ನಾನೂ ಧರಿಸಲೇ…? :
ಅರೆ, ಜ್ಯೂವೆಲರಿಯ ಅಸಲಿ ಡಿಸೈನಿಂಗ್ ನ್ನು ದೊಡ್ಡ ದೊಡ್ಡ ಕಂಪನಿಗಳು ನಿರ್ವಹಿಸಲು ಸಾಧ್ಯವೇ ಇಲ್ಲ. ಹೀಗಾಗಿಯೇ ಕ್ಯಾಲಿಫೋರ್ನಿಯಾದ ಸೋಫಿಯಾ ಕಂಪನಿ, ಗೋಲ್ಡನ್ ಗೇಟ್ ಬ್ರಿಜ್ ಬಳಿ ತನ್ನ ಖ್ಯಾತ ಅಂಗಡಿ ನಡೆಸುತ್ತಾ, ಹೊಸ ಹೊಸ ನಯನಾಭಿರಾಮ ಡಿಸೈನ್ಸ್ ನೀಡುತ್ತಿದೆ. ಕೌಟುಂಬಿಕ ಉದ್ಯಮವಾದ ಈ ಕಂಪನಿ, ನಿಮ್ಮ ಜೇಬಿಗೆಟುಕುವಂತೆ ಏನಾದರೂ ಕೊಡುತ್ತದೆಯೋ ಇಲ್ಲವೋ ಎಂಬುದನ್ನು ಅಲ್ಲಿಗೆ ಭೇಟಿ ನೀಡಿಯೇ ತಿಳಿಯಬೇಕು. ಭಾರತದಲ್ಲಿರುವ ಬಹುತೇಕರು ಇವರ ಒಡವೆಗಳನ್ನು ಕೊಳ್ಳುವ ಶಕ್ತಿ ಹೊಂದಿದ್ದಾರೆ. ನೀವು ಇಂಥ ಅಧಿಕಾರಸ್ಥರ ನಿಕಟವರ್ತಿಗಳಲ್ಲದಿದ್ದರೆ ಏನೂ ಮಾಡಲಾಗದು. ನಿರ್ಮಲ್ ಮೋದಿ, ವಿಜಯ್ ಮಲ್ಯ, ಮುಕೇಶ್ ಅಂಬಾನಿ, ಅಡ್ವಾನಿಯಂತೆ ನೀವು ತಯಾರಾಗಿ ತಲೆಯಿಂದ ಕಾಲಿನವರೆಗೂ ಧಾರಾಳ ಒಡವೆ ಧರಿಸಿ!????
ಖಂಡಿತಾ ಖುಷಿ ಆಗುತ್ತೆ :
ಈಗಂತೂ ಯಾವುದೇ ಕಾರಣಕ್ಕೆ ಕಪ್ ಗಳಿಸಿದರೂ ಮಹಾ ಖುಷಿ ಎನಿಸುವುದು ಸಹಜ. ಇದೀಗ `ಗೀವ್ ಮಿ ಮೇೂೕ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ನಾಲ್ವರು ವಿದ್ಯಾರ್ಥಿನಿಯರಿಗೆ ಐರಿಶ್ ಹಾಸ್ಪಿಟಾಲಟಿ ಕಾಂಪಿಟಶನ್ ನಲ್ಲಿ ಕಪ್ ದೊರಕಿದಾಗ ಖುಷಿಯಾಗದೆ ಇದ್ದೀತೇ? ಹಾಸ್ಪಿಟಾಲಿಟಿ ಇಂಡಸ್ಟ್ರಿ ಇದೀಗ ವೇಗವಾಗಿ ಮುನ್ನುಗ್ಗುತ್ತಿದೆ, ಏಕೆಂದರೆ ಜನ ಒಂದು ಸುಂದರ ಸೌಮ್ಯ ಮುಖ ಮತ್ತು ಕುಶಲ ಸರ್ವೀಸ್ ಬಯಸುತ್ತಾರೆ. ಅದು ಹೋಟೆಲ್, ವಿದೇಶಿ ಎಂಬೆಸಿಯಿಂದ ವೀಸಾ ಪಡೆಯುವುದು ಇತ್ಯಾದಿಗಳಿಗೆ ಮುಖ ಗಂಟಿಕ್ಕುವವರು ಯಾಕೆ ಬೇಕಾದಾರು?
ಹೆಸರೂ ಉಂಟು ಹಣ ಉಂಟು :
ಇದೀಗ ಸಣ್ಣ ನಗರಗಳಲ್ಲೂ ಸಹ ಮಿಸ್‌ಮಿಸೆಸ್‌ಈವೆಂಟ್ಸ್ ನಡೆಯುತ್ತಿವೆ. ಇದಕ್ಕೆ ಲೋಕಲ್ ಜಾಹೀರಾತು, ಪ್ರಾಯೋಜಕರು ಹೇಗೋ ಸಿಗುತ್ತಾರೆ. ಅಮೆರಿಕಾದ ಡಕೋಟಾ ನಗರದಲ್ಲಿ ನಡೆದ `ಮಿಸ್ ಡಕೋಟಾ 2022′ ಪ್ರದರ್ಶನಕ್ಕೆ ಅಖಂಡ ಪಬ್ಲಿಸಿಟಿ ದೊರಕಿತು, 8 ಸಾವಿರ ಡಾಲರ್ ನ ಸ್ಕಾಲರ್ ಶಿಪ್ ಸಹ! ವಿಜೇತೆ ಹಂಟರ್ ಮಿಡ್ವೇಗೆ ಇದರಿಂದ ಕೆರಿಯರ್ ಸಿಗುತ್ತದೋ ಇಲ್ಲವೋ, ಕೆಲವು ತಿಂಗಳಂತೂ ಅವಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿರುತ್ತಾಳೆ.
ಓಪನ್ ಮೈಂಡೆಡ್ ಆಗಿರಿ :
ನಮ್ಮ ದೇಶಕ್ಕಿಂತಲೂ ವಿಯೆಟ್ನಾಂ ಎಷ್ಟೋ ಹಿಂದುಳಿದಿದೆ. ಇತ್ತೀಚಿನವರೆಗೂ ಅದು ಅಮೆರಿಕಾದ ಬಾಂಬ್ ಮಳೆಗೆ ಗುರಿಯಾಗಿತ್ತು. ಇದಂತೂ ಖಂಡಿತಾ ತಪ್ಪು. ವಿಯೆಟ್ನಾಂ ಇದೀಗ ವಿಕಾಸದತ್ತ ಮುನ್ನುಗ್ಗುತ್ತಿದೆ. ಸರಾಸರಿ ವಿಯೆಟ್ನಾಮಿ ಪ್ರಜೆ ಸರಾಸರಿ ಭಾರತೀಯನಿಗಿಂತಲೂ ಖಂಡಿತಾ ಧನಿಕ! ತುಸು ಕಮ್ಯುನಿಸ್ಟ್ ಆಗಿದ್ದರೂ, ಅಲ್ಲಿ ಬೇಕಾದಷ್ಟು ಓಪನ್ ಮೈಂಡೆಡ್ ಸಮಾಜವಿದೆ. ಹಾಗಾಗಿ ಅಲ್ಲಿನ ನೈಟ್ ಲೈಫ್ ಕುರಿತು ತಯಾರಾದ ಒಂದು ಶಾರ್ಟ್ ಫಿಲ್ಮಂನಲ್ಲಿ ಹನೋಯಿ ಬೈ ನೈಟ್ ತೋರಿಸಲಾಗಿದೆ. `ಶನ್ಸ್ ಒಡಿಸಿ’ ಸಹ ಇಂಥದೇ ಚಿತ್ರ ಇರಬಹುದೇ ಎಂದು ಚಿಂತಿಸದಿರಿ. ಕೇಂದ್ರ ಸರ್ಕಾರದ ಕೃಪೆಯಿಂದ ನಮ್ಮಲ್ಲಂತೂ ಎಲ್ಲ ಪೌರಾಣಿಕಮಯ ಆಗಿರುವುದರಿಂದ ಇಂಥ ಖುಲ್ಲಂಖುಲ್ಲ ಮೈಂಡ್ ಎಲ್ಲಿಂದ ಬರಬೇಕು?
ಉತ್ತಮ ಪ್ರಯಾಸ :
ಐರ್ಲೆಂಡ್ ಗ್ರಾಮಿ ಅವಾರ್ಡ್ ವಿಜೇತರಾದ ಮ್ಯೂಸಿಕ್ ಗ್ರೂಪ್ ಸ್ಯಾಲ್ಟಿಕ್ ವುಮನ್, ಪ್ರಮೋಶನ್ ಗಾಗಿ ಇದೀಗ ಪೋಸ್ಟ್ ಕಾರ್ಡ್ ಸಹ ಬಳಸಿಕೊಳ್ಳುತ್ತಿದ್ದಾರೆ. ಅವರ ಆಲ್ಬಂನ ಒಂದು ಕಾಪಿ ಖರೀದಿಸಿದರೆ ಒಂದು ಸೆಟ್ ಪೋಸ್ಟ್ ಕಾರ್ಡ್ ಸಹ ಸಿಗುತ್ತದೆ. ಇದನ್ನು ಹಳೆಯ ಅಂಚೆಯ ಪದ್ಧತಿ ಪ್ರಕಾರ ನಿಮ್ಮ ಆಪ್ತರಿಗೆ ಹಂಚಬಹುದು. ಇದು ವಾಟ್ಸ್ ಆ್ಯಪ್ ಮೆಸೇಜ್ ಗಿಂತಲೂ ಬೆಟರ್, ಏಕೆಂದರೆ ಸದಾ ಕಾಣುತ್ತಿರುತ್ತದೆ, ಇತರರಿಗೂ ತೋರಿಸಬಹುದು.
ವ್ಯಾಯಾಮದೊಂದಿಗೆ ಆಟ ಸಹ :
ರಜೆ ದಿನಗಳು ಹಾಳಾಗಬಾರದೆಂದರೆ, ಸಣ್ಣ ಮಕ್ಕಳು ಏನಾದರೂ ಒಂದಿಷ್ಟು ಕಲಿಯುವಂತಾಗಲಿ ಎಂದರೆ ಇದಕ್ಕಾಗಿ ಬೇಕಾದಷ್ಟು ಡ್ಯಾನ್ಸ್ ಕ್ಲಾಸುಗಳಿವೆ. ಇದರ ಪೂರ್ತಿ ಲಾಭ ಪಡೆಯಬೇಕು. ಇದಕ್ಕಾಗಿ ಮಕ್ಕಳನ್ನು ಅಲ್ಲಿ ಬಿಟ್ಟು ಕರೆತರುವುದು ತುಸು ಕಷ್ಟವೇ ಸರಿ. ಡ್ಯಾನ್ಸ್ ಎಂಬುದು ಮಕ್ಕಳಿಗೆ ಆಟ ಹೌದು, ವ್ಯಾಯಾಮ ಸಹ! ಸ್ವಲ್ಪ ಹೊತ್ತಿನವರೆಗಾದರೂ ಟಿವಿ, ಮೊಬೈಲ್ ಗಳಿಂದ ಬಿಡುಗಡೆ ಸಿಗಲಿ!
ಯಶಸ್ಸು ಸಿಗುವುದು ಹೀಗೆ! :
ಬೋಜೋಮಾ ಸೇಂಟ್ ಜಾನ್ಸ್ ಳನ್ನು ಬಣ್ಣದ ಚಿಟ್ಟೆ ಎಂದು ಭಾವಿಸದಿರಿ. ನೋಡಲು ಸರಳವಾಗಿದ್ದರೂ ಮಹಾ ಚಾಣಾಕ್ಷೆ ಈಕೆ. ಉಬರ್, ಆ್ಯಂಡ್ಯೋರ್ ನಂತರ ನೆಟ್ ಫ್ಲಿಕ್ಸ್ ನಲ್ಲಿ ಉನ್ನತ ಮ್ಯಾನೇಜ್ ಮೆಂಟ್ ಪದವಿಗಳಲ್ಲಿದ್ದು ಇತರರನ್ನು ಬೆರಳು ತುದಿಯಲ್ಲಿ ಕುಣಿಸುತ್ತಿದ್ದಾಳೆ. ಅವಳು ಧರಿಸಿರುವ ಸೆಕ್ಸೀ, ಗ್ಲಾಮರಸ್ ಡ್ರೆಸ್ ನೋಡಿ….. ಅದನ್ನು ನೋಡಿದವರು ಹೊರಗಿನಿಂದ ಒಳಗೆ ಇಣುಕಬಾರದು, ಹಾಗೊಮ್ಮೆ ಒಳಗೆ ಸಿಲುಕಿದರೆ, ಅವಳ ಅನುಮತಿ ಇಲ್ಲದೆ ಹೊರಗೆ ಹೋಗಲಾರರು! ಹೆಣ್ಣು ಯಶಸ್ವಿ ಎನಿಸಲು ಇದಕ್ಕಿಂತ ಸಿದ್ಧಸೂತ್ರ ಬೇಕೇ? ಪತಿಯನ್ನು ಕುಣಿಸುವುದು ಹಳೆಯ ಮಾತಾಯ್ತು, ಮನಸ್ಸು ಬಂದವರನ್ನು ಕುಣಿಸುವುದು ಇಂದಿನ ಕಾಲದ ಮಾತು!