ಭಾರತದ ಗುರು, ಸ್ವಾಮಿ, ಧರ್ಮಾಚಾರ್ಯ, ಮಹಂತ, ಪಂಡಿತ, ಪೂಜಾರಿ ಎಲ್ಲರೂ ಒಂದೇ..... ಈ ನಿಟ್ಟಿನಲ್ಲಿ ಅಮೆರಿಕಾದ ವಿವಿಧ ಚರ್ಚುಗಳ ಪಾದ್ರಿ, ಪ್ರೀಸ್ಟ್, ಬಿಷಪ್, ಪಾಸ್ಟರ್ಸ್ ಗಳೇನೂ ಹೊರತಲ್ಲ. ಭಾರತದಲ್ಲಿ ಇಂಥ ಧರ್ಮಗುರುಗಳ ವಿರುದ್ಧ ಸೆಕ್ಶುಯಲ್ ಅಬ್ಯೂಸ್ ನ ಆರೋಪ ಕಡಿಮೆ ಇರಬಹುದು. ಆದರೆ ಅಮೆರಿಕಾದ ದಕ್ಷಿಣ ಭಾಗದಲ್ಲಿ ಹಲವಾರು ಸಾಂಪ್ರದಾಯಿಕ ಸದರ್ನ್ ಬ್ಯಾಪ್ಟಿಸ್ಟ್ ಕನ್ವೆನ್ಶನ್ ಬಳಿ ಕಳೆದ 2000-2019ರವರೆಗೂ ಸುಮಾರು 700ಕ್ಕೂ ಅಧಿಕ ಇಂಥ ಕೇಸುಗಳು ಚರ್ಚುಗಳ ಪಾದ್ರಿಗಳ ವಿರುದ್ಧ ಆರೋಪಿಸಲಾಗಿದೆ. ಹಲವು ವರ್ಷಗಳಿಂದ ಚರ್ಚುಗಳ ಈ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಆಗುತ್ತಲೇ ಇದೆ. ಆದರೆ ಇದು ಪಬ್ಲಿಕ್ ಆಗದಂತೆ ಬಿಗಿ ಸರ್ಪಕಾವಲಿದೆ.
2022ರ ಮೇನಲ್ಲಿ ಈ ವರದಿ ಲೀಕ್ ಆದಾಗ, ಈ ಪಟ್ಟಿಯ ಮುಖಗಳು ಮೀಡಿಯಾ, ಟಿವಿಯಲ್ಲಿ ಕಾಣತೊಡಗಿದಾಗ, ಈ ಮಂದಿ ಸಾವಿರಾರು ಅಲ್ಲ ಕೋಟ್ಯಂತರ ಜನರ ಜೀವಗಳೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಚರ್ಚು ಗಂಭೀರವಾಗಿ ಪರಿಗಣಿಸಿತು. ಹಾಗಾಗಿ ಈ ಪಾದ್ರಿಗಳ ವಿರುದ್ಧ ನ್ಯಾಯ ಬಯಸಿದವರಿಗೆ ಅದನ್ನು ಕೊಡಿಸುವ ವಾಗ್ದಾನ ನೀಡಿತು.
ವಿದೇಶಿ ಚರ್ಚುಗಳನ್ನು ಭಾರತದಲ್ಲಿ ಒಂದೇ ಎಂದು ಭಾವಿಸಲಾಗುತ್ತದೆ. ಆದರೆ ವಿದೇಶಗಳಲ್ಲಿ ಚರ್ಚ್ ಲಕ್ಷಾಂತರ ತುಂಡುಗಳಾಗಿ ವಿಭಜಿಸಲ್ಪಟ್ಟಿವೆ. ನಮ್ಮಲ್ಲಿ ಇಲ್ಲಿ ಪ್ರತಿ ಮಂದಿರ, ಆಶ್ರಮ, ಮಠ ಒಬ್ಬ ಗುರುವಿನ ಸಾಂಪ್ರದಾಯಿಕ ಖಾಸಗಿ ಆಸ್ತಿ ಆಗಿರುವಂತೆ ಅಲ್ಲಿಯೂ ಸಹ! ಚರ್ಚು, ಮಂದಿರ, ಮಠ, ಮಸೀದಿ, ಸಿಖ್ಖರ ಗುರುದ್ವಾರಗಳನ್ನೂ ಒಳಗೊಂಡಂತೆ ಯಾವ ಸರ್ಕಾರಿ ಅಧಿಕಾರದ ಅಂಗ ಅಲ್ಲ. ಅವೆಲ್ಲ ಬೇರೆ ಬೇರೆ ಅಸ್ತಿತ್ವಗಳನ್ನು ಹೊಂದಿವೆ. ಎಲ್ಲದರ ಬಳಿಯೂ ಕೋಟ್ಯಂತರ ಆಸ್ತಿ ಇದೆ. ಹೀಗಾಗಿ ಈ ಎಲ್ಲಾ ಧರ್ಮಗಳ ಗಾಡಿಯನ್ನೂ ದೇವರಲ್ಲ ಇವರ ಈ ಹಣ ನಡೆಸುತ್ತದೆ, ಅದು ಭಕ್ತರ ದಾನದ ರೂಪದಲ್ಲಿ ನಿರಂತರ ಸೇರುತ್ತಿರುತ್ತದೆ. ಚರ್ಚ್ ಅಥವಾ ಯಾವುದೇ ಧರ್ಮದ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಸೆಕ್ಸ್ ಸುಖ ಹೊಂದುವ ಅವಕಾಶ ಅವರ ಇನ್ನೊಂದು ಮುಖ್ಯ ಗುರಿಯಾಗಿರುತ್ತದೆ. ಕ್ಯಾಲಿಫೋರ್ನಿಯಾದ ಈ ಚರ್ಚಿನಲ್ಲಿ ಕನಿಷ್ಠ 700 ಪಾದ್ರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ, ಈ ಸಂಗತಿ ಮೀಡಿಯಾ ಎದುರು ಬಂದಾಗಿನಿಂದ ಮತ್ತಷ್ಟು ಹೆಸರುಗಳು ಕೂಡಿಕೊಳ್ಳುತ್ತಿವೆ!
ಚರ್ಚಿನ ಚರ್ಚೆ ಮುಗಿಲೇರಿದೆ. ಭಾರತದಲ್ಲಿ ಧರ್ಮದ ದಂಧೆ ಸಾಮಾನ್ಯವಾಗಿ ಈ ಆರೋಪಗಳಿಂದ ಮುಕ್ತವಾಗಿರುತ್ತದೆ. ನಮ್ಮಲ್ಲಿ ಭಕ್ತರು ಅಮೆರಿಕಾದ ಆಸ್ತಿಕರಿಗಿಂತ ಹೆಚ್ಚೆಚ್ಚು ಶ್ರದ್ಧೆಯುಳ್ಳವರು. ಹೀಗಾಗಿ ತಮ್ಮ ಪಂಡಿತರು, ಸ್ವಾಮಿಗಳು, ಗುರುಗಳ ವಿರುದ್ಧ ದೂರು ನೀಡಲಾರರು. ಆಸಾರಾಂ ಬಾಪೂರಂಥ ಅಪರೂಪದ 1-2 ಪ್ರಕರಣ ಬಿಟ್ಟರೆ, ಮತ್ತೆಲ್ಲೂ ಶಿಕ್ಷೆ ಆಗಲಿಲ್ಲ ಹಾಗೂ ಒಂದು ವೇಳೆ ಪ್ರಕರಣ ಕಟಕಟೆಗೆ ಬಂದರೂ, ಜಡ್ಜ್ ಗಾಬರಿಯಿಂದ ಅದನ್ನು ಮುಂದೂಡಿಬಿಡುತ್ತಾರೆ ಅಥವಾ ಸಾಕ್ಷಿ ಪುರಾವೆ ಸಾಲದು ಎಂದು ಪ್ರಕರಣ ಕ್ಲೋಸ್ ಮಾಡುತ್ತಾರೆ.
ಇತ್ತೀಚಿನ ಎಷ್ಟೋ ಸೆಕ್ಶುಯೆಲ್ ಅಬ್ಯೂಸ್ ಪ್ರಕರಣಗಳ ಕುರಿತಾಗಿ ಎಲ್ಲಾ ಧರ್ಮಗಳೂ ಲಕ್ಷಾಂತರ ಡಾಲರ್ ಗಳನ್ನು ನೀರಿನಂತೆ ಖರ್ಚು ಮಾಡುತ್ತಾ ಮುಚ್ಚಿಹಾಕಲು ಹೆಣಗುತ್ತಿವೆ. ಸಂತ್ರಸ್ತರಿಗೆ ಅವರ ಒಂದೇ ಸಮಾಧಾನ ಎಂದರೆ, ದೇವರ ವಿಷಯದಲ್ಲಿ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಸತ್ತ ನಂತರ ದೇವರಿಗೆ ಏನೆಂದು ಉತ್ತರ ನೀಡುವಿರಿ ಎಂದು ಬೆದರಿಸುತ್ತಾರೆ. ಮೂಢನಂಬಿಕೆಯ ಗುಲಾಮರಾದ ಭಕ್ತರು, ಬಾಯಿಮುಚ್ಚಿ ತೆಪ್ಪಗಾಗುತ್ತಾರೆ. ಈ ಪಾದ್ರಿಗಳ ಕರ್ಮಕಾಂಡಕ್ಕೆ ಅವರ ಬಳಿ ಇರುವುದು ಒಂದೇ ಉತ್ತರ ದೇವರು ಇದ್ದಾನೆ, ಅವನು ಎಲ್ಲಾ ನೋಡಿಕೊಳ್ತಾನೆ, ಪಾಪಿಗಳಿಗೆ ಶಿಕ್ಷೆ ತಪ್ಪದು!