– ರಾಘವೇಂದ್ರ ಅಡಿಗ ಎಚ್ಚೆನ್.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಿರ್ದೇಶಕ ತರುಣ್ ಸುಧೀರ್ – ಸೋನಲ್ ಮಂಥೆರೊ ದಂಪತಿ ಹಾಗೂ ಶ್ರುತಿ ಫ್ಯಾಮಿಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಕೊಟ್ಟಿದ್ದರು. ಮಂಜುನಾಥನ ದರ್ಶನ ಪಡೆದು ಎಲ್ಲರೂ ಪುನೀತರಾಗಿದ್ದಾರೆ.
ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ತರುಣ್ ಸುಧೀರ್ – ನಟಿ ಸೋನಲ್ ಮೊಂಥೆರೋ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಪೂಜೆಯಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು.
ತರುಣ್ ಸುಧೀರ್, ಸೋನಲ್, ನಟಿ ಶ್ರುತಿ ಕೃಷ್ಣ ಪುತ್ರಿ ಗೌರಿ ಸೇರಿದಂತೆ ಕೆಲವು ಸ್ನೇಹಿತರು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದಾರೆ. ಮಂಜುನಾಥನ ದರ್ಶನ ಪಡೆದಿರುವ ಫೋಟೋಗಳನ್ನು ಸೋನಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಫೋಟೋಗೆ ಭರ್ಜರಿ ಲೈಕ್ಸ್ ಕೂಡ ಸಿಕ್ಕಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸೋನಲ್ ಹಾಗೂ ತರುಣ್ ಭೇಟಿ ಮಾಡಿದ್ದಾರೆ. ಅವರಿಂದ ಆಶೀರ್ವಾದ ಪಡೆದಿದ್ದಾರೆ. ಇಬ್ಬರು ಸಾಂಪ್ರಾದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.