ನಾವು ನೇಲ್ ‌ಪಾಲಿಶ್‌ ಆರಿಸುವಾಗೆಲ್ಲ, ಬಹಳಷ್ಟು ಬಣ್ಣಗಳು ನಮಗೆ ಅತ್ಯಾಕರ್ಷಕ ಎನಿಸುತ್ತವೆ, ಅವನ್ನೆಲ್ಲ ಕೊಳ್ಳಬೇಕು ಎನಿಸುತ್ತದೆ. ಇವು ಟ್ರೆಂಡ್‌ ನಲ್ಲಿಯೂ ಇರುತ್ತವೆ ಎಂಬುದೊಂದು ಪ್ಲಸ್‌ ಪಾಯಿಂಟ್‌. ಆದರೆ ನಿಮಗೆ ಗೊತ್ತೇ? ನಿಮ್ಮ ಸ್ಕಿನ್ ಟೋನಿಗೆ ತಕ್ಕಂತೆ ಉಗುರಿಗೆ ನೇಲ್ ‌ಪೇಂಟ್‌ ಆರಿಸಿದಾಗ ಮಾತ್ರ ಅದು ಸೂಟ್‌ ಎನಿಸುತ್ತದೆ, ಇಲ್ಲದಿದ್ದರೆ ನೀವು ಅಪೇಕ್ಷಿಸಿದಷ್ಟು ಕೈಗಳು ಮತ್ತು ಉಗುರಿನ ಸೌಂದರ್ಯ ಹೆಚ್ಚುವುದಿಲ್ಲ. ಹೀಗಿರುವಾಗ ನಿಮ್ಮ ಸ್ಕಿನ್‌ ಟೋನ್‌ ಗೆ ತಕ್ಕಂತೆ ನೇಲ್ ‌ಪೇಂಟ್‌ ಆರಿಸುವುದು ಹೇಗೆ ಎಂದು ಸೌಂದರ್ಯ ತಜ್ಞೆಯರ ಸಲಹೆಯಿಂದ ತಿಳಿಯೋಣವೇ?

ಡಸ್ಕಿ ಸ್ಕಿನ್ಟೋನ್

ಇದಂತೂ ಬಹಳ ಅತ್ಯಾಕರ್ಷಕ ಟೋನ್‌ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಈ ಸ್ಕಿನ್‌ ಟೋನಿಗೆ ಪ್ರತಿಯೊಂದು ಬಗೆಯ ನೇಲ್ ಪೇಂಟ್‌ ಸೂಟ್‌ ಆಗುತ್ತದೆ, ಬಹಳಷ್ಟು ಬ್ಯೂಟಿ ಎನ್‌ ಹ್ಯಾನ್ಸ್ ಮಾಡುತ್ತದೆ. ಈ ವಿಷಯವಾಗಿ ನೀವೇನಾದರೂ ಗೊಂದಲಗೊಂಡಿದ್ದರೆ ಒಂದು ವಿಷಯ ಸ್ಪಷ್ಟ ಗುರುತಿಸಿ. ಇಂಥ ಸ್ಕಿನ್‌ ಟೋನ್‌ ಉಳ್ಳವರಿಗೆ ಡಾರ್ಕ್‌ ಶೇಡ್ಸ್, ಪಿಂಕಿಶ್‌, ಆರೆಂಜ್‌, ಕೇಸರಿ, ಡಾರ್ಕ್‌ ಬ್ರೌನ್‌ ಶೇಡ್ಸ್ ಅಥವಾ ಇವಕ್ಕೆ ಹೊಂದುವ ಯಾವುದೇ ಶೇಡ್‌ ಆದರೂ ನಡೆಯುತ್ತದೆ, ಬಹಳ ಸುಂದರವಾಗಿ ಕಂಗೊಳಿಸುತ್ತದೆ.

ಸ್ಕೈ ಬ್ಲೂ ಕಲರ್‌ ತೆಗೆದುಕೊಳ್ಳಿ, ಇದಂತೂ ಈ ಟೋನ್‌ ನವರಿಗೆ ಮುಗಿಲೆತ್ತರಕ್ಕೆ ಕೊಂಡೊಯ್ಯುವ ಖುಷಿ ನೀಡುತ್ತದೆ, ಅಂದ್ರೆ,  ಒಂದು ಸಲ ಹೆಚ್ಚಿದ ನಂತರ ಎಲ್ಲರೂ ಬಿಡದೆ ಹೊಗಳ ತೊಡಗುತ್ತಾರೆ, ಇಂಥ ಸುಪರ್ಬ್‌ ಬ್ಯೂಟಿಫುಲ್ ಲುಕ್ಸ್ ಬಿಟ್ಟೋರುಂಟೆ? ಇಂಥವರು ಸಿಲ್ವರ್‌ಗೋಲ್ಡ್ ಕಲರ್ಸ್‌ ಸಹ ಟ್ರೈ ಮಾಡಬಹುದು. ಈ ಟೋನ್‌ ಗೆ ನೇಲ್ ‌ಆರ್ಟ್‌ ಸಲ ಬಹು ಚೆನ್ನಾಗಿ ಒಪ್ಪುತ್ತದೆ.

ಯಾವ ಕಲರ್ಸ್ಬೇಡ : ಈ ಸ್ಕಿನ್‌ ಟೋನ್‌ ಗೆ ಎಲ್ಲಾ ಕಲರ್ಸ್‌ ಚೆನ್ನಾಗಿಯೇ ಒಪ್ಪುತ್ತದೆ, ಹೀಗಾಗಿ ಮನ ಮೆಚ್ಚಿದ ಕಲರ್ಸ್‌ ಆರಿಸಿ, ಯಾವುದನ್ನೂ ಅವಾಯ್ಡ್ ಮಾಡುವ ಅಗತ್ಯವಿಲ್ಲ. ಫೇರ್‌ ಸ್ಕಿನ್‌ ಟೋನ್‌ ಇಂಥ ಸ್ಕಿನ್‌ ಟೋನ್‌ ಉಳ್ಳವರು ಮೊದಲೇ ಗೌರವರ್ಣ ಇರುವಾಗ, ಯಾವ ಬಣ್ಣ ಆರಿಸಿಕೊಂಡರೂ ಅದು ಚೆನ್ನಾಗಿಯೇ ಒಪ್ಪುತ್ತದೆ ಎಂದು ಅಂದುಕೊಂಡರೆ ತಪ್ಪಾದೀತು. ಏಕೆಂದರೆ ಕೆಲವು ನ್ಯೂಡ್‌ ಶೇಜಡ್ಸ್ ನಿಮ್ಮ ಸ್ಕಿನ್‌ ಟೋನ್‌ ಗೆ ಖಂಡಿತಾ ಒಪ್ಪುವುದಿಲ್ಲ. ನಿಮ್ಮ ಸ್ಕಿನ್‌ ಟೋನ್‌ ಸೂಟ್‌ ಆಗುವುದೆಂದರೆ ಪಿಂಕ್‌, ಲೈಟ್‌ ಪರ್ಪಲ್, ಮೀಡಿಯಂ ಡಾರ್ಕ್‌ ರೆಡ್‌, ಎಲ್ಲಾ ಬಗೆಯ ನೀಲಿ ಶೇಡ್ಸ್, ಬೇಬಿ ಪಿಂಕ್‌ ಮುಂತಾದವು.

ಯಾವ ಕಲರ್ಸ್ಬೇಡ : ಡಾರ್ಕ್‌ ಶೇಡ್ಸ್, ಅಂದ್ರೆ ಬ್ಲ್ಯಾಕ್‌, ಡಾರ್ಕ್‌ ಗ್ರೀನ್‌, ಆರೆಂಜ್‌ ಕಲರ್ಸ್‌ ನಿಮ್ಮ ಉಗುರಿಗೆ ಸೂಟ್‌ ಆಗಲ್ಲ. ಇವು ಅತ್ಯಧಿಕ ಹೊಳೆ ಹೊಳೆಯುವುದರ ಜೊತೆ ಉಗುರಿನ ಅಂದಗೇಡಿತನಕ್ಕೂ ಕಾರಣವಾದೀತು. ಆದ್ದರಿಂದ ಇವನ್ನು ಅವಾಯ್ಡ್ ಮಾಡಿ.

ಡಾರ್ಕ್ಸ್ಕಿನ್ಟೋನ್

ನಮ್ಮದು ಡಾರ್ಕ್‌ ಸ್ಕಿನ್‌ ಆಗಿದ್ದರೆ, ನಾವು ಮೊದಲೇ ಡಾರ್ಕ್‌ ಸ್ಕಿನ್‌ ನವರು, ಹೀಗಾಗಿ ನಾವಂತೂ ಡಾರ್ಕ್‌ ಕಲರ್ಸ್‌ ಕಡೆ ತಿರುಗಲೇಬಾರದು ಅಂತ ಭಾವಿಸುತ್ತೇವೆ ಹೀಗಾಗಿ ಸದಾ ಲೈಟ್‌ ಕಲರ್ಸ್‌ ಆರಿಸಬೇಕು ಅಂದುಕೊಳ್ತೀವಿ.

ಆದರೆ ಇದು ನಮ್ಮ ಆಲೋಚನೆಗೆ ಬಿಲ್ ‌ಕುಲ್ ‌ತದ್ವಿರುದ್ಧ! ನಮ್ಮದು ಡಾರ್ಕ್‌ ಸ್ಕಿನ್‌ ಆಗಿದ್ದರೆ, ರಿಚ್‌ ಯಾ ಡಾರ್ಕ್‌ ಶೇಡ್ಸ್ ಮಾತ್ರವೇ ಹೆಚ್ಚು ಶೋಭಿಸುತ್ತದೆ. ಅಂದ್ರೆ ಡಾರ್ಕ್‌ ಗ್ರೀನ್‌, ಬರ್ಗೆಂಡಿ, ಡಾರ್ಕ್‌ ರೆಡ್‌ ಇತ್ಯಾದಿ. ನೀವು ಬ್ರೈಟ್‌ ಆರೆಂಜ್‌ಬ್ರೈಟ್‌ಪಿಂಕ್‌ ಕಲರ್ಸ್‌ ಸಹ ಅಗತ್ಯ ಟ್ರೈ ಮಾಡಿ ನೋಡಿ.

ಯಾವ ಕಲರ್ಸ್ಬೇಡ : ನೀವು ಬ್ರೌನ್‌ ಕಲರ್‌ ನೇಲ್ ‌ಪೇಂಟ್‌ ಬಳಸಬೇಡಿ. ಇದರಿಂದ ನಿಮ್ಮ ಉಗುರು ಫೇಡ್‌ ಔಟ್‌ ಆದಂತೆ ಎನಿಸುತ್ತದೆ. ನೀವು ಸಮ್ಮರ್‌ ನ ಟ್ರೆಂಡಿ ಪೇಸ್ಟಲ್ ಕಲರ್ಸ್‌ ಅಂದ್ರೆ ಸಿಲ್ವರ್‌, ವೈಟ್‌, ನಿಯಾನ್‌ ಶೇಡ್ಸ್ ಇತ್ಯಾದಿ ಅವಾಯ್ಡ್ ಮಾಡಿ.

ಪೇವಲ್ಸ್ಕಿನ್ಟೋನ್

ಫೇರ್‌ ಸ್ಕಿನ್‌ ಬಗ್ಗೆ ಮಾತನಾಡುವಾಗ, ನಾವು ಫೇರ್‌ ಎಂಬುದೇನೋ ನಿಜ, ಆದರೆ ನಮ್ಮ ಚರ್ಮದಲ್ಲಿ ತುಸು ಹಳದಿ ಬಣ್ಣ ಬೆರೆತಿರುತ್ತದೆ. ಈ ತರಹದ ಸ್ಕಿನ್‌ ಟೋನ್‌ ನ್ನೇ ಪೇವಲ್ ‌ಸ್ಕಿನ್‌ ಟೋನ್‌ ಎನ್ನುತ್ತಾರೆ. ಇಂಥ ಟೋನ್‌ ಉಳ್ಳವರು ತುಸು ಎಚ್ಚರಿಕೆಯಿಂದ ನೇಲ್ ಪೇಂಟ್‌ ಆರಿಸಬೇಕು. ಇಂಥ ಟೋನ್‌ ಉಳ್ಳವರು ವೈಟ್‌ ಶೇಡ್ಸ್ ಹಚ್ಚಬೇಕು. ಅಂದ್ರೆ ಪೇಸ್ಟಲ್ ಶೇಡ್ಸ್, ಲೈಟ್‌ ಶೇಡ್ಸ್, ರೆಡ್‌, ಪರ್ಪಲ್ ಇತ್ಯಾದಿ.

ನೀವು ಅತ್ಯಧಿಕ ಅಮೇಝಿಂಗ್‌ ಲುಕ್ಸ್ ಬಯಸಿದರೆ, ಆಗ ನೀವು ಪೇಸ್ಟಲ್ ಶೇಡ್ಸ್ ಬಳಸುವುದು ಲೇಸು. ನೀವು ಬಲು ಟ್ರೆಂಡಿ  ಗ್ಲಾಮರಸ್‌ ಲುಕ್ಸ್ ಬಯಸಿದರೆ, ನೀವು ರೆಡ್‌ ಯಾ ಪರ್ಪಲ್ ಶೇಡ್ಸ್ ಟ್ರೈ ಮಾಡಿ.

ಯಾವ ಕಲರ್ಸ್ಬೇಡ : ಬಹಳ ಡಾರ್ಕ್‌ ಶೇಡ್ಸ್ ಅಂದ್ರೆ ಬ್ಲ್ಯಾಕ್‌, ಮೆರೂನ್‌, ಯೆಲ್ಲೋ ಖಂಡಿತಾ ಬೇಡ. ಕೈಗಳಲ್ಲಿ ಲೈಟ್‌ ಆಗಿ ಹಳದಿ ಬಣ್ಣ ಬೆರೆತಿರುವುದರಿಂದ ಗೋಲ್ಡನ್‌ ಕಲರ್‌ ಸಹ ಬೇಡ.

ಬ್ರಾಂಡೆಡ್ನೇಲ್ ಪೇಂಟ್ಸ್ ಬೆಸ್ಟ್

ನಿಮಗೆ ಇಂದಿನ ಮಾರುಕಟ್ಟೆಯಲ್ಲಿ ಬಗೆಬಗೆಯ ಬಣ್ಣಗಳ, ಟೈಪ್ಸ್ ನ ಲೋಕಲ್ ನೇಲ್ ‌ಪೇಂಟ್ಸ್ ಲಭ್ಯವಿವೆ. ಇವು ಅಗ್ಗವಾಗಿ ದೊರಕುವುದರಿಂದ ನೀವು ಒಮ್ಮೆಲೇ ಹಲವಾರು ಬಣ್ಣಗಳನ್ನು ಆರಿಸುವಿರಿ. ಇದು ವಿವಿಧ ಫಂಕ್ಷನ್ಸ್ ಗೆ ಚೆನ್ನಾಗಿ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇವು ಉತ್ತಮವಲ್ಲ ಎಂದು ನಿಮಗೆ ಗೊತ್ತೇ? ಏಕೆಂದರೆ ಇದರಲ್ಲಿ ಬಳಸಲಾಗಿರುವ ಕೆಮಿಕಲ್ಸ್ ನಿಮ್ಮ ಹಾರ್ಮೋನ್ಸ್ ಬ್ಯಾಲೆನ್ಸ್ ನ್ನು ಹಾಳು ಮಾಡುತ್ತವೆ. ಜೊತೆಗೆ ಇದು ಡಯಾಬಿಟೀಸ್‌ ಗೂ ಕಾರಣವಾಗಬಹುದು. ಆದ್ದರಿಂದ ನೇಲ್ ಪೇಂಟ್‌ ಕೊಳ್ಳುವಾಗೆಲ್ಲ ಅದು ಉತ್ತಮ ಬ್ರಾಂಡೆಡ್‌ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಜೊತೆಗೆ ಅದು ಆದಷ್ಟೂ ನೈಸರ್ಗಿಕ ಘಟಕ ಹೊಂದಿರಬೇಕು. ಜೊತೆಗೆ ಇವು ಉಗುರನ್ನು ಮಾಯಿಶ್ಚರೈಸ್‌ ಮಾಡುವ ಉತ್ತಮ ಗುಣ ಸಹ ಹೊಂದಿರಬೇಕು.

ಪಾರ್ವತಿ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ