ಖಡಕ್ ಲೇಡಿ DSP ಪ್ರಿಯಾಂಕಾ ಬಾಜ್‌ಪೈ..!
ಕೆಲ ಲೇಡಿ ಆಫೀಸಗಳೇ ಹಾಗೆ ನೋಡಿ. ಎಲ್ಲರನ್ನೂ ಮೀರಿಸಿ ಟಾಪ್ ಹುದ್ದೆಗೇರೋದಲ್ಲದೇ ಎಲ್ಲರನ್ನೂ ಮೀರಿಸುವ ಸೌಂದರ್ಯ ಹೊಂದಿರೋ ಕೆಲವರು ದಿಢೀರ್ ಫೇಮಸ್ ಆಗಿಬಿಡ್ತಾರೆ. ಅದೇ ರೀತಿ ಉತ್ತರಪ್ರದೇಶದ ಪ್ರಿಯಾಂಕಾ ಬಾಜ್‌ಪೈ ಅನ್ನೋ ಲೇಡಿ ಪೊಲೀಸ್ ಈಗ ದೇಶಾದ್ಯಂತ ಸೂಪರ್ಕ್ವೀನ್ ಆಗಿ ಮಿಂಚುತ್ತಿದ್ದಾರೆ.
ದೇಶದ ಅತ್ಯುನ್ನತ ಪರೀಕ್ಷೆಯಾಗಿರೋ ಯುಪಿಎಸ್ಸಿಯಲ್ಲಿ 6ನೇ Rank ಪಡೆಯೋದರ ಜೊತೆಗೆ ತಮ್ಮ ಸೂಪರ್ ಬ್ಯೂಟಿಯಿಂದಲೇ ಎಲ್ಲರ ಅಟ್ರ್ಯಾಕ್ಟ್ ಆಗಿದ್ದಾರೆ.
ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಪಿಸಿಎಸ್ ಯ 2017 ರ ಬ್ಯಾಚ್‌ನ ಟಾಪರ್‌ಗಳಲ್ಲಿ ಒಬ್ಬರಾದ ಡಿಎಸ್‌ಪಿ ಪ್ರಿಯಾಂಕಾ ಬಾಜ್‌ಪೈ, ಅಸಾಧಾರಣ ಶೈಕ್ಷಣಿಕ ಸಾಧನೆಗಳೊಂದಿಗೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರುವಾಸಿಯಾಗಿದ್ದಾರೆ. ಲಕ್ನೋ ವಿವಿಯಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಇವರು ಚಿನ್ನದ ಪದಕವನ್ನು ಕೂಡಾ ಪಡೆದಿದ್ದಾರೆ.
ನಟಿಯರು ಹಾಗೂ ಮಾಡೆಲ್‌ಗಳನ್ನೇ ಮೀರಿಸುವ ಸುಂದರ ಅಧಿಕಾರಿಗಳಲ್ಲಿ ಲೇಡಿ ಡಿಎಸ್ಪಿ ಪ್ರಿಯಾಂಕಾ ಬಾಜ್‌ಪೈ ಕೂಡಾ ಒಬ್ಬರು. ಯುಪಿಸಿಎಸ್ ಪರೀಕ್ಷೆಯಲ್ಲಿ 6 ನೇ ರ‍್ಯಾಂಕ್ ಪಡೆದಿರುವ ಇವರು ತನ್ನ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಸಖತ್ ಫೇಮಸ್ ಆದವರು. ಈಗ ಕನ್ನೌಜ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಗೆ ಪ್ರಿಯಾಂಕಾ ಅವರು ತಯಾರಿ ನಡೆಸುವ ಸಮಯದಲ್ಲಿ 2 ವರ್ಷಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. 2016 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅಬಕಾರಿ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಎರಡನೇ ಬಾರಿ ಯುಸಿಎಸ್‌ಸಿ ಪರೀಕ್ಷೆ ಬರೆದ ಅವರು ಅದರಲ್ಲಿ ಆರನೇ ರ‍್ಯಾಂಕ್ ಪಡೆಯುತ್ತಾರೆ. ಈ ಮೂಲಕ ಅವರು ಡಿಎಸ್‌ಪಿ ಹುದ್ದೆಗೆ ಆಯ್ಕೆಯಾಗುತ್ತಾರೆ.
ಡಿಎಸ್‌ಪಿ ಪ್ರಿಯಾಂಕಾ ಬಾಜ್‌ಪೈ ಅವರು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಪಿಸಿಎಸ್ ಯ 2017ರ ಬ್ಯಾಚ್‌ನ ಟಾಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಯಾಂಕಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರಸ್ತುತ ಕನ್ನೌಜ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದು, ಸಿನಿಮಾ ರಂಗದ ಯಾವ್ ಹೀರೋಯಿನ್ಗೂ ಕಡಿಮೆ ಏನಿಲ್ಲ ಅನ್ನೋ ರೀತಿ ಮಿಂಚುತ್ತಿದ್ದಾರೆ.