ಎಸ್. ಜೆ.
ಉಡುಪಿ ಪ್ರಾಂತ್ಯದ ಅನೇಕ ಹೊಸಪ್ರತಿಭೆಗಳು ಸೇರಿ ನಿರ್ಮಿಸಿರುವ “ಪ್ರತ್ಯರ್ಥ” ಚಿತ್ರ ಈ ವಾರ(ಫೆಬ್ರವರಿ 28) ರಾಜ್ಯಾದ್ಯಂತ ಬಿಡುಯಾಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದರು. ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡದಿಂದ ಸಂತಸದ ಸುದ್ದಿ ಹೊರಬಂದಿದೆ. ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡಿರುವ ತಮಿಳುನಾಡಿನ ಖ್ಯಾತ ಟ್ಯೂಬ್ ಲೈಟ್ ಫಿಲಂಸ್ ಸಂಸ್ಥೆಯು ಕನ್ನಡದಲ್ಲಿ ನಿರ್ಮಾಣವಾಗಿರುವ “ಪ್ರತ್ಯರ್ಥ” ಚಿತ್ರವನ್ನು ತಮಿಳಿಗೂ ರೀಮೇಕ್ ಮಾಡಲು ನಿರ್ದೇಶಕರಿಗೆ ಆಹ್ವಾನ ನೀಡಿದೆ.
ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ ಚಿತ್ರ ಇನ್ವೆಸ್ಟಿಗೇಶನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಲ್ಲಿರುವ ಈ ಚಿತ್ರಕ್ಕೆ ಅರ್ಜುನ್ ಕಾಮತ್ ಹಾಗೂ ರಾಮ್ ಸೇರಿ ಕಥೆ ಚಿತ್ರಕಥೆ ಬರೆದು ಅರ್ಜುನ್ ಕಾಮತ್ ನಿರ್ದೇಶನ ಮಾಡಿದ್ದಾರೆ.
ಸ್ಯಾಂಡಲ್ವುಡ್ ಸಂಸ್ಥೆಯ ನಾಗೇಶ್ ಎಂ ಹಾಗೂ ವಿಶಿಷ್ಟ ಫಿಲ್ಮ್ ಸಂಸ್ಥೆಯ ಜಯ್ ಆರ್ ಪ್ರಭು ನಿರ್ಮಿಸಿರುವ ಈ ಚಿತ್ರಕ್ಕೆ ನಿತ್ಯಾನಂದ ಪೈ , ಪ್ರೇಮಕುಮಾರ್ ವಿ ಮತ್ತು ಭರತ್ ಶೆಟ್ಟಿ ಅವರ ಸಹ ನಿರ್ಮಾಣವಿದೆ.
ನಾಯಕರಾಗಿ ರಾಮ್, ಅಕ್ಷಯ್ ಕಾರ್ಕಳ ನಟಿಸಿದ್ದಾರೆ. ನಾಯಕಿಯಾಗಿ ಶೃತಿ ಚಂದ್ರಶೇಖರ್ ಅಭಿನಯಿಸಿದ್ದಾರೆ. ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್, ದೀಪಕ್ ರೈ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ವಿನುತ್ ಛಾಯಾಗ್ರಾಹಕರಾಗಿದ್ದಾರೆ.