ನಾವೂ ಸಹ ನಮ್ಮ ಹಿರಿಯಕ್ಕಂದಿರಾದ
ಗಂಗಾ, ಯಮುನಾ, ಸರಸ್ವತಿಯರಂತೆ…
ಋಷಿಗಳ, ದೇವತೆಗಳ ಆಶೀರ್ವಾದದಿಂದಾನೇ ಈ
ಪುಣ್ಯ ಭೂಮಿಯಲ್ಲಿ ಹರಿಯುತ್ತಿರುವುದು.

ಇತ್ತೀಚಿಗೆ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ
” ನ ಭೂತೋ ನ ಭವಿಷ್ಯತಿ ”  ಎಂಬಂತೆ ಇಡೀ ವಿಶ್ವವೇ
ಬೆರಗಾಗುವಂತೆ ವಿಜೃಂಭಣೆಯಿಂದ ಜರುಗಿತು. ಅದಕ್ಕೆ
ಇಡೀ ದೇಶದ ಮೂಲೆ, ಮೂಲೆಯಿಂದ ಭಕ್ತರು ಹೋಗಿ
ಮಿಂದು ಧನ್ಯರಾದರು.

River 2

ಆದರೆ…… ಇದೇ ಸಮಯದಲ್ಲಿ

ನಮ್ಮ ತಿರುಮಕೂಡಲು ಸಂಗಮದಲ್ಲೂ
ಕುಂಭಮೇಳ ನಡೆಯಿತು. ಆದರೆ….
ಇದಕ್ಕೆ ಆ ಜಿಲ್ಲೆ ಮತ್ತು ಅದರ
ಅಕ್ಕಪಕ್ಕದ ಜಿಲ್ಲೆಗಳಿಂದ ಮಾತ್ರ
ಭಕ್ತರು ಬಂದು ಮಿಂದರು.
ನಮ್ಮ ರಾಜ್ಯದ ಇತರ ಜಿಲ್ಲೆಯವರಿಗೆ
ಇದರ ಬಗ್ಗೆ ಮಾಹಿತಿಯಿರಲಿಲ್ಲ
ಇದಕ್ಕೆ ಪ್ರಚಾರದ ಕೊರತೆ, ನಿಷ್ಠೆ
ಅನುಷ್ಠಾನದ ಕೊರತೆ ಎದ್ದು ಕಾಣುತ್ತಿತ್ತು.

River

ನಮ್ಮಲ್ಲೂ ಯೋಗಿಯಂತಹ….
ನಿಷ್ಠಾವಂತ, ದಾರ್ಶನಿಕ ನಾಯಕ ಬಂದರೆ
ನಮ್ಮದನ್ನು ಸಹ ವಿಶ್ವಮಟ್ಟಕ್ಕೆ ಕರೆದೊಯ್ಯಬಹುದು.
ನೋಡೋಣ, ಆ ಕಾಲವು ಸದ್ಯದಲ್ಲಿ ಬರಲಿ
ಎಂದು ನೀವೆಲ್ಲಾ ಮನಸಾರೆ ಪ್ರಾರ್ಥಿಸಿದರೆ
ಅದು ಸಹ ನಡೆಯಬಹುದು…ಅಲ್ವೇ….!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ