀಡಿಯಾ, ಟಿವಿಯಲ್ಲಿ ಕಾಣತೊಡಗಿದಾಗ, ಈ ಮಂದಿ ಸಾವಿರಾರು ಅಲ್ಲ ಕೋಟ್ಯಂತರ ಜನರ ಜೀವಗಳೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಚರ್ಚು ಗಂಭೀರವಾಗಿ ಪರಿಗಣಿಸಿತು. ಹಾಗಾಗಿ ಈ ಪಾದ್ರಿಗಳ ವಿರುದ್ಧ ನ್ಯಾಯ ಬಯಸಿದವರಿಗೆ ಅದನ್ನು ಕೊಡಿಸುವ ವಾಗ್ದಾನ ನೀಡಿತು.
ವಿದೇಶಿ ಚರ್ಚುಗಳನ್ನು ಭಾರತದಲ್ಲಿ ಒಂದೇ ಎಂದು ಭಾವಿಸಲಾಗುತ್ತದೆ. ಆದರೆ ವಿದೇಶಗಳಲ್ಲಿ ಚರ್ಚ್ ಲಕ್ಷಾಂತರ ತುಂಡುಗಳಾಗಿ ವಿಭಜಿಸಲ್ಪಟ್ಟಿವೆ. ನಮ್ಮಲ್ಲಿ ಇಲ್ಲಿ ಪ್ರತಿ ಮಂದಿರ, ಆಶ್ರಮ, ಮಠ ಒಬ್ಬ ಗುರುವಿನ ಸಾಂಪ್ರದಾಯಿಕ ಖಾಸಗಿ ಆಸ್ತಿ ಆಗಿರುವಂತೆ ಅಲ್ಲಿಯೂ ಸಹ! ಚರ್ಚು, ಮಂದಿರ, ಮಠ, ಮಸೀದಿ, ಸಿಖ್ಖರ ಗುರುದ್ವಾರಗಳನ್ನೂ ಒಳಗೊಂಡಂತೆ ಯಾವ ಸರ್ಕಾರಿ ಅಧಿಕಾರದ ಅಂಗ ಅಲ್ಲ. ಅವೆಲ್ಲ ಬೇರೆ ಬೇರೆ ಅಸ್ತಿತ್ವಗಳನ್ನು ಹೊಂದಿವೆ. ಎಲ್ಲದರ ಬಳಿಯೂ ಕೋಟ್ಯಂತರ ಆಸ್ತಿ ಇದೆ. ಹೀಗಾಗಿ ಈ ಎಲ್ಲಾ ಧರ್ಮಗಳ ಗಾಡಿಯನ್ನೂ ದೇವರಲ್ಲ ಇವರ ಈ ಹಣ ನಡೆಸುತ್ತದೆ, ಅದು ಭಕ್ತರ ದಾನದ ರೂಪದಲ್ಲಿ ನಿರಂತರ ಸೇರುತ್ತಿರುತ್ತದೆ. ಚರ್ಚ್ ಅಥವಾ ಯಾವುದೇ ಧರ್ಮದ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಸೆಕ್ಸ್ ಸುಖ ಹೊಂದುವ ಅವಕಾಶ ಅವರ ಇನ್ನೊಂದು ಮುಖ್ಯ ಗುರಿಯಾಗಿರುತ್ತದೆ. ಕ್ಯಾಲಿಫೋರ್ನಿಯಾದ ಈ ಚರ್ಚಿನಲ್ಲಿ ಕನಿಷ್ಠ 700 ಪಾದ್ರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ, ಈ ಸಂಗತಿ ಮೀಡಿಯಾ ಎದುರು ಬಂದಾಗಿನಿಂದ ಮತ್ತಷ್ಟು ಹೆಸರುಗಳು ಕೂಡಿಕೊಳ್ಳುತ್ತಿವೆ!
ಚರ್ಚಿನ ಚರ್ಚೆ ಮುಗಿಲೇರಿದೆ. ಭಾರತದಲ್ಲಿ ಧರ್ಮದ ದಂಧೆ ಸಾಮಾನ್ಯವಾಗಿ ಈ ಆರೋಪಗಳಿಂದ ಮುಕ್ತವಾಗಿರುತ್ತದೆ. ನಮ್ಮಲ್ಲಿ ಭಕ್ತರು ಅಮೆರಿಕಾದ ಆಸ್ತಿಕರಿಗಿಂತ ಹೆಚ್ಚೆಚ್ಚು ಶ್ರದ್ಧೆಯುಳ್ಳವರು. ಹೀಗಾಗಿ ತಮ್ಮ ಪಂಡಿತರು, ಸ್ವಾಮಿಗಳು, ಗುರುಗಳ ವಿರುದ್ಧ ದೂರು ನೀಡಲಾರರು. ಆಸಾರಾಂ ಬಾಪೂರಂಥ ಅಪರೂಪದ 1-2 ಪ್ರಕರಣ ಬಿಟ್ಟರೆ, ಮತ್ತೆಲ್ಲೂ ಶಿಕ್ಷೆ ಆಗಲಿಲ್ಲ ಹಾಗೂ ಒಂದು ವೇಳೆ ಪ್ರಕರಣ ಕಟಕಟೆಗೆ ಬಂದರೂ, ಜಡ್ಜ್ ಗಾಬರಿಯಿಂದ ಅದನ್ನು ಮುಂದೂಡಿಬಿಡುತ್ತಾರೆ ಅಥವಾ ಸಾಕ್ಷಿ ಪುರಾವೆ ಸಾಲದು ಎಂದು ಪ್ರಕರಣ ಕ್ಲೋಸ್ ಮಾಡುತ್ತಾರೆ.
ಇತ್ತೀಚಿನ ಎಷ್ಟೋ ಸೆಕ್ಶುಯೆಲ್ ಅಬ್ಯೂಸ್ ಪ್ರಕರಣಗಳ ಕುರಿತಾಗಿ ಎಲ್ಲಾ ಧರ್ಮಗಳೂ ಲಕ್ಷಾಂತರ ಡಾಲರ್ ಗಳನ್ನು ನೀರಿನಂತೆ ಖರ್ಚು ಮಾಡುತ್ತಾ ಮುಚ್ಚಿಹಾಕಲು ಹೆಣಗುತ್ತಿವೆ. ಸಂತ್ರಸ್ತರಿಗೆ ಅವರ ಒಂದೇ ಸಮಾಧಾನ ಎಂದರೆ, ದೇವರ ವಿಷಯದಲ್ಲಿ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಸತ್ತ ನಂತರ ದೇವರಿಗೆ ಏನೆಂದು ಉತ್ತರ ನೀಡುವಿರಿ ಎಂದು ಬೆದರಿಸುತ್ತಾರೆ. ಮೂಢನಂಬಿಕೆಯ ಗುಲಾಮರಾದ ಭಕ್ತರು, ಬಾಯಿಮುಚ್ಚಿ ತೆಪ್ಪಗಾಗುತ್ತಾರೆ. ಈ ಪಾದ್ರಿಗಳ ಕರ್ಮಕಾಂಡಕ್ಕೆ ಅವರ ಬಳಿ ಇರುವುದು ಒಂದೇ ಉತ್ತರ ದೇವರು ಇದ್ದಾನೆ, ಅವನು ಎಲ್ಲಾ ನೋಡಿಕೊಳ್ತಾನೆ, ಪಾಪಿಗಳಿಗೆ ಶಿಕ್ಷೆ ತಪ್ಪದು!
ಎಲ್ಲಾ ಧರ್ಮಗುರುಗಳೂ ತಮ್ಮ ಭಕ್ತರನ್ನು ಹೇಗೆ ಭ್ರಮೆಯಲ್ಲಿ ಸಿಲುಕಿಸುತ್ತಾರೆ ಎಂದರೆ ಅವರು ತಂತಮ್ಮ ಸಂತರು, ಮಹಂತರು, ಪಾದ್ರಿ, ಮುಲ್ಲಾಗಳ ಎಲ್ಲಾ ಅನ್ಯಾಯಗಳನ್ನೂ ವರದಾನ ಎಂದೇ ಭಾವಿಸುತ್ತಾರೆ. ತನು ಮನ ಧನ ಸಮರ್ಪಿಸಿ ಮಾಡುವ ಸೇವೆಯಲ್ಲಿ ಅವರಿಗೆ ತನುವಿನ ಸೇವೆಯ ಕುರಿತು ಕಿಂಚಿತ್ತೂ ಗಮನವಿಲ್ಲ. ಯಾವ ಅಪರಾಧಗಳಿಗೆ ಈ ಸೆಕ್ಯುಲರ್ ಸರ್ಕಾರ ಮತ್ತು ಕಾನೂನು, ಶಿಕ್ಷೆ ನೀಡಿ ಜೇಲಿಗೆ ಅಟ್ಟುತ್ತದೋ, ಅದನ್ನೇ ಈ ಧರ್ಮ ಕೇವಲ ಪಾಪ ಎನ್ನುತ್ತಾ ಒಂದಿಷ್ಟು ಪ್ರಾಯಶ್ಚಿತ್ತ ಸೂಚಿಸುತ್ತದೆ ಅಥವಾ ಸತ್ತ ನಂತರ ಈ ಅಹವಾಲನ್ನು ದೇವರೇ ತೀರ್ಮಾನಿಸುತ್ತಾನೆ ಎನ್ನುತ್ತಾರೆ. ಅಪರಾಧಿಯೇ ದೇವರ ಏಜೆಂಟ್ ಆದರೆ, ಯಾವ ಕಾನೂನು ತಾನೇ ಅವನಿಗೆ ಶಿಕ್ಷೆ ನೀಡಬಲ್ಲದು? ಇದು ಅಮೆರಿಕಾದಲ್ಲೂ, ಭಾರತದಲ್ಲೂ ಎಲ್ಲೆಲ್ಲೂ ಒಂದೇ!
ಪಾಪ ತೊಳೆಯಬೇಕೆಂದರೆ ಸಂಪತ್ತನ್ನು ಧಾರೆ ಎರೆಯಿರಿ
ಬಿಜೆಪಿಯ ಅಧಿಕೃತ ಪ್ರಯುಕ್ತ ನೂಪುರ್ ಶರ್ಮ ಮತ್ತು ಬೇರೆ ಮೀಡಿಯಾದ ಅಧಿಕಾರಿ ನವೀನ್ ಕುಮಾರ್ ಒಂದು ಟಿವಿ ಚರ್ಚೆಯಲ್ಲಿ ಇಸ್ಲಾಂ ಕುರಿತಾಗಿ ಹೇಳಿದ ಕೆಲವು ಮಾತುಗಳಿಂದಾಗಿ, ಎಲ್ಲಾ ಮುಸಲ್ಮಾನರು ಅಲ್ಲದೆ, ಇಡೀ ವಿಶ್ವದ ಎಲ್ಲಾ ಮುಸ್ಲಿಂ ದೇಶಗಳೂ ಹುಬ್ಬು ಗಂಟಿಕ್ಕಿದ. ಇವರಿಬ್ಬರೂ ಏನೇ ಹೇಳಿರಲಿ, ಅದನ್ನು ಬಿಜೆಪಿಯ ಸಮರ್ಥಕರು ತಮ್ಮ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ, ಬಲು ಶ್ರದ್ಧೆಯಿಂದ ಸಪೋರ್ಟ್ ಮಾಡುತ್ತಾ ಇಸ್ಲಾಂ ಹಿಂದೂ ವಿವಾದದಲ್ಲಿ ತಮ್ಮನ್ನು ತಾವು ಶ್ರೇಷ್ಠರೆಂದು ತೋರಿಸಿಕೊಳ್ಳಲು, ಪೈಗಂಬರ್ ನ್ನು ಅವಮಾನಿಸಲೆಂದೇ ಫಾರ್ವರ್ಡ್ ಮಾಡುತ್ತಾ, ತಮ್ಮನ್ನು ತಾವು ಪರಮ ಹಿಂದೂ ಯೋದ್ಧ ಎಂದುಕೊಳ್ಳುತ್ತಿದ್ದಾರೆ. ಈ ಸಲ ಜ್ಞಾನಾಪಿ ಮಸೀದಿ ಕುರಿತಾಗಿ ನಡೆಯುತ್ತಿರುವ ಚರ್ಚೆಯಲ್ಲಿ ನೂಪುರ್ ಬಹಳ ಜೋಶ್ ನಿಂದ ಮಾತಾಡಿದಾಗ, ಆ್ಯಂಕರ್ ಅವಳನ್ನು ತಡೆಯಲೂ ಇಲ್ಲ. ಈ ಆ್ಯಂಕರ್ ಯೋಚನೆ ಹೇಗಿದೆ ಎಂದರೆ ಹಿಂದೂಗಳೇ ಸರ್ವಶ್ರೇಷ್ಠ, ಏಕೆಂದರೆ ಅವರಿಂದಲೇ ಚಾನೆಲ್ ಗೆ ಆದಾಯ ಎಂಬಂತೆ.
ಪ್ರತಿ ಧರ್ಮದಲ್ಲೂ ತಂತಮ್ಮ ಗ್ರಂಥಗಳಲ್ಲಿ ತಮ್ಮದೇ ಆರಾಧ್ಯರ ಕುರಿತು ಅದೇನೇನು ವರ್ಣನೆ ಮಾಡಿದ್ದಾರೋ…. ಹಾಗೆಯೇ ಎಲ್ಲಾ ಧರ್ಮಗಳ ಸುಧಾರಕರೂ ಎಷ್ಟೋ ಸಲ ತಮ್ಮ ಧರ್ಮೀಯರಿಗೆ ಅಸಲಿ ಸಂಗತಿ ತಿಳಿಸಿಬಿಡುತ್ತಾರೆ. ಬಹುತೇಕ ಎಲ್ಲಾ ದೇಶಗಳಲ್ಲೂ ದೇವನಿಂದೆಯ ಕುರಿತಾದ ಬಿಗಿ ಕಾನೂನು ಇದ್ದೇ ಇರುತ್ತದೆ, ಆಗ ಜನ ತಮ್ಮ ಧರ್ಮದ ವಿರುದ್ಧ ಸಿಡಿದೇಳಬಾರದು ಅಂತ. ಅವಕಾಶ ಸಿಕ್ಕಿದ ತಕ್ಷಣ ಪರಮ ಧರ್ಮದ ಲೋಪದೋಷಗಳನ್ನು ಎತ್ತಿ ಆಡುತ್ತಿರುತ್ತಾರೆ. ತಮ್ಮ ಧರ್ಮದ ಮೇಲೆ ಆಗುತ್ತಿರುವ ಆಕ್ರಮಣದಿಂದ ಬಚಾವಾಗಬೇಕಾದರೆ ಈ ರೀತಿ ಉಗ್ರ ಪ್ರತಿಭಟನೆಯ ಮಾಮೂಲಿ. ಹಾಗೆ ಮಾಡಿದರು ತಮ್ಮ ಧರ್ಮೀಯರು ಅಥವಾ ಪರರೇ ಇರಲಿ.
ಬಿಜೆಪಿಯ ಅಧಿಕಾರ ಚುಕ್ಕಾಣಿ ನಿಂತಿರುವುದೇ ಧರ್ಮದ ಮೇಲೆ, ಇದರ ಅಧಿಕಾರ 1000 ವರ್ಷಗಳ ಹಿಂದೆ ಮುಸ್ಮಾನರ ಕೈಯಲ್ಲೇ ಇತ್ತು. ಕೆಲವು ಜನ ಖಾಸಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಬಾಯಿಗೆ ಬಂದದ್ದನ್ನೇ ಹೇಳಿಬಿಡುತ್ತಾರೆ. ಈ ಸಲ ಟಿವಿಯ ಚರ್ಚೆಯಲ್ಲಿ ಇದು ಪ್ರಸಾರವಾಯಿತು. ಅದೂ ಒಬ್ಬ ಚಾನೆಲ್ ಅಧಿಕಾರಿಯಿಂದ, ಹೀಗಾಗಿ ಅದು ಪಟಾಕಿಯಂತೆ ಮೀಡಿಯಾಗಳಲ್ಲಿ ಸಿಡಿಯಿತು. ಹೀಗಾಗಿ ಹಲವು ಮುಸ್ಲಿಂ ದೇಶಗಳ ಸರ್ಕಾರಗಳು ತಮ್ಮ ಭಾರತೀಯ ದೂತಾವಾಸದ ಮಂದಿಯನ್ನು ಕರೆಸಿ ಸ್ಪಷ್ಟನೆ ನೀಡುವಂತೆ ಪಟ್ಟುಹಿಡಿದ.
ಇಲ್ಲಿ ನೂಪುರ್ ಶರ್ಮ, ನವೀನರದ್ದೇನೂ ದೊಡ್ಡ ದೋಷವಿಲ್ಲ. ಏಕೆಂದರೆ ತಮ್ಮ 1000 ವರ್ಷಗಳ ಗುಲಾಮಗಿರಿಯ ಅಸಹನೆ ವ್ಯಕ್ತಪಡಿಸಲು ಅವರ ಬಳಿ ಬೇರೆ ಅಸ್ತ್ರ ಇರಲಿಲ್ಲ. ಹೀಗಾಗಿ ಮುಸ್ಲಿಮರನ್ನು ಖಂಡಿಸಿದರು.
ಮುಸ್ಲಿಂ ಧರ್ಮ ಹೇಗೆ ಇರಲಿ, ಅವರ ಗ್ರಂಥಗಳಲ್ಲಿ ಏನೇ ಬರೆದಿರಲಿ, ಒಂದಂತೂ ಸ್ಪಷ್ಟ, ಹಿಂದೂ ರಾಜರು ಮತ್ತೆ ಮತ್ತೆ, ಕೋಟ್ಯಂತರ ಸಲ, ಒಂದಿಷ್ಟು ಮುಸಲ್ಮಾನ್ ಆಕ್ರಮಣಕಾರರಿಂದ ಸೋತಿದ್ದಂತೂ ನಿಜ ತಾನೇ? ಏಕೆಂದರೆ ನಮ್ಮ ಧರ್ಮ ನಮ್ಮನ್ನು ಸದಾ ಹಂಚಿಹಾಕಿದೆ, ಆಗ ಮಾತ್ರ ಬ್ರಾಹ್ಮಣ ಶಿರೋಮಣಿಗಳು ಎಲ್ಲಕ್ಕಿಂತ ಮೇಲಿದ್ದು ನಿರಂತರ ದಾನದಕ್ಷಿಣೆ ಪಡೆಯುತ್ತಿರುತ್ತಾರೆ.
ಮಾತಿಗಿಂತ ಕೃತಿ ಮುಖ್ಯ ಅಲ್ಲವೇ?
ಇತ್ತೀಚೆಗಂತೂ ಬಿಜೆಪಿ ಸದಾಸರ್ವದಾ ಕೌಟುಂಬಿಕ ರಾಜಕೀಯ ನಡೆಸುವವರ ವಿರುದ್ಧ ಕೆಂಡ ಕಾರುತ್ತಿರುತ್ತದೆ. ಉ.ಪ್ರ ರಾಜ್ಯವಲ್ಲದೆ ಉ.ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯ ಹಿಡಿತವಿದೆ. ಅದೇ ಸಮಯಕ್ಕೆ ಅಲ್ಲಿನ ಇನ್ನಿತರ ರಾಜ್ಯಗಳಲ್ಲಿ ಇತರ ಪಕ್ಷಗಳ 2ನೇ, 3ನೇ ತರೆಮಾರಿನವರು ಪಕ್ಷದ ಅಧಿಕಾರ ಹಿಡಿದಿರುವುದು ಬಿಜೆಪಿಗೆ ಕಿರಿಕಿರಿ ತಂದಿದೆ.
ಬಿಜೆಪಿ ಈಗ ಕೌಟುಂಬಿಕ ರಾಜಕೀಯ ನಡೆಸುವ ಪಕ್ಷಗಳ ವಿರುದ್ಧವೋ ಅಥವಾ ಆ ಕುಟುಂಬಗಳ ವಿರುದ್ಧವೋ, ತಿಳಿಯುತ್ತಿಲ್ಲ. ರಾಜಕೀಯದಲ್ಲಿ ಕೌಟುಂಬಿಕ ಸದಸ್ಯರ ಉಪಸ್ಥಿತಿ ತಪ್ಪಾಗಿದ್ದರೆ, ಅದು ಜನಹಿತಲ್ಲ ಎನಿಸಿದರೆ, ಅನಾದಿ ಕಾಲದಿಂದಲೂ ನಡೆದು ಬರುತ್ತಿರುವ ಉದ್ಯಮ, ವ್ಯಾಪಾರಗಳಲ್ಲೂ ಸ್ಥಿತಿ ಇದೇ ತಾನೇ? ಕೌಟುಂಬಿಕ ಸದಸ್ಯರಾಗಿರುವುದು ಅನರ್ಹತೆ ಎನಿಸಿದರೆ ಇದೇ ಪೀಳಿಗೆಯ ಟೀಚರ್, ವಕೀಲ, ಜಡ್ಜ್, ಆರ್ಟಿಸ್ಟ್, ಸಿನಿಮಾ ತಾರೆಯರು, ಭಾಷಣಕಾರರು, ಲೇಖಕರು, ಸಂಪಾದಕರು, ಪ್ರಕಾಶಕರು, ವೈದ್ಯರು ಅಧಿಕಾರಿಗಳು…. ಎಲ್ಲದರ ಮೇಲೂ ಅನ್ವಯಿಸುವುದಿಲ್ಲವೇ?
ಇನ್ನೊಂದು ಅರ್ಥವಾಗದ ವಿಷಯ ಎಂದರೆ, ಕುಟುಂಬದ ಹೆಸರು ಬಳಸಿಕೊಳ್ಳುವುದು ತಪ್ಪು ಎಂದಾದರೆ, ರಾಮಾಯಣದಲ್ಲಿ ದಶರಥನ ಮಕ್ಕಳೇ ಏಕೆ ಮುಂದೆ ರಾಜರಾದರು? ಮಹಾಭಾರತದಲ್ಲಿ ಕುರುವಂಶದ ಹಲವು ಪೀಳಿಗೆ ಅಧಿಕಾರ ಮುಂದುವರಿಸಿದ್ದು ಏಕೆ? ಈ ಬಿಜೆಪಿ ಅದನ್ನೇ ಆದರ್ಶ ಆಗಿಸಿಕೊಳ್ಳುವುದೇಕೆ?
ಬಿಜೆಪಿಯಲ್ಲೂ ಇಂಥ ನೇತಾರರು ಇದ್ದೇ ಇದ್ದಾರೆ. ಅದು ಎಲ್ಲರಿಗೂ ಗೊತ್ತು. ಈಗ ಸಂದೇಹ ಮೂಡುವುದು ಎಂದರೆ ಬಿಜೆಪಿಯವರ ಮಾತನ್ನು ನಂಬಬೇಕೋ ಅಥವಾ ಕೃತಿಯನ್ನೋ? ಇವರ ಭಾಷಣ ಕೇಳುವುದೇ ಯಾವು ಪೌರಾಣಿಕ ಕಥೆಗಳು, ಅವಿಭಕ್ತ ಕುಟುಂಬದ ಮಹತ್ವದ ಬಗ್ಗೆ ಅಜ್ಜಂದಿರ ಪ್ರವಚನ ಕೇಳುವುದೇ ಯಾವ ರಾಜಕೀಯ ಆಗುಹೋಗುಗಳನ್ನೇ?
ರಾಜಕೀಯದಂತೆಯೇ ಮನೆಗಳಲ್ಲೂ ಕೌಟುಂಬಿಕ ವಾದ ಇಲ್ಲದಿದ್ದರೆ, ಹೊಸ ಸೊಸೆಯಂದಿರನ್ನು ಹಿಡಿಯುವವರೇ ಇಲ್ಲ! ಇದರ ಅರ್ಥ ಅತ್ತ ಅತ್ತೆಯ ಮಾತು ಕೇಳಬೇಕಿಲ್ಲ, ಇತ್ತ ಮಾವನಿಗೆ ಸೇವೆ ಮಾಡಬೇಕಿಲ್ಲ. ಸಾಧ್ಯವಿದ್ದರೆ ಬೇರೆ ಮನೆ ಹೂಡಿ, ನಿಮ್ಮ ಸುಖ ದುಃಖ ನೀವೇ ನೋಡಿಕೊಳ್ಳಿ ಹಾಗೂ ಬಿಜೆಪಿಯ ಮಾರ್ಗದರ್ಶಿಗಳನ್ನು ಮರೆತೇಬಿಡಿ! ಏಕೆಂದರೆ ಅವರ ಪ್ರಕಾರ ಕೌಟುಂಬಿಕ ವಾದ ಒಂದು ತರಹ ಕೊರೋನಾ ಇದ್ದಂತೆ, ಅದು ದೇಶದ ತಂತ್ರವನ್ನೇ ಕಬಳಿಸುತ್ತಿದೆಯಂತೆ. ಅಣ್ಣ ತಂಗಿ ಎಲ್ಲೂ ಒಟ್ಟೊಟ್ಟಿಗೆ ಕೆಲಸ ಮಾಡುವಂತಿಲ್ಲ. ಹೀಗೆಂದು ವೇದಿಕೆ ಏರಿ ಬಿಜೆಪಿ ಧುರೀಣರು ಭಾಷಣ ಕೊರೆದರೆ, ಅಣ್ಣನ ವಿರುದ್ಧ ಹಕ್ಕನ್ನು ಚಲಾಯಿಸುವ, ಹೋರಾಡುವ ಎಂದು ತಂಗಿಯರಿಗೆ ಅವರೇ ಹೇಳಿದಂತಲ್ಲವೇ? ಸರ್ಕಾರ ಅಂಥವರ ನೆರವಿಗಿರುತ್ತದೆ! ಈ ಜ್ಞಾನಕ್ಕಾಗಿ ದೊಡ್ಡ ಧನ್ಯವಾದ.