ಕೊರೋನಾ ಬಂದಾಗಿನಿಂದ ನಾವು ನಮ್ಮ ಚರ್ಮದ ಸಂರಕ್ಷಣೆಯುತ್ತ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಅದರಲ್ಲೂ ತರುಣಿಯರು WFH, ಆಫೀಸಿನ ಭರಾಟೆಯಲ್ಲಿ ಈ ಕಡೆ ಗಮನಿಸುತ್ತಲೇ ಇಲ್ಲ. ಇವರುಗಳಿಗೆ ಹೇಗೂ WFH ವರದಾನವಾಗಿದೆಯಲ್ಲ, ಹೊರಗಿನ ಓಡಾಟದ ಟೆನ್ಶನ್ ಇಲ್ಲ ಎಂದೇ ಅನಿಸುತ್ತದೆ. ಆದರೆ ಇತ್ತೀಚೆಗಂತೂ ಬಹಳಷ್ಟು ಆಫೀಸ್ ತೆರೆದಿವೆ, ಇತರ ಗೃಹಿಣಿಯರೂ ಮಕ್ಕಳನ್ನು ಶಾಎಗೆ, ನಿತ್ಯದ ಹೊರಗಿನ ಓಡಾಟದಲ್ಲಿ ಬಿಝಿ ಆಗೀಬೇಕಿದೆ. ಹೀಗಾಗಿ ಕೊರೋನಾ ಕಾಲದಲ್ಲಿ ನಿರ್ಲಕ್ಷಿಸಲಾಗಿದ್ದ ಚರ್ಮವನ್ನು ಇದೀಗ ಬಹಳ ಎಚ್ಚರವಹಿಸಿ ನೋಡಿಕೊಳ್ಳಬೇಕಿದೆ. ಹೀಗಾಗಿ ಅವರು FB, ಇನ್ ಸ್ಟಾಗ್ರಾಂ ಯಾ ಇತರೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ವ್ ಗಳಲ್ಲಿ ಫಿಲ್ಟರ್ಸ್ ನೆರವಿನಿಂದ ತಮ್ಮನ್ನು ತಾವು ಬ್ಯೂಟಿಫುಲ್ ಆಗಿ ತೋರ್ಪಡಿಸಿಕೊಂಡಿರಬಹುದು, ಆದರೆ ಅಸಲಿ ವಿಷಯ ಬೇರೆ ಎಂಬುದು ಅವರಿಗೂ ಗೊತ್ತು! ಹೀಗಾಗಿ ನೀವು ಚರ್ಮವನ್ನು ಬಲು ಯಂಗ್‌ಬ್ಯೂಟಿಫುಲ್ ಆಗಿರಿಸಿಕೊಳ್ಳಲು ಬಯಸಿದರೆ, ಈಗಲೇ ಎಚ್ಚೆತ್ತುಕೊಳ್ಳಿ! ಇಲ್ಲದಿದ್ದರೆ 30+ ಪ್ರಾಯದಲ್ಲೇ ನೀವು 60+ ಚರ್ಮದವರಾಗಿ ಕಾಣಬಾರದು. ಅದಕ್ಕೆ ಮಾಡಬೇಕಾದುದೇನು ಎಂದು ವಿವರವಾಗಿ ತಿಳಿಯೋಣವೇ? :
ಸುಕ್ಕುನಿರಿಗೆಗಳ ಸಮಸ್ಯೆ
20+ ನವರ ಚರ್ಮ ಯೌವನ ತುಂಬಿ ತುಳುಕುವಂಥದ್ದು. ಅವರಿಗೆ ಸಮಸ್ಯೆ ಇರದು. ಮುಖದಲ್ಲಿ ಕಾಂತಿ, ಕಳೆ, ಆಕರ್ಷಣೆ ಹೆಚ್ಚಿರುತ್ತದೆ. ಆದರೆ ಈ ವಯಸ್ಸಿನಲ್ಲಿ ನಿರ್ಲಕ್ಷ್ಯ ವಹಿಸಿದರೆ, ಮುಖದಲ್ಲಿ ಫೈನ್ ಲೈನ್ಸ್ ಜೊತೆಗೆ ಕ್ರಮೇಣವಾಗಿ ಸುಕ್ಕು ನಿರಿಗೆಗಳು ಮೂಡಲಾರಂಭಿಸುತ್ತವೆ.
ಇದು ಯಾವಾಗ ಕಾಣಿಸುತ್ತೇ?
ಚರ್ಮದ ಒಳಭಾಗ ನಮ್ಮ ಚರ್ಮದ ಹೊರ ಪದರನ್ನು ಸಪೋರ್ಟ್ ಮಾಡುವಂಥ ಕೊಲೋಜೆನ್‌ಎಲಾಸ್ಟಿನ್ ಎಂಬ ಪ್ರೋಟೀನ್ ಪದರಗಳಲ್ಲಿ ಕೊರತೆ ಉಂಟಾದಾಗ! ಆಗ ಚರ್ಮ ಆರ್ದ್ರತೆ, ಸೌಂದರ್ಯ ಕಳೆದುಕೊಂಡು ಕಳಾಹೀನ ಆಗುತ್ತದೆ. ಹೀಗಾಗಿ ನೀವು ನಿಮ್ಮನ್ನು ಈ ಸುಕ್ಕುಗಳಿಂದ ದೂರ ಇರಿಸಿಕೊಳ್ಳಲು ಸೂಕ್ತ ಸ್ಕಿನ್ ಕೇರ್ ಜೊತೆ ಹೆಲ್ದಿ ಈಟಿಂಗ್ ಅಭ್ಯಾಸ ಮಾಡಿಕೊಳ್ಳಿ.
ಟೆನ್ಶನ್ ನಿಮ್ಮನ್ನು ಕಾಡದಿರಲಿ
ಇತ್ತೀಚಿನ ದಿನಗಳಲ್ಲಿ ಮನೆ ಅಥವಾ ಆಫೀಸಿನ ವಾತಾವರಣ ಇರಲಿ, ಎಲ್ಲೆಡೆ ಸದಾ ಸ್ಟ್ರೆಸ್ ತುಂಬಿರುತ್ತದೆ. ಎಷ್ಟೋ ಜನ ಈ ಕೊರೋನಾ ಮಹಾಮಾರಿಯಿಂದ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿದ್ದರೆ, ಇತರರಿಗೆ ಕುಂದುತ್ತಿರುವ ಸಂಬಳ, ಕೆರಿಯರ್‌ನದೇ ದೊಡ್ಡ ಟೆನ್ಶನ್. ಯುವಜನತೆ ತಮ್ಮ ಕೆಲಸ ಕಳೆದುಕೊಳ್ಳುವ ಚಿಂತೆಯಲ್ಲಿ ಭಯಭೀತರಾಗುತ್ತಾರೆ. ಇದರಿಂದ ಇವರ ಚರ್ಮದ ಸೌಂದರ್ಯ ಸಹಜವಾಗಿ ಕುಗ್ಗುತ್ತದೆ.
ನಮ್ಮ ದೇಹದಲ್ಲಿ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನ್ ಇದ್ದು, ನಮ್ಮ ಹೆಚ್ಚಿನ ಚಿಂತೆಯ ಕಾರಣ ಅದರ ಬ್ಯಾಲೆನ್ಸ್ ತಪ್ಪುತ್ತದೆ. ಹಾಗಾಗಿ ನಮ್ಮ ಮುಖದಲ್ಲಿ ಆ್ಯಕ್ನೆ, ಮೊಡಲೆ, ಫೈನ್ ಲೈನ್ಸ್, ಮೆಟಬಾಲಿಸಂ ಬ್ಯಾಲೆನ್ಸ್ ತಪ್ಪುತ್ತದೆ. ಸಕಾಲಕ್ಕೆ ಇದನ್ನು ಕಂಟ್ರೋಲ್ ಮಾಡದಿದ್ದರೆ ಹಾನಿ ತಪ್ಪದು. ಹೀಗಾಗಿ ಸಾಧ್ಯವಾದಷ್ಟೂ ಸಕಾರಾತ್ಮಕವಾಗಿ ಯೋಚಿಸಿ, ಟೆನ್ಶನ್ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ. ಇಲ್ಲದಿದ್ದರೆ ಈ ಟೆನ್ಶನ್ ನಿಮ್ಮ ಮುಖದ ಕಳೆ ಕೆಡಿಸುತ್ತದೆ.
ಮನೆಮದ್ದನ್ನು ನಿರ್ಲಕ್ಷಿಸದಿರಿ
ವಯಸ್ಸಿಗೆ ಮುಂಚಿನ ವೃದ್ಧಾಪ್ಯ ಯಾರಿಗೂ ಬೇಡ. ಹೀಗಾಗಿ ಈ ಮನೆಮದ್ದು ಅನುಸರಿಸಿ, ನಿಮ್ಮ ಮುಖದ ಕುಂದುಕೊರತೆ ನಿವಾರಿಸಿ, ನಿಮಗೆ ಚಿರಯೌವನ ಮರಳಿಸಲಿದೆ.
ಪ್ರತಿದಿನ ಆ್ಯಲೋವೇರಾ ಜೆಲ್ ನಿಂದ ಮುಖ ತೊಳೆಯುವುದರಿಂದ, ಮಸಾಜ್ ಮಾಡುವುದರಿಂದ ಮುಖ ತಾಜಾ ಆಗಿ ನಳನಳಿಸುತ್ತದೆ. ಕೊಲೋಜೆನ್ ಹೆಚ್ಚುವುದರಿಂದ, ಸ್ಕಿನ್ ಆರ್ದ್ರತೆ ಗಳಿಸುತ್ತದೆ, ಸುಕ್ಕು ನಿರಿಗೆ ತಾನಾಗಿ ತಗ್ಗುತ್ತದೆ.
ಬಾಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಚರ್ಮಕ್ಕೆ ಅದರ ಫೇಸ್ ಪ್ಯಾಕ್ ಅಷ್ಟೇ ಒಳ್ಳೆಯದು. ಬಾಳೆ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿದೆ. ಜೊತೆಗೆ ನ್ಯಾಚುರಲ್ ಡೀಟಾಕ್ಸ್ ನ ಕೆಲಸವನ್ನೂ ನಿಭಾಯಿಸುತ್ತದೆ. ಹೀಗಾಗಿ ಮುಖದಲ್ಲಿನ ಫೈನ್ ಲೈನ್ಸ್ ಸುಕ್ಕು ನಿರಿಗೆ ತಂತಾನೇ ಮರೆಯಾಗುತ್ತದೆ. ಇದಕ್ಕಾಗಿ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ 1 ಗಂಟೆ ಕಾಲ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. 3-4 ವಾರಗಳ ಕಾಲ ಸತತ ಹೀಗೆ ಮಾಡಿ. ನಂತರ ಉತ್ತಮ ಪರಿಣಾಮ ಗಮನಿಸಬಹುದು.
ಕೊಬ್ಬರಿ ಎಣ್ಣೆಗೆ ಮಾಯಿಶ್ಚರೈಸ್‌ಹೈಡ್ರೇಟ್ ಗೊಳಿಸುವ ಗುಣಗಳಿವೆ. ಇದು ಚರ್ಮದ ಎಲಾಸ್ಟಿಸಿಟಿ ಇಂಪ್ರೂವ್ ಮಾಡಿ ಚರ್ಮವನ್ನು ಮೃದುಗೊಳಿಸುತ್ತದೆ. ಇದಕ್ಕಾಗಿ ನೀವು ಪ್ರತಿ ರಾತ್ರಿ ಮಲಗುವ ಮುನ್ನ, ಕೊಬ್ಬರಿ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ, ಬೆಳಗ್ಗೆ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ನಿಧಾನವಾಗಿ ಸುಕ್ಕುನಿರಿಗೆ ದೂರಾಗುವುದನ್ನು ನೀವು ಗಮನಿಸಬಹುದು. ಜೊತೆಗೆ ಮುಖದ ಬಣ್ಣ ಎಷ್ಟೋ ತಿಳಿಯಾಗುತ್ತದೆ.
ಆರ್ಗನ್ ಆಯಿಲ್ ಲೈಟ್ ಆದುದರಿಂದ, ಇದು ಚರ್ಮದಲ್ಲಿ ಸುಲಭವಾಗಿ ವಿಲೀನಗೊಳ್ಳುತ್ತದೆ. ಜೊತೆಗೆ ಇದರಲ್ಲಿ ಫ್ಯಾಟಿ ಆ್ಯಸಿಡ್, ವಿಟಮಿನ್‌ಇರುವುದರಿಂದ ಇದು ಫೈನ್ ಲೈನ್ಸ್, ಸುಕ್ಕು ನಿರಿಗೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದಕ್ಕಾಗಿ ನೀವು ರಾತ್ರಿ ಮಲಗುವ ಮುನ್ನ, ಆರ್ಗನ್‌ಆಯಿಲ್ ನಿಂದ ಮುಖವನ್ನು ಮಸಾಜ್ ಮಾಡಿ, ಹಾಗೇ ಬಿಡಿ. ಬೆಳಗ್ಗೆ ಬಿಸಿ ನೀರಿನಿಂದ ತೊಳೆಯಿರಿ. 1 ತಿಂಗಳ ಒಳಗೆ ನಿಮಗೆ ಉತ್ತಮ ಪರಿಣಾಮ ಕಾಣಿಸುತ್ತದೆ.
ಏಜಿಂಗ್ ದೂರವಿಡುವ ಅಭ್ಯಾಸಗಳು
ನೀವು ಹೊರಗೆ ಹೆಚ್ಚಿಗೆ ಓಡಾಡಿ ಬಿಡಿ, ಆದರೂ ನೀವು ಪ್ರತಿದಿನ ರೊಟೀನ್ ಮಿಸ್ ಮಾಡಬೇಡಿ. ಅಂದ್ರೆ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್. ಇದರಿಂದ ಚರ್ಮದ ಮೇಲೆ ಜಮೆಗೊಂಡ ಕೊಳಕು ದೂರಾಗುವುದರ ಜೊತೆ, ಚರ್ಮದ ನ್ಯಾಚುರ್ Ph ಲೆವೆಲ್‌ಸ್ಥಿರ ಆಗಿರುತ್ತದೆ. ಅದು ಚರ್ಮವನ್ನು ಸದಾ ಯಂಗ್ ಆಗಿಡುವಲ್ಲಿ ಸಹಕಾರಿ.
ಬಹುತೇಕ ಜನ ಯೋಚಿಸುವುದೆಂದರೆ, ಮನೆಯಿಂದ ಹೊರ ಹೋಗದಿದ್ದ ಮೇಲೆ ಸನ್ ಸ್ಕ್ರೀನ್ ಹಚ್ಚಿಕೊಂಡು ಏನಾಗಬೇಕು ಅಂತ. ಆದರೆ ಒಂದು ವಿಷಯ ನೆನಪಿಡಿ, ಸ್ಮಾರ್ಟ್ ಡಿವೈಸ್ ಗಳಿಂದ ಹೊರಹೊಮ್ಮುವ ಬ್ಲೂ ವೈಲೆಟ್ UV ರೇಂಜಿನ ಸಂಪರ್ಕಕ್ಕೆ ಬಂದ ತಕ್ಷಣ, ಅವರ ಸ್ಕಿನ್ ಟ್ಯಾನ್ ಆಗದಿದ್ದರೂ, ಅದು ಅವರ ಸ್ಕಿನ್ನಿನ ಎಲಾಸ್ಟಿಸಿಟಿ ಕೊಲೋಜೆನ್ ಟಿಶ್ಯುಗಳನ್ನು ಬ್ರೇಕ್ ಮಾಡುವುದರಿಂದ ಸಮಯ ಪೂರ್ವ ಏಜಿಂಗ್‌ಸ್ಕಿನ್ ಕ್ಯಾನ್ಸರ್ ಗೆ ದಾರಿ ಮಾಡಬಹುದು. ಹೀಗಾಗಿ ಸದಾ ಸನ್ ಸ್ಕ್ರೀನ್ ಲೋಶನ್‌ಬಳಸಲು ಮರೆಯದಿರಿ.
ಯಾನ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಿಂದ ಚರ್ಮಕ್ಕೆ ಉರಿ ಉರಿಯ ಅನುಭವ ಆಗುತ್ತೋ ಅಂಥದ್ದನ್ನು ಎಂದೂ ಬಳಸಬೇಡಿ. ಇದರಿಂದ ಚರ್ಮದ ನ್ಯಾಚುರಲ್ ಮಾಯಿಶ್ಚರ್‌ಗ್ಲೋ ಹಾಳಾದೀತು. ಏಜಿಂಗ್ ಸಮಸ್ಯೆ ಹೆಚ್ಚಬಹುದು.
ಮೇಕಪ್ ರಿಮೂವ್ ಮಾಡದೆ ಎಂದೂ ಮಲಗಬೇಡಿ. ಮೇಕಪ್ ನಲ್ಲಿನ ಕೆಮಿಕಲ್ಸ್ ಚರ್ಮಕ್ಕೆ ಬೇಗ ಏಜಿಂಗ್ ಎಫೆಕ್ಟ್ ತರುತ್ತದೆ.
ಹುರಿದ ಕರಿದ, ಜಂಕ್ ಪುಡ್ಸ್ ಬದಲು ಪೌಷ್ಟಿಕ ಆಹಾರ ಸೇವಿಸಿ. ಇದರಿಂದ ನಿಮ್ಮ ಚರ್ಮ ಆಂತರಿಕವಾಗಿಯೂ ಉತ್ತಮಗೊಳ್ಳುತ್ತದೆ.
ಸಾಧ್ಯವಾದಷ್ಟೂ ಶುಗರ್, ಸ್ವೀಟ್ಸ್ ನಿಂದ ದೂರವಿರಿ. ಬ್ಲಡ್ ಶುಗರ್ ಲೆವೆಲ್ ಬ್ಯಾಲೆನ್ಸ್ ತಪ್ಪಿದರೆ, ಏಜಿಂಗ್ ಸಮಸ್ಯೆ ತಂತಾನೇ ಹೆಚ್ಚುತ್ತದೆ.
– ಪಾರ್ವತಿ ಭಟ್
ಅಡ್ವಾನ್ಸ್ಡ್ ಟ್ರೀಟ್ ಮೆಂಟ್ ಅತ್ಯಗತ್ಯ
ತುಸು ಎಚ್ಚರಿಕೆ ವಹಿಸುವುದರಿಂದ, ಸೂಕ್ತ ಆರೈಕೆ ಮಾಡುವುದರಿಂದ ಹೇಗೆ ಚರ್ಮ ಯಂಗ್ ಲುಕ್ಸ್ ಗಳಿಸುತ್ತದೆ ಎಂದು ತಜ್ಞರ ಸಲಹೆ ಗಮನಿಸೋಣವೇ?
ಅಡ್ವಾನ್ಸ್ಡ್ ಟ್ರೀಟ್ ಮೆಂಟ್ ಕುರಿತಾಗಿ ಹೇಳುವುದಾದರೆ, ಕೊಲೋಜನ್ ನ್ನು ಆಂತರಿಕವಾಗಿ ಸರಿಪಡಿಸಬಹುದು ಅಥವಾ ಹೊರಭಾಗದಿಂದ ಒಳಕ್ಕೆ ಹಾಕಬಹುದು. ಆದರೆ ಎಲ್ಲಕ್ಕೂ ಸುಲಭ ವಿಧಾನ ಎಂದರೆ, 30-40ರ ವಯಸ್ಸಿನಲ್ಲಿ ಜನ ಇದನ್ನು ಮಾಡಿಸುತ್ತಿದ್ದರು, ಆದರೆ ಈಗೆಲ್ಲ 20+ ನಲ್ಲೇ ಇದನ್ನು ಮಾಡಿಸುತ್ತಿದ್ದಾರೆ. ಇದರಲ್ಲಿ ತೀರಾ ಚಿಂತಿಸಬೇಕಾದ ವಿಚಾರವೇನಿಲ್ಲ. ಏಕೆಂದರೆ ಇತ್ತೀಚೆಗೆ ಹೆಚ್ಚುತ್ತಿರುವ ಮಾಲಿನ್ಯ, ಅಧಿಕ ಮೇಕಪ್ ಬಳಕೆ ಇತ್ಯಾದಿಗಳಿಂದ ಚರ್ಮ ಎಲಾಸ್ಟಿಸಿಟಿ ಕಳೆದುಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಫೈನ್ ಲೈನ್ಸ್, ಸುಕ್ಕು ನಿರಿಗೆ ಹೆಚ್ಚುತ್ತವೆ.
ಈ ಸಮಸ್ಯೆಗಳಿಂದ ಪಾರಾಗಲು, ಫಿಲ್ಲರ್ಸ್ ನೆರವು ಪಡೆಯಬಹುದು. ಇದಕ್ಕಾಗಿ ಅದು ಬೆಸ್ಟ್ ಟ್ರೀಟ್ ಮೆಂಟ್ ಎನಿಸಿದೆ. ಇದರಿಂದ ಚರ್ಮದ ಯಾವುದೇ ಭಾಗ, ಅಂದ್ರೆ ಚರ್ಮ ಅಡಿಭಾಗ ಅಥವಾ ಬೇಕಾದ ಕಡೆ, ಕೊಲೋಜೆನ್ ಕಡಿಮೆ ಇರುವ ಕಡೆ, ಅಲ್ಲಿ ಫಿಲ್ಲರ್ಸ್ ತುಂಬುತ್ತಾರೆ. ಫಿಲ್ಲರ್ಸ್ ಅಂದ್ರೆ ಗಾಲೋಝೇನಿಕ್ ಆ್ಯಸಿಡ್ ಭರ್ತಿ ಮಾಡಲಾಗುತ್ತದೆ. ಇದು ಚರ್ಮದ ಆಳಕ್ಕಿಳಿದು ಸುಲಭವಾಗಿ ವಿಲೀನಗೊಂಡು, ಕೊಲೋಜೆನ್/ಎಲಾಸ್ಟಿನ್ ನ ಉತ್ಪಾದನೆ ಶುರು ಮಾಡುತ್ತದೆ. ಇದರಿಂದ ಚರ್ಮ ಪುನರುಜ್ಜೀವಗೊಳ್ಳುತ್ತದೆ, ಈ ಚಿಕಿತ್ಸೆ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತದೆ.
ಯಾವ ರೀತಿ ಲೇಸರ್ ಚಿಕಿತ್ಸೆಯಿಂದ ಮುಖದಲ್ಲಿನ ಅನಗತ್ಯ ಕೂದಲನ್ನು ನಿವಾರಿಸಬಹುದೋ ಅದೇ ಲೇಸರ್ ನಿಂದ ಮುಖದ ಸುಕ್ಕು ನಿರಿಗೆಗಳನ್ನು ತೊಲಗಿಸಬಹುದಾಗಿದೆ. ಹೀಗೆ ಇದು ಸ್ಕಿನ್ ರೀಜನರೇಟ್ ಗೊಳ್ಳಲು ನೆರವಾಗುತ್ತದೆ. ಬಹಳ ವರ್ಷಗಳಿಂದ ಈ ಚಿಕಿತ್ಸೆ ಸುಕ್ಕು ನಿರಿಗೆಯ ನಿವಾರಣೆಗೆಂದೇ ಇದೆ. ಈ ಚಿಕಿತ್ಸೆಯನ್ನು ಹಲವು ದಿನಗಳ ಕಾಲ ನಿಯಮಿತವಾಗಿ ಮಾಡಿಸತಕ್ಕದ್ದು ಇದರಿಂದ ಚರ್ಮ ಮತ್ತೆ ಸಹಜವಾಗಿ ತಾನೇ ಕೊಲೋಜೆನ್ನಿನ ಉತ್ಪಾದನೆಗೆ ತೊಡಗುತ್ತದೆ. ಅದು ಸುಕ್ಕು ನಿವಾರಿಸಿ, ಯಂಗ್ ಲುಕ್ಸ್ ನೀಡಿ, ಚಿರಯೌವನ ಒದಗಿಸುತ್ತದೆ.
ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡುವುದರಿಂದಲೂ ಸುಕ್ಕು ನಿರಿಗೆಯ ಸಮಸ್ಯೆ ದೂರಾಗುತ್ತದೆ. ಇದಕ್ಕಾಗಿ ನೀವು ಲೇಟೆಸ್ಟ್ ಟ್ರೀಟ್ ಮೆಂಟ್ ಬಯಸಿದರೆ, ಕಾರ್ಬನ್ ಎಕ್ಸ್ ಫಾಲಿಯೇಶನ್ ಗೆ ಮೊರೆ ಹೋಗುವುದು ಲೇಸು. ಇದರೊಂದಿಗೆ ಲೇಸರ್ ಚಿಕಿತ್ಸೆ ಪಡೆಯುವುದು ಬೆಟರ್.
ಇತ್ತೀಚೆಗೆ ಹೈಡ್ರೋ ಡರ್ಮಾಮಿಷನ್ ಚಿಕಿತ್ಸೆ ಸಹ ಬಲು ಜನಪ್ರಿಯ. ಇದರಲ್ಲಿ ವಾಟರ್ ಜೊತೆ ವಿಶಿಷ್ಟ ಸೀರಂ ಬೆರೆಸಿ, ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಲಾಗುತ್ತದೆ. ಇದರಿಂದ ಸುಕ್ಕು ನಿರಿಗೆಗಳ ಸಮಸ್ಯೆ ಸಂಪೂರ್ಣ ಗುಣವಾಗುತ್ತದೆ.
ಹೈಡ್ರೋನಿಕ್ ಆ್ಯಸಿಡ್, ಸೀರಂ, ಕೊಲೋಜೆನ್ ಗಳನ್ನು ನಾವು ಯಾವಾಗ ಚರ್ಮಕ್ಕೆ ತೆಗೆದುಕೊಂಡರೂ, ಅದನ್ನು ಅಲ್ಟ್ರಾಸೋನಿಕ್ ಮೆಶೀನ್ ಮೂಲಕವೇ ತೆಗೆದುಕೊಳ್ಳಬೇಕು. ಇದುವೇ ಬೆಸ್ಟ್. ಇದು ಯಾವುದೇ ವಸ್ತುವನ್ನು ಚರ್ಮದ ಆಳಕ್ಕೆ ರವಾನಿಸಲು ಅತ್ಯುತ್ತಮ ವಿಧಾನವಾಗಿದೆ. ಈ ರೀತಿ ಅಡ್ವಾನ್ಸ್ಡ್ ಚಿಕಿತ್ಸೆಗಳಿಂದ ನೀವು ಸುಕ್ಕು ನಿರಿಗೆಗಳನ್ನು ದೂರಗೊಳಿಸಿ, ಏಜಿಂಗ್ ಮುಂದೂಡಿ, ಚಿರಯೌವನ ಪಡೆಯಬಹುದು!
ಇದರಿಂದ ಯಾರಿಗೆ ಹೆಚ್ಚು ರಿಸ್ಕ್?
ಯಾರ ಚರ್ಮ ಡ್ರೈ ಡೀಹೈಡ್ರೇಟೆಡ್ ಆಗಿರುತ್ತದೋ, ಅಂಥವರಿಗೆ ಸುಕ್ಕು ನಿರಿಗೆಗಳ ಹಿಂಸೆ ಹೆಚ್ಚು ಕಾಡುತ್ತದೆ. ಡ್ರೈ ಸ್ಕಿನ್ ಅಂದ್ರೆ ಯಾರಿಗೆ ಚರ್ಮದಲ್ಲಿ ಆಯಿಲ್ ಅಂಶ ಕಡಿಮೆ ಇರುತ್ತದೋ ಅವರು ಅಂತ. ಡೀಹೈಡ್ರೇಟೆಡ್ ಸ್ಕಿನ್ ಅಂದ್ರೆ ಯಾರಿಗೆ ಚರ್ಮದಲ್ಲಿ ನೀರಿನ ಅಂಶ ಕಡಿಮೆ ಇರುತ್ತದೋ ಅವರು. ಏಕೆಂದರೆ ನೀರು ಆಯಿಲ್ ಎರಡೂ ಬ್ಯಾಲೆನ್ಸ್ಡ್ ಆಗಿದ್ದರೆ ಮಾತ್ರ ಚರ್ಮ ಆರೋಗ್ಯಕರವಾಗಿ ನಳನಳಿಸಲು ಸಾಧ್ಯ, ಆಗ ಮಾತ್ರ ಚರ್ಮ ರಿಂಕಲ್ಸ್ ಫ್ರೀ ಆಗಲು ಸಾಧ್ಯ, ಆಗ ಸ್ಕಿನ್ ಫರ್ಮ್ ಟೈಟ್ ಆಗಿರುತ್ತದೆ. ಹೀಗಾಗಿ ಚರ್ಮದ ಡ್ರೈನೆಸ್‌ನೀರಿನ ಕೊರತೆಯನ್ನು ನೀಗಿಸಲು, ನಿಮ್ಮನ್ನು ನೀವು ಸದಾ ಹೈಡ್ರೇಟೆಡ್‌ಆಗಿಟ್ಟುಕೊಳ್ಳಬೇಕು. ಮುಖದಲ್ಲಿನ ಚರ್ಮದ ಪ್ರಕಾರಕ್ಕೆ ತಕ್ಕಂತೆ ಮಾಯಿಶ್ಟರೈಸರ್, ಕ್ರೀಂ ಹಚ್ಚುತ್ತಿರಿ.