ರನ್ಯಾ ರಾವ್. ಈಗ ದೇಶಾದ್ಯಂತ ಸುದ್ದಿಯಲ್ಲಿರೋ ನಟಿ. ಈ ನಟಿ ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಜೈಲು ಸೇರಿದ್ದಾಗಿದೆ. ಜೈಲು ಸೇರಿದ ಮೇಲೆ ಹೇಗಿದ್ದಾರೆ ನಟಿ ರನ್ಯಾಗೆ ಪಶ್ಚಾತ್ತಾಪ ಕಾಡ್ತಾ ಇದೆ. ಅಯ್ಯೋ.. ನಾನೇಕೆ ಹೀಗೆ ಮಾಡಿದೆ ಅನ್ನೋ ಭಾವನೆ ಕಾಡ್ತಾ ಇದೆಯಂತೆ.

ರನ್ಯಾ ಪರ ವಕೀಲರು ಗೊತ್ತಿಲ್ಲದೆ ಹಾಗೆ ಮಾಡಿಬಿಟ್ಟಿದ್ದಾರೆ ಎಂದು ವಾದಿಸಿದರಾದ್ರೂ, ಬೆಲ್ಟಿನಲ್ಲಿ ಚಿನ್ನದ ಬಿಸ್ಕಟ್ಸ್ ಇಟ್ಕೊಂಡು, ಅವುಗಳಿಗೆ ಟಿಷ್ಯೂ ಪೇಪರ್ ಸುತ್ತಿ, ಊಟ ಮಾಡಿದರೆ ಹೊಟ್ಟೆ ಬಿಗಿಯಾಗಬಹುದು ಎಂದು ಊಟವನ್ನೂ ಮಾಡದೇ ಬಂದಿರುವ ಕಾರಣ, ಅಮಾಯಕಿ ಎಂಬ ವಾದಕ್ಕೆ ಬಲ ಸಿಕ್ಕಿಲ್ಲ. ಯಾವಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತೋ.. ಆಗ ನನಗೆ ಆವತ್ತು ಏರ್ ಪೋರ್ಟಿನಲ್ಲಿ ನಡೆದ ಆ ಘಟನೆಯನ್ನ ಮರೆಯೋಕೇ ಆಗ್ತಿಲ್ಲ. ನಾನು ಇದರಲ್ಲಿ ಹೇಗೆ ಸಿಕ್ಕಿ ಹಾಕ್ಕೊಂಡೆ.. ಎಂಥಾ ತಪ್ಪು ಮಾಡಿಬಿಟ್ಟೆ ಎಂದೆಲ್ಲ ಪಶ್ಚಾತ್ತಾಪ ಪಡ್ತಿದ್ದಾರಂತೆ. ಜೈಲಿನಲ್ಲಿ ರಾತ್ರಿ ನಿದ್ರೆಯನ್ನೂ ಮಾಡಿಲ್ಲವಂತೆ.

Ranya Rao -4

ಅಲ್ಲದೆ ರನ್ಯಾ, ಡಿಆರ್‌ಐ ಅಧಿಕಾರಿಗಳ ಎದುರು ನಾನು ಟ್ರಾಪ್ ಆಗಿದ್ದೆ. ಹೆದರಿಸಿ, ಬೆದರಿಸಿ ಹೀಗೆಲ್ಲ ಮಾಡಿಸಿಕೊಂಡರು ಎಂದು ಹೇಳಿಕೆ ಕೊಟ್ಟಿದ್ದಾರಂತೆ. ಹಾಗಾದರೆ ಬೆದರಿಕೆ ಹಾಕಿದ್ಯಾರು.. ಅನ್ನೋ ಪ್ರಶ್ನೆಗೆ ರನ್ಯಾ ಉತ್ತರ ಕೊಟ್ಟಿಲ್ಲ. ಯಾರು ಎಂದು ಹೇಳಿದರೆ ಕೇಸಿನ ಡೈಮೆನ್ಷನ್ನೇ ಚೇಂಜ್ ಆಗ್ಬಿಡುತ್ತೆ. ರನ್ಯಾ ಬಡವಿ ಏನಲ್ಲ. ಅಪ್ಪ ಡಿಜಿಪಿ ರಾಮಚಂದ್ರರಾವ್. ತಾಯಿಯದ್ದು ಎಸ್ಟೇಟ್ ಇದೆ. ಮದುವೆಯಾಗಿರುವುದು ಜತಿನ್ ಹುಕ್ಕೇರಿ ಕೂಡಾ ಆರ್ಕಿಟೆಕ್ಟ್. ಯುಕೆ ಮೂಲದ ಐಟಿ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಿರುವ ರನ್ಯಾ ರಾವ್ ಅವರಿಗೆ ಸ್ಮಗ್ಲಿಂಗ್ ಮಾಡುವ ದುರ್ಗತಿ ಏಕೆ ಬಂತು ಅನ್ನೋದು ತನಿಖಾಧಿಕಾರಿಗಳ ಅನುಮಾನ.

Ranya-Rao-3

ಈಗ ನಟಿ ರನ್ಯಾ ರಾವ್ ಅವರ ಜೊತೆ ರೆಗ್ಯುಲರ್ ಕಾಂಟಾಕ್ಟಿನಲ್ಲಿದ್ದವರು, ದುಬೈಗೆ ಹೋದಾಗ.. ಹೋಗಿ ಬಂದ ತಕ್ಷಣ ಯಾರನ್ನು ಕಾಂಟ್ಯಾಕ್ಟ್ ಮಾಡಿದ್ದರು.. ಎಲ್ಲಿಗೆ ಹೋಗಿದ್ದರು.. ಎಂಬುದನ್ನೆಲ್ಲ ತನಿಖೆಯಲ್ಲಿ ಹೆಕ್ಕಿ ತೆಗೆಯಲಾಗ್ತಿದೆ. ರನ್ಯಾ ರಾವ್ ಅವರು ಕಳೆದ ಎರಡು ವರ್ಷಗಳಿಂದ  ಯಾರ್ ಯಾರಿಗೆ ಹಣ ಕೊಟ್ಟಿದ್ದರು.. ಯಾರ್ ಯಾರಿಂದ ದುಡ್ಡು ಬಂದಿದೆ ಅನ್ನೋದ್ರ ಬ್ಯಾಂಕ್ ಟ್ರಾನ್ಸಾಕ್ಷನ್ ಡೀಟೈಲ್ಸ್‌ ಎಲ್ಲ ತೆಗೆಯಲಾಗ್ತಿದೆ. ಅಲ್ಲಿಗೆ ರನ್ಯಾ ರಾವ್ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಈಗ ವಿಚಾರಣೆ ಎದುರಿಸ್ಲೇಬೇಕು.

Ranya Rao-2

ಇನ್ನು ರನ್ಯಾ ರಾವ್ ಅವರಿಗೆ ಹವಾಲಾ ನೆಟ್ ವರ್ಕಿನ ಜೊತೆ ಸಂಪರ್ಕ ಇದೆಯಾ ಅನ್ನೋದ್ರ ಬಗ್ಗೆನೂ ತನಿಖೆ ಮಾಡಲಾಗ್ತಾ ಇದೆ. ಮಾಸ್ಟರ್ ಮೈಂಡ್ ಸಿಗುತ್ತಾನಾ.. ಸಿಕ್ಕರೆ ಒಂದು ಲೆಕ್ಕದಲ್ಲಿ ರನ್ಯಾ ರಾವ್ ಬಚಾವ್ ಆಗ್ತಾರೆ ಎನ್ನಬಹುದು. ಏಕೆಂದರೆ ಆಗ ರನ್ಯಾ ರಾವ್ ಆರೋಪಿಗಳಲ್ಲಿ, ಕ್ರಿಮಿನಲ್ಗಳಲ್ಲಿ ಒಬ್ಬರಾಗ್ತಾರೆ. ಅಕಸ್ಮಾತ್.. ಮಾಸ್ಟರ್ ಮೈಂಡ್ ಸಿಕ್ಕದೇ ಹೋದರೆ.. ಆಗ ರನ್ಯಾ ರಾವ್ ಅವರೇ ಪ್ರಮುಖ ಆರೋಪಿಯಾಗ್ತಾರೆ.

ಈ ಕೇಸಿನಲ್ಲಿ ಶಿಕ್ಷೆಯೇನಾದ್ರೂ ಆದರೆ, ಜೈಲು ಮತ್ತು ದಂಡ ಎರಡನ್ನೂ ವಿಧಿಸಲಾಗುತ್ತೆ. ವಶಪಡಿಸಿಕೊಂಡ ಚಿನ್ನದ ಮೌಲ್ಯಕ್ಕಿಂತ 3 ಪಟ್ಟು ದಂಡ ವಸೂಲಿ ಮಾಡಲಾಗುತ್ತೆ. ಅಂದ್ರೆ 12 ಕೋಟಿಯ ಚಿನ್ನಕ್ಕೆ, 36 ಕೋಟಿ ದಂಡ ಕಟ್ಟಿ ಎಂದರೂ ಕಟ್ಟಲೇಬೇಕು. ಅದು ಕಸ್ಟಂಸ್ ಆಕ್ಟ್ ರೂಲ್ಸ್. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಗರಿಷ್ಠ ಎಂದರೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಎರಡೂ ಶಿಕ್ಷೆ ವಿಧಿಸಿದರೂ ಅನುಭವಿಸಬೇಕು. ಇದು ರನ್ಯಾ ಅಪ್‌ ಡೇಟ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ