ಒಂದು ಗುಡಿ ಮುಂದೆ ಒಂದು ಹಸು, ಆಗ ತಾನೇ ಮದುವೆಯಾಗಿದ್ದ ಒಂದು ಗಂಡು ಹೆಣ್ಣು ಕತ್ತೆಗಳು ನಿಂತಿದ್ದವು.

ಗುಡಿಯಿಂದ ಆಚೆ ಬರುತ್ತಿದ್ದ ಜನರೆಲ್ಲ ಹಸುವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಮುಂದೆ ಸಾಗುತ್ತಿದ್ದರು. ಆದರೆ ಯಾರೂ ಈ ಕತ್ತೆಗಳನ್ನು ಕ್ಯಾರೇ ಅನ್ನುತ್ತಿರಲಿಲ್ಲ.

ಹುಲ್ಲು ಮೇಯುತ್ತಿದ್ದ ಗಂಡನನ್ನು ಹೆಣ್ಣು ಕತ್ತೆ ಕೇಳಿತು, ``ಯಾಕ್ರಿ, ಎಲ್ಲರೂ ಆ ಹಸುವನ್ನು ಮಾತ್ರ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊಳ್ತಾರೆ. ನನ್ನನ್ನು ಮಾತ್ರ ಯಾರೂ ಮುಟ್ಟೊಲ್ಲ.... ಯಾಕೆ?''

ಆಗ ಗಂಡು ಕತ್ತೆ ಹೆಮ್ಮೆಯಿಂದ ಸ್ಟೈಲಾಗಿ ಹೇಳಿತು, ``ಗಂಡ ಅನ್ನಿಸಿಕೊಂಡ ನಾನು ನಿನ್ನ ಪಕ್ಕದಲ್ಲೇ ಇರೋವಾಗ, ಯಾವ ನನ್ನ ಮಗನಿಗೆ ನಿನ್ನನ್ನು ಮುಟ್ಟುವ ಧೈರ್ಯ ಬಂದೀತು?''

ಗುಂಡ : ಈ ಗೂಗಲ್ ಮ್ಯಾಪ್‌ಲೊಕೇಶನ್‌ ಬಗ್ಗೆ ನನಗೊಂದು ಕೆಟ್ಟ ಕೋಪವಿದೆ.

ಸೀನ : ಅದೇನಯ್ಯ ಅಂಥದ್ದು?

ಗುಂಡ : ಎಲ್ಲದಕ್ಕೂ ಲೆಫ್ಟ್ ರೈಟ್‌ ಅಂತ ತೋರಿಸುತ್ತಲ್ಲ, ನಮ್ಮ ಬಳಿ ಲೈಸೆನ್ಸ್ ಇಲ್ಲದಿದ್ದಾಗ, ಮುಂದಿನ ರಸ್ತೇಲಿ ಟ್ರಾಫಿಕ್ ಮಾಮಾ ಇದ್ದಾನೆ, ಇಂತಿಂಥ ಗಲ್ಲಿಗಳಲ್ಲಿ ನುಗ್ಗಿ ಹೋಗಿ ಅಂತ ಯಾಕೆ ಹೇಳಬಾರದು?

ಮಿಟಕಲಾಡಿ ಮೋನಾ ಗಿಫ್ಟ್ ಕಾರ್ನರ್‌ ಗೆ ಹೋಗಿ 3 ಗಂಟೆ ಕಾಲ ತಡಕಾಡಿದರೂ ಫ್ರೆಂಡ್‌ ಮದುವೆಗಾಗಿ ಒಳ್ಳೆಯ ಗಿಫ್ಟ್ ಆರಿಸಲು ಆಗಲೇ ಇಲ್ಲ. ಅವಳಿಗೆ ಬೇರೆ ಬೇರೆ ಗಿಫ್ಟ್ ಐಟಂ ತೋರಿಸಿ ಅಲ್ಲಿದ್ದ ಸೇಲ್ಸ್ ನವರೆಲ್ಲ ರೋಸಿಹೋದರು.

ಏನೂ ಬೇಡ ಅಂತ ಮೋನಾ ಅಲ್ಲಿಂದ ಹೊರಡಲು ಸಿದ್ಧಳಾದಳು. ಇನ್ನೇನು ಹೊರ ಬರಬೇಕು ಅನ್ನುವಾಗ ಮೂಲೆಯೊಂದರಲ್ಲಿ ನಿಂತಿದ್ದ ಜೀವಂತ ಬೊಂಬೆ ಅವಳ ಗಮನ ಸೆಳೆಯಿತು.

``ರೀ, ಈ ಸ್ಮೈಲ್ ‌ಕೊಡ್ತಾ ಇರೋ ದೆವ್ವದ ರೇಟ್‌ ಎಷ್ಟು?'' ಎಂದು ಆ ಬೊಂಬೆ ಕಡೆ ಕೈ ತೋರಿಸಿದಳು.

``ಸರಿಯಾಗಿ ನೋಡಿ ಮೇಡಂ, ನೀವು ಕೇಳ್ತಿರೋದು ಎದುರಿಗಿರುವ ಮೇಕಪ್‌ ಮಿರರ್‌ ನ ತಾನೇ?'' ಎನ್ನುವುದೇ ಆ ಸೇಲ್ಸ್ ಮ್ಯಾನ್‌?!

ಅಂದು ಬೆಳಗಿನ ಹೊತ್ತಿಗೇ ಗಡಬಡಿಸುತ್ತಾ ವಿಶಾಲು ವಿಶ್ವನ ಬಳಿ ಬಂದು ಕೇಳಿದಳು, ``ಬೇಗ.... ನನಗೆ ಇವತ್ತಿನ ಪೇಪರ್‌ಕೊಡಿ!''

``ಅಯ್ಯೋ! ಇಷ್ಟೆಲ್ಲ ಕಲಿತವಳು ನೀನು, ಇನ್ನೂ ಪೇಪರ್‌ ಗೆ ಏಕೆ ಅಂಟಿಕೊಳ್ಳಬೇಕು? ನನ್ನ ಲ್ಯಾಪ್‌ ಟಾಪ್‌ ಅಲ್ಲೇ ಟೇಬಲ್ ಮೇಲಿದೆ ನೋಡು, ಅದನ್ನು ತಗೊಂಡು ಇಪೇಪರ್‌ ನೋಡಬಾರದೇ?'' ಎಂದ ವಿಶ್ವ ಬೋಧಿಸಿದ.

ವಾದ ಬೇಡವೆಂದು ವಿಶಾಲೂ ಅವನ ಲ್ಯಾಪ್‌ ಟಾಪ್‌ ತೆಗೆದುಕೊಂಡು ಹೋಗಿ ಅಡುಗೆಮನೆ ಮೂಲೆಯಲ್ಲಿದ್ದ ಜಿರಲೆ ಮೇಲೆ ರಪ್ಪೆಂದು ಬಾರಿಸಿದಳು. ಜಿರಲೆಗೆ ಏನಾಯ್ತೋ ಇಲ್ಲವೋ ಗೊತ್ತಿಲ್ಲ.... ವಿಶ್ವನ ಲ್ಯಾಪ್‌ ಟಾಪ್‌ ಅಂತೂ.... ಗೋವಿಂದ!

ಟಿಪ್ಪಣಿ : ಹೆಂಡತಿ ಆದವಳು ಏನಾದರೂ ಕೇಳಿದರೆ, ತೆಪ್ಪಗೆ ಅವಳು ಕೇಳಿದ್ದನ್ನು ತಕ್ಷಣ ಕೊಟ್ಟುಬಿಡಿ, ಜ್ಞಾನ ಹಂಚಲು ಹೊರಟರೆ ಗಂಡನಿಗೆ ಜ್ಞಾನ ಹೋದೀತು!

ಹೈಸ್ಕೂಲ್ ಟೀಚರ್‌ : ರಾಜು ನಮ್ಮ ದೇಶದಲ್ಲಿ ಅತಿ ಅಪಾಯಕಾರಿ ನದಿ ಯಾವುದು?

ರಾಜು : ಓ ಅದಾ.... ಭಾವನಾ ಇರಬೇಕು... ಅವಳ ಭಾವನೆಗಳ ಪ್ರವಾಹದಲ್ಲಿ ಇಡೀ ಸ್ಕೂಲಿನ ಪಡ್ಡೆಗಳ ದಂಡೇ ಕೊಚ್ಚಿಹೋಗುತ್ತಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ